ವಿರಾಟ್ ಕೊಹ್ಲಿ(Virat Kohli) ಜೊತೆಗೆ ವೈವಾಹಿಕ ಜೀವನಕ್ಕೆ(Marriage Life) ಕಾಲಿಟ್ಟ ಬಳಿಕ ಅನುಷ್ಕ ಶರ್ಮ(Anushka Sharma) ಸಂಪೂರ್ಣ ಕುಟುಂಬಕ್ಕೆ(Family) ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ..ಅಲ್ಲದೇ ಕಳೆದ ವರ್ಷ ಮಗಳು ವಮಿಕಾಗೆ(Vamika) ಜನ್ಮ ನೀಡಿರುವ ಅನುಷ್ಕಾ ಶರ್ಮಾ ಮುದ್ದು ಮಗಳ ಲಾಲನೆ ಪಾಲನೆ ಪೋಷಣೆಯಲ್ಲಿ ಸಮಯ ಕಳೆಯುತ್ತಿದ್ದಾರೆ.. ಹೀಗಾಗಿ ಅನುಷ್ಕಾ ಶರ್ಮಾ ಮತ್ತೆ ಚಿತ್ರರಂಗಕ್ಕೆ(Film Industry) ಕಂಬ್ಯಾಕ್(Come Back) ಮಾಡುವುದು ಯಾವಾಗ ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿತ್ತು..ಈಗ ಅಭಿಮಾನಿಗಳಿಗೆ ಅನುಷ್ಕಾ ಮತ್ತೆ ಸಿಹಿಸುದ್ದಿ ನೀಡಿದ್ದು ಶೀಘ್ರವೇ ಅನುಷ್ಕಾ ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಲಿದ್ದಾರಂತೆ.
ಒಟ್ಟೊಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡ್ರಾ ಅನುಷ್ಕಾ..?
ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅನುಷ್ಕ ಶರ್ಮ ಅಷ್ಟಾಗಿ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಕೊನೆಯದಾಗಿ 2018ರಲ್ಲಿ ಶಾರುಖ್ ಖಾನ್ ನಟನೆಯ ಜೀರೋ ಸಿನಿಮಾದಲ್ಲಿ ನಟಿಸಿದ ಬಳಿಕ ಮುಂದೆ ಯಾವ ಸಿನಿಮಾ ಅನುಷ್ಕಾ ಒಪ್ಪಿಕೊಂಡಿಲ್ಲ.. ಆದ್ರೆ ನಿರ್ಮಾಪಕಿಯಾಗಿ ಹಲವಾರು ಸಿನಿಮಾಗಳಿಗೆ ಹಣಹೂಡಿಕೆ ಮಾಡುತ್ತ ಬಂದಿದ್ದ ಅನುಷ್ಕಾ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು.. ಇದು ಅನುಷ್ಕಾ ಅಭಿಮಾನಿಗಳಿಗೆ ಸಕ್ಕತ್ ಬೇಸರ ಬೇಸರ ತರಿಸಿತ್ತು.. ಆದರೆ ಈಗ ಅಭಿಮಾನಿಗಳಿಗೆ ಅನುಷ್ಕಾ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ನಟನೆ ಮಾಡಲು ಅನುಷ್ಕಾ ಸಿದ್ಧತೆ ಮಾಡಿಕೊಂಡಿದ್ದಾರಂತೆ.
ಇದನ್ನೂ ಓದಿ: ಮೇಕಪ್ ಇಲ್ಲದಿದ್ರೂ ಎಷ್ಟು ಚೆಂದ ಅನುಷ್ಕಾ ಶರ್ಮಾ: ಈಕೆಯ ಸೌಂದರ್ಯಕ್ಕೆ ಸೂರ್ಯನೂ ಶರಣಾದ..!
ಅನುಷ್ಕಾ ಶರ್ಮಾ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದಾಕೆ. ಕೆಲವೇ ಚಿತ್ರಗಳ ಬಳಿಕ ಬಾಲಿವುಡ್ನ ಸ್ಟಾರ್ ನಟಿ ಆಗಿ ಅನುಷ್ಕಾ ಹೊರ ಹೊಮ್ಮಿದ್ದಾರೆ. ಅನುಷ್ಕಾ ಶರ್ಮಾ ಲೀಲಾಜಾಲದ ಅಭಿನಯಕ್ಕೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಆದರೆ ವಿರಾಟ್ ಜೊತೆಗೆ ಮದುವೆ ಆದ ಬಳಿಕ ಅನುಷ್ಕಾ ನಟನೆಯಿಂದ ಬ್ರೇಕ್ ತೆಗೆದು ಕೊಂಡಿದ್ದರು.
ಮಗಳು ವಮಿಕಾಗೆ ಜನ್ಮ ನೀಡಿದ ಬಳಿಕ ಫಿಟ್ನೆಸ್ ಬಗ್ಗೆಯೂ ಹೆಚ್ಚು ಗಮನ ನೀಡುತ್ತಿರುವ, ಅನುಷ್ಕಾ ಶರ್ಮಾ ಜಿಲ್ಲೆಯಲ್ಲಿ ಸಾಕಷ್ಟು ಸಮಯ ಕಳೆಯುತ್ತಿರುತ್ತಾರೆ.. ಮೊದಲಿನಂತೆಯೇ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಅನುಷ್ಕಾ ಶರ್ಮಾ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಈಗಾಗಲೇ ಕೆಲವೊಂದು ಜಾಹೀರಾತುಗಳಲ್ಲಿ ನಟನೆ ಮಾಡುವ ಮೂಲಕ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡುವ ತಯಾರಿ ಮಾಡಿಕೊಂಡಿದ್ದಾರೆ. ಈಗ ಹೊಸವರ್ಷಕ್ಕೆ ಅನುಷ್ಕ ಶರ್ಮ ಹೊಸ ಅಪ್ಡೇಟ್ ನೀಡಿ ಅಭಿಮಾನಿಗಳಿಗೆ ಹೊಸವರ್ಷದ ಸಿಹಿ ನೀಡಿದ್ದಾರೆ
ಮೂರು ಸಿನಿಮಾಗಳಿಗೆ ಸಹಿ ಹಾಕಿದ ಅನುಷ್ಕಾ
ಸದ್ಯ ವಮಿಕಾಗೆ ಒಂದು ವರ್ಷ ತುಂಬಿದ ಹಿನ್ನಲೆ ಮತ್ತೆ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಲು ಸಿದ್ಧತೆ ಮಾಡಿಕೊಂಡಿರುವ ಅನುಷ್ಕ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.. ಈ ಮೂರು ಸಿನಿಮಾಗಳಲ್ಲಿ ಒಂದು ಒಟಿಟಿಯಲ್ಲಿ ರಿಲೀಸ್ ಆದರೆ ಉಳಿದ ಎರಡು ಚಿತ್ರಗಳು ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಲಿದೆಯಂತೆ.ಇನ್ನು . ಅನುಷ್ಕಾ ಯಾರ ಜತೆ ನಟಿಸಲಿದ್ದಾರೆ, ಅವರ ಕಂಬ್ಯಾಕ್ ಪ್ರಾಜೆಕ್ಟ್ ಹೇಗಿರಲಿದೆ ಎನ್ನುವ ಕೂತೂಹಲಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಸದ್ಯ, ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಜೊತೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ ಪತಿಯ ಜೊತೆ ಕಾಲಕಳೆಯುತ್ತಿದ್ದಾರೆ.. ಭಾರತ ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದು ಬೀಗಿದ್ದು, ಆಫ್ರಿಕಾ ಪ್ರವಾಸ ಮುಗಿದ ಬಳಿಕ ಭಾರತಕ್ಕೆ ವಾಪಸ್ ಬರಲಿರುವ ಅನುಷ್ಕಾ ಶರ್ಮಾ ಮತ್ತೆ ತಮ್ಮ ಸಿನಿಮಾ ಚಟುವಟಿಕೆಗಳಿಗಾಗಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರಂತೆ.
ಇದನ್ನೂ ಓದಿ: ಅಮ್ಮ ಹೇಳಿಕೊಟ್ಟ ಅಡುಗೆ ಟ್ರೈ ಮಾಡಿದ ಅನುಷ್ಕಾ ಶರ್ಮಾ, ರೆಸಿಪಿ ಇಲ್ಲಿದೆ..ನೀವೂ ಟ್ರೈ ಮಾಡಿ
ಇನ್ನು 'ಸುಲ್ತಾನ್', 'ಸಂಜು' 'ರಬ್ ನೇ ಬನಾದಿ ಜೋಡಿ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಅನುಷ್ಕಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈಗ ಮತ್ತೆ ಅನುಷ್ಕಾ ಶರ್ಮಾ ಕಮ್ ಬ್ಯಾಕ್ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ