Virushka: ವೈರಲ್ ಆಯ್ತು ಅನುಷ್ಕಾ- ವಿರಾಟ್​ ಬೀಚ್ ಸೆಲ್ಫೀ ಫೋಟೋ; ವಿರುಷ್ಕಾ ಫೋಟೋಗೆ ಅಭಿಮಾನಿಗಳು ಫಿದಾ

ವಿರಾಟ್- ಅನುಷ್ಕಾಗೆ ಸುತ್ತಾಟವೆಂದರೆ ಬಹಳ ಇಷ್ಟ. ಈ ಮೊದಲು ಕೂಡ ದಟ್ಟ ಕಾಡಿನಲ್ಲಿ ಇಬ್ಬರೇ ಸುತ್ತಾಡಿಬಂದಿದ್ದರು. ಅದರ ಫೋಟೋಗಳು ವೈರಲ್ ಆಗಿದ್ದವು.

news18-kannada
Updated:September 11, 2019, 9:09 PM IST
Virushka: ವೈರಲ್ ಆಯ್ತು ಅನುಷ್ಕಾ- ವಿರಾಟ್​ ಬೀಚ್ ಸೆಲ್ಫೀ ಫೋಟೋ; ವಿರುಷ್ಕಾ ಫೋಟೋಗೆ ಅಭಿಮಾನಿಗಳು ಫಿದಾ
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
news18-kannada
Updated: September 11, 2019, 9:09 PM IST
ಬಾಲಿವುಡ್​ ಸ್ಟಾರ್ ಅನುಷ್ಕಾ ಶರ್ಮಾ- ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಕ್ಷೇತ್ರಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಖಾಸಗಿ ಬದುಕಿಗೂ ಪ್ರಾಮುಖ್ಯತೆ ನೀಡುತ್ತಾರೆ.

ಕಳೆದ ವರ್ಷ ತೆರೆಕಂಡ 'ಜೀರೋ' ಸಿನಿಮಾ ಬಳಿಕ ಅನುಷ್ಕಾ ಸದ್ಯಕ್ಕೆ ಬೇರಾವುದೇ ಸಿನಿಮಾಗಳನ್ನೂ ಬ್ಯುಸಿಯಾಗಿಲ್ಲ. ಇನ್ನು, ವಿರಾಟ್ ಕೊಹ್ಲಿ ಕೂಡ ವೆಸ್ಟ್‌ ಇಂಡೀಸ್‌ ಪ್ರವಾಸದ ಬಳಿಕ ವಿಶ್ರಾಂತಿಯಲಿದ್ದಾರೆ. ಹೀಗಾಗಿ, ಗಂಡ-ಹೆಂಡತಿಯಿಬ್ಬರೂ ಈ ಬ್ರೇಕ್​ ಅನ್ನು ಎಂಜಾಯ್ ಮಾಡುತ್ತಿದ್ದು, ಅನುಷ್ಕಾ ಬೀಚ್​ ನೀರಿನಲ್ಲಿ ಎಂಜಾಯ್ ಮಾಡಿದ ಫೋಟೋಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.



ಇದರ ಜೊತೆಗೆ ವಿರಾಟ್ ಕೊಹ್ಲಿ ಕೂಡ ತನ್ನ ಮುದ್ದು ಮಡದಿಯ ಜೊತೆ ಬೀಚ್​ ದಡದಲ್ಲಿ ಕುಳಿತು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್​ ಧರಿಸಿರುವ ಅನುಷ್ಕಾ ಬಿಕಿನಿ ಧರಿಸಿ ಕುಳಿತಿದ್ದಾರೆ. ಹೆಂಡತಿಯ ಕಾಲ ಮೇಲೆ ಮಲಗಿರುವ ವಿರಾಟ್ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ.
Loading...




ವಿರಾಟ್- ಅನುಷ್ಕಾಗೆ ಸುತ್ತಾಟವೆಂದರೆ ಬಹಳ ಇಷ್ಟ. ಈ ಮೊದಲು ಕೂಡ ದಟ್ಟ ಕಾಡಿನಲ್ಲಿ ಇಬ್ಬರೇ ಸುತ್ತಾಡಿ ಬಂದಿದ್ದರು. ಅದರ ಫೋಟೋಗಳು ವೈರಲ್ ಆಗಿದ್ದವು. ಇದೀಗ ಹಾಟ್​ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಈ ಕ್ಯೂಟ್​ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

 
First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...