ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka sharma) ಸೌತ್ ಆಫ್ರಿಕಾ(South Africa)ದಲ್ಲಿ ಸೌತ್ ಇಂಡಿಯನ್ ಫುಡ್ ತಿನ್ನುತ್ತಾ ಎಂಜಾಯ್ ಮಾಡ್ತಿದ್ದಾರೆ. ಪತಿ ವಿರಾಟ್ ಕೊಹ್ಲಿ(Virat kohli) ಹಾಗೂ ಮಗಳು ವಮಿಕಾ (Vamika) ಜೊತೆ ಅನುಷ್ಕಾ ಶರ್ಮಾ ಸೌತ್ ಆಫ್ರಿಕಾದಲ್ಲಿ ಟ್ರಿಪ್ ಮಾಡ್ತಿದ್ದಾರೆ. ವೀಕೆಂಡ್ನಲ್ಲಿ ಹೊರಗೆ ಸುತ್ತಾಡ್ತಿರೋ ವಿರಾಟ್ ಜೋಡಿ, ಆಫ್ರಿಕನ್ ರೆಸ್ಟೋರೆಂಟ್ನಲ್ಲಿ ಸೌತ್ ಇಂಡಿಯನ್ ಫುಡ್ ಆಗಿರೋ ಪುಡಿ ದೋಸೆ (Pudi dosa) ತಿನ್ನುತ್ತಿದ್ದಾರೆ. ಭಾನುವಾರದ ಬೆಳಗಿನ ಬ್ರೇಕ್ ಫಾಸ್ಟ್ಗೆ ಪುಡಿ ದೋಸೆ ತಿನ್ನುತ್ತಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಣ್ಣುಗಳೊಂದಿಗೆ ಸೂಪರ್ ಪುಡಿ ದೋಸೆ ತಿನ್ನುತ್ತಿರೋ ಫೋಟೋಗಳನ್ನ ಅಭಿಮಾನಿಗಳಿಗಾಗಿ ಶೇರ್ ಮಾಡಿದ್ದಾರೆ.
ಫ್ಯಾಮಿಲಿ ಜೊತೆ ಕೊಹ್ಲಿ ಟೈಮ್ ಸ್ಪೆಂಡ್
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರೋ ಕ್ರಿಕೆಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯುಸಿ ಆಗಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಹಾಗೂ ವಮಿಕಾರನ್ನು ವಿರಾಟ್ ಕೊಹ್ಲಿ ಸೌತ್ ಆಫ್ರಿಕಾಗೆ ಕರೆದೊಯ್ದಿದ್ದಾರೆ. ನಾಯಕತ್ವದ ಒತ್ತಡದಿಂದ ರಿಲೀಫ್ ಆಗಿರೋ ಕೊಹ್ಲಿ ಫ್ರೀ ಟೈಮ್ನಲ್ಲಿ ಇದೀಗ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.
ಹೇಗಿರುತ್ತೆ ಅನುಷ್ಕಾ ಹೆಲ್ದಿ ಡಯೆಟ್?
ಫಿಟ್ನೆಸ್ ವಿಚಾರದಲ್ಲಿ ಕಟ್ಟುನಿಟ್ಟಾಗಿರೋ ಅನುಷ್ಕಾ ಶರ್ಮಾ ತಾವು ತಿನ್ನೋ ಆಹಾರದಲ್ಲೂ ಒಳ್ಳೆಯ ಡಯೆಟ್ ಫಾಲೋ ಮಾಡ್ತಾರೆ. ಜೊತೆಗೆ ತಮ್ಮ ಫಾಲೋವರ್ಸ್ಗೂ ಸಹ ಸಾಮಾಜಿಕ ಜಾಲತಾಣದಲ್ಲಿ ಟಿಪ್ಸ್ ಕೊಡ್ತಾರೆ. ಹಾಗೇ ಫಿಟ್ನೆಸ್ ಫೋಟೋಗಳನ್ನ ಶೇರ್ ಮಾಡ್ತರೆ. ಅನುಷ್ಕಾ ಶರ್ಮಾ ತನ್ನ ವರ್ಕೌಟ್ ಪಾಟ್ನರ್ ವಿರಾಟ್ ಕೊಹ್ಲಿ ಅಂತ ಹಲವು ಬಾರಿ ಹೇಳಿದ್ದಾರೆ. ಜೊತೆಗೆ ವರ್ಕೌಟ್ ಮಾಡೋ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಮ್ಯೂಸಿಕ್ ಕೇಳ್ತಾ ವರ್ಕೌಟ್ ಮಾಡೋದು ಅವರ ನಿತ್ಯ ಅಭ್ಯಾಸವಾಗಿದೆ.
ಇದನ್ನೂ ಓದಿ: Anushka Sharma-Vamika: ಅಷ್ಟಮಿಯ ದಿನದಿಂದ ಮಗಳ ಫೋಟೋ ಹಂಚಿಕೊಂಡ ನಟಿ ಅನುಷ್ಕಾ
ಸಾಮಾಜಿಕ ತಾಣದಲ್ಲಿ ಸ್ಟಾರ್ ಆಗಿರುವ ವಮಿಕಾ
ಕ್ರಿಕೆಟ್ ತಾರೆ ವಿರಾಟ್ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಪುತ್ರಿ ವಮಿಕಾ ಸೆಲೆಬ್ರಿಟಿ ಕಿಡ್ ಆದರೂ ದಂಪತಿ ತಮ್ಮ ಮಗಳ ಮುಖವನ್ನು ಇದುವರೆಗೆ ಯಾವುದೇ ತಾಣಗಳಲ್ಲಿ ಸಮಾರಂಭಗಳಲ್ಲಿ ಪ್ರದರ್ಶಿಸಿಲ್ಲ. ಆದರೂ ವಮಿಕಾ ಈಗಾಗಲೇ ಸ್ಟಾರ್ ಆಗಿದ್ದು ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಟ್ವಿಟ್ಟರ್ನಲ್ಲಿ ಅಸಂಖ್ಯ ಅಭಿಮಾನಿಗಳು ವಮಿಕಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಆಕೆಗೆ ಒಂದು ವರ್ಷ ತುಂಬಿದ್ದೇ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಸುದ್ದಿಯಾಗಿತ್ತು.
ಮತ್ತೆ ಬಣ್ಣ ಹಚ್ಚಿದ ಅನುಷ್ಕಾ!
ಮಗಳ ಲಾಲನೆ ಪಾಲನೆಯ ಜೊತೆಗೆ ನಟಿ ಇದೀಗ ಸಿನಿ ರಂಗಕ್ಕೂ ರೀಎಂಟ್ರಿ ನೀಡಿದ್ದಾರೆ. ಕೊನೆಯದಾಗಿ ಆನಂದ್ ಎಲ್ ರಾಯ್ ನಿರ್ದೇಶದ ಜೀರೋ ಚಿತ್ರದಲ್ಲಿ ನಟಿಸಿದ್ದರು ಹಾಗೂ ಸಿನಿ ರಂಗದಿಂದ ನಾಲ್ಕು ವರ್ಷಗಳ ವಿರಾಮ ತೆಗೆದುಕೊಂಡಿದ್ದರು. ಇತ್ತೀಚೆಗೆ ತಾನೇ ಅನುಷ್ಕಾ ಚಕ್ದಾ ಎಕ್ಸ್ಪ್ರೆಸ್ ಸಿನಿಮಾವನ್ನು ಘೋಷಿಸಿದ್ದು, ಚಿತ್ರವು ಕ್ರಿಕೆಟ್ ಆಟಗಾರ್ತಿ ಜೂಲಾನ್ ಗೋಸ್ವಾಮಿ ಜೀವನ ಚರಿತ್ರೆಯನ್ನು ಆಧರಿಸಿದೆ. ಇದು ನೆಟ್ಫ್ಲಿಕ್ಸ್ನಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ: Virat Kohli: ತನ್ನ ಹೆಂಡತಿಯ ಸ್ಫೂರ್ತಿದಾಯಕ ಕಥೆಯನ್ನು ಹೇಗೆ ಹೇಳಿದ್ದಾರೆ ನೋಡಿ ವಿರಾಟ್ ಕೊಹ್ಲಿ..
ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅನುಷ್ಕಾ ಶರ್ಮಾ ಅಷ್ಟಾಗಿ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಕೊನೆಯದಾಗಿ 2018ರಲ್ಲಿ ಶಾರುಖ್ ಖಾನ್ ನಟನೆಯ ಜೀರೋ ಸಿನಿಮಾದಲ್ಲಿ ನಟಿಸಿದ ಬಳಿಕ ಮುಂದೆ ಯಾವ ಸಿನಿಮಾ ಅನುಷ್ಕಾ ಒಪ್ಪಿಕೊಂಡಿಲ್ಲ.. ಆದ್ರೆ ನಿರ್ಮಾಪಕಿಯಾಗಿ ಹಲವಾರು ಸಿನಿಮಾಗಳಿಗೆ ಹಣಹೂಡಿಕೆ ಮಾಡುತ್ತ ಬಂದಿದ್ದ ಅನುಷ್ಕಾ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು.. ಇದು ಅನುಷ್ಕಾ ಅಭಿಮಾನಿಗಳಿಗೆ ಸಖತ್ ಬೇಸರ ಬೇಸರ ತರಿಸಿತ್ತು.. ಆದರೆ ಈಗ ಅಭಿಮಾನಿಗಳಿಗೆ ಅನುಷ್ಕಾ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ನಟನೆ ಮಾಡಲು ಅನುಷ್ಕಾ ಸಿದ್ಧತೆ ಮಾಡಿಕೊಂಡಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ