Vamika Birthday: ನೋಡನೋಡುತ್ತಲೇ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಪುತ್ರಿಗೆ 1 ವರ್ಷ ಆಗೇ ಹೋಯ್ತು.. ವಮಿಕಾ ಫಸ್ಟ್ ಬರ್ತ್​ಡೇ ಸೆಲೆಬ್ರೆಷನ್ ಹೇಗಿತ್ತು ನೋಡಿ..​

ಅನುಷ್ಕಾ ಶರ್ಮ(Anushka Sharma) ಹಾಗೂ ವಿರಾಟ್ ಕೊಹ್ಲಿ(Virat Kohli)ಪುತ್ರಿ ವಮಿಕಾ(Vamika)ಗೆ ಜನವರಿ 11ರಂದು ಒಂದು ವರ್ಷ ತುಂಬಿದ್ದು ಈ ಸಂದರ್ಭದಲ್ಲಿ ಬಾಲಿವುಡ್(Bollywood) ನಟಿ ತನ್ನ ಪುತ್ರಿಯ ಹುಟ್ಟುಹಬ್ಬದ ಪಾರ್ಟಿಯ ಕ್ಷಣಗಳನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ, ವಮಿಕಾ

ಅನುಷ್ಕಾ ಶರ್ಮಾ, ವಮಿಕಾ

  • Share this:
ಅನುಷ್ಕಾ ಶರ್ಮ(Anushka Sharma) ಹಾಗೂ ವಿರಾಟ್ ಕೊಹ್ಲಿ(Virat Kohli)ಪುತ್ರಿ ವಮಿಕಾ(Vamika)ಗೆ ಜನವರಿ 11ರಂದು ಒಂದು ವರ್ಷ ತುಂಬಿದ್ದು ಈ ಸಂದರ್ಭದಲ್ಲಿ ಬಾಲಿವುಡ್(Bollywood) ನಟಿ ತನ್ನ ಪುತ್ರಿಯ ಹುಟ್ಟುಹಬ್ಬದ ಪಾರ್ಟಿಯ ಕ್ಷಣಗಳನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್(Instagram) ಸ್ಟೋರಿಯಲ್ಲಿ ಮಗಳ ಫೋಟೋ(Photo)ವನ್ನು ಅನುಷ್ಕಾ ಹಂಚಿಕೊಂಡಿದ್ದು ವಮಿಕಾರ ತಲೆಯ ಹಿಂಭಾಗದ ಫೋಟೋದಲ್ಲಿ ಕಂಡುಬಂದಿದೆ. ಪೀಚ್ ಬಣ್ಣದ ಫ್ರಾಕ್ ಧರಿಸಿರುವ ವಮಿಕಾ ಕ್ರಿಕೆಟ್ ಆಟಗಾರ ವೃದ್ಧಿಮಾನ್ ಶಾ(Wriddhiman Saha) ಹಾಗೂ ರೋಮಿY ಮಿತ್ರಾರ ಪುತ್ರಿ ಅನ್ವಿ ಸಾಹಾಳೊಂದಿಗೆ ಆಟವಾಡುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ. 

ಹುಟ್ಟುಹಬ್ಬದ ಸಂಭ್ರಮದಲ್ಲಿ ವಮಿಕಾ

ಈ ಇಬ್ಬರು ಮಕ್ಕಳು ಪಾರ್ಕ್‌ನಲ್ಲಿರುವಾಗ ಫೋಟೋ ತೆಗೆದಿದ್ದು ಬಣ್ಣದ ಟೆಂಟ್ ಪಕ್ಕ ಮಕ್ಕಳು ಆಟವಾಡುತ್ತಿರುವುದು ಕಂಡುಬಂದಿದೆ. ರೋಮಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಮಿಕಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಫೋಟೋ ಹಂಚಿಕೊಂಡಿದ್ದು, ಅನುಷ್ಕಾ ಇದೇ ಫೋಟೋವನ್ನು ಮರುಹಂಚಿಕೊಂಡು ಪ್ರತಿಯಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳು ವೈರಲ್​!

ಇನ್ನು ಹೋಟೆಲ್ ದೃಶ್ಯಾವಳಿಗಳನ್ನು ಒಳಗೊಂಡಿರುವ ವಮಿಕಾ ಹೆಸರನ್ನು ಕಂಚು ಬಣ್ಣದ ಬಲೂನ್‌ಗಳಿರುವ ಫೋಟೋವನ್ನು ರೋಮಿ ಮಿತ್ರಾ ಹಂಚಿಕೊಂಡಿದ್ದಾರೆ. ಮಗಳ ಹುಟ್ಟುಹಬ್ಬದ ವಿಶೇಷ ದಿನದ ಸಂಜೆ ಅನುಷ್ಕಾ ಶರ್ಮಾ ಪತಿ ಹಾಗೂ ಮಗಳೊಂದಿಗಿರುವ ಫೋಟೋವನ್ನು ಹಂಚಿಕೊಂಡಿದ್ದು, 9.30ಗೆ ಯಾರು ತಾನೇ ನಿದ್ರಿಸುತ್ತಾರೆ? ಎಂಬ ಶೀರ್ಷಿಕೆ ಹಾಕಿದ್ದಾರೆ. ನಟಿ ಪತಿ ಹಾಗೂ ಪುತ್ರಿಯೊಂದಿಗೆ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಗ್ರೇಜಿಯಾದೊಂದಿಗೆ ನಡೆಸಿದ ಸಂದರ್ಶನದಲ್ಲಿ ಅನುಷ್ಕಾ ತಮ್ಮ ಮಗಳ ಬಗ್ಗೆ ಮಾತನಾಡಿದ್ದು ನಾನು ಮಗಳನ್ನು ಅತ್ಯಂತ ನಿಶ್ಚಯದಿಂದ ಕಾಣುತ್ತೇನೆ. ನಾನು ಕೂಡ ಹಾಗೆಯೇ ಇದ್ದೆ ಎಂದು ನಾನು ಭಾವಿಸುವುದರಿಂದ ನನಗೆ ಈ ವಿಷಯ ತಿಳಿಸಲು ಸಂತೋಷವಾಗಿದೆ ಎಂದಿದ್ದಾರೆ.ಇದನ್ನು ಓದಿ: ಸೈನಾ ನೆಹ್ವಾಲ್​ಗೆ ಬಹಿರಂಗ ಪತ್ರ ಬರೆದು ಕ್ಷಮೆ ಕೇಳಿದ ನಟ ಸಿದ್ಧಾರ್ಥ್!

ಮತ್ತೆ ಬಣ್ಣ ಹಚ್ಚಿದ ಅನುಷ್ಕಾ!

ಮಗಳ ಲಾಲನೆ ಪಾಲನೆಯ ಜೊತೆಗೆ ನಟಿ ಇದೀಗ ಸಿನಿ ರಂಗಕ್ಕೂ ರೀಎಂಟ್ರಿ ನೀಡಿದ್ದಾರೆ. ಕೊನೆಯದಾಗಿ ಆನಂದ್ ಎಲ್ ರಾಯ್‌ ನಿರ್ದೇಶದ ಜೀರೋ ಚಿತ್ರದಲ್ಲಿ ನಟಿಸಿದ್ದರು ಹಾಗೂ ಸಿನಿ ರಂಗದಿಂದ ನಾಲ್ಕು ವರ್ಷಗಳ ವಿರಾಮ ತೆಗೆದುಕೊಂಡಿದ್ದರು. ಇತ್ತೀಚೆಗೆ ತಾನೇ ಅನುಷ್ಕಾ ಚಕ್ದಾ ಎಕ್ಸ್‌ಪ್ರೆಸ್  ಸಿನಿಮಾವನ್ನು  ಘೋಷಿಸಿದ್ದು, ಚಿತ್ರವು ಕ್ರಿಕೆಟ್​ ಆಟಗಾರ್ತಿ ಜೂಲಾನ್ ಗೋಸ್ವಾಮಿ ಜೀವನ ಚರಿತ್ರೆಯನ್ನು ಆಧರಿಸಿದೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣಲಿದೆ.

ಸಾಮಾಜಿಕ ತಾಣದಲ್ಲಿ ಸ್ಟಾರ್ ಆಗಿರುವ ವಮಿಕಾ:

ಕ್ರಿಕೆಟ್ ತಾರೆ ವಿರಾಟ್ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಪುತ್ರಿ ವಮಿಕಾ ಸೆಲೆಬ್ರಿಟಿ ಕಿಡ್ ಆದರೂ ದಂಪತಿ ತಮ್ಮ ಮಗಳ ಮುಖವನ್ನು ಇದುವರೆಗೆ ಯಾವುದೇ ತಾಣಗಳಲ್ಲಿ ಸಮಾರಂಭಗಳಲ್ಲಿ ಪ್ರದರ್ಶಿಸಿಲ್ಲ. ಆದರೂ ವಮಿಕಾ ಈಗಾಗಲೇ ಸ್ಟಾರ್ ಆಗಿದ್ದು ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಟ್ವಿಟ್ಟರ್‌ನಲ್ಲಿ ಅಸಂಖ್ಯ ಅಭಿಮಾನಿಗಳು ವಮಿಕಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಆಕೆಗೆ ಒಂದು ವರ್ಷ ತುಂಬಿದ್ದೇ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಸುದ್ದಿಯಾಗಿದೆ.

ಇದನ್ನು ಓದಿ: ಈ​ ಸ್ಟಾರ್​​ ಜೊತೆ ಕಮ್​ಬ್ಯಾಕ್​ ಮಾಡ್ತಾರಂತೆ ಅನುಷ್ಕಾ ಶೆಟ್ಟಿ.. ಅಭಿಮಾನಿಗಳ ಆಸೆ ಕೊನೆಗೂ ಈಡೇರುತ್ತಿದೆ!

ತಂದೆ ವಿರಾಟ್ ಕೊಹ್ಲಿ ಟ್ವಿಟ್ಟರ್‌ನಲ್ಲಿ 45.8 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದು ಮಗಳ ಆಗಮನವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಟ್ವಿಟ್ಟರ್ ಇಂಡಿಯಾ ಉಲ್ಲೇಖಿಸಿರುವಂತೆ ಈ ಪೋಸ್ಟ್ ಹೆಚ್ಚು ಮೆಚ್ಚುಗೆ ಪಡೆದುಕೊಂಡ ಪೋಸ್ಟ್ ಎಂದೆನಿಸಿದ್ದು 2021ರಲ್ಲಿ 540.3k ಲೈಕ್‌ಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ಜನವರಿ 11 ಕ್ಕೆ ವಮಿಕಾ ಜನಿಸಿದ್ದು, ದಂಪತಿಗಳು ಈ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದರು. ಅನುಷ್ಕಾ ಹಾಗೂ ವಿರಾಟ್ ದಂಪತಿ ಕೂಡ ತಮ್ಮ ಅಭಿಮಾನಿ ವಲಯದಲ್ಲಿ ವಿರುಷ್ಕಾ ಎಂದೇ ಹೆಸರುವಾಸಿಯಾಗಿದ್ದು, ವಿರುಷ್ಕಾ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಂಪತಿ ಆಗಾಗ್ಗೆ ಸಾಮಾಜಿಕ ತಾಣದಲ್ಲಿ ಮಗಳ ಫೋಟೋ ಹಂಚಿಕೊಳ್ಳುತ್ತಿದ್ದು ಹಲವಾರು ಮೆಚ್ಚುಗೆಗಳು ಹಾಗೂ ಕಾಮೆಂಟ್‌ಗಳನ್ನು ಪಡೆದುಕೊಳ್ಳುತ್ತಿದೆ.
Published by:Vasudeva M
First published: