Anushka Sharma: ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ! ಅಂಥದೇನಾಯ್ತು ಎಂದ ನೆಟ್ಟಿಗರು

ಅನುಷ್ಕಾ ಶರ್ಮಾ(Anushka Sharma)ರ ನಿರ್ಮಾಣ ಸಂಸ್ಥೆ ಸಿನಿಮಾ ಮಾರುಕಟ್ಟೆಯಲ್ಲಿ ಯಶಸ್ವಿಯೂ ಆಗಿತ್ತು. ಆದರೆ ಇದೀಗ ಅನುಷ್ಕಾ ಶರ್ಮಾ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರಗೆ ಬಂದಿದ್ದಾರೆ ನಟಿ ಅನುಷ್ಕಾ. ಇದನ್ನು ಕಂಡ  ನೆಟ್ಟಿಗರು ಅಂಥದ್ದು ಏನಾಯ್ತು ಎಂದು ಕೇಳುತ್ತಿದ್ದಾರೆ.

ನಟಿ ಅನುಷ್ಕಾ ಶರ್ಮಾ

ನಟಿ ಅನುಷ್ಕಾ ಶರ್ಮಾ

  • Share this:
    ವಿರಾಟ್ ಕೊಹ್ಲಿ(Virat Kohli) ಜೊತೆಗೆ ವೈವಾಹಿಕ ಜೀವನಕ್ಕೆ(Marriage Life) ಕಾಲಿಟ್ಟ ಬಳಿಕ ಅನುಷ್ಕ ಶರ್ಮ(Anushka Sharma) ಸಂಪೂರ್ಣ ಕುಟುಂಬಕ್ಕೆ(Family) ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ..ಅಲ್ಲದೇ ಕಳೆದ ವರ್ಷ ಮಗಳು ವಮಿಕಾಗೆ(Vamika) ಜನ್ಮ ನೀಡಿರುವ ಅನುಷ್ಕಾ ಶರ್ಮಾ ಮುದ್ದು ಮಗಳ ಲಾಲನೆ ಪಾಲನೆ ಪೋಷಣೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನಟನೆ ಜೊತೆಗೆ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ(Production House)ಯನ್ನು ಹೊಂದಿದ್ದಾರೆ. ತಮ್ಮದೇ ಆದ ನಿರ್ಮಾಣ ಸಂಸ್ಥೆ ಹೊಂದಿರುವ ಅನುಷ್ಕಾ ಶರ್ಮಾ ಈ ವರೆಗೆ ಕೆಲವು ಹಿಟ್(Hit)​ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಅನುಷ್ಕಾ ಶರ್ಮಾ(Anushka Sharma)ರ ನಿರ್ಮಾಣ ಸಂಸ್ಥೆ ಸಿನಿಮಾ ಮಾರುಕಟ್ಟೆಯಲ್ಲಿ ಯಶಸ್ವಿಯೂ ಆಗಿತ್ತು. ಆದರೆ ಇದೀಗ ಅನುಷ್ಕಾ ಶರ್ಮಾ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರಗೆ ಬಂದಿದ್ದಾರೆ ನಟಿ ಅನುಷ್ಕಾ. ಇದನ್ನು ಕಂಡ  ನೆಟ್ಟಿಗರು ಅಂಥದ್ದು ಏನಾಯ್ತು ಎಂದು ಕೇಳುತ್ತಿದ್ದಾರೆ.

    ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರಬಂದ ನಟಿ!

    ಅನುಷ್ಕಾ ತನ್ನ ಬ್ಯಾನರ್ ನಲ್ಲಿ ಎನ್ ಹೆಚ್ 10(NH10), ಫಿಲೌರಿ, ಪರಿ(Pari), ಪಾತಾಳ್ ಲೋಕ್(Paatal Lok), ಬುಲ್ ಬುಲ್ ಸಿನಿಮಾಗಳನ್ನು ನಿರ್ಮಿಸಿದ್ದರು.  ‘ಪಾತಾಳ್​ ಲೋಕ್​’ ವೆಬ್​ ಸರಣಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇದನ್ನು ಅನುಷ್ಲಾ ಶರ್ಮಾ ಅವರೇ ನಿರ್ಮಾಣ ಮಾಡಿದ್ದರು. ಈಗ ಅನುಷ್ಕಾ ಶರ್ಮಾ ನಿರ್ಮಾಣ ಸಂಸ್ಥೆಯಿಂದ ಹೊರ ಬರುವ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.ಅಂದಹಾಗೆ 2013ರಲ್ಲಿ ಅನುಷ್ಕಾ ಈ ನಿರ್ಮಾಣ ಸಂಸ್ಥೆಯನ್ನು ತನ್ನ ಸಹೋದರನ ಜೊತೆ ಸೇರಿ ನಿರ್ಮಾಣ ಮಾಡಿದ್ದರು.

    ಹೊರಬರಲು ಕಾರಣವೇನು?

    ‘ನಾನು ನನ್ನ ಸಹೋದರ ಕರ್ಣೇಶ್ ಶರ್ಮಾ ಜೊತೆ ಕ್ಲೀನ್ ಸ್ಲೇಟ್ ಫಿಲ್ಮ್ ಪ್ರಾರಂಭಿಸಿದಾಗ ಇನ್ನು ಹೊಸಬರು. ಇಂದು ನಾವು ಹಿಂದೆ ತಿರುಗಿ ನೋಡಿದಾಗ ಸೃಷ್ಟಿ ಮಾಡಿದ್ದೀವಿ ಎನ್ನುವ ಬಗ್ಗೆ ನಮಗೆ ತುಂಬ ಹೆಮ್ಮೆ ಎನಿಸುತ್ತೆ. ಇದರಲ್ಲಿ ಕರ್ಣೇಶ್ ಕೊಡುಗೆ ದೊಡ್ಡದಿದೆ’ ಎಂದು ಬರೆದುಕೊಂಡಿದ್ದಾರೆ. ‘ತಾಯಿಯಾಗಿ ಈಗ ನಾನು ನಟನಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡಾಗ ಹಿಂದಿಗಿಂತಲೂ ಸಂಪೂರ್ಣವಾಗಿ ನಾನು ನನ್ನ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಈಗ ನನ್ನ ಕೈಯಲ್ಲಿ ಎಷ್ಟು ಸಮಯ ಸಿಗುತ್ತೊ ಆ ಸಮಯವನ್ನು ನನ್ನ ಮೊದಲ ಪ್ರೀತಿಯಾಗಿರುವ ನಟನೆಗೆ ಮೀಸಲಿಡುತ್ತೇನೆ’ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.


    ಇದನ್ನೂ ಓದಿ: ಅಲೆಲೆಲೇ.. ಸನ್ನಿ ಲಿಯೋನ್​​ ಹೆಸ್ರು ಹಚ್ಚೆ ಹಾಕಿಸಿಕೊಂಡ ಫ್ಯಾನ್​​, ಒಳ್ಳೆ ಹೆಂಡ್ತಿ ಸಿಗ್ಲಿ ಎಂದ `ಸೇಸಮ್ಮ’!

    ಚೀರ್​ ಲೀಡರ್​ ಆಗಿರುತ್ತೇನೆ ಎಂದ ನಟಿ ಅನುಷ್ಕಾ ಶರ್ಮಾ!
    ‘ನಾನು ಇನ್ಮುಂದೆ ಕರ್ಣೇಶ್ ಮತ್ತು ಸಂಸ್ಥೆಗೆ ಚೀರ್ ಲೀಡರ್ ಆಗಿ ಇರುತ್ತೇನೆ. ಈ ಸಂಸ್ಥೆ ಮೂಲಕ ಮತ್ತಷ್ಟು ಉತ್ತಮ ಸಿನಿಮಾಗಳು ಬರಲಿವೆ ಎಂದು ನಂಬಿದ್ದೇನೆ. ಈ ಸಂಸ್ಥೆ ಮುಂದೆ ಹೇಗೆ ಬೆಳೆಯಲಿದೆ ಎಂದು ನೋಡಲು ಕಾತರಳಾಗಿದ್ದೇನೆ. ಸಂಸ್ಥೆಯ ಇಡೀ ಕುಟುಂಬಕ್ಕೆ ನನ್ನ ಶುಭಾಶಯಗಳು’ ಎಂದಿದ್ದಾರೆ.

    ಇದನ್ನೂ ಓದಿ : ನಟ ಧನುಷ್ ಮಾಜಿ ಪತ್ನಿಗೆ ಮಾಡಿದ್ದ ಟ್ವೀಟ್ ಎಂತದ್ದು ಗೊತ್ತೇ? ಇದಕ್ಕೆ ಐಶ್ವರ್ಯಾ ಏನ್ ಹೇಳಿದ್ರು ನೋಡಿ

    ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅನುಷ್ಕ ಶರ್ಮ ಅಷ್ಟಾಗಿ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಕೊನೆಯದಾಗಿ 2018ರಲ್ಲಿ ಶಾರುಖ್ ಖಾನ್ ನಟನೆಯ ಜೀರೋ ಸಿನಿಮಾದಲ್ಲಿ ನಟಿಸಿದ ಬಳಿಕ ಮುಂದೆ ಯಾವ ಸಿನಿಮಾ  ಅನುಷ್ಕಾ ಒಪ್ಪಿಕೊಂಡಿರಲಿಲ್ಲ. ಬಣ್ಣದ ಲೋಕದಿಂದ ದೂರ ಇದ್ದ ಅನುಷ್ಕಾ ಆಗಾಗ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. ಖ್ಯಾತ ಮಹಿಳಾ ಕ್ರಿಕೆಟರ್ ಜೂಲವ್ ಗೋಸ್ವಾಮಿ ಅವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನೆಟ್ ಫ್ಲಿಕ್ಸ್ ನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ.
    Published by:Vasudeva M
    First published: