ಕ್ರಿಕೆಟರ್ಸ್ ಕ್ರಿಕೆಟ್ (Cricket) ಆಡುವುದನ್ನು ಬಿಟ್ಟು ಬೇರೆ ಕೆಲಸ ಮಾಡೋದನ್ನು ನೋಡೋದೆ ಖುಷಿ. ಇದರಲ್ಲಿ ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ಪತಿ ಕೂಡಾ ಹಿಂದೆ ಬಿದ್ದಿಲ್ಲ. ವಿರಾಟ್ ಕೊಹ್ಲಿ (Virat Kohli) ಅವರು ಈ ಸಲ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿಲ್ಲ. ಬದಲಾಗಿ ಡ್ಯಾನ್ಸ್ ಮಾಡಿದ್ದಾರೆ. ಬಾರ್ಡರ್ ಗಾವಸ್ಕರ್ ಟ್ರೋಫಿ ಗೆಲ್ಲಲು ಸಹಾಯ ಮಾಡಿದ ನಂತರ ಕೊಹ್ಲಿ ಮುಂಬೈನಲ್ಲಿ ವಿಶೇಷ ತಂಡವನ್ನು ಭೇಟಿ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ತ್ರೀ ಮ್ಯಾಚ್ ಒಡಿಐ (ODI) ಮೊದಲು ಫನ್ ಟೈಮ್ ಎಂಜಾಯ್ ಮಾಡಿದ್ದಾರೆ ಕೊಹ್ಲಿ.
ಮಂಗಳವಾರ ಸಂಜೆ ಕೊಹ್ಲಿ ನಾರ್ವೆಯ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಸದಸದ್ಯರನ್ನು ಭೇಟಿ ಮಾಡಿದ್ದಾರೆ. ಟ್ವಿಟರ್ನಲ್ಲಿ ಕ್ವಿಕ್ ಸ್ಟೈಲ್ ತಂಡದ ಹುಡುಗರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮುಂಬೈನಲ್ಲಿ ನಾನು ಯಾರನ್ನು ಭೇಟಿ ಮಾಡಿದೆ ನೋಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
Guess who I met in mumbai 🔥👀 @TheQuickstyle pic.twitter.com/wbHcM6JRo9
— Virat Kohli (@imVkohli) March 14, 2023
ಡ್ಯಾನ್ಸ್ ಗುಂಪಿನ ಸದಸ್ಯರಲ್ಲಿ ಒಬ್ಬರು ಕ್ರಿಕೆಟ್ ಬ್ಯಾಟ್ ಅನ್ನು ಎತ್ತಿಕೊಳ್ಳುವುದರೊಂದಿಗೆ ವೀಡಿಯೊ ಆರಂಭವಾಗುತ್ತದೆ. ಅವನು ಬ್ಯಾಟ್ ಹಿಡಿದು ಏನು ಮಾಡಬೇಕೆಂದು ತಿಳಿಯದೆ ನಿಂತಿರುವಂತೆ ತೋರುತ್ತದೆ. ಕೆಲವು ಮೂವ್ಸ್ ಮಾಡುತ್ತಾನೆ. ವೀಡಿಯೊ ಮುಂದುವರೆದಂತೆ, ಕೊಹ್ಲಿ ಅವರ ಬಳಿಗೆ ನಡೆದು ಬ್ಯಾಟ್ ನೀಡುವಂತೆ ಸನ್ನೆ ಮಾಡುತ್ತಾರೆ. ಶೀಘ್ರದಲ್ಲೇ, ಇತರ ಸಿಬ್ಬಂದಿ ಸದಸ್ಯರು ಸೇರುತ್ತಾರೆ. ಅವರು ಸ್ಟಿರಿಯೊ ನೇಷನ್‌ನ ಇಷ್ಕ್‌ಗೆ ಡ್ಯಾನ್ಸ್ ಮಾಡುತ್ತಾರೆ.
View this post on Instagram
ಅನುಷ್ಕಾ ಶರ್ಮಾಗೆ ಯಾವುದೇ ಪದಗಳ ಅಗತ್ಯವಿಲ್ಲ, ತ್ವರಿತ ಶೈಲಿಯಲ್ಲಿ ವಿರಾಟ್ ಕೊಹ್ಲಿ ನೃತ್ಯಕ್ಕೆ ಪ್ರತಿಕ್ರಿಯಿಸಲು ಕೇವಲ ಎಮೋಜಿಯನ್ನು ಬಳಸಿದ್ದಾರೆ ನಟಿ.
#KingKohli #Kohli #ViratKohli𓃵 #ViratKohli
His Swag👌 pic.twitter.com/K0EYMvqpB9
— Lokesh_Kuruba (@KurubaraHuduga) March 15, 2023
ವಿಡಿಯೋ ನೋಡಿದ ನೆಟ್ಟಿಗರು ಈ ಹಾಡಿಗೆ ಉಪೇಂದ್ರ ಅವರ ಸಿನಿಮಾದ ಮಸ್ತ್ ಮಸ್ತ್ ಹುಡುಗಿ ಹಾಡನ್ನು ಎಡಿಟ್ ಮಾಡಿ ಹಾಕಿದ್ದಾರೆ. ಎಡಿಟ್ ಮಾಡಿದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ