ಹಿರಿತೆರೆಯಲ್ಲಿ ನಾಯಕಿ, ಕಿರುತೆರೆಯಲ್ಲಿ ಖಳನಾಯಕಿ; ಸಖತ್ ಬ್ಯುಸಿಯಾದ ಸ್ಯಾಂಡಲ್​ವುಡ್ ಸುಂದರಿ ಅನುಷಾ

Kannada Movies: ಈ ಚಿತ್ರವನ್ನು ಹೊರತುಪಡಿಸಿದರೆ ಅನುಷಾ ಇರುವುದೆಲ್ಲವ ಬಿಟ್ಟಿ ಚಿತ್ರದ ನಿರ್ದೇಶಕ ಕಾಂತ ಆಕ್ಷನ್ ಕಟ್ ಹೇಳಲಿರುವ ಮತ್ತೊಂದು ಹೊಸ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲು ಆಯ್ಕೆಯಾಗಿದ್ದಾರೆ.

news18-kannada
Updated:July 6, 2020, 1:06 PM IST
ಹಿರಿತೆರೆಯಲ್ಲಿ ನಾಯಕಿ, ಕಿರುತೆರೆಯಲ್ಲಿ ಖಳನಾಯಕಿ; ಸಖತ್ ಬ್ಯುಸಿಯಾದ ಸ್ಯಾಂಡಲ್​ವುಡ್ ಸುಂದರಿ ಅನುಷಾ
ಅನುಷಾ ರೋಡ್ರಿಗಸ್
  • Share this:
ಸ್ಯಾಂಡಲ್​ವುಡ್ ಸುಂದರಿ ಅನುಷಾ ರೋಡ್ರಿಗಸ್ ಸದ್ಯ ಕಿರುತೆರೆ ಹಾಗೂ ಹಿರಿತೆರೆ, ಎರಡೂ ಕಡೆಗಳಲ್ಲೂ ಬ್ಯುಸಿಯಾಗಿದ್ದಾರೆ. ಕೃಷ್ಣಲೀಲಾ ಚಿತ್ರದಲ್ಲಿ ನಾಯಕ ಅಜೇಯ್ ರಾವ್ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ಅನುಷಾ. ನಂತರ ಜಲ್ಸಾ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಅವರು, ಲೌಡ್​ಸ್ಫೀಕರ್ ಸಿನಿಮಾದಲ್ಲೂ ಹೀರೋಯಿನ್ ಆಗಿ ಮಿಂಚಿದರು. ಇನ್ನೂ ಕೆಲ ತಿಂಗಳ ಹಿಂದಯಷ್ಟೇ ಬಿಡುಗಡೆಯಾದ ಐಫೋನ್ನಲ್ಲೇ ಸಂಪೂರ್ಣವಾಗಿ ಚಿತ್ರೀಕರಣವಾದ ಮೊದಲ ಸಿನಿಮಾ ಎಂಬ ಖ್ಯಾತಿ ಗಳಿಸಿದ ಡಿಂಗ ಚಿತ್ರದಲ್ಲೂ ಅನುಷಾ ನಾಯಕಿಯಾಗಿದ್ದರು.

ಸದ್ಯ ಇವರು ಸುಜಾತಾ ಸೀರಿಯಲ್​ನಲ್ಲಿ ಖಳನಾಯಕಿಯಾಗಿ ನಟಿಸುತ್ತಿದ್ದು, ಅದರ ಜತೆಗೆ ದಾರಿ ಯಾವುದಯ್ಯಾ ವೈಕುಂಠಕೆ ಎಂಬ ಚಿತ್ರದಲ್ಲೂ ನಾಯಕಿಯಾಗಿದ್ದಾರೆ. ವಿಶೇಷ ಅಂದರೆ ಇದುವರೆಗೂ ಹೆಚ್ಚು ಹೋಮ್ಲಿ ಪಾತ್ರಗಳಲ್ಲಷ್ಟೇ ನಟಿಸಿದ್ದ ಅನುಷಾ ಇದೇ ಮೊದಲ ಬಾರಿಗೆ ದಾರಿ ಯಾವುದಯ್ಯಾ ವೈಕುಂಠಕೆ ಚಿತ್ರದಲ್ಲಿ ಗ್ಲಾಮರಸ್ ಪಾತ್ರದಲ್ಲಿ ಮಿಂಚಿದ್ದಾರಂತೆ.

Diganth-Aindrita: ರಾಕ್​ ಕ್ಲೈಂಬಿಂಗ್​-ಸೈಕ್ಲಿಂಗ್​ ಅಂತ ಬ್ಯುಸಿ ಇರುವ ದಿಗಂತ್​-ಐಂದ್ರಿತಾ ರೇ: ಇಲ್ಲಿವೆ ವಿಡಿಯೋಗಳು..!

Anusha Rodrigues acting as heroine in big screen and villain in small screen
ಅನುಷಾ ರೋಡ್ರಿಗಸ್


ವರ್ಧನ್ ತೀರ್ಥಹಳ್ಳಿ ನಾಯಕನಾಗಿರುವ ಈ ಚಿತ್ರದ ಹೆಚ್ಚು ಭಾಗ ಶೂಟಿಂಗ್ ಸ್ಮಶಾನದಲ್ಲಿ ನಡೆದಿರುವುದು ಮತ್ತೊಂದು ವಿಶೇಷ. ಈ ಹಿಂದೆ ಕೃಷ್ಣ ಗಾರ್ಮೆಂಟ್ಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಿದ್ದು ಪೂರ್ಣಚಂದ್ರ ದಾರಿ ಯಾವುದಯ್ಯಾ ವೈಕುಂಠಕ್ಕೆ ಸಿನಿಮಾ ನಿರ್ದೇಶಿಸಿದ್ದಾರೆ. ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿದೆ.

ಲಾಕ್​ಡೌನ್ ತೆರೆವಾದ ಬಳಿಕ ಸರ್ಕಾರ ಅರ್ಧಕ್ಕೇ ಸ್ಥಗಿತಗೊಂಡಿರುವ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ನೀಡಿತ್ತು. ಇದೇ ಸಮಯದಲ್ಲೇ ಸರ್ಕಾರ ನೀಡಿದ್ದ ಆದೇಶದಂತೆ ಶೂಟಿಂಗ್ ಸ್ಪಾಟ್​ನಲ್ಲಿ ಎಲ್ಲ ಬಗೆಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಬೆಂಗಳೂರಿನಲ್ಲಿ ಕೊನೆಯ ಹಂತದ ಶೂಟಿಂಗ್ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿದ್ದಾರೆ. ಇನ್ನಷ್ಟೇ ಚಿತ್ರೀಕರಣೋತ್ತರ ಕೆಲಸಗಳಲ್ಲಿ ತೊಡಗಲಿದೆ ದಾರಿ ಯಾವುದಯ್ಯಾ ವೈಕುಂಠಕ್ಕೆ ಚಿತ್ರತಂಡ.

ಫೋನ್​ನಲ್ಲಿ ಮಾತನಾಡುತ್ತಿರುವ ರಾಜ್​ಕುಮಾರ್​ರ ಅಪರೂಪದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್..!ವರ್ಧನ್ ತೀರ್ಥಹಳ್ಳಿ, ಅನುಷಾ ಜತೆಗೆ ತಿಥಿ ಖ್ಯಾತಿಯ ಪೂಜ, ಬಲರಾಜವಾಡಿ, ಶೀಬಾ, ಡಿವಿ ನಾಗರಾಜ್, ಸುಚಿತ್, ಅರುಣ್ ಮೂರ್ತಿ, ಸಂಗೀತ ಗೌಡಿ ಸೇರಿದಂತೆ ಹಲವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಗತ್ ಸಂಗೀತ ನಿರ್ದೇಶನ ಮಾಡಿದ್ದು, ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಈ ಚಿತ್ರವನ್ನು ಹೊರತುಪಡಿಸಿದರೆ ಅನುಷಾ ಇರುವುದೆಲ್ಲವ ಬಿಟ್ಟಿ ಚಿತ್ರದ ನಿರ್ದೇಶಕ ಕಾಂತ ಆಕ್ಷನ್ ಕಟ್ ಹೇಳಲಿರುವ ಮತ್ತೊಂದು ಹೊಸ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲು ಆಯ್ಕೆಯಾಗಿದ್ದಾರೆ. ಲಾಕ್​ಡೌನ್​ ಕಂಪ್ಲೀಟ್ಆಗಿ ತೆರವಾದ ಬಳಿಕ ಆ ಹೊಸ ಸಿನಿಮಾ ಸೆಟ್ಟೇರಲಿದೆ.
Published by: Vinay Bhat
First published: July 6, 2020, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading