ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ ಸಿಕ್ಕಾಪಟ್ಟೆ ಕುಚ್ಚಿಕ್ಕು ಸ್ನೇಹಿತೆಯರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಈ ಇಬ್ಬರು ಚೆಲುವೆಯರ ಗೆಳೆತನ ನಿನ್ನೆ ಮೊನ್ನೆಯದಲ್ಲ, ಬಾಲ್ಯದಿಂದಲೂ ಅವರಿಬ್ಬರು ಪರಿಚಿತರು ಎಂಬ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಇಬ್ಬರ ಪತಿಯಂದಿರು ಕ್ರಿಕೆಟಿಗರು ಎಂಬುವುದಷ್ಟೇ ಅವರಿಬ್ಬರ ನಡುವೆ ಇರುವ ಸಮಾನ ಅಂಶ ಅಲ್ಲ, ಇಬ್ಬರು ಓದಿದ ಶಾಲೆ ಕೂಡ ಒಂದೇ. ಬಾಲಿವುಡ್‍ನಲ್ಲಿ ನಟಿ ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿಯನ್ನು ಮದುವೆಯಾಗಿದ್ದರೆ, ಸಾಕ್ಷಿಯ ಪತಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ. ಅನುಷ್ಕಾ ಮತ್ತು ಸಾಕ್ಷಿ ತಮ್ಮ ಶಾಲಾ ದಿನಗಳಲ್ಲಿ ಜೊತೆಯಾಗಿ ತೆಗೆಸಿಕೊಂಡಿರುವ ಫೋಟೊಗಳು ಇಂಟರ್‌ನೆಟ್‍ನಲ್ಲಿ ಮೆಚ್ಚುಗೆ ಪಡೆಯುತ್ತಿರುವುದು ಮಾತ್ರವಲ್ಲ, ಬಹುಪಾಲು ಜನರಲ್ಲಿ ಅಚ್ಚರಿಯನ್ನು ಕೂಡ ಉಂಟು ಮಾಡಿದೆ.
ಫೋಟೋಗಳಲ್ಲಿ ಒಂದು, ಇಬ್ಬರೂ ತಮ್ಮ ಸ್ನೇಹಿತೆಯರ ಜೊತೆ ಖುಷಿಯಾಗಿ ಫೋಸ್ ನೀಡುತ್ತಿರುವ ಫೋಟೋ, ಇನ್ನೊಂದು ಕಿಂಡರ್‌ಗಾರ್ಟನ್ ದಿನಗಳ ಫೋಟೋ. ಆ ಫೋಟೋದಲ್ಲಿ ಸಾಕ್ಷಿ ಫೇರಿಯಂತೆ ವೇಷ ತೊಟ್ಟು ನಿಂತಿದ್ದರೆ, ಅನುಷ್ಕಾ ಗುಲಾಬಿ ಬಣ್ಣದ ಲೆಹಂಗಾದಲ್ಲಿ ಮಿಂಚುತ್ತಿದ್ದಾರೆ.
View this post on Instagram
ಸಾಕ್ಷಿ ಮತ್ತು ತಾನು ಒಂದೇ ಶಾಲೆಯಲ್ಲಿ ಕಲಿತಿರುವುದಾಗಿ, ಅನುಷ್ಕಾ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. “ನಾನು ಮತ್ತು ಸಾಕ್ಷಿ ಅಸ್ಸಾಂನ ಚಿಕ್ಕ ಪಟ್ಟಣವೊಂದಲ್ಲಿ ಜೊತೆಗೆ ವಾಸಿಸಿದ್ದೇವೆ. ಅವಳು ತಾನು ವಾಸಿಸುತ್ತಿದ್ದ ಜಾಗದ ಬಗ್ಗೆ ಹೇಳಿದಾಗ, ಅರೇ, ನಾನು ಕೂಡ ಅಲ್ಲಿ ವಾಸಿಸಿದ್ದೆ ! ಎಂದೆ. ಅವಳು ತನ್ನ ಶಾಲೆಯ ಕುರಿತು ಹೇಳಿದಾಗ, ನಾನು ಕೂಡ ಅದೇ ಶಾಲೆಗೆ ಹೋಗಿದ್ದನ್ನು ಹೇಳಿದೆ” ಎಂದಿದ್ದಾರೆ ಅನುಷ್ಕಾ.
ವೈಯಕ್ತಿಕ ಜೀವನದಲ್ಲಿ, ಈಗ ಇಬ್ಬರೂ ಮುದ್ದಾದ ಹೆಣ್ಣು ಮಕ್ಕಳ ತಾಯಂದಿರು. ಸಾಕ್ಷಿ ಮತ್ತು ಧೋನಿಯ ಮಗಳು ಝೀವಾ ಹುಟ್ಟಿದ್ದು 2015ರಲ್ಲಿ, ಅನುಷ್ಕಾ ಮತ್ತು ವಿರಾಟ್‍ಗೆ ಈ ವರ್ಷವಷ್ಟೇ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ವಾಮಿಕಾ ಎಂದು ಹೆಸರಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ