ಕದ್ದು ಮುಚ್ಚಿ ಮ್ಯಾಚ್ ನೋಡಿದ ಅನುಷ್ಕಾ ಸರಣಿ ಗೆದ್ದ ಬಳಿಕ ಕೊಹ್ಲಿಗೆ ಕೊಟ್ಟ ಗಿಫ್ಟ್​ ಏನು ಗೊತ್ತಾ..?

news18
Updated:July 10, 2018, 6:31 PM IST
ಕದ್ದು ಮುಚ್ಚಿ ಮ್ಯಾಚ್ ನೋಡಿದ ಅನುಷ್ಕಾ ಸರಣಿ ಗೆದ್ದ ಬಳಿಕ ಕೊಹ್ಲಿಗೆ ಕೊಟ್ಟ ಗಿಫ್ಟ್​ ಏನು ಗೊತ್ತಾ..?
news18
Updated: July 10, 2018, 6:31 PM IST
ನ್ಯೂಸ್ 18 ಕನ್ನಡ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಯುವ ಪ್ರೇಮಿಗಳಿಗೆ ಸ್ಪೂರ್ತಿ ಎಂದೇ ಹೇಳಬಹುದು. ಈ ಹಿಂದೆ ಕೊಹ್ಲಿ ಅವರು ಕ್ರಿಕೆಟ್ ಪಂದ್ಯಕ್ಕಾಗಿ ವಿದೇಶಿ ಪ್ರವಾಸ ಕೈಗೊಂಡಾಗ ಅಲ್ಲಿಗೆ ಅನುಷ್ಕಾ ಅವರು ಕೊಹ್ಲಿ ಜೊತೆ ಅನೇಕ ಬಾರಿ ತೆರಳಿದ್ದರು. ಅಂತೆಯೆ ಕೊಹ್ಲಿ ಕೂಡ ಅನುಷ್ಕಾ ಅವರ ಸಿನಿಮಾ ವಿಚಾರದಲ್ಲೂ ಆಸಕ್ತಿ ತೋರಿ ಸಹಾಯ ಮಾಡುತ್ತಿರುತ್ತಾರೆ.

ಹಾಗೆಯೆ ಭಾರತ ತಂಡ ಮೊನ್ನೆಯಷ್ಟೆ ಇಂಗ್ಲೆಂಡ್ ಪ್ರವಾಸ ಕೈಗೊಂಡ ವೇಳೆ ಕೊಹ್ಲಿ ಜೊತೆ ಅನುಷ್ಕಾ ಕೂಡ ಬಸ್ ಏರಿ ಇಂಗ್ಲೆಂಡ್​ಗೆ ಆಗಮಿಸಿದ್ದರು. ಆದರೆ ಮೂರು ಟಿ-20 ಪಂದ್ಯ ನಡೆಯುವ ವೇಳೆ ಕ್ರೀಡಾಂಗಣದಲ್ಲಿ ಎಲ್ಲೂ ಅನುಷ್ಕಾ ಮಾತ್ರ ಕ್ಯಾಮೆರಾ ಕಣ್ಣಿಗೆ ಕಾಣಿಸಿಲ್ಲ. ಯಾಕೆಂದರೆ ಕೊಹ್ಲಿ ಆಡುತ್ತಿರುವ ಪಂದ್ಯದಲ್ಲಿ ಅನುಷ್ಕಾ ಅವರು ಮೈದಾನದಲ್ಲಿ ಹಾಜರಿದ್ದರೆ ಆ ಪಂದ್ಯ ಸೋಲುತ್ತೆ ಎಂಬ ಮಾತಿವೆ. ಅಲ್ಲದೆ ಪಂದ್ಯ ಸೋಲಲು ಅನುಷ್ಕಾ ಅವರು ಪಂದ್ಯ ವೀಕ್ಷಣೆಗೆ ಬಂದಿದ್ದೆ ಕಾರಣ ಎಂದು ಹೇಳಿ ಕೆಲ ಅಭಿಮಾನಿಗಳು ಈ ಹಿಂದೆ ಅನೇಕ ಬಾರಿ ಟ್ವೀಟ್ ಕೂಡ ಮಾಡಿದ್ದರು. ಹಾಗಾಗಿ ಮೊನ್ನೆ ಪಂದ್ಯ ನಡೆಯುವ ವೇಳೆ ಅನುಷ್ಕಾ ಅವರು ಯಾರಿಗೂ ಕಾಣದೆ ಕದ್ದು ಮುಚ್ಚಿ ಮ್ಯಾಚ್ ವೀಕ್ಷಿಸುತ್ತಿದ್ದರು. ಆದರೆ ಮೂರನೇ ಟಿ-20 ಪಂದ್ಯ ಗೆದ್ದು ಸರಣಿ ಕೈ ವಶ ಮಾಡಿಕೊಂಡ ವೇಳೆ ಅನುಷ್ಕಾ ಅವರು ಕ್ಯಾಮೆರಾ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್​ಗೆ ಅನುಷ್ಕಾ ಅವರು ಗಿಫ್ಟ್​ ಒಂದನ್ನೂ ನೀಡಿದ್ದು, ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.

ವಿರಾಟ್ ಕೊಹ್ಲಿ ಅವರು ಪಂದ್ಯ ಮುಗಿಸಿ ಪೆವಿಲಿಯನ್ ಕಡೆ ಸಾಗುತ್ತಿರುಯವ ವೇಳೆ ಅನುಷ್ಕಾ ಅವರು ಕೊಹ್ಲಿ ಅವರನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 


Loading...


THEY BOTH ARE SO FREAKING GOALS😭😍♥️🔥 @virat.kohli @anushkasharma . . #viratkohli #anushkasharma #virushka


A post shared by V I R A T K O H L I 🌟 (@viratkohli_cafe) on


 


First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...