ವಿರಾಟ್ ಕೊಹ್ಲಿ(Virat Kohli) ಹಾಗೂ ಅನುಷ್ಕಾ ಶರ್ಮಾ(Anushka Sharma) ದಂಪತಿ ಮಗಳು ವಮಿಕಾ (Vamika) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಮಿಕಾಗೆ 2 ವರ್ಷ ಪೂರೈಸಿದ್ದು, ಇನ್ನುಸಹ ವಿರಾಟ್-ಅನುಷ್ಕಾ ಮಗಳ ಫೋಟೋ ರಿವೀಲ್ ಮಾಡಿಲ್ಲ. ಮಗಳ ಮುಖವನ್ನು ಇಷ್ಟು ದಿನ ಎಲ್ಲಿಯೂ ರಿವೀಲ್(Face Revel) ಮಾಡಿರಲಿಲ್ಲ.. ಹೊರಗೆ ಮಗಳ ಜೊತೆ ಕಾಣಿಸಿ ಕೊಂಡಾಗ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮಗಳ ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿದ್ದರು. ಅದೆಷ್ಟೋ ಬಾರಿ ಕ್ಯಾಮರಾಗಳು ಅನುಷ್ಕಾ ಹಾಗೂ ಕೊಹ್ಲಿ ಹಿಂದೆ ಬಿದ್ದು ವಮಿಕಾ ಫೋಟೋ ತೆಗೆಯಲು ಪ್ರಯತ್ನಿಸಿದ ವೇಳೆ ಫೋಟೋ ತೆಗೆಯಬೇಡಿ ಎಂದು ಈ ದಂಪತಿಗಳು ಖುದ್ದಾಗಿ ಮನವಿ ಮಾಡಿಕೊಂಡಿದ್ದರು.
ಮಗಳ ಫೋಟೋ ಹಂಚಿಕೊಂಡ ಅನುಷ್ಕಾ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಗಳ ಹುಟ್ಟುಹಬ್ಬದ ದಿನ ತಾಯಿಯಾದ ನೆನಪು, ಖುಷಿ ಹಂಚಿಕೊಂಡಿದ್ದಾರೆ. ತನ್ನ ಮಗಳು ವಾಮಿಕಾ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಪಾರ್ಕ್ ಒಂದರಲ್ಲಿ ಕುರ್ಚಿ ಮೇಲೆ ಕುಳಿತು ಮಗಳ ತುಂಟಾಟಕ್ಕೆ ನಟಿ ನಗುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.
View this post on Instagram
ತಾಯಿ ಅನುಷ್ಕಾಳಿಗೆ ವಮಿಕಾ ಸಿಹಿ ಮುತ್ತು ನೀಡಿದ್ದು, ಈ ಫೋಟೋಗೆ ನಟಿ ಮುದ್ದಾದ ಶೀರ್ಷಿಕೆಯನ್ನು ಸಹ ನೀಡಿದ್ದಾರೆ. ಫೋಟೋವನ್ನು ಹಂಚಿಕೊಂಡ ಅನುಷ್ಕಾ, "2 ವರ್ಷಗಳ ಹಿಂದೆ ನನ್ನ ಹೃದಯವು ವಿಶಾಲವಾಗಿ ತೆರೆದುಕೊಂಡಿತು " ಎಂದು ಬರೆದು ಹಾರ್ಟ್ ಸಿಂಬಲ್ ಹಾಕಿದ್ದಾರೆ.
ಕ್ಯಾಮೆರಾ ಕಣ್ಣಿಗೆ ಬಿದ್ದ ವಮಿಕಾ ಕೊಹ್ಲಿ
2 ವರ್ಷವಾದ್ರೂ ವಿರಾಟ್-ಅನುಷ್ಕಾ ದಂಪತಿ ಮಗಳ ಫೋಟೋ ರಿವೀಲ್ ಮಾಡಿಲ್ಲಈ ಹಿಂದೆ ದಕ್ಷಿಣ ಆಫ್ರಿಕಾಗೆ ಟೀಮ್ ಇಂಡಿಯಾ ತೆರಳುವ ವೇಳೆ ಕೆಲವೊಂದಿಷ್ಟು ಛಾಯಾಗ್ರಾಹಕರು ವಮಿಕಾ ಫೋಟೋ ತೆಗೆದಾಗಲೂ ಅದನ್ನ ಎಲ್ಲಿಯೂ ಪ್ರಕಟಿಸದಂತೆ ವಿರಾಟ್-ಅನುಷ್ಕಾ ಮನವಿ ಮಾಡಿಕೊಂಡಿದ್ದರು. ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವೆ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಕೊನೆಗೂ ವಮಿಕಾ ಸಣ್ಣ ವಿಡಿಯೋ ವೈರಲ್ ಆಗಿತ್ತು.
ಅಪ್ಪನ ಜೆರಾಕ್ಸ್ ಕಾಪಿ ಎಂದು ಅಭಿಮಾನಿಗಳು
ಅಮ್ಮ ಅನುಷ್ಕಾ ಶರ್ಮಾ ಜೊತೆ ಕಾಣಿಸಿಕೊಂಡ ವಮಿಕಾ ಹೇಗೆ ಕಾಣುತ್ತಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.. ಡೇಟ್ ನೋಡಲು ವಿರಾಟ್ ಕೊಹ್ಲಿ ಅಂತೆ
ವಮಿಕಾ ಕಾಣಿಸುತ್ತಿದ್ದು, ವಿರಾಟ ಹಾಗೂ ಅನುಷ್ಕಾ ಅಭಿಮಾನಿಗಳು ಅಪ್ಪನ ಜೆರಾಕ್ಸ್ ಕಾಪಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ರು.
ಇದನ್ನೂ ಓದಿ: Varisu Movie: ವಿಜಯ್-ರಶ್ಮಿಕಾ ವಾರಿಸು ಚಿತ್ರದ OTT ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್! ಯಾರ ಪಾಲಾಯ್ತು ಸಿನಿಮಾ?
ಮಗಳ ಖಾಸಗಿ ಜೀವನಕ್ಕೆ ಅವಕಾಶ ನೀಡಿ ಎಂದು ಮನವಿ
ಇನ್ನು ನಮ್ಮ ಮಗುವಿಗೆ ಖಾಸಗಿತನ ನೀಡಿ. ಸೋಶಿಯಲ್ ಮೀಡಿಯಾದಿಂದ ಮುಕ್ತವಾಗಿ ಜೀವನವನ್ನು ನಡೆಸಲು ಅವಳಿಗೆ ಅವಕಾಶವನ್ನು ಕೊಡಿ. ಅವಳು ಬೆಳೆದಂತೆ ನಾವು ಅವಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಬೆಂಬಲದ ಅಗತ್ಯವಿದೆ. ಅವಳ ಚಿತ್ರಗಳನ್ನು ಪೋಸ್ಟ್ ಮಾಡದಿರಲು ಕೋರುತ್ತೇವೆ. ನಮ್ಮ ಫ್ಯಾನ್ ಕ್ಲಬ್ಗಳು ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ವಿಶೇಷ ಧನ್ಯವಾದಗಳು’ ಎಂದು ಅನುಷ್ಕಾ ಈ ಹಿಂದೆ ಬರೆದುಕೊಂಡಿದ್ದರು.. ಅಲ್ಲದೇ ವಿರಾಟ್ ಕೊಹ್ಲಿ ಸಹ ಮಗಳ ಫೋಟೋ ತೆಗೆಯದಂತೆ ಪಾಪರಾಜಿಗಳಿಗೆ ಸಾಕಷ್ಟು ಬಾರಿ ಮನವಿ ಸಹ ಮಾಡಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ