ನಟನೆಯಿಂದ ದೂರ ಉಳಿಯಲಿದ್ದಾರೆ ಅನುಷ್ಕಾ ಶರ್ಮಾ; ಶೀಘ್ರವೇ ಸಿಗಲಿದೆ ಸಿಹಿ ಸುದ್ದಿ?

ಅನುಷ್ಕಾ-ಕೊಹ್ಲಿ ದಂಪತಿ ಹೊಸ ಸದಸ್ಯನ ಆಗಮನದಲ್ಲಿದ್ದಾರೆ. ಹಾಗಾಗಿ ಅನುಷ್ಕಾ ಸಿನಿಮಾದಿಂದ ದೂರವಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.

anushka sharma

anushka sharma

  • News18
  • Last Updated :
  • Share this:
‘ಝೀರೊ’ ಚಿತ್ರ ತೆರೆಕಂಡ ನಂತರದಲ್ಲಿ ನಟಿ ಅನುಷ್ಕಾ ಶರ್ಮಾ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಪತಿ ವಿರಾಟ್​ ಕೊಹ್ಲಿ ಜೊತೆ ಸುತ್ತಾಟ ನಡೆಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಿಟ್ಟರೆ, ಅವರ ಯಾವ ಹೊಸ ಸಿನಿಮಾದ ಘೋಷಣೆಯ ಆಗಿಲ್ಲ. ಅವರು ನಟನೆಯಿಂದ ದೂರ ಉಳಿದಿದ್ದೇಕೆ ಎನ್ನುವುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಈಗ ಅನುಷ್ಕಾ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಟನೆಯಿಂದ ಅಂತರ ಕಾಯ್ದುಕೊಳ್ಳಲು ಕಾರಣವೇನು ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಅನುಷ್ಕಾ ಶರ್ಮಾಗೆ ತಮ್ಮಿಷ್ಟದ ಪಾತ್ರ ಮಾಡಿದ ಖುಷಿ ಇದೆಯಂತೆ. “ನಾನು ಕಳೆದ ಮೂರು ವರ್ಷಗಳಲ್ಲಿ ‘ಪರಿ’, ‘ಸುಯಿಧಾಗ’, ‘ಝೀರೋ’ದಂಥ ಸಿನಿಮಾಗಳಲ್ಲಿ ನಟಿಸಿದ್ದೇನೆ. ಈ ಮೂರು ಚಿತ್ರಗಳು ಬೇರೆ ರೀತಿಯಲ್ಲೇ ಇದ್ದವು. ಹಾಗಾಗಿ ಹೆಚ್ಚು ಸಿದ್ಧತೆಯ ಅವಶ್ಯಕತೆ ಇತ್ತು. ಈ ಪಾತ್ರಗಳು ನನಗೆ ತೃಪ್ತಿ ನೀಡಿವೆ. ಸಮಯ ಕಳೆಯಬೇಕು ಎನ್ನುವ ಕಾರಣಕ್ಕೆ ಸಿನಿಮಾಗೆ ಸಹಿ ಹಾಕುವುದರಲ್ಲಿ ಅರ್ಥವಿಲ್ಲ,’” ಎಂದಿದ್ದಾರೆ.

ಅನುಷ್ಕಾ-ಕೊಹ್ಲಿ ದಂಪತಿ ಹೊಸ ಸದಸ್ಯನ ಆಗಮನದಲ್ಲಿದ್ದಾರೆ. ಹಾಗಾಗಿ ಅನುಷ್ಕಾ ಸಿನಿಮಾದಿಂದ ದೂರವಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. “ನಾನು ಸಿನಿಮಾ ನಿರ್ಮಾಪಕಿ. ಹಾಗಾಗಿ ನಾನು ಕೈ ತುಂಬಾ ಕೆಲಸ ಇಟ್ಟುಕೊಂಡಿರಬೇಕು. ನಾನು ಹೊಸ ರೀತಿಯ ಕೆಲಸಕ್ಕೆ ಕೈ ಹಾಕುತ್ತಿದ್ದೇನೆ. ಕೆಲ ಶೋ ಹಾಗೂ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಅದಕ್ಕೆ ನಾನು ಸಮಯ ನೀಡಬೇಕಿದೆ. ಹಾಗಾಗಿ ನನ್ನ ನಿರ್ಮಾಣ ಸಂಸ್ಥೆಯ ಮೇಲೆ ಹೆಚ್ಚು ಗಮನಹರಿಸಬೇಕಿದೆ,” ಎಂದಿದ್ದಾರೆ ಅವರು.

ಇದನ್ನೂ ಓದಿ: ರೀಲ್ ಅನುಷ್ಕಾ ಜತೆ ರಿಯಲ್ ಅನುಷ್ಕಾ!; ಅನಾವರಣವಾಯ್ತು ಬಾಲಿವುಡ್ ನಟಿಯ ಮೇಣದ ಪ್ರತಿಮೆ

ಈ ಮೂಲಕ ಅನುಷ್ಕಾ ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರವೇ ಅವರ ನಿರ್ಮಾಣ ಸಂಸ್ಥೆಯಿಂದ ಸಾಕಷ್ಟು ಚಿತ್ರಗಳು ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೊದಲು ಕೂಡ ಅವರು ಗರ್ಭಿಣಿ ಆಗಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಈ ಬಗ್ಗೆ ಮಾತನಾಡಿದ್ದ ಅವರು, “ಮದುವೆ ಆಗಿದ್ದನ್ನು ಮುಚ್ಚಿಡಬಹುದು. ಆದರೆ, ಗರ್ಭಿಣಿ ಆಗಿದ್ದನ್ನು ಮುಚ್ಚಿಡಲು ಸಾಧ್ಯವಿಲ್ಲ,” ಎಂದಿದ್ದರು.
First published: