• Home
  • »
  • News
  • »
  • entertainment
  • »
  • Anushka Sharma: ಜಗತ್ತು ನಮ್ಮನ್ನ ಅರ್ಥ ಮಾಡಿಕೊಳ್ಳಲ್ಲ - ಹೀಗೆಂದಿದ್ದೇಕೆ ಅನುಷ್ಕಾ ಶರ್ಮಾ

Anushka Sharma: ಜಗತ್ತು ನಮ್ಮನ್ನ ಅರ್ಥ ಮಾಡಿಕೊಳ್ಳಲ್ಲ - ಹೀಗೆಂದಿದ್ದೇಕೆ ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ

Bollywood: ಹಾಗೆಯೇ, ಮಹಿಳೆಯರು ಕೆಲಸದ ಸ್ಥಳಗಳಲ್ಲಿ ಹೆಚ್ಚು ಬೆಂಬಲ ದೊರಕಿದಾಗ ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಮಾಡಬಹುದು ಎಂದು ಅನುಷ್ಕಾ ಹೇಳಿದ್ದಾರೆ.

  • Share this:

ಅನುಷ್ಕಾ ಶರ್ಮಾ (Anushka Sharma) ಇತ್ತೀಚೆಗೆ ಕೆಲಸವನ್ನು ಪುನರಾರಂಭಿಸುವ ಬಗ್ಗೆ ಮತ್ತು ಹೊಸ ತಾಯಿಯಾಗಿ (Mother) ಕೆಲಸ ಹಾಗೂ ವೈಯಕ್ತಿಕ ಜೀವನದ ಸಮತೋಲನವನ್ನು ಸಾಧಿಸುವ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದು, ಈ ಪುರುಷ ಪ್ರಧಾನ ಜಗತ್ತಿನಲ್ಲಿ ಮಹಿಳೆಯರಿಗೆ(Women) ಕಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನೊಬ್ಬ ಮಹಿಳೆಯಾಗಿ, ಮನೆಯ ಹೊರಗೆ ಕೆಲಸ ಮಾಡುವ ತಾಯಿಯ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಸೋತಿದ್ದೆ. ಆದರೆ ನಾನು ತಾಯಿಯಾದ ಬಳಿಕ, ಅದರ ಕಷ್ಟಗಳು ಏನು ಎಂಬುದು ಚೆನ್ನಾಗಿ ಅರ್ಥವಾಯಿತು.


ಮನೆ ಹಾಗೂ ಕೆಲಸವನ್ನು ನಿಭಾಯಿಸುವ ಕುರಿತು ಮಾತನಾಡುತ್ತಾ, ಅನುಷ್ಕಾ ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದುಮಹಿಳೆಯರಿಗೆ ಖಂಡಿತವಾಗಿಯೂ ಕಷ್ಟ. ಕೆಲಸ ಮಾಡುವ ತಾಯಿಯ ಜೀವನ ಮತ್ತು ಭಾವನೆಗಳನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನಟಿ ಹೇಳಿದ್ದಾರೆ. ಏಕೆಂದರೆ ಪ್ರಪಂಚವು ಪುರುಷ ಪ್ರಧಾನವಾಗಿದೆ. ತಾನು ತಾಯಿಯಾಗುವವರೆಗೂ ನನಗೆ ಅದು ಅರ್ಥವಾಗಿರಲಿಲ್ಲ ಎಂದು ಅನುಷ್ಕಾ ಬಹಿರಂಗಪಡಿಸಿದ್ದಾರೆ. '


ಇನ್ನು ತಾವು ಮಹಿಳೆಯರ ಬಗ್ಗೆ ಹೆಚ್ಚು ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದು, ಸಹೋದರತ್ವದ ಬಗ್ಗೆ ಬಲವಾದ ಪ್ರಜ್ಞೆಯನ್ನು ಹೊಂದಿರುವುದಾಗಿ ಅನುಷ್ಕಾ ಒಪ್ಪಿಕೊಂಡಿದ್ದಾರೆ. ಅನುಷ್ಕಾ ಪ್ರಕಾರ, ಅವರು ಯಾವಾಗಲೂ ಮಹಿಳೆಯರಿಗಾಗಿ ದ್ವನಿ ಎತ್ತುತ್ತಾರೆ. ಅಲ್ಲದೇ, ಯಾವುದೋ ಒಂದು ಕಾರಣಕ್ಕಾಗಿ ಎತ್ತುವ ದ್ವನಿಯನ್ನು ಪ್ರೀತಿ ಮತ್ತು ಸಹಾನುಭೂತಿಯು ಇನ್ನಷ್ಟು ಶಕ್ತಿಯುತವಾಗಿಸಿದೆ ಎಂದು ಹೇಳಿದ್ದಾರೆ.


ಹಾಗೆಯೇ, ಮಹಿಳೆಯರು ಕೆಲಸದ ಸ್ಥಳಗಳಲ್ಲಿ ಹೆಚ್ಚು ಬೆಂಬಲ ದೊರಕಿದಾಗ ಯಾವುದೇ ಸಮಸ್ಯೆ ಇಲ್ಲದೇ ಕೆಲಸ ಮಾಡಬಹುದು ಎಂದು ಅನುಷ್ಕಾ ಹೇಳಿದ್ದಾರೆ. ಮಹಿಳೆಯರ ಬಗ್ಗೆ ದಯೆ ಮತ್ತು ಸಹಾನುಭೂತಿ ಹೊಂದಿರುವ ಪುರುಷರು ಇದ್ದಾರೆ ಎಂಬುದನ್ನ ಸರಿ ಎನ್ನುವ ಅವರು, ಕೆಲಸದ ಸಂಸ್ಕೃತಿಯು ತುಂಬಾ ಕಠಿಣವಾಗಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಡೀ ಜಗತ್ತಿಗೆ ಮಗುವನ್ನು ಪೋಷಿಸುವುದು ಹೇಗೆ ಮುಖ್ಯ ಎಂಬುದರ ಕುರಿತು ನಾವು ಒಟ್ಟಾಗಿ ಹೆಚ್ಚು ಗಮನ ಹರಿಸಬೇಕೆಂದು ಎಂಬುದು ನಟಿಯ ವಾದ.


ಇದನ್ನೂ ಓದಿ: ಮುಗಿದೇ ಹೋಯ್ತು 'ಸಂಘರ್ಷ'ದ ಕಥೆ, 'ಸುವರ್ಣ' ಅವಕಾಶಕ್ಕೆ ಥ್ಯಾಂಕ್ಸ್ ಎಂದ ತೇಜಸ್ವಿನಿ ಶೇಖರ್


ಚಿತ್ರರಂಗ ಬಹಳ ಬ್ಯುಸಿಯಾಗಿರುವ ಒಂದು ಉದ್ಯಮ, ಇಲ್ಲಿ ಎಲ್ಲರೂ ಓಡುತ್ತಿರುತ್ತಾರೆ. ಹಾಗಾಗಿ ನಾನು ಕೂಡ ಓಡಲೇಬೇಕು, ಇಲ್ಲದಿದ್ದರೆ ಹಿಂದೆಯಾಗುತ್ತೇನೆ. ಒಂದರ್ಥದಲ್ಲಿ ಇಲಿ ರೇಸ್ನಲ್ಲಿ ನಾನೊಂದು ಇಲಿ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.


ಅನುಷ್ಕಾ ಯಶ್ ರಾಜ್ ಫಿಲ್ಮ್ಸ್‌ನ ಬ್ಯಾಂಡ್ ಬಾಜಾ ಬಾರಾತ್ (2010) ಮತ್ತು ಜಬ್ ತಕ್ ಹೈ ಜಾನ್ (2012) ನಲ್ಲಿ ನಟಿಸುವ ಮೂಲಕ ಬಾಲಿವುಡ್ನಲ್ಲಿ ಹೆಸರುಗಳಿಸಿದ್ದಾರೆ. ಪಿಕೆ, ಸುಲ್ತಾನ್ ಸೇರಿದಂತೆ ಬಹಳಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ಅನುಷ್ಕಾ ಬಾಲಿವುಡ್ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.


ಇದನ್ನೂ ಓದಿ: ಕ್ಯಾನ್​​ ಫಿಲ್ಮ್ ಫೆಸ್ಟಿವಲ್​ನ ಜ್ಯೂರಿಯಾಗಿ ಬಾಲಿವುಡ್​ ಬೆಡಗಿ - ದೀಪಿಕಾ ಡ್ರೆಸ್​ ನೋಡಿ ಅಭಿಮಾನಿಗಳು ಫಿದಾ


ನಟಿ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಮದುವೆಯಾಗಿದ್ದು, ಕಳೆದ ವರ್ಷವಷ್ಟೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಹಳ ದಿನಗಳಿಂದ ಸಿನಿ ರಂಗದಿಂದ ದೂರವಿರುವ ಅನುಷ್ಕಾ ಮತ್ತೆ ಕೆಲಸ ಆರಂಭಿಸಿದ್ದು, ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
ಕೆಲಸದ ವಿಚಾರಕ್ಕೆ ಬಂದರೆ, ಅನುಷ್ಕಾ 'ಚಕ್ಡಾ 'ಎಕ್ಸ್‌ಪ್ರೆಸ್' ನಲ್ಲಿ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ ಪಾತ್ರವನ್ನು ಮಾಡುತ್ತಿದ್ದು. ಇದು OTTಯಲ್ಲಿ ಬಿಡುಗಡೆಯಾಗಲಿದೆ.

Published by:Sandhya M
First published: