Vamika Kohli: ಕೊನೆಗೂ ಅಭಿಮಾನಿಗಳಿಗೆ ಸಿಕ್ತು ಕೊಹ್ಲಿ ಪುತ್ರಿ ದರ್ಶನ.. ಥೇಟ್​ ಅಪ್ಪನಂತೆ ಮುದ್ದಾಗಿದ್ದಾಳೆ ವಮಿಕಾ!

Vamika kohli: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಕೊಹ್ಲಿ 63 ಬಾಲ್ ನಲ್ಲಿ 50 ರನ್ ಗಳಿಸಿದರು.ಈ ವೇಳೆ ಅನುಷ್ಕಾ ಶರ್ಮಾ ತನ್ನ ಮಗಳ ಜೊತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು.. ಕೊಹ್ಲಿ ಅರ್ಧಶತಕ ಬಾರಿಸುತ್ತಿದ್ದಂತೆ ಚಪ್ಪಾಳೆ ತಟ್ಟಿ ಅನುಷ್ಕಾ ಸಂತಸ ವ್ಯಕ್ತಪಡಿಸಿದ್ದಾರೆ.. ಇತ್ತ ಮಗಳು ವಮಿಕಾ ಸಹ ಅಪ್ಪ ಅರ್ಧಶತಕ ಗಳಿಸಿದ್ದಕ್ಕೆ ಸಂತಸದಿಂದ ಕ್ಯೂಟ್ ಕ್ಯೂಟ್ ಆಗಿ ಚಪ್ಪಾಳೆ ತಟ್ಟಿದ್ದಾಳೆ.

ವಿರಾಟ್​ ಕೊಿಹ್ಲಿ, ಅನುಷ್ಕಾ ಶರ್ಮಾ

ವಿರಾಟ್​ ಕೊಿಹ್ಲಿ, ಅನುಷ್ಕಾ ಶರ್ಮಾ

  • Share this:
ವಿರಾಟ್ ಕೊಹ್ಲಿ(Virat Kohli) ಹಾಗೂ ಅನುಷ್ಕಾ ಶರ್ಮಾ(Anushka Sharma) ಅಭಿಮಾನಿಗಳು(Fans) ಕಳೆದೊಂದು ವರ್ಷದಿಂದ(year) ಯಾವ ಚಿತ್ರಕ್ಕಾಗಿ ಕಾಯುತ್ತಿದ್ದರೋ ಆ ಚಿತ್ರಗಳು ಕೊನೆಗೂ ಬಹಿರಂಗಗೊಂಡಿದೆ. ಹೌದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪುತ್ರಿ ವಮಿಕಾ(Vamika) ಜನಿಸಿ ಬರೋಬ್ಬರಿ ಒಂದು ವರ್ಷವಾಗಿದೆ. ಅಂದಿನಿಂದ ಇಂದಿನವರೆಗೂ ಕೊಹ್ಲಿ ಹಾಗೂ ಅನುಷ್ಕಾ ಅಭಿಮಾನಿಗಳು ವಮಿಕಾ ಚಿತ್ರವನ್ನು ರಿವಿಲ್ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು.. ಆದರೆ ಮಗಳ ಖಾಸಗಿತನಕ್ಕೆ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ಈ ದಂಪತಿ ಮಗಳ ಮುಖವನ್ನು ಇಷ್ಟು ದಿನ ಎಲ್ಲಿಯೂ ರಿವೀಲ್(Face Revel) ಮಾಡಿರಲಿಲ್ಲ.. ಹೊರಗೆ ಮಗಳ ಜೊತೆ ಕಾಣಿಸಿ ಕೊಂಡಾಗ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮಗಳ ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿದ್ದರು.. ಅದೆಷ್ಟೋ ಬಾರಿ ಕ್ಯಾಮರಾಗಳು ಅನುಷ್ಕಾ ಹಾಗೂ ಕೊಹ್ಲಿ ಹಿಂದೆ ಬಿದ್ದು ವಮಿಕಾ ಫೋಟೋ ತೆಗೆಯಲು ಪ್ರಯತ್ನಿಸಿದ ವೇಳೆ ಫೋಟೋ ತೆಗೆಯಬೇಡಿ ಎಂದು ಈ ದಂಪತಿಗಳು ಖುದ್ದಾಗಿ ಮನವಿ ಮಾಡಿಕೊಂಡಿದ್ದರು..

ಈ ಹಿಂದೆ ದಕ್ಷಿಣ ಆಫ್ರಿಕಾಗೆ ಟೀಮ್ ಇಂಡಿಯಾ ತೆರಳುವ ವೇಳೆ ಕೆಲವೊಂದಿಷ್ಟು ಛಾಯಾಗ್ರಾಹಕರು ವಮಿಕಾ ಫೋಟೋ ತೆಗೆದಾಗಲೂ ಅದನ್ನ ಎಲ್ಲಿಯೂ ಪ್ರಕಟಿಸದಂತೆ ವಿರಾಟ್-ಅನುಷ್ಕಾ ಮನವಿ ಮಾಡಿಕೊಂಡಿದ್ದರು.. ಹೀಗಾಗಿ ಇದುವರೆಗೂ ವಿರಾಟ್ ಹಾಗೂ ಅನುಷ್ಕಾ ಮಗಳು ಹೇಗೆ ಕಾಣುತ್ತಾರೆ ಎಂಬ ಸಣ್ಣ ಸುಳಿವು ಕೂಡಾ ಅಭಿಮಾನಿಗಳಿಗೆ ಇರಲಿಲ್ಲ.. ಆದ್ರೆ ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವೆ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಕೊನೆಗೂ ವಮಿಕಾ ಕೊಯ್ಲಿ ಹೇಗೆ ಕಾಣುತ್ತಾಳೆ ಎಂಬ ಸಣ್ಣ ವಿಡಿಯೋ ವೈರಲ್ ಆಗಿದೆ..

ಇದನ್ನೂ ಓದಿ: Captaincy ತೊರೆದ ಪತಿ ಕೊಹ್ಲಿ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ ಪತ್ನಿ Anushka Sharma

ಕೊನೆಗೂ ಮಾಧ್ಯಮಗಳ ಕಣ್ಣಿಗೆ ಬಿದ್ದ ವಿರಾಟ್ ಕೊಹ್ಲಿ ಪುತ್ರಿ

ನಿನ್ನೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಅನುಷ್ಕಾ ಶರ್ಮಾ ಅವರು ಮಗಳು ವಮಿಕಾ ಜತೆ ಬಂದಿದ್ದರು. ಪೆವಿಲಿಯನ್​ನಲ್ಲಿ ಮಗಳ ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಕ್ಯಾಮೆರಾಮೆನ್​ ವಮಿಕಾಳನ್ನು ಸೆರೆ ಹಿಡಿದಿದ್ದಾನೆ. ಕಪ್ಪು ಬಣ್ಣದ ಬಟ್ಟೆ ಧರಿಸಿ ನಿಂತಿದ್ದ ಅನುಷ್ಕಾ ಶರ್ಮಾ ಜೊತೆ ಪಿಂಕ್ ಕಲರ್ ಡ್ರೆಸ್ ನಲ್ಲಿ ವಮಿಕಾ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾಳೆ.. ವಮಿಕಾ ವಿಡಿಯೋ ನೋಡುತ್ತಿದ್ದಂತೆ ಥೇಟ್ ವಿರಾಟ್ ಕೊಹ್ಲಿ ಯಂತೆ ವಮಿಕಾ ಮಾಡುತ್ತಿದ್ದಾಳೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ..



ಅಪ್ಪನ ಜೆರಾಕ್ಸ್ ಕಾಪಿ ಎಂದು ಅಭಿಮಾನಿಗಳು

ಅಮ್ಮ ಅನುಷ್ಕಾ ಶರ್ಮಾ ಜೊತೆ ಕಾಣಿಸಿಕೊಂಡ ವಮಿಕಾ ಹೇಗೆ ಕಾಣುತ್ತಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.. ಡೇಟ್ ನೋಡಲು ವಿರಾಟ್ ಕೊಹ್ಲಿ ಅಂತೆ
ವಮಿಕಾ ಕಾಣಿಸುತ್ತಿದ್ದು, ವಿರಾಟ ಹಾಗೂ ಅನುಷ್ಕಾ ಅಭಿಮಾನಿಗಳು ಅಪ್ಪನ ಜೆರಾಕ್ಸ್ ಕಾಪಿ ಎಂದು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.. ಅಲ್ಲದೆ ಬರೋಬ್ಬರಿ ಒಂದು ವರ್ಷದ ಬಳಿಕ ವಮಿಕಾ ಮುಖ ರಿವಿಲ್ ಆಗಿರುವುದಕ್ಕೆ ಇಬ್ಬರ ಅಭಿಮಾನಿಗಳ ಪಾಲಿಗೆ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಚಪ್ಪಾಳೆ ತಟ್ಟಿ ಅಪ್ಪನಿಗೆ ಪ್ರೋತ್ಸಾಹಿಸಿದ ವಮಿಕಾ

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ
ಕೊಹ್ಲಿ 63 ಬಾಲ್ ನಲ್ಲಿ 50 ರನ್ ಗಳಿಸಿದರು.ಈ ವೇಳೆ ಅನುಷ್ಕಾ ಶರ್ಮಾ ತನ್ನ ಮಗಳ ಜೊತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು.. ಕೊಹ್ಲಿ ಅರ್ಧಶತಕ ಬಾರಿಸುತ್ತಿದ್ದಂತೆ ಚಪ್ಪಾಳೆ ತಟ್ಟಿ ಅನುಷ್ಕಾ ಸಂತಸ ವ್ಯಕ್ತಪಡಿಸಿದ್ದಾರೆ.. ಇತ್ತ ಮಗಳು ವಮಿಕಾ ಸಹ ಅಪ್ಪ ಅರ್ಧಶತಕ ಗಳಿಸಿದ್ದಕ್ಕೆ ಸಂತಸದಿಂದ ಕ್ಯೂಟ್ ಕ್ಯೂಟ್ ಆಗಿ ಚಪ್ಪಾಳೆ ತಟ್ಟಿದ್ದಾಳೆ.

ವಮಿಕಾ ಫೋಟೋ ತೋರಿಸಿದ್ದಕ್ಕೆ ಆಕ್ರೋಶ

ಒಂದು ಕಡೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪುತ್ರಿ ವಮಿಕಾ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ, ಕೆಲವೊಂದಷ್ಟು ಜನರು ವಮಿಕಾ ಫೋಟೋ ತೋರಿಸಿದ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ವಿರುದ್ಧ ಮುಗಿಬಿದ್ದಿದ್ದಾರೆ.. ಯಾಕಂದ್ರೆ ಇಷ್ಟು ದಿನ ಮಗಳ ಖಾಸಗಿ ಜೀವನಕ್ಕೆ ಧಕ್ಕೆ ಬರಬಾರದು ಎಂದು ಕೊಹ್ಲಿ ದಂಪತಿ ಮಗಳ ಫೋಟೋವನ್ನ ಎಲ್ಲಿಯೂ ರಿವಿಲ್ ಮಾಡಿರಲಿಲ್ಲ.. ಆದರೆ ಅವರ ಅನುಮತಿ ಇಲ್ಲದೇ ವಿಡಿಯೋ ಪ್ರಸಾರ ಮಾಡಿರುವುದಕ್ಕೆ ಅನುಷ್ಕ ಹಾಗೂ ವಿರಾಟ್ ಅಭಿಮಾನಿಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

ಇದನ್ನೂ ಓದಿ: ಭಾರತದ ಸಕ್ಸಸ್ ಫುಲ್ ನಾಯಕ ಈಗ ತಲೆ ಬಾಗಿದ್ದು ಯಾಕೆ? ನಾಯಕತ್ವದಿಂದ ಕೆಳಗಿಳಿಯಲು ಅಸಲಿ ಕಾರಣ ಏನು?

ಮಗಳ ಖಾಸಗಿ ಜೀವನಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದ ಕೊಹ್ಲಿ ದಂಪತಿ

ಇನ್ನು ನಮ್ಮ ಮಗುವಿಗೆ ಖಾಸಗಿತನ ನೀಡಿ. ಸೋಶಿಯಲ್​ ಮೀಡಿಯಾದಿಂದ ಮುಕ್ತವಾಗಿ ಜೀವನವನ್ನು ನಡೆಸಲು ಅವಳಿಗೆ ಅವಕಾಶವನ್ನು ಕೊಡಿ. ಅವಳು ಬೆಳೆದಂತೆ ನಾವು ಅವಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಬೆಂಬಲದ ಅಗತ್ಯವಿದೆ. ಅವಳ ಚಿತ್ರಗಳನ್ನು ಪೋಸ್ಟ್ ಮಾಡದಿರಲು ಕೋರುತ್ತೇವೆ. ನಮ್ಮ ಫ್ಯಾನ್​ ಕ್ಲಬ್‌ಗಳು ಮತ್ತು ಸೋಶಿಯಲ್​ ಮೀಡಿಯಾ ಬಳಕೆದಾರರಿಗೆ ವಿಶೇಷ ಧನ್ಯವಾದಗಳು’ ಎಂದು ಅನುಷ್ಕಾ ಈ ಹಿಂದೆ ಬರೆದುಕೊಂಡಿದ್ದರು... ಅಲ್ಲದೇ ವಿರಾಟ್ ಕೊಹ್ಲಿ ಸಹಾ ಮಗಳ ಫೋಟೋ ತೆಗೆಯದಂತೆ ಪಾಪರಾಜಿಗಳಿಗೆ ಸಾಕಷ್ಟು ಬಾರಿ ಮನವಿ ಸಹ ಮಾಡಿಕೊಂಡಿದ್ದರು.. ಆದರೆ ಈಗ ವಮಿಕಾ ಕೊಹ್ಲಿ ಫೋಟೋ ಹಾಗೂ ವಿಡಿಯೋ ಎಲ್ಲಾ ಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
Published by:ranjumbkgowda1 ranjumbkgowda1
First published: