Anushka Sharma: ಪ್ರಾಣಿಪ್ರಿಯನಿಗೆ ಪಾಗಲ್​ ಅಂದವನಿಗೆ ನಟಿ ಕ್ಲಾಸ್​​.. `ಹುಚ್ಚ’ ಅವರಲ್ಲ ನೀನು ಅಂದಿದ್ಯಾಕೆ ಅನುಷ್ಕಾ?

ಸ್ವಾರ್ಥವಿಲ್ಲದ ಪ್ರೀತಿ ಅವುಗಳದ್ದು, ಅಬ್ಬಬ್ಬಾ ಅಂದರೆ ಮನುಷ್ಯನಿಂದ ಒಂದಿಷ್ಟು ಅಕ್ಕರೆ ಮತ್ತು ಆಹಾರವನ್ನಷ್ಟೇ ಅವು ಬಯಸುತ್ತವೆ ಅಷ್ಟೆ. ಎಲ್ಲಾ ವರ್ಗಗಳಲ್ಲೂ, ಪ್ರಾಣಿಗಳ ನಿಸ್ವಾರ್ಥ ಪ್ರೀತಿಯನ್ನು ಅವುಗಳನ್ನು ಸ್ನೇಹದಿಂದ ಕಾಣುವ ಮನುಷ್ಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುವುದೇ ನೆಮ್ಮದಿಯ ಸಂಗತಿ. 

ನಟಿ ಅನುಷ್ಕಾ ಶರ್ಮಾ

ನಟಿ ಅನುಷ್ಕಾ ಶರ್ಮಾ

  • Share this:
ಮೂಕ ಪ್ರಾಣಿ(Animals)ಗಳಿಗೆ ಮನುಷ್ಯನ ಭಾಷೆಯಲ್ಲಿ ಮಾತನಾಡಲು ಬಾರದಿರಬಹುದು. ಆದರೆ, ಅವು ಮನುಷ್ಯ(Human)ರಿಗೆ ತೋರಿಸುವ ಪ್ರೀತಿ(Love)ಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸ್ವಾರ್ಥವಿಲ್ಲದ ಪ್ರೀತಿ ಅವುಗಳದ್ದು, ಅಬ್ಬಬ್ಬಾ ಅಂದರೆ ಮನುಷ್ಯನಿಂದ ಒಂದಿಷ್ಟು ಅಕ್ಕರೆ ಮತ್ತು ಆಹಾರ(Food)ವನ್ನಷ್ಟೇ ಅವು ಬಯಸುತ್ತವೆ ಅಷ್ಟೆ. ಎಲ್ಲಾ ವರ್ಗಗಳಲ್ಲೂ, ಪ್ರಾಣಿಗಳ ನಿಸ್ವಾರ್ಥ ಪ್ರೀತಿಯನ್ನು ಅವುಗಳನ್ನು ಸ್ನೇಹದಿಂದ ಕಾಣುವ ಮನುಷ್ಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುವುದೇ ನೆಮ್ಮದಿಯ ಸಂಗತಿ. ಪ್ರಿಯಾಂಕಾ ಚೋಪ್ರಾ(Priyanka Chopra), ಅನುಷ್ಕಾ ಶರ್ಮಾ(Anushka Sharma), ಕೃತಿ ಸನನ್(Kriti Sanon) ಸೇರಿದಂತೆ ಹಲವಾರು ಬಾಲಿವುಡ್(Bollywood) ಸೆಲೆಬ್ರಿಟಿಗಳು ಆಗಾಗ್ಗೆ ತಮ್ಮ ಮುದ್ದಿನ ಸಾಕು ಪ್ರಾಣಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಗಮನ ಸೆಳೆಯುವುದುಂಟು. ತಮ್ಮ ಸಾಕು ಪ್ರಾಣಿಗಳ ಜೊತೆ ಹೃದಯಾಂತರಾಳದ ಸಂಬಂಧ ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಪ್ರತಿಯೊಂದು ಪ್ರಾಣಿಗಳ ಕುರಿತು ಮೃದು ಧೋರಣೆ ಮತ್ತು ಅನುಕಂಪ ಹೊಂದಿರುತ್ತಾರೆ. ಮತ್ತು ಅವರು ಇನ್ನೊಬ್ಬ ಪ್ರಾಣಿ ಪ್ರಿಯನ ಹೃದಯವನ್ನು ಅರ್ಥ ಮಾಡಿಕೊಳ್ಳಬಲ್ಲರು. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಅಂತವರಲ್ಲಿ ಒಬ್ಬರು.

ಗಾಯಗೊಂಡಿದ್ದ ನಾಯಿಗೆ ಆರೈಕೆ ಮಾಡಿದ್ದ ವ್ಯಕ್ತಿ!

ಇತ್ತೀಚೆಗೆ ಅವರು ಇನ್‍ಸ್ಟಾಗ್ರಾಂನಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ದೆಹಲಿಯ ವ್ಯಕ್ತಿಯೊಬ್ಬ ಗಾಯಗೊಂಡ ಬೀದಿ ನಾಯಿಯ ಆರೈಕೆ ಮಾಡುತ್ತಿರುವುದನ್ನು ಆ ವಿಡಿಯೋದಲ್ಲಿ ಕಾಣಬಹುದು. ಅನುಷ್ಕಾ ಆ ವ್ಯಕ್ತಿಯನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ವ್ಯಕ್ತಿಯ ಮಾನವೀಯ ಕೃತ್ಯವನ್ನು ಕಂಡು ರೇಗಿಸಿದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಕೂಡ.

‘ಹುಚ್ಚ’ ಎಂದವರನ್ನು ತರಾಟೆಗೆ ತೆಗೆದುಕೊಂಡ ಅನುಷ್ಕಾ

ಅನುಷ್ಕಾ ಅವರು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಆ ವಿಡಿಯೋದಲ್ಲಿ , ಒಬ್ಬ ವ್ಯಕ್ತಿ ಗಾಯಗೊಂಡಿರುವ ಬೀದಿ ನಾಯಿಯನ್ನು ತನ್ನ ಬಾಹುಗಳಲ್ಲಿ ಎತ್ತಿಕೊಳ್ಳುತ್ತಾರೆ ಮತ್ತು ಆರೈಕೆ ಮಾಡುತ್ತಾರೆ. ಅದನ್ನು ನೋಡಿದ ಒಬ್ಬ ವ್ಯಕ್ತಿ ಅವನನ್ನು ಪಾಗಲ್ (ಹುಚ್ಚ) ಎಂದು ಕರೆಯುತ್ತಾರೆ. ಹುಚ್ಚನೆಂದು ಕರೆಸಿಕೊಂಡರೂ ಕೂಡ ಆ ವ್ಯಕ್ತಿ ಗಾಯಗೊಂಡ ನಾಯಿಯ ಆರೈಕೆಯನ್ನು ಮುಂದುವರೆಸುತ್ತಾರೆ. ಪ್ರತಿಯೊಬ್ಬರು ಪ್ರೇಮಮಯಿ ಜೀವಿಗಳ ಆರೈಕೆ ಮಾಡಬೇಕು ಎಂದು ಒತ್ತಾಯಿಸಿದರು. ಈ ವಿಡಿಯೋವನ್ನು ಹಂಚಿಕೊಳ್ಳುತ್ತಾ ಅನುಷ್ಕಾ ಶರ್ಮಾ ಆ ವ್ಯಕ್ತಿಯನ್ನು ಸಿಕ್ಕಾಪಟ್ಟೆ ಶ್ಲಾಘಿಸಿದ್ದಾರೆ ಮತ್ತು “ಮಾನವೀಯತೆಯನ್ನು ಅರ್ಥ ಮಾಡಿಕೊಳ್ಳದವರು ಹುಚ್ಚರು.. “ ಎಂದು ಬರೆದುಕೊಮಂಡಿದ್ದಾರೆ.


ಇದನ್ನೂ  ಓದಿ: ಬೆಡ್​​ರೂಂನಲ್ಲಿರೋ ಫೋಟೋ ಹಂಚಿಕೊಂಡ ಜಾಹ್ನವಿ.. ಇನ್ನೇನ್​ ಉಳಿಸಿದ್ದೀರಾ ಎಂದ ನೆಟ್ಟಿಗರು!

ಪ್ರಾಣಿಗಳೆಂದರೇ ಅನುಷ್ಕಾ ಶರ್ಮಾಗೆ ಅಚ್ಚುಮೆಚ್ಚು!

ಅನುಷ್ಕಾ ಶರ್ಮಾ ಯಾವಾಗಲು ಪ್ರಾಣಿಗಳು ಮತ್ತು ಅನಾಥ ಪ್ರಾಣಿಗಳ ಪರವಾಗಿ ಹೋರಾಡುತ್ತಾ ಬಂದಿದ್ದಾರೆ. ಅನೇಕ ಬಾರಿ ಅನಾಥ ಪ್ರಾಣಿಗಳು ಅಥವಾ ಬೀದಿ ನಾಯಿಗಳ ಮೇಲೆ ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ ಕೂಡ. ಅನುಷ್ಕಾ ಶರ್ಮ ಅವರ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಪ್ರಾಣಿ ಪ್ರಿಯರು. ಅವರಿಬ್ಬರ ಇನ್‍ಸ್ಟಾಗ್ರಾಂ ಖಾತೆಗಳಲ್ಲಿ ಪ್ರಾಣಿ ಪ್ರೀತಿಗೆ ಸಂಬಂಧಿಸಿದ ಪೋಟೋ ಮತ್ತು ವಿಡಿಯೋಗಳನ್ನು ಕಾಣಬಹುದು.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್​ನ ಮತ್ತೊಂದು ಸ್ಟಾರ್​ ಜೋಡಿ!

ಚಕ್ಡಾ ಎಕ್ಸ್​​ಪ್ರೆಸ್​​​ ಶೂಟಿಂಗ್​ನಲ್ಲಿ ಅನುಷ್ಕಾ ಬ್ಯುಸಿ!

ಇನ್ನು ಅನುಷ್ಕಾ ಶರ್ಮಾ ಅವರ ವೃತ್ತಿ ಬದುಕಿನ ಬಗ್ಗೆ ಮಾತನಾಡುವುದಾದರೆ, ಈ ದಿನಗಳಲ್ಲಿ ಅವರು ವೃತ್ತಿಗೆ ಸಂಬಂಧಿಸಿದ ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಕಾರಣ, ಅವರ ಮುಂದಿನ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್‍ನ ತಯಾರಿ ಭರದಿಂದ ಸಾಗುತ್ತಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ, ಶ್ರೇಷ್ಠ ಮಹಿಳಾ ಬೌಲರ್ ಜೂಲನ್ ಗೋಸ್ವಾಮಿಯವರ ಬದುಕಿನ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದೆ.
Published by:Vasudeva M
First published: