ವಿರುಷ್ಕಾ ದಂಪತಿಗೆ ಮಗಳು ವಮಿಕಾ ಜನಿಸಿ 6 ತಿಂಗಳು ಕಳೆದಿವೆ. ಈವರೆಗೆ ಮಗಳ ಮುಖವನ್ನು ಅಭಿಮಾನಿಗಳಿಗೆ ತೋರಿಸಿಲ್ಲ. ನಿನ್ನೆ ಅಂದರೆ ಭಾನುವಾರ ಮಗಳು ವಮಿಕಾಗೆ 6 ತಿಂಗಳು ತುಂಬಿದೆ. ಈ ಹಿನ್ನೆಲೆ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜುಲೈ 11ಕ್ಕೆ ವಮಿಕಾಗೆ 6 ತಿಂಗಳು ತುಂಬಿದೆ.
ವಮಿಕಾಗೆ 6 ತಿಂಗಳು ತುಂಬಿದ ಖುಷಿಯನ್ನು ವಿರುಷ್ಕಾ ದಂಪತಿ ಸಂಭ್ರಮಿಸಿದ್ದಾರೆ. ಮಗಳ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಮಿಕಾಳ ಆರು ತಿಂಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪಾರ್ಕ್ವೊಂದಕ್ಕೆ ಪಿಕ್ನಿಕ್ ತೆರಳಿ ಮಗಳ ಅರ್ಧವರ್ಷದ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ.
ಇದನ್ನೂ ಓದಿ:Viral News: ಆಸ್ಪತ್ರೆಯಲ್ಲೇ ಮದುವೆಯಾಗಿ ಅಜ್ಜಿಗೆ ಸರ್ಪ್ರೈಸ್ ನೀಡಿದ ಮೊಮ್ಮಗಳು
ನಟಿ ಅನುಷ್ಕಾ ಶರ್ಮಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಗಳ ಜೊತೆಗಿನ ಬ್ಯೂಟಿಫುಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಅನುಷ್ಕಾ ಶರ್ಮಾ ಮಗಳನ್ನು ತನ್ನ ಮೇಲೆ ಮಲಗಿಸಿಕೊಂಡಿದ್ದಾರೆ. ಗುಲಾಬಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿರುವ ಅನುಷ್ಕಾ ತಮ್ಮ ಮಗಳಿಗೆ ಆಕಾಶ ತೋರಿಸುತ್ತಿದ್ದಾರೆ. ಆದರೆ ಇಲ್ಲೂ ಸಹ ಮಗಳು ವಮಿಕಾ ಮುಖವನ್ನು ಅಭಿಮಾನಿಗಳಿಗೆ ತೋರಿಸಿಲ್ಲ.
ಮತ್ತೊಂದು ಫೋಟೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾಳನ್ನು ಎತ್ತಿಕೊಂಡಿದ್ದಾರೆ. ಸಖತ್ ಕ್ಯೂಟ್ ಆಗಿರುವ ವಮಿಕಾ ಕೈಯಲ್ಲಿ ತನ್ನ ಅಪ್ಪನ ಮುಖ ಹಿಡಿದುಕೊಂಡಿದ್ದಾಳೆ. ವಿರಾಟ್ ಮಗಳ ಮುಖ ನೋಡಿ ಖುಷಿಪಟ್ಟಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ತಾಯಿ-ಮಗು ಇಬ್ಬರೂ ಒಂದೇ ರೀತಿ ಕಾಲು ಹಾಕಿಕೊಂಡಿರುವ ಶೈಲಿಯ ಮತ್ತೊಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಹೂವುಗಳಿಂದ ಅಲಂಕೃತಗೊಂಡ ಕೇಕ್ ಫೋಟೋ ಕೂಡ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Bigg Boss 8 Kannada: ಈ ವಾರ ಬಿಗ್ಬಾಸ್ನಿಂದ ರಘು ಎಲಿಮಿನೇಟ್ ಆಗೋದಕ್ಕೆ ಇದೇ ಕಾರಣ...!
ಈ ಫೋಟೋಗಳನ್ನು ಪೋಸ್ಟ್ ಮಾಡಿರುವ ಅನುಷ್ಕಾ ಶರ್ಮಾ, ‘ಅವಳ ಒಂದು ನಗು ನಮ್ಮ ಇಡೀ ಪ್ರಪಂಚವನ್ನು ಬದಲಿಸಬಲ್ಲದು. ನೀನು ನಮ್ಮನ್ನು ನೋಡುವ ಪ್ರೀತಿಯೊಂದಿಗೆ ನಾವಿಬ್ಬರೂ ಬದುಕಬಲ್ಲೆವು ಎಂದು ಭಾವಿಸಿದ್ದೇನೆ. ಮುದ್ದಾದ ಮಗಳಿಗೆ ಇವತ್ತಿಗೆ 6 ತಿಂಗಳಾಗಿದೆ‘ ಎಂದು ಬರೆದುಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಜೀವನದ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಶೇರ್ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ತಮ್ಮ ಮಗಳು ವಮಿಕಾ ಹುಟ್ಟಿದ ಮೇಲಂತೂ ಫೋಟೋ ತೆಗೆಯದಂತೆ ಮಾಧ್ಯಮಗಳಿಗೆ ಮನವಿಯನ್ನೂ ಮಾಡಿದ್ದಾರೆ. ವಿರುಷ್ಕಾ ದಂಪತಿಗಳ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈವರೆಗೆ ವಮಿಕಾ ಮುಖವನ್ನು ಅಭಿಮಾನಿಗಳಿಗೆ ತೋರಿಸಿಲ್ಲ.
ಇದೇ ವರ್ಷ ಜನವರಿ 11ರಲ್ಲಿ ಅನುಷ್ಕಾ ಶರ್ಮಾ ತಮ್ಮ ಮಗಳಿಗೆ ಜನ್ಮ ನೀಡಿದರು. ಮಗಳ ಹೆಸರನ್ನು ಹೇಳುವ ಸಂದರ್ಭದಲ್ಲಿ ಅನುಷ್ಕಾ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ