`ಸೂಯಿ ಧಾಗ'ಸಿನಿಮಾ: ಪ್ರಚಾರಕ್ಕೆ ಅನುಷ್ಕಾ-ವರುಣ್​ ಆಯ್ಕೆ ಮಾಡಿಕೊಂಡಿದ್ದು ವಿಭಿನ್ನ ಮಾರ್ಗ..!

news18
Updated:August 10, 2018, 4:52 PM IST
`ಸೂಯಿ ಧಾಗ'ಸಿನಿಮಾ:  ಪ್ರಚಾರಕ್ಕೆ ಅನುಷ್ಕಾ-ವರುಣ್​ ಆಯ್ಕೆ ಮಾಡಿಕೊಂಡಿದ್ದು ವಿಭಿನ್ನ ಮಾರ್ಗ..!
news18
Updated: August 10, 2018, 4:52 PM IST
ನ್ಯೂಸ್​ 18 ಕನ್ನಡ 

ಸಿನಿಮಾ ನಿರ್ಮಾಪಕರು ಪ್ರಚಾರಕ್ಕಾಗಿ ಬಳಸುತ್ತಿದ್ದ ಹಣ ಈಗ ಸಾಮಾಜಿಕ ಜಾಲತಾಣಗಳಿಂದಾಗಿ ಉಳಿತಾಯವಾಗುತ್ತಿದೆ. ಹೌದು ನಟ-ನಟಿಯರು, ನಿರ್ಮಾಪಕರು ಹಾಗೂ ನಿರ್ದೇಶಕರು ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚಾಗಿ ತಮ್ಮ ಸಿನಿಮಾಗಳ ಪ್ರಚಾರ ಮಾಡುತ್ತಿದ್ದಾರೆ.

ಈ ಹಿಂದೆ ವರುಣ್​ ಧವನ್​ ಸೈಕಲ್​ ತುಳಿಯುತ್ತಾ ಸಲೂನ್​ಗೆ ಹೋಗಿ ಅಲ್ಲಿ ಕ್ಷೌರ ಮಾಡಿಸಿಕೊಳ್ಳುವ ಮೂಲಕ ತಮ್ಮ ಸಿನಿಮಾ 'ಸೂಯಿ ಧಾಗ' ದ ಪ್ರಚಾರ ಮಾಡಿದ್ದರು. ಈ ವಿಡಿಯೋ ಆಗ ಎಲ್ಲೆಡೆ ವೈರಲ್​ ಆಗಿತ್ತು.

ಈಗ ಮತ್ತೆ ವರುಣ್​ ಧವನ್​ ಹಾಗೂ ಅನುಷ್ಕಾ ಶರ್ಮಾ ತಮ್ಮ ಹೊಸ ಸಿನಿಮಾ 'ಸೂಯಿ ಧಾಗ'ದ ಪ್ರಚಾರಕ್ಕಾಗಿ ವಿನೂತ ದಾರಿ ಹುಡುಕಿಕೊಂಡಿದ್ದು, ಅದು ಯಶಸ್ವಿಯೂ ಆಗಿದೆ.

ಒಂದು ಚಿತ್ರದ ಟೈಟಲ್​ ಅನ್ನು ಹೇಗೆಲ್ಲ ಕಂಪ್ಯೂಟರ್​ನಲ್ಲಿ ವಿನ್ಯಾಸ ಮಾಡಿಕೊಳ್ಳಬಹುದು. ಆದರೆ ಅದೇ ಶೀರ್ಷಿಕೆಯನ್ನು ನಮ್ಮ ದೇಶದ  ಕುಶಲಕರ್ಮಿಗಳಿಂದ ವಿನ್ಯಾಸ ಮಾಡಿಸಿದರೆ, ಹೇಗೆ ಅನ್ನೊ ಉಪಾಯ ಮಾಡಿದ್ದು ವರುಣ್​-ಅನುಷ್ಕಾ ಜೋಡಿ. ಅದಕ್ಕಾಗಿಯೇ ಒಂದು 'ಸೂಯಿ ಧಾಗ' ಹಾಗೂ ಬಟ್ಟೆ ಇರುವ ಡಬ್ಬವನ್ನು ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಲಾಗಿತ್ತು.

ಉತ್ತರದಿಂದ ದಕ್ಷಿಣದವರೆಗೆ, ಆ ಕಡೆಯಿಂದ ಈ ಕಡೆಗೆ ಈ ಡಬ್ಬ ತಲುಪಿತ್ತು. ಅವರೆಲ್ಲರೂ ತಮಗೆ ಗೊತ್ತಿರುವ ಪ್ರಕಾರಗಳಲ್ಲಿ ಈ ಸಿನಿಮಾದ ಲೋಗೊ ವಿನ್ಯಾಸ ಮಾಡಿದ್ದರು.

 
Loading...
ನಾವು ಯಾವುದೇ ಮೂಲೆಗೆ ಹೋದ್ರು ಸೂಯಿ ಧಾಗ ಅಂದರೆ ಸೂಜಿದಾರ ಅನ್ನೋದು ಒಂದೇ ಆಗಿರುತ್ತದೆ. ಆದರೆ, ಅದನ್ನ ಬಳಸೊ ಕೈಗಳು, ಮೂಡಿಬರೊ ಕಲೆ ಮಾತ್ರ ಬೇರೆ ಬೇರೆ ಆಗಿರುತ್ತದೆ ಅಷ್ಟೆ. ಈ ಪರಿಕಲ್ಪನೆ ಅದೆಷ್ಟು ಚೆನ್ನಾಗಿ ಕೆಲಸ ಮಾಡಿತು ಅಂದರೆ, ಎಲ್ಲೆಡೆಯಿಂದ ಕಣ್ಮನಸೆಳೆಯೊ ಬಗೆಬಗೆಯ ಕುಸುರಿಗಳು ಕಂಡಬಂದವು. ಇವುಗಳಲ್ಲಿ ಯಾವುದು ಉತ್ತಮ ಅಂತ ಆಯ್ಕೆ ಮಾಡೋಕೆ ಅನುಷ್ಕಾ ಶರ್ಮಾ ಮತ್ತು ವರುಣ್ ಧವನ್‍ ಅವರಿಗೆ ಬಹಳ ಕಷ್ಟವಾಯಿತು.
ಕಡೆಗೆ ಎಲ್ಲ ಲೋಗೋಗಳನ್ನು ಪ್ರದರ್ಶಿಸುವ ನಿರ್ಧಾರಕ್ಕೆ ಬಂದ ಈ ಜೋಡಿ, ಈಗ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಸಿನಿಮಾ ಇದೇ ಸೆಪ್ಟೆಂಬರ್​ 28ಕ್ಕೆ ತೆರೆ ಕಾಣಲಿದೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ