HOME » NEWS » Entertainment » ANUSHKA SHARMA UNVEILS HER WAX FIGURE AT MADAME TUSSAUDS SEE PICS

ರೀಲ್ ಅನುಷ್ಕಾ ಜತೆ ರಿಯಲ್ ಅನುಷ್ಕಾ!; ಅನಾವರಣವಾಯ್ತು ಬಾಲಿವುಡ್ ನಟಿಯ ಮೇಣದ ಪ್ರತಿಮೆ

ಶಾರುಖ್​ ಖಾನ್​, ಕರೀನಾ ಕಪೂರ್​ ಸೇರಿದಂತೆ ಅನೇಕ ಬಾಲಿವುಡ್​ ಸ್ಟಾರ್​ಗಳ ಮೇಣದ ಪ್ರತಿಮೆ ಮೇಡಮ್​ ಟುಸ್ಸಾಡ್ಸ್​​ ಮ್ಯೂಸಿಯಂನಲ್ಲಿದೆ. ಈಗ ಆ ಸಾಲಿಗೆ ಅನುಷ್ಕಾ ಶರ್ಮಾ ಕೂಡ ಸೇರ್ಪಡೆಯಾಗಿದ್ದಾರೆ.

Rajesh Duggumane | news18
Updated:November 20, 2018, 9:33 AM IST
ರೀಲ್ ಅನುಷ್ಕಾ ಜತೆ ರಿಯಲ್ ಅನುಷ್ಕಾ!; ಅನಾವರಣವಾಯ್ತು ಬಾಲಿವುಡ್ ನಟಿಯ ಮೇಣದ ಪ್ರತಿಮೆ
ಮೇಣದ ಪ್ರತಿಮೆ ಜತೆಗೆ ಅನುಷ್ಕಾ
  • News18
  • Last Updated: November 20, 2018, 9:33 AM IST
  • Share this:
ಈ ಫೋಟೋ ನೋಡಿದವರು, ‘ಅನುಷ್ಕಾ ಅವರಿಗೆ ಅಕ್ಕ ತಂಗಿ ಯಾರಾದರೂ ಇದ್ದಾರಾ ಅಥವಾ ಅವರನ್ನು ಹೋಲುವ ಮತ್ತೊಬ್ಬರು ಈ ಜಗತ್ತಿನಲ್ಲಿದ್ದಾರಾ’ ಎನ್ನುವ ಪ್ರಶ್ನೆ ಕೇಳಿದರೂ ಅಚ್ಚರಿಯಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಅನುಷ್ಕಾ ಅವರ ಮೇಣದ ಪ್ರತಿಮೆ.

ಸಿಂಗಾಪುರ್​ನಲ್ಲಿರುವ ಮೇಡಮ್​ ಟುಸ್ಸಾಡ್ಸ್​​ ಮ್ಯೂಸಿಯಂನಲ್ಲಿ ಅನುಷ್ಕಾ ಶರ್ಮಾ ಅವರ ಮೇಣದ ಪ್ರತಿಮೆ ಅನಾವರಣಗೊಂಡಿದೆ. ಅನುಷ್ಕಾ ಅವರೇ ಈ ಕಾರ್ಯಕ್ರಮಕ್ಕೆ ತೆರಳಿದ್ದು, ಮೇಣದ ಪ್ರತಿಮೆ ನೋಡಿ ಬೆರಗಾಗಿದ್ದಾರೆ. ಮೇಣದ ಪ್ರತಿಮೆಯಲ್ಲಿ ಅನುಷ್ಕಾ ಮೊಬೈಲ್​ ಹಿಡಿದು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.ಕಳೆದ ವರ್ಷ ಅನುಷ್ಕಾ ಶರ್ಮಾ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಅವರನ್ನು ವರಿಸಿದ್ದರು. ಇತ್ತೀಚೆಗೆ ತೆರೆಕಂಡಿದ್ದ 'ಸುಯಿ ಧಾಗಾ:ಮೇಡ್​ ಇನ್​ ಇಂಡಿಯಾ' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಖುಷಿಯ ನಡುವೆಯೇ ಅವರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಂತಾಗಿದೆ.ಶಾರುಖ್​ ಖಾನ್​, ಕರೀನಾ ಕಪೂರ್​ ಸೇರಿದಂತೆ ಅನೇಕ ಬಾಲಿವುಡ್​ ಸ್ಟಾರ್​ಗಳ ಮೇಣದ ಪ್ರತಿಮೆ ಮೇಡಮ್​ ಟುಸ್ಸಾಡ್ಸ್​​ ಮ್ಯೂಸಿಯಂನಲ್ಲಿದೆ. ಈಗ ಆ ಸಾಲಿಗೆ ಅನುಷ್ಕಾ ಶರ್ಮಾ ಕೂಡ ಸೇರ್ಪಡೆಯಾಗಿದ್ದಾರೆ.

First published: November 19, 2018, 10:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories