Anushka Sharma: ಅನುಷ್ಕಾ ಶರ್ಮಾ ತೊಟ್ಟ ಸ್ವಿಮ್​ಸೂಟ್ ಬೆಲೆಗೆ ಬೆಂಗಳೂರಲ್ಲಿ ಆರಾಮಾಗಿ ಒಂದು ಮನೆ ಬಾಡಿಗೆಗೆ ಸಿಗುತ್ತದೆ, ಬೆಲೆ ಎಷ್ಟು ಹೇಳಿ...

ಅನುಷ್ಕಾ ಶರ್ಮಾ ಪಾಪ್ ನಿಯಾನ್ ಮೊನೊಕಿನಿಯ ಈಜುಡುಗೆ ಫೋಟೋವನ್ನು ( photos) ಹಂಚಿಕೊಂಡಿದ್ದೆ ತಡ, ಇಂಟರ್‌ ನೆಟ್‌ ನಲ್ಲಿ ಭಾರಿ ಹವಾ ಸೃಷ್ಟಿಸಿದೆ, ಪತಿ ವಿರಾಟ್ ಕೊಹ್ಲಿ ಕೂಡ ಹೃದಯದ ಎಮೋಜಿ ಕಮೆಂಟ್‌ ಮಾಡುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ

 • Share this:
  Actress Anushka Sharma: ಸದ್ಯ ನಟನೆಯಿಂದ ದೂರು ಉಳಿದು, ತಾಯಿಯ ಜವಬ್ದಾರಿ ಹೊತ್ತು ಮಗುವಿನ ಆರೈಕೆ ಮಾಡುತ್ತ ಸಂತಸದಲ್ಲಿ ಕಾಲ ಕಳೆಯುತ್ತಿರುವ ಟೀಂ ಇಂಡಿಯಾದ ವಿರಾಟ್‌ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ (Anushka Sharma's green swimsuit)  ಇದೀಗ ಹಸಿರು ಈಜುಡುಗೆ (Neon Swimsuit) ಸಕತ್‌ ಹಾಟ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಹೊಸ ಲುಕ್‌ ನೊಂದಿಗೆ ಈಜುಡುಗೆಯಲ್ಲಿ ಕಂಗೊಳಿಸುತ್ತಿರುವ ನಟಿ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಸುಂದರ ಕ್ಷಣಗಳನ್ನು ಶೇರ್‌ ಮಾಡಿದ್ದಾರೆ. ಇದರಲ್ಲಿ ಅನುಷ್ಕಾ ನಿಯಾನ್ ಹಸಿರು ಈಜುಡುಗೆ ಧರಿಸಿದ್ದು, ಅದರ ಮೌಲ್ಯ ₹8 ಸಾವಿರ ಎಂದು ಹೇಳಲಾಗಿದೆ. ತಮ್ಮ ವಿನ್ಯಾಸ ಹಾಗೂ ಫ್ಯಾಷನ್‌ ನಲ್ಲಿ ವಿಭಿನ್ನ ಅಭಿರುಚಿ ಹೊಂದಿರುವ ಅನುಷ್ಕಾ ಯಾವಾಗಲೂ ಹೊಸ ಹೊಸ ಉಡುಗೆ ತೊಡುಗೆ ಮೂಲಕ ಗಮನ ಸೆಳೆಯುತ್ತಾರೆ.

  ಹಸಿರು ಬಣ್ಣದ ಈಜುಡುಗೆಯಲ್ಲಿ ಅನುಷ್ಕಾ (Anushka Sharma's)ಸ್ಟನಿಂಗ್‌ ಆಗಿ ಪೋಸ್‌ ನೀಡಿದ್ದು, ಮೊದಲ ಫೋಟೋದಲ್ಲಿ ನಗುತ್ತಿರುವಂತೆ ಕ್ಯಾಮೆರಾವು ಸೀದಾ ಕ್ಷಣವನ್ನು ಸೆರೆಹಿಡಿದರೇ, ಎರಡನೇಯದರಲ್ಲಿ, ನೇರವಾಗಿ ಲೆನ್ಸ್‌ಗೆ ನೋಡುತ್ತಿದ್ದು, ಮುಖದ ಒಂದು ಭಾಗವನ್ನು ತನ್ನ ತೋಳುಗಳ ಹಿಂದೆ ಮರೆಮಾಡುವಂತೆ ಅದ್ಭುತವಾಗಿ ಸೆರೆಹಿಡಿಯಲಾಗಿದೆ.

  ಅನುಷ್ಕಾ ಶರ್ಮಾ ಪಾಪ್ ನಿಯಾನ್ ಮೊನೊಕಿನಿಯ ಈಜುಡುಗೆ ಫೋಟೋವನ್ನು ( photos) ಹಂಚಿಕೊಂಡಿದ್ದೆ ತಡ, ಇಂಟರ್‌ ನೆಟ್‌ ನಲ್ಲಿ ಭಾರಿ ಹವಾ ಸೃಷ್ಟಿಸಿದೆ, ಪತಿ ವಿರಾಟ್ ಕೊಹ್ಲಿ ಕೂಡ ಹೃದಯದ ಎಮೋಜಿ ಕಮೆಂಟ್‌ ಮಾಡುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ . ಇತ್ತೀಚೆಗೆ ಟಿ20 ವಿಶ್ವಕಪ್‌ಗಾಗಿ ಯುಎಇಗೆ ಪತಿ ವಿರಾಟ್ ಕೊಹ್ಲಿ( Virat kohli) ಜೊತೆ ಪ್ರವಾಸ ಮುಗಿಸಿ ನಂತರ  ಮುಂಬೈಗೆ ಮರಳಿದ್ದಾರೆ.

  ವಿಶ್ರಾಂತಿಯಲ್ಲಿ ಅನುಷ್ಕಾ

  ಸಾಕಷ್ಟು ಸಕ್ರಿಯ ಜೀವನಶೈಲಿಯನ್ನು ಮುನ್ನಡೆಸುವ ಅನುಷ್ಕಾ ಶರ್ಮಾ ನಿನ್ನೆ ಬಿಸಿಲಿನ ಮಧ್ಯಾಹ್ನ ಕೊಳದಲ್ಲಿ ವಿಶ್ರಾಂತಿ ಪಡೆಯುವ ಮೂಲಕ ಸ್ವಲ್ಪ ಸಮಯವನ್ನು ಆನಂದಿಸಿದರು. ಅಲ್ಲದೇ ಪೋಟೋಗಳನ್ನು ಶೇರ್‌ ಮಾಡುವ ಮೂಲಕ ತಮ್ಮ ಅನುಯಾಯಿಗಳನ್ನು ಸಂತೋಷಪಡಿಸಿದ್ದಾರೆ.

  ಇದನ್ನೂ ಓದಿ: Anushka Sharma-Vamika: ಅಷ್ಟಮಿಯ ದಿನದಿಂದ ಮಗಳ ಫೋಟೋ ಹಂಚಿಕೊಂಡ ನಟಿ ಅನುಷ್ಕಾ

  ಪೂಲ್ ಡೇಗಾಗಿ ಅನುಷ್ಕಾ ಧರಿಸಿದ ನಿಯಾನ್ ಹಸಿರು ಈಜುಡುಗೆ ಎಲ್ಲಾರ ಕಣ್ಣು ಕುಕ್ಕುವಂತಿದ್ದು, ಪರಿಪೂರ್ಣವಾದ ಬೀಚ್ ನೋಟವನ್ನು ನೀಡುತ್ತದೆ. ಇದು ಆಳವಾದ ಯು ಆಕಾರದ ಕಂಠರೇಖೆ, ವಿಶಾಲವಾದ ಪಟ್ಟಿಗಳು, ಮತ್ತು ಬಿಳಿ ಬಟನ್-ಅಪ್ ಮುಂಭಾಗವನ್ನು ಒಳಗೊಂಡಿದೆ. ಅನುಷ್ಕಾ ತನ್ನ ಎಡಗೈಯಲ್ಲಿ ಸೊಗಸಾದ ವಜ್ರ ಮತ್ತು ಬೆಳ್ಳಿಯ ಬ್ಯಾಂಡ್ ಅನ್ನು ಧರಿಸಿ ಈಜುಡುಗೆಯಲ್ಲಿ ಕಂಗೋಳಿಸಿದ್ದಾರೆ. ಈ ಈಜುಡುಗೆ ಸಂಗ್ರಹಕ್ಕೆ ಆನೇ ಮರಿಯೆ ಬಟನ್‌ ಒನ್‌ ಪೀಸ್‌ ಎಂದು ಕರೆಯಲಾಗುತ್ತದೆ, ಇದು ಪ್ರಸ್ತುತ ಐಮ್‌ ವಾಟ್‌ ಐಮ್‌ ವೆಬ್‌ಸೈಟ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ, ಇದರ ಅಂದಾಜು   ಬೆಲೆ ₹8,860 ರಷ್ಟಿದೆ.

  2 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌

  ಅನುಷ್ಕಾ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ, ಅದು 2 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ ಬಂದರೆ ಮತ್ತು ಹಲವಾರು ಮಂದಿ ಹೊಸ ಲುಕ್‌ ಗೆ ಮಾರುಹೋಗಿ ವಿಭಿನ್ನವಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಕೆಯ ಪತಿ ವಿರಾಟ್ ಕೊಹ್ಲಿ ಕೂಡ ಹೃದಯ ಮತ್ತು ಹೃದಯದ ಕಣ್ಣಿನ ಎಮೋಜಿಯನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

  ಹೈ ಪ್ರೊಫೈಲ್ ಜೋಡಿ

  ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಳೆದ ವರ್ಷ ಅಂದರೆ 2021ರ ಜನವರಿ 11ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಹಾಗೂ ಮಗಳಿಗೆ ವಾಮಿಕ ಎಂದು ಹೆಸರಿಡುವ ಮೂಲಕ ಗಮನ ಸೆಳೆದ ದಂಪತಿ ಇದುವರೆಗೂ ಮಗಳ ಮುಖವನ್ನು ಸಾರ್ವಜನಿಕವಾಗಿ ಹಾಗೂ ಸೋಷಿಯಲ್‌ ಮಿಡಿಯಾದಲ್ಲಿ ಕಾಣದಂತೆ ಎಚ್ಚರಿಕೆ ವಹಿಸಿದೆ. ಈ ಜೋಡಿ 2017 ಡಿಸೆಂಬರ್ 11ರಂದು ಇಟಲಿಯ ಸುಂದರವಾದ ಟಸ್ಕನಿಯಲ್ಲಿ ಸಪ್ತಪದಿ ತುಳಿದರು. ಅವರ ವಿವಾಹವು ಆ ವರ್ಷದ ಅತ್ಯಂತ ಹೆಚ್ಚು ಮಾತನಾಡುವ ಘಟನೆಗಳಲ್ಲಿ ಒಂದಾಗಿದೆ. ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಹೈ ಪ್ರೊಫೈಲ್ ವಿವಾಹ ಇದ್ದಾಗಿತ್ತು.

  ಇದನ್ನು ಓದಿ: ಶೂಟಿಂಗ್​ ಸೆಟ್​ಗೆ Anushka Sharma ಎಂಟ್ರಿ: ನಟಿಯ ಲೆಟೆಸ್ಟ್​ ಫೋಟೋಗಳು ವೈರಲ್​..!

  ಅನುಷ್ಕಾ ವಿರುದ್ದ ನೆಟ್ಟಿಗರು ವಾಗ್ದಾಳಿ

  ಈ ಬಾರಿ ಕಳೆದ ಅಕ್ಟೋಬರ್‌ 24ರಂದು ಕರ್ವಾಚೌತ್‌ ಹಬ್ಬದ ದಿನದಂದೇ ಇಂಡಿಯಾ ಪಾಕಿಸ್ತಾನ ನಡುವೆ ಮ್ಯಾಚ್‌ ಇತ್ತು. ಇದರಲ್ಲಿ ಭಾರತ ಸೋಲು ಕಂಡಿತ್ತು. ಕರ್ವಾ ಚೌತ್ ಉಪವಾಸ ಮಾಡದ ಅನುಷ್ಕಾರನ್ನು ದೂಷಿಸಿದ್ದಾರೆ ಮತ್ತು ಇದು ಭಾರತವು ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲಲು ಕಾರಣವಾಯಿತು ಎಂದು ನಟಿಯ ಮೇಲೆ ನೆಟ್ಟಿಗರು ವಾಗ್ದಾಳಿ ನೆಡೆಸಿದ್ದರು. ಆದರೆ ವಿರಾಟ್ ಆ ಸಮಯದಲ್ಲಿ ಅನುಷ್ಕಾ ಶರ್ಮಾ ಅವರ ಬೆಂಬಲಕ್ಕೆ ನಿಂತು ಟ್ರೋಲ್ ಮಾಡುತ್ತಿರುವ ಜನರಿಗೆ ನಾಚಿಕೆಯಾಗಬೇಕು. ಸ್ವಲ್ಪ ಕರುಣೆ ಇರಲಿ. ಅವಳು ಯಾವಾಗಲೂ ನನಗೆ ಪಾಸಿಟಿವಿಟಿ ಎಂದು ಹೇಳಿದ್ದರು.
  Published by:vanithasanjevani vanithasanjevani
  First published: