ಬೈಗುಳ ತಿಂದ ವ್ಯಕ್ತಿಯಿಂದ ನಟಿ ಅನುಷ್ಕಾಗೆ  ನೋಟೀಸ್ !

news18
Updated:June 24, 2018, 11:24 AM IST
ಬೈಗುಳ ತಿಂದ ವ್ಯಕ್ತಿಯಿಂದ ನಟಿ ಅನುಷ್ಕಾಗೆ  ನೋಟೀಸ್ !
news18
Updated: June 24, 2018, 11:24 AM IST
ನ್ಯೂಸ್ 18 ಕನ್ನಡ

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ  ವ್ಯಕ್ತಿಯೊಬ್ಬರನ್ನು ಬೈಯ್ಯುವ ವಿಡಿಯೋವನ್ನು ಪತಿ ವಿರಾಟ್ ಕೊಹ್ಲಿ ಈ ಹಿಂದೆ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಆದರೀಗ ನಟಿ ಅನುಷ್ಕಾಗೆ ಸಾರ್ವಜನಿಕವಾಗಿ ಈ ವಿಡಿಯೋ ಶೇರ್ ಮಾಡಿದ್ದಕ್ಕೆ ಕೋರ್ಟ್​ ನೋಟೀಸ್ ಜಾರಿ ಮಾಡಲಾಗಿದೆ. ಅಂದಹಾಗೆ ಈ ನೋಟೀಸ್ ಕಳುಹಿಸಿರುವುದು ಬೈಗುಳ ತಿಂದ ವ್ಯಕ್ತಿ ಅರ್ಹಾನ್ ಸಿಂಗ್.

ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅರ್ಹಾನ್ ಸಿಂಗ್ ಪ್ಲಾಸ್ಟಿಕ್​ ಬಾಟಲ್​ವೊಂದನ್ನು ರಸ್ತೆಗೆ ಎಸೆದಿರುವುದನ್ನು ಪ್ರಶ್ನಿಸಿ ಅನುಷ್ಕಾ ಈ ವಿಡಿಯೋ ಮಾಡಿದ್ದರು. ವಿಡಿಯೋ ತುಣುಕಿನಲ್ಲಿ ಈ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುತ್ತಿದ್ದಾನೆಂದು, ದುಬಾರಿ ಕಾರನ್ನು ಹೊಂದಿದ್ದರೂ ಅಪ್ರಬುದ್ಧತೆಯಿಂದ ವರ್ತಿಸುತ್ತಿದ್ದಾನೆ ಎಂದು ದೂರಲಾಗಿತ್ತು. ನಂತರ ಪತಿ ವಿರಾಟ್ ಕೊಹ್ಲಿ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದು, ಅರ್ಹಾನ್ ವರ್ತನೆಗೆ ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.


Loading...

ಬಾಟಲಿವೊಂದು ಕೈಯಿಂದ ಜಾರಿ​ ರಸ್ತೆಯ ಮೇಲೆ ಬಿದ್ದಿತ್ತು. ಈ ವಿಚಾರವಾಗಿ ಅನುಷ್ಕಾ ಶರ್ಮಾ ತನ್ನ ಮೇಲೆ ಓರ್ವ ಬೀದಿ ಬದಿಯ ವ್ಯಕ್ತಿಯಂತೆ ಕಿರುಚಾಡಿದ್ದಾರೆ. ತಾನು ಕ್ಷಮೆ ಕೇಳಿದರೂ ಅವರು ಸುಮ್ಮನಾಗಲಿಲ್ಲ ಎಂದು ಈ ಘಟನೆ ಬಗ್ಗೆ ಅರ್ಹಾನ್ ಸಿಂಗ್ ಸಾಮಾಜಿಕ ತಾಣದಲ್ಲಿ ಸಮಜಾಯಿಸಿ ನೀಡಿದ್ದರು.

ಆದರೆ ಈ ವಿಷಯವು ವೈರಲ್ ಆಗುತ್ತಿದ್ದಂತೆ ಅರ್ಹಾನ್ ಸಿಂಗ್ ಪೂರ್ವಪರ ಕೆಣಗಿದ ನೆಟಿಜನ್​ಗಳಿಗೆ ಆಶ್ಚರ್ಯಕರ ಅಂಶವೊಂದು ಸಿಕ್ಕಿದೆ. ಅದೇನೆಂದರೆ ಅರ್ಹಾನ್​ ಸಿಂಗ್ 90ರ ದಶಕದಲ್ಲಿ ಫೇಮಸ್​ ಬಾಲನಟರಲ್ಲಿ ಒಬ್ಬರಾಗಿರುವುದು.

ಬಾಲ್ಯದಲ್ಲಿ ಸನ್ನಿ ಸಿಂಗ್​ ಎಂದೇ ಗುರುತಿಸಿಕೊಂಡಿದ್ದ ಅರ್ಹಾನ್, ಶಾರುಖ್​ ಖಾನ್​ ಅಭಿನಯದ 'ಇಂಗ್ಲಿಷ್​ ಬಾಬಿ ದೇಸಿ ಮೆಮ್'​ ಚಿತ್ರದಲ್ಲಿ ನಟಿಸಿದ್ದರು. ಅಲ್ಲದೇ ಮಾಧುರಿ ದೀಕ್ಷಿತ್​ ಅಭಿನಯದ 'ರಾಜಾ' ಮತ್ತು 'ದೇಖ್​ ಭಾಯ್​ ದೇಖ್'​ ಸೇರಿದಂತೆ ಹಲವಾರು ಸಿನಿಮಾ, ಧಾರಾವಹಿ, ಜಾಹೀರಾತುಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ.

ಬೈಗುಳ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಬಗ್ಗೆ ನೊಂದಿರುವ ಅರ್ಹಾನ್ ಸಿಂಗ್, ನಟಿ ಅನುಷ್ಕಾ ಶರ್ಮಾ ತನ್ನ ವಿರುದ್ದ ಅಸಹ್ಯವಾಗಿ ವರ್ತಿಸಿ ವಿಡಿಯೋ ಮಾಡಿ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆಂದು ದೂರಿ  ಕಾನೂನಾತ್ಮಕ ನೋಟೀಸ್ ಕಳುಹಿಸಿದ್ದಾರೆ.
First published:June 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...