• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Anushka Sharma: ಕ್ರೀಡಾಧಾರಿತ ಸಿನಿಮಾದಲ್ಲಿರುವ ಸವಾಲುಗಳೇನು? ಅನುಷ್ಕಾ ಶರ್ಮಾ ಏನ್ ಹೇಳಿದ್ದಾರೆ ನೋಡಿ

Anushka Sharma: ಕ್ರೀಡಾಧಾರಿತ ಸಿನಿಮಾದಲ್ಲಿರುವ ಸವಾಲುಗಳೇನು? ಅನುಷ್ಕಾ ಶರ್ಮಾ ಏನ್ ಹೇಳಿದ್ದಾರೆ ನೋಡಿ

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ

ನಟಿ ಅನುಷ್ಕಾ ಶರ್ಮಾ ಆಗಾಗ ಚಲನಚಿತ್ರದ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದು ಅವರ ತರಬೇತಿ ಅವಧಿಗಳ ಫೋಟೋಗಳು ಅಥವಾ ವಿಡಿಯೋಗಳು. ಇದೀಗ ಚಿತ್ರದ ಶೂಟಿಂಗ್ ವೇಳೆ ಎದುರಾಗಿರುವ ಮತ್ತೊಂದು ಹೊಸ ಸವಾಲಿನ ಬಗ್ಗೆ ನಟಿ ಮಾತನಾಡಿದ್ದಾರೆ. ಅದು ಏನೆಂದರೆ ಕ್ರೀಡಾಧಾರಿತ ಚಿತ್ರಗಳಲ್ಲಿ ಭಾಗವಹಿಸುವುದು ಅತ್ಯಂತ ಸವಾಲಿನ ಕೆಲಸ ಆಗಿದೆ ಎಂದು ಅದರ ಬಗ್ಗೆ ಮಾತನಾಡಿದ್ದಾರೆ.

ಮುಂದೆ ಓದಿ ...
  • Share this:

ಅನುಷ್ಕಾ ಶರ್ಮಾ (Anushka Sharma) ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಭಾರತೀಯ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಮುಂಬರುವ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ನ ಚಿತ್ರೀಕರಣದಲ್ಲಿದ್ದಾರೆ. ನಟಿ ಆಗಾಗ ಚಲನಚಿತ್ರದ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದು ಅವರ ತರಬೇತಿ ಅವಧಿಗಳ ಫೋಟೋಗಳು ಅಥವಾ ವಿಡಿಯೋಗಳು (Video). ಇದೀಗ ಚಿತ್ರದ ಶೂಟಿಂಗ್ ವೇಳೆ (Shooting Time) ಎದುರಾಗಿರುವ ಮತ್ತೊಂದು ಹೊಸ ಸವಾಲಿನ ಬಗ್ಗೆ ನಟಿ ಮಾತನಾಡಿದ್ದಾರೆ. ಅದು ಏನೆಂದರೆ ಕ್ರೀಡಾಧಾರಿತ ಚಿತ್ರಗಳಲ್ಲಿ ಭಾಗವಹಿಸುವುದು ಅತ್ಯಂತ ಸವಾಲಿನ ಕೆಲಸ ಆಗಿದೆ ಎಂದು ಅದರ ಬಗ್ಗೆ ಮಾತನಾಡಿದ್ದಾರೆ. ಕ್ರೀಡೆ (Sports) ಎಂಬುದು ಸಂಘಟಿತ,ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ (Activity). ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ. ಕ್ರೀಡೆಯು ಸಾಮಾನ್ಯರು ಎಂದುಕೊಂಡಷ್ಟು ಸುಲಭವಲ್ಲ.


ಕ್ರೀಡಾ-ಆಧಾರಿತ ಸಿನಿಮಾದಲ್ಲಿ ನಟಿಸುವ ಸವಾಲುಗಳು  
ಕ್ರೀಡೆಯಲ್ಲಿ ಭಾಗವಹಿಸಿ, ಅದರಲ್ಲಿ ನೆಲೆಯೂರುವುದು ಎಂದ್ರೆ ಅದಕ್ಕೆ ಬಹಳ ಪರಿಶ್ರಮದ ಅವಶ್ಯಕತೆ ಖಂಡಿತ ಇರುತ್ತದೆ. ಇನ್ನು ಪ್ರಮುಖ ಕ್ರೀಡಾಪಟುಗಳ ಜೀವನ ಚರಿತ್ರೆಯನ್ನು ಇಟ್ಟುಕೊಂಡು ಇಂದು ಸಿನಿಮಾ ಮಾಡುವುದು ಒಂದು ಟ್ರೆಂಡ್‌ ಆಗಿ ಬದಲಾಗಿದೆ. ಆದರೆ ಪರದೆಯ ಮೇಲೆ ಕ್ರೀಡಾಪಟುವನ್ನು ಸಿನಿಮಾ ನಟ-ನಟಿಯರು ಅನುಕರಿಸುವುದು ಸುಲಭದ ಸಾಧನೆಯಲ್ಲ. ಅದು ತನ್ನದೇ ಆದ ಸಾಧಕ ಬಾಧಕಗಳನ್ನು ಹೊಂದಿರುತ್ತದೆ.


ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆಯಾಧಾರಿತ ಸಿನೆಮಾ
ಪ್ರಸ್ತುತ ಭಾರತದ ಮಾಜಿ ಕ್ರಿಕೆಟಿಗರಾದ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ʼಚಕ್ಡಾ ಎಕ್ಸ್‌ಪ್ರೆಸ್ʼ ನ ಚಿತ್ರದಲ್ಲಿ ನಟಿಸುತ್ತಿರುವ ಅನುಷ್ಕಾ ಶರ್ಮಾ, ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈ ಚಿತ್ರಕ್ಕಾಗಿ ಅವರು ಎಷ್ಟೆಲ್ಲ ಹೋರಾಟ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಒಂದು ಸಣ್ಣ ಇಣುಕು ನೋಟವನ್ನು ನೀಡಿದ್ದಾರೆ.


ಅವರು ಇನ್‌ಸ್ಟಾಗ್ರಾಮ್‌ಗೆ ಕನ್ನಡಿಯ ಮುಂದೆ ನಿಂತು ಸೆಲ್ಪಿ ತೆಗೆದುಕೊಂಡಿರುವುದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕಪ್ಪು 'ಕಂಪ್ರೆಷನ್ ಟೈಟ್ಸ್' ಧರಿಸಿರುವುದನ್ನು ಕಾಣಬಹುದು. ಈ ಧಿರಿಸುಗಳು ಸ್ನಾಯುಗಳ ನೋವನ್ನು ಪರಿಹರಿಸಲು ಇದನ್ನು ಉದ್ದೇಶಿಸಲಾಗಿದೆ.


ಇದನ್ನೂ ಓದಿ:  Actor Dhananjaya: ಡಾಲಿ ಧನಂಜಯ್ 26ನೇ ಸಿನಿಮಾ! ಕನ್ನಡ ಮಾತ್ರವಲ್ಲ ತೆಲುಗಿನಲ್ಲೂ ರಿಲೀಸ್


"ನೀವು ಎದ್ದಾಗ ಅಥವಾ ಮಲಗುವಾಗ ಎಲ್ಲ ಸಮಯದಲ್ಲೂ 'ಕಂಪ್ರೆಷನ್ ಟೈಟ್ಸ್ ಧರಿಸಲೇಬೇಕು. ಏಕೆಂದರೆ ಇದು ಕ್ರೀಡೆ ಆಧಾರಿತ ಚಿತ್ರ," ಎಂದು ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆಯುವ ಸಮಯದಲ್ಲಿ ಅನುಷ್ಕಾ ಶರ್ಮಾ ಅವರು ಸೆಲ್ಪಿ ಜೊತೆ ಈ ಮಾತನ್ನು ಹೇಳಿದ್ದಾರೆ.


ಅಧ್ಯಯನಗಳು ಏನ್‌ ಹೇಳ್ತಿವೆ?
ಜನವರಿ 2020 ರ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರ (NCBI) ಅಧ್ಯಯನ - ವ್ಯಾಯಾಮದ ಕಾರ್ಯಕ್ಷಮತೆ ಮತ್ತು ಸಂಬಂಧಿತ ಸೂಚಕಗಳ ಮೇಲೆ ಸಂಕೋಚನ ಸ್ಟಾಕಿಂಗ್‌ಗಳನ್ನು ಧರಿಸುವುದರ ಪರಿಣಾಮಗಳು: ಇದು ಒಂದು ವ್ಯವಸ್ಥಿತ ವಿಮರ್ಶಾ ಅಧ್ಯಯನ ಆಗಿದೆ. ಈ ಅಧ್ಯಯನದಲ್ಲೂ ಸಹ, “ಸ್ಟಾಕಿಂಗ್ಸ್ ಅಥವಾ ಬಿಗಿಯುಡುಪುಗಳಂತಹ ಸಂಕೋಚನ ಉಡುಪುಗಳನ್ನು ಧರಿಸುವುದು ಸ್ನಾಯುಗಳಲ್ಲಿ ಇರುವ ನೋವನ್ನು ನಿವಾರಿಸುವಲ್ಲಿ ಇವು ಸಹಾಯ ಮಾಡುತ್ತವೆ. ಸ್ನಾಯುವಿನ ನೋವಿನ ಸಮಯದಲ್ಲಿ ಹೆಚ್ಚು ಪ್ರಯೋಜನಕಾರಿ ಆಗಬಹುದು. ಈ ಬಟ್ಟೆಗಳನ್ನು ಧರಿಸುವುದರಿಂದ ಬೇಗ ಸ್ನಾಯುಗಳು ಬೇಗನೆ ಚೇತರಿಸಿಕೊಳ್ಳುತ್ತವೆ ” ಎಂದು ಸೂಚಿಸಿದೆ.


ಡಾ. ರಿಚಾ ಕುಲಕರ್ಣಿ, ಮುಖ್ಯ ಸಲಹಾ ಮತ್ತು ಕ್ರೀಡಾ ಭೌತಚಿಕಿತ್ಸಕ, ಮತ್ತು ಡಾ. ರಿಚಾಸ್ ಕಿನೆಸಿಸ್ ಸ್ಪೋರ್ಟ್ಸ್ ರಿಹ್ಯಾಬ್ ಮತ್ತು ಫಿಸಿಯೋಥೆರಪಿ ಕ್ಲಿನಿಕ್,ಪುಣೆ. ಇವರ ಪ್ರಕಾರ ಸಂಕೋಚನ ಬಿಗಿಯುಡುಪುಗಳು ಈ ಪ್ರಕಾರಗಳಿಗೆ ಸೇರಿವೆ:


ಇವು ಸಂಕೋಚನ ಬಿಗಿಯುಡುಪುಗಳ ವಿವಿಧ ಪ್ರಕಾರಗಳಾಗಿವೆ.


  1. ಗ್ರಾಜುಯೇಟೆಡ್‌ ಕಂಪ್ರೆಷನ್‌ ಸ್ಟಾಕಿಂಗ್ಸ್.

  2. ಆಂಟಿ ಎಂಬಾಲಿಸಮ್ ಸ್ಟಾಕಿಂಗ್ಸ್.

  3. ನಾನ್‌ ಮೆಡಿಕಲ್‌ ಸಪೋರ್ಟ್‌ ಹೊಸೈರಿ.


ಸಂಶೋಧನೆಗಳು ಏನ್‌ ಹೇಳ್ತಿವೆ?
ಸಂಶೋಧನೆಯ ಪ್ರಕಾರ “ಸಂಕೋಚನ ಉಡುಪುಗಳಿಗೆ ವಿವಿಧ ಪ್ರಕಾರಗಳಿವೆ (ಉದಾಹರಣೆಗೆ, ಶಾರ್ಟ್ಸ್‌ ಫಾರ್‌ ಥೈಯ್ಸ್‌, ಪುಲ್‌ ಲೆಗ್‌) ಮತ್ತು ಅಪ್ಲಿಕೇಶನ್ ಮೋಡ್ಸ್‌ (ಉದಾಹರಣೆಗೆ, ವ್ಯಾಯಾಮದ ನಂತರ ಮಾತ್ರ ಬಳಸುವುದು). ಅದರ ಜೊತೆಗೆ, ಗಮನಾರ್ಹ ಸಂಖ್ಯೆಯ ಕ್ರೀಡೆಗಳು/ಚಟುವಟಿಕೆಗಳಿಗೆ CS (ಬಿಲೋ ನೀ) ಗಳ ಬಟ್ಟೆಗಳನ್ನು ಧರಿಸುತ್ತಾರೆ. ವ್ಯಾಯಾಮದ ಸಮಯದಲ್ಲಿ ಮಾತ್ರ ಬಳಸುವುದು ಬಹುಶಃ ಹೆಚ್ಚು ಪ್ರಾಯೋಗಿಕವಾಗಿದೆ (ಚೇತರಿಕೆಯ ಸಮಯದಲ್ಲಿ, ವ್ಯಾಯಾಮದ ನಂತರ) ಇವುಗಳನ್ನು ಧರಿಸಬಹುದು” ಎಂದು ಹೇಳುತ್ತಿದೆ.


ಇದನ್ನೂ ಓದಿ:  Sonam Kapoor: ಸೋನಂ ಕಪೂರ್ ಮಗುವಿಗೆ ನಾಮಕರಣ, ಮುದ್ದು ಕಂದನಿಗೆ ಚೆಂದದ ಹೆಸರಿಟ್ಟ ಬಾಲಿವುಡ್ ಬೆಡಗಿ


ಬಿಗಿಯುಡುಪಿನ ಪ್ರಯೋಜನಗಳು:
ಡಾ. ಕುಲಕರ್ಣಿ ಅವರು ಬಿಗಿಯುಡುಪಿನ ಪ್ರಯೋಜನಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದ್ದಾರೆ:


  • ಇದು ಸ್ನಾಯುವಿನ ಆಮ್ಲಜನಕೀಕರಣಕ್ಕೆ ಸಹಾಯ ಮಾಡುತ್ತದೆ.

  • ಇದು ವ್ಯಾಯಾಮದ ನಂತರ ಸ್ನಾಯುವಿನ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  • ಇದು ಸ್ನಾಯುಗಳ ದುರಸ್ತಿ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.


2019 ರಲ್ಲಿ ನಡೆದ ಅಧ್ಯಯನದ ಪ್ರಕಾರ “ಕಳೆದ 15 ವರ್ಷಗಳಲ್ಲಿ, ವಿವಿಧ ಹವ್ಯಾಸಿ ಮತ್ತು ವೃತ್ತಿಪರ ಕ್ರೀಡೆಗಳಲ್ಲಿ ಸಂಕೋಚನ ಉಡುಪುಗಳನ್ನು ಧರಿಸುವುದು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಅದರ ಜೊತೆಗೆ ಸೀಮಿತ ಸಂಖ್ಯೆಯ ಅಧ್ಯಯನಗಳು ಸಂಕೋಚನ ಉಡುಪುಗಳಿಂದ ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು ಎಂಬುದಕ್ಕೆ ಕೆಲವು ಪುರಾವೆಗಳನ್ನು ಸೂಚಿಸುತ್ತವೆಯಾದರೂ, ಸಂಶೋಧನೆಯ ಪ್ರಸ್ತುತ ಗಮನವು ತೀವ್ರವಾದ ಸ್ನಾಯುವಿನ ಕಾರ್ಯಕ್ಷಮತೆಯ ನಂತರ ಚೇತರಿಕೆಯ ಮೇಲೆ ಹೇಗೆ ಇವು ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲಾಗಿದೆ” ಎಂದು ಅಧ್ಯಯನಗಳು ವರದಿ ಮಾಡಿವೆ.


ವಿರಾಟ್ ಬಗ್ಗೆ ಅನುಷ್ಕಾ ಏನಂದ್ರು
ಇದಕ್ಕೂ ಒಂದು ದಿನ ಹಿಂದೆ ಅನುಷ್ಕಾ ಶರ್ಮಾ ಅವರು ತಮ್ಮ ಕ್ರಿಕೆಟಿಗ ಪತಿ ವಿರಾಟ್ ಕೊಹ್ಲಿಯನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.ವಿರಾಟ್‌ ಸದ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧ ಭಾರತದ ಟಿ20 ಪಂದ್ಯಕ್ಕಾಗಿ ಕೊಹ್ಲಿ ಮೊಹಾಲಿಯಲ್ಲಿದ್ದಾರೆ.


ಇದನ್ನೂ ಓದಿ:  Nanda Kishore: ಪೊಗರು ಬಳಿಕ ನಂದ ಕಿಶೋರ್ ಏನ್ ಮಾಡಿದ್ರು ಗೊತ್ತೇ? ಸೆಟ್ಟೇರುತ್ತಿದೆ ಮತ್ತೊಂದು ಸೂಪರ್ ಸಿನಿಮಾ


ಆದ್ದರಿಂದ ಅನುಷ್ಕಾ ಅವರು ತಮ್ಮ ಪೋಸ್ಟ್‌ನಲ್ಲಿ "ಇವುಗಳಂತಹ ಸುಂದರವಾದ ಸ್ಥಳಗಳಲ್ಲಿ ಅಥವಾ ಇಂತಹ ಸ್ಥಳಗಳಲ್ಲಿ ಪತಿಯೊಂದಿಗೆ ಇರುವುದು ನಿಜಕ್ಕೂ ಹೆಚ್ಚು ಫನ್‌ ನೀಡುವ ಸಂಗತಿ. ಇದು ಬೆಸ್ಟ್‌ ಸ್ಥಳ ಎಂದು ತೋರುತ್ತದೆ ಎಂದು ಹೃದಯದ ಸಂಕೇತ ಇರುವ ಎಮೋಜಿ ಬಳಕೆ ಮಾಡಿ, ಮಿಂಸಿಂಗ್‌ ಹಬ್ಬಿ” ಎಂದು ಬರೆದುಕೊಂಡಿದ್ದಾರೆ.


ಚಕ್ಡಾ ಎಕ್ಸ್‌ಪ್ರೆಸ್‌ ಬಗ್ಗೆ ಒಂದಿಷ್ಟು ಮಾತು:
ಇದು ನಿಜವಾಗಿಯೂ ವಿಶೇಷವಾದ ಚಿತ್ರವಾಗಿದೆ. ಏಕೆಂದರೆ ಭಾರತೀಯ ಕ್ರಿಕೆಟ್‌ ನಾಯಕಿ ಜೂಲನ್ ಗೋಸ್ವಾಮಿ ಅವರ ಜೀವನದಿಂದ ಈ ಚಿತ್ರ ಸ್ಫೂರ್ತಿ ಪಡೆದಿದೆ. ಇದು ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಎಂದೇ ಹೇಳಬಹುದು. ಜೂಲನ್ ಕ್ರಿಕೆಟರ್ ಆಗಲು, ಜಗತ್ತಿನ ಮುಂದೆ ತನ್ನ ದೇಶವನ್ನು ಹೆಮ್ಮೆಪಡುವಂತೆ ಮಾಡಲು ನಿರ್ಧರಿಸಿದ ಸಮಯದಲ್ಲಿ, ಮಹಿಳೆಯರು ಹೆಚ್ಚು ಹೊರಗಡೆ ಬರುತ್ತಿರಲಿಲ್ಲ. ಆಗ ಮಹಿಳೆಯರಿಗೆ ಕ್ರೀಡೆಯ ಬಗ್ಗೆ ಯೋಚಿಸುವುದು ಕೂಡ ತುಂಬಾ ಕಠಿಣವಾಗಿತ್ತು. ಈ ಚಲನಚಿತ್ರವು ಜೂಲನ್‌ ಗೋಸ್ವಾಮಿ ಅವರ ಜೀವನಚರಿತ್ರೆ ಆಗಿದೆ.

top videos
    First published: