• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Virat Kohli-Anushka Sharma: ಹೆಂಡ್ತಿ-ಮಗು ಜೊತೆ ವಿರಾಟ್​ ಮಸ್ತ್​ ಟ್ರಿಪ್​​, ಫೋಟೋ ನೋಡಿ ವ್ಹಾವ್ ಎಂದ ಫ್ಯಾನ್ಸ್​!

Virat Kohli-Anushka Sharma: ಹೆಂಡ್ತಿ-ಮಗು ಜೊತೆ ವಿರಾಟ್​ ಮಸ್ತ್​ ಟ್ರಿಪ್​​, ಫೋಟೋ ನೋಡಿ ವ್ಹಾವ್ ಎಂದ ಫ್ಯಾನ್ಸ್​!

ಟ್ರಿಪ್​ ಹೋದ ಜೋಡಿ

ಟ್ರಿಪ್​ ಹೋದ ಜೋಡಿ

ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಜೊತೆಗಿನ ಇತ್ತೀಚಿನ ಪ್ರವಾಸದ ಫೋಟೋವೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • Share this:
  • published by :

ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ (Anushka Sharma) ಪ್ರಸಿದ್ಧ ಸೆಲೆಬ್ರಿಟಿ ಕಪಲ್.‌ ಈ ದಂಪತಿ ಆಗಾಗ ತಮ್ಮ ಹಾಗೂ ಮಗಳು ವಮಿಕಾ ಜೊತೆಗಿನ ಫೋಟೋಗಳನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ಮಗಳ ಜೊತೆಗಿನ ತಮ್ಮ ಪ್ರವಾಸದ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಹೌದು, ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಜೊತೆಗಿನ ಇತ್ತೀಚಿನ ಪ್ರವಾಸದ ಫೋಟೋವೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ತಮ್ಮ ರಿಷಿಕೇಶದ ಆಧ್ಯಾತ್ಮಿಕ ಪ್ರವಾಸದ ಫೋಟೋವನ್ನು ಪೋಸ್ಟ್ (Post) ಮಾಡಿದ್ದಾರೆ.


ಅನುಷ್ಕಾ, ವಮಿಕಾ ಜೊತೆ ಹೆಜ್ಜೆ ಹಾಕುತ್ತಿರುವ ಕೊಹ್ಲಿ


ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯನ್ನು ದಾಟುತ್ತಿರುವಂತೆ ಕಂಡುಬಂದಿದ್ದು, ಪರ್ವತಗಳನ್ನು ಹಿಂಭಾಗದಲ್ಲಿ ನಾವು ನೋಡಬಹುದು.


ಇದರಲ್ಲಿ ಪುಟ್ಟ ವಮಿಕಾಳನ್ನು ತಾಯಿ ಎತ್ತಿಕೊಂಡಿರುವುದನ್ನು ನೋಡಬಹುದು. ಅತ್ತ ವಿರಾಟ್ ತನ್ನ ಹೆಗಲ ಮೇಲೆ ವಾಮಿಕಾ ಲಗ್ಗೇಜ್‌ಗಳನ್ನು ಹೊತ್ತುಕೊಂಡು ಸಾಗುತ್ತಿದ್ದಾರೆ. ಫೋಟೋದಲ್ಲಿ ಪ್ರವಾಸಕ್ಕಾಗಿ ದಂಪತಿಗಳು ಬೆಚ್ಚಗಿನ ಬಟ್ಟೆಗಳನ್ನು ಧರಿಸಿದ್ದನ್ನು ನೋಡಬಹುದು.


ಈ ಫೋಟೋವನ್ನು ಪೋಸ್ಟ್‌ ಮಾಡಿರುವ ವಿರಾಟ್‌ ಕೊಹ್ಲಿ... "ಅನುಮಾನದ ಎಲ್ಲಾ ಸೇತುವೆಗಳನ್ನು ದಾಟಿ... ಪ್ರೀತಿಯಲ್ಲಿ" ಎಂದು ಫೋಟೋ ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ ಈ ಬರಹಕ್ಕೆ ಹಾರ್ಟ್‌ ಎಮೋಜಿ ಹಾಗೂ ಕುಟುಂಬದ ಎಮೋಜಿಯನ್ನು ಸೇರಿಸಿದ್ದಾರೆ.


ಇನ್ನು ವಿರಾಟ್‌ ಕೊಹ್ಲಿಯ ಈ ಪೋಸ್ಟ್‌ಗೆ ಅನುಷ್ಕಾ, ವರುಣ್ ಧವನ್ ಮತ್ತು ಅಥಿಯಾ ಶೆಟ್ಟಿ ಸೇರಿದಂತೆ ಲಕ್ಷಾಂತರ ಜನರು ಲೈಕ್‌ ಮಾಡಿದ್ದಾರೆ.


ಟ್ರೆಕ್ಕಿಂಗ್‌ ಫೋಟೋ ಶೇರ್‌ ಮಾಡಿದ್ದು ಇದೇ ಮೊದಲಲ್ಲ!


ಅಂದಹಾಗೆ ಅವರು ಈ ರೀತಿಯ ಚಾರಣಗಳ ಚಿತ್ರಗಳನ್ನು ಅಥವಾ ವಮಿಕಾಳನ್ನು ಎತ್ತಿಕೊಂಡು ಹೋಗುವಂಥ ಫೋಟೋಗಳನ್ನು ಹಂಚಿಕೊಂಡಿರುವುದು ಇದೇ ಮೊದಲಲ್ಲ.


ಇದನ್ನೂ ಓದಿ: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!


ವಿರಾಟ್ ಮತ್ತು ಅನುಷ್ಕಾ ಈ ಹಿಂದೆ ಈ ವರ್ಷದ ಆರಂಭದಲ್ಲಿ ಟ್ರೆಕ್‌ನ ಚಿತ್ರಗಳನ್ನು ಹಂಚಿಕೊಂಡಿದ್ದರು. ಇವರು ಹೆಚ್ಚಾಗಿ ಪರ್ವತಗಳಿಗೆ, ಅದರಲ್ಲೂ ವಿಶೇಷವಾಗಿ ಉತ್ತರಾಖಂಡಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ. ಅವರು ನೀಮ್ ಕರೋಲಿ ಬಾಬಾ ಭಕ್ತರಾಗಿರುವುದರಿಂದ ಅವರ ಆಶ್ರಮಕ್ಕೂ ಇತ್ತೀಚಿಗೆ ಭೇಟಿ ನೀಡಿದ್ದರು.


ಈ ಮಧ್ಯೆ ಜನವರಿಯಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಭಾರತದ ಟೆಸ್ಟ್ ಸರಣಿಯ ಮೊದಲು, ವಿರಾಟ್ ಮತ್ತು ಅನುಷ್ಕಾ ಶರ್ಮಾ ರಿಷಿಕೇಶಕ್ಕೆ ಪ್ರವಾಸ ಕೈಗೊಂಡಿದ್ದರು.









View this post on Instagram






A post shared by Virat Kohli (@virat.kohli)





ದಂಪತಿಗಳು ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಅನುಷ್ಕಾ ಮತ್ತು ವಿರಾಟ್ ಆಶ್ರಮದಲ್ಲಿ ಪೂಜೆ ಮಾಡುತ್ತಿರುವ ಹಲವಾರು ಚಿತ್ರಗಳು ವೈರಲ್ ಆಗಿದ್ದವು. ಈ ದಂಪತಿ ಇತ್ತೀಚೆಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.


ಇನ್ನು, ಇತ್ತೀಚೆಗೆ ಅನುಷ್ಕಾ ಮತ್ತು ವಿರಾಟ್ ಭಾರತೀಯ ಕ್ರೀಡಾ ಗೌರವ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು SEVVA ಎಂಬ ಹೊಸ ಲೋಕೋಪಕಾರಿ ಉದ್ಯಮವನ್ನು ಘೋಷಿಸಿದರು.


anushka sharma virat kohli vamika trekking in the mountains
ಟ್ರಿಪ್​ ಹೋದ ಜೋಡಿ!


ಇದನ್ನೂ ಓದಿ: ರಾಜಕೀಯಕ್ಕೆ ಧೋನಿ ಎಂಟ್ರಿ? ಈ ಪಕ್ಷದಿಂದಲೇ ಚುನಾವಣೆಗೆ ಸ್ಪರ್ಧಿಸ್ತಾರಾ ಕ್ಯಾಪ್ಟನ್ ಕೂಲ್?


ಸ್ತ್ರೀ ಸಬಲೀಕರಣ, ಪ್ರಾಣಿ ಕಲ್ಯಾಣ ಮತ್ತು ಉದಯೋನ್ಮುಖ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದಂತಹ ಕಾರಣಗಳಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ವಿರಾಟ್ ಮತ್ತು ಅನುಷ್ಕಾ ಹೇಳಿದ್ದಾರೆ.




ಅಂದಹಾಗೆ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ 2017 ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜನವರಿ 2021 ರಲ್ಲಿ ಮಗಳು ವಮಿಕಾಳನ್ನು ಬರಮಾಡಿಕೊಂಡರು.


ಅಷ್ಟಕ್ಕೂ ಅನುಷ್ಕಾ ಮತ್ತು ವಿರಾಟ್ ತಮ್ಮ ಮಗಳು ವಮಿಕಾ ಫೋಟೋವನ್ನು ಎಲ್ಲಿಯೂ ಶೇರ್‌ ಮಾಡಿಲ್ಲ. ಅವರ ಯಾವುದೇ ಸಾಮಾಜಿಕ ಜಾಲತಾಣಗಳಲ್ಲೂ ವಮಿಕಾ ಚಿತ್ರ ಪ್ರಕಟವಾಗಿಲ್ಲ. ಆದರೆ ಒಂದೆರಡು ಸಂದರ್ಭಗಳಲ್ಲಿ ಮಾತ್ರ ಪುಟ್ಟ ವಮಿಕಾ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಆ ಫೋಟೋ ವೈರಲ್‌ ಆಗಿತ್ತು.

First published: