HOME » NEWS » Entertainment » ANUSHKA SHARMA LIKES TO EAT GOLGAPPA AND COCONUT WATER IN HER LAST PREGNANCY DAYS AE

Anushka Sharma: ಅನುಷ್ಕಾ ಶರ್ಮಾಗೆ ಬಸಿರು ಬಯಕೆ: ಮನೆಯಲ್ಲೇ ಇಷ್ಟದ ತಿಂಡಿಗಳನ್ನು ಸವಿಯುತ್ತಿದ್ದಾರೆ ಈ ನಟಿ..!

ಅನುಷ್ಕಾ ತಮ್ಮ ಬೇಬಿ ಬಂಪ್​ ತೋರಿಸುತ್ತಾ ಮಾಡಿಸಿದ್ದ ಫೋಟೋಶೂಟ್​ನಿಂದಾಗಿ ನಟಿಯನ್ನು ಟ್ರೋಲಿಗರು ಟ್ರೋಲ್​ ಮಾಡಿದ್ದರು. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅನುಷ್ಕಾ ತಮ್ಮ ಕೆಲಸ ಮುದಂವರೆಸಿದ್ದಾರೆ. ಇನ್ನು ತುಂಬು ಗರ್ಭಿಣಿಯಾಗಿರುವ ನಟಿಗೆ ಈಗ ತಮ್ಮ ಬಯಕೆಗಳೇನು ಅಂತ ಹೇಳಿ, ಮನೆಯಲ್ಲಿ ಅವೆಲ್ಲವನ್ನೂ ಪೂರ್ಣಗೊಳಿಸಿಕೊಳ್ಳುತ್ತಿದ್ದಾರೆ.

Anitha E | news18-kannada
Updated:January 9, 2021, 11:24 AM IST
Anushka Sharma: ಅನುಷ್ಕಾ ಶರ್ಮಾಗೆ ಬಸಿರು ಬಯಕೆ: ಮನೆಯಲ್ಲೇ ಇಷ್ಟದ ತಿಂಡಿಗಳನ್ನು ಸವಿಯುತ್ತಿದ್ದಾರೆ ಈ ನಟಿ..!
ತುಂಬು ಗರ್ಭಿಣಿ ಅನುಷ್ಕಾ ಶರ್ಮಾ
  • Share this:
ಹೆಣ್ಣು ಮಕ್ಕಳು ಗರ್ಭಿಣಿಯರಾಗುತ್ತಿದ್ದಂತೆಯೇ ಅವರಿಗೆ ನಾನಾ ರೀತಿಯ ಬಕಯೆ ಕಾಡಲಾರಂಭಿಸುತ್ತದೆ. ಅದಕ್ಕೆ ಬಸುರಿ ಬಯಕೆ ಎನ್ನುತ್ತಾರೆ. ಗರ್ಭಿಣಿಯಾಗುತ್ತಿದ್ದಂತೆಯೇ ಕೆಲವರು ಇಷ್ಟದ ಖಾದ್ಯಗಳನ್ನು ಸೇವಿಸುವ ಆಸೆ ವ್ಯಕ್ತಪಡಿಸುತ್ತಾರೆ. ಮತ್ತೆ ಕೆಲವರಿಗೆ ಯಾರನ್ನಾದರೂ ನೋಡುವಾಸೆ, ಮತ್ತೆ ಕೆಲವರಿಗೆ ಹೊಸ ಬಟ್ಟೆ ತೊಡುವಾಸೆ ಹೀಗೆ ನಾನಾ ರೀತಿಯ ಬಯಕೆಗಳು ಹುಟ್ಟುತ್ತವೆ. ಅದರಲ್ಲೂ ಕೆಲವರಿಗಂತೂ ವಿಚಿತ್ರವಾದ ಆಸೆಗಳಾಗುತ್ತವೆ. ಎಷ್ಟೋ ಸಲ ಗರ್ಭಿಣಿಯರು ಪ್ರಸೂತಿ ಕೇಂದ್ರಕ್ಕೆ ಹೋದಾಗ ತಮ್ಮ ಆಸೆಗಳನ್ನು ಹೇಳಿಕೊಂಡು ಅಲ್ಲೇ ಈಡೇರಿಸಿಕೊಂಡಿದ್ದೂ ಇದೆ. ಈ ಬಯಕೆಗಳು ಸಾಮಾನ್ಯರಿಗೆ ಹಾಗೂ ಸೆಲೆಬ್ರಿಟಿ ಹೆಣ್ಣು ಮಕ್ಕಳಿಗೆ ಬೇರೆಯಾಗಿರುವುದಿಲ್ಲ. ನಟಿ ಅನುಷ್ಕಾ ಶರ್ಮಾ ಸಹ ಈಗ ತುಂಬು ಗರ್ಭಿಣಿ. ಕೆಲವೇ ದಿನಗಳಲ್ಲಿ ಅವರ ಮೊದಲ ಮಗು ಈ ಭೂಮಿಗೆ ಬರಲಿದೆ. ಮಗುವಿನ ಆಗಮನಕ್ಕಾಗಿ ದಿನಗಳನ್ನು ಎಣಿಸುತ್ತಿರುವ ಅನುಷ್ಕಾ ಶರ್ಮಾ ಸಹ ತಮ್ ಬಸುರಿನ ಬಯಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳವೆರೆಗೂ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಈಗ ಚಿತ್ರೀಕರಣದಿಂದ ಬ್ರೇಕ್​ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ಬೇಬಿ ಬಂಪ್​ ಫೋಟೋಶೂಟ್​ನ ಫೋಟೋಗಳು ವೈರಲ್​ ಆಗುವುದರೊಂದಿಗೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದವು.





ಹೌದು, ಅನುಷ್ಕಾ ತಮ್ಮ ಬೇಬಿ ಬಂಪ್​ ತೋರಿಸುತ್ತಾ ಮಾಡಿಸಿದ್ದ ಫೋಟೋಶೂಟ್​ನಿಂದಾಗಿ ನಟಿಯನ್ನು ಟ್ರೋಲಿಗರು ಟ್ರೋಲ್​ ಮಾಡಿದ್ದರು. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅನುಷ್ಕಾ ತಮ್ಮ ಕೆಲಸ ಮುದಂವರೆಸಿದ್ದಾರೆ. ಇನ್ನು ತುಂಬು ಗರ್ಭಿಣಿಯಾಗಿರುವ ನಟಿಗೆ ಈಗ ತಮ್ಮ ಬಯಕೆಗಳೇನು ಅಂತ ಹೇಳಿ, ಮನೆಯಲ್ಲಿ ಅವೆಲ್ಲವನ್ನೂ ಪೂರ್ಣಗೊಳಿಸಿಕೊಳ್ಳುತ್ತಿದ್ದಾರೆ.




ಇತ್ತೀಚೆಗಷ್ಟೆ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿ ಬಂದ ನಂತರ ಇಷ್ಟದ ಚೀಸ್ ಪಿಜ್ಜಾ ತಿಂದಿದ್ದ ನಟಿ, ಈಗ ಮನೆಯಲ್ಲಿ ಎಳನೀರು ಹಾಗೂ ಗೋಲ್​ಗಪ್ಪ ಸವಿದಿದ್ದಾರೆ. ಹೀಗೆ ದಿನಕ್ಕೊಂದು ಇಷ್ಟದ ಖಾದ್ಯವನ್ನು ತಿನ್ನುತ್ತಾ ತಮ್ಮ ಬಯಕೆ ಈಡೇರಿಸಿಕೊಳ್ಳುತ್ತಿದ್ದಾರೆ.

Anushka Sharma, Anushka Sharmas pregnancy, ಅನುಷ್ಕಾ ಶರ್ಮಾಗೆ ಬಸಿರು ಬಯಕೆ, pregnant Anushka Sharma, Anushka Sharma liking Golgappa in pregnancy, social media, viral photos, Virat Kohli, Anushka Sharma practicing Shirshasan, Anushka Sharma Baby Bump, Anushka Sharma, Anushka Sharma, Virat Kohli, Virat Kohli, Anushka Sharma, AB De Villiers, Virat-Anushka Sunset Photo, Anushka Sharma Virat Kohli Romantic Photo, एबी डिविलियर्स, pregnant Anushka Sharma shared her Black and White Photo, Anushka Sharma Pregnancy Glow, social media, viral news, bollywood, ಅನುಷ್ಕಾ ಶರ್ಮಾ, ಯುಎಇಯಲ್ಲಿ ಅನುಷ್ಕಾ ಶರ್ಮಾ, ಎಳೆ ಬಿಸಿಲಿನಲ್ಲಿ ಕುಳಿತು ಆನಂದಿಸಿದ ಅನುಷ್ಕಾ ಶರ್ಮಾ, virat Kohli, ವಿರಾಟ್​ ಕೊಹ್ಲಿ, ಶಿರ್ಷಾಸನ, ಶೀರ್ಷಾಸನ, ಬಾಲಿವುಡ್​
ಅನುಷ್ಕಾ ಶರ್ಮಾರ ಬಸುರಿ ಬಯಕೆ


ಇನ್ನು ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದರೂ ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ವಹಿಸುತ್ತಿದ್ದಾರೆ. ಎಂದಿನಂತೆ ನಿತ್ಯದ ವ್ಯಾಯಾಮ ಹಾಗೂ ಯೋಗಾಸನ ಮಾಡುತ್ತಿದ್ದಾರೆ.







ಅವರು ಶೀರ್ಷಾಸನ ಅಭ್ಯಾಸ ಮಾಡಿದ್ದ ಫೋಟೋ ಹಾಗೂ ಟ್ರೆಡ್​ ಮಿಲ್​ ಮೇಲೆ ವಾಕಿಂಗ್ ಮಾಡಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.
Published by: Anitha E
First published: January 9, 2021, 11:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories