• Home
  • »
  • News
  • »
  • entertainment
  • »
  • Anurag Kashyap-Rishab Shetty: ರಿಷಬ್ ಶೆಟ್ಟಿಗೆ ಬಾಲಿವುಡ್ ನಟನ ವಾರ್ನಿಂಗ್, ಅನುರಾಗ್ ಕಶ್ಯಪ್ ಯಾಕೆ ಹೀಗಂದ್ರು?

Anurag Kashyap-Rishab Shetty: ರಿಷಬ್ ಶೆಟ್ಟಿಗೆ ಬಾಲಿವುಡ್ ನಟನ ವಾರ್ನಿಂಗ್, ಅನುರಾಗ್ ಕಶ್ಯಪ್ ಯಾಕೆ ಹೀಗಂದ್ರು?

ರಿಷಬ್ ಶೆಟ್ಟಿ-ಅನುರಾಗ್ ಕಷ್ಯಪ್

ರಿಷಬ್ ಶೆಟ್ಟಿ-ಅನುರಾಗ್ ಕಷ್ಯಪ್

ನಟ ರಿಷಬ್ ಶೆಟ್ಟಿಗೆ ವಾರ್ನಿಂಗ್ ಕೊಟ್ಟಿದ್ಯಾಕೆ ಬಾಲಿವುಡ್ ನಟ? ಕನ್ನಡದ ಕಾಂತಾರ ಮತ್ತು ಮರಾಠಿಯ ಸೈರಾಟ್ ಸಿನಿಮಾವನ್ನು ಹೋಲಿಸಿದ್ಯಾಕೆ?

  • News18 Kannada
  • Last Updated :
  • Bangalore, India
  • Share this:

ಕಾಂತಾರ (Kantara) ಸಿನಿಮಾ ಪಾಸಿಟಿವ್ ವಿಮರ್ಶೆ ಪಡೆಯುವುದರ ಜೊತೆಗೆ ಉತ್ತಮ ಬಾಕ್ಸ್ ಆಫೀಸ್ ಗಳಿಕೆಯನ್ನೂ ಮಾಡುತ್ತಿದೆ. ಸಿನಿಮಾ (Cinema) ಎಲ್ಲಾ ರೀತಿಯಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಪಡೆಯುತ್ತಿರುವ ಸಂದರ್ಭದಲ್ಲಿ ಚಿತ್ರರಂದ ಬಹುತೇಕ ಎಲ್ಲರೂ ಸಿನಿಮಾ ನೋಡಿ ಅವರ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಸಿನಿಮಾ ವಿಮರ್ಶಕರಿಂದ ಅದೇ ರೀತಿ ಜನ ಸಾಮಾನ್ಯರಿಂದ ಮೆಚ್ಚುಗೆಯನ್ನು ಗಳಿಸಿದ್ದು ಈಗ ಬಾಲಿವುಡ್ ನಟ ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರೂ ಕೂಡಾ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ ಅವರು ರಿಷಬ್ ಶೆಟ್ಟಿಗೆ ಕೊಟ್ಟ ವಾರ್ನಿಂಗ್ ಈಗ ಸುದ್ದಿಯಾಗಿದೆ.


ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಪ್ಯಾನ್-ಇಂಡಿಯನ್ ಚಲನಚಿತ್ರಗಳು ಹಾಗೂ ಬಿಗ್ ಬಜೆಟ್ ದೊಡ್ಡಮಟ್ಟದಲ್ಲಿ ನಿರ್ಮಿಸುವ ಸಿನಿಮಾಗಳಿಂದ  ಚಲನಚಿತ್ರೋದ್ಯಮಕ್ಕೆ ಆಗುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಗಲಟ್ಟಾ ಪ್ಲಸ್ ಜೊತೆಗಿನ ಡೌಂಡ್ ಟೇಬಲ್ ಮಾತುಕತೆಯಲ್ಲಿ ನಟ ಮಾತನಾಡಿದ್ದಾರೆ.
ಅನುರಾಗ್ ಕಶ್ಯಪ್ ಅವರು ಸೈರಾಟ್‌ ಸಿನಿಮಾದ ನಿರ್ದೇಶಕ ನಾಗರಾಜ ಮಂಜುಳೆ ಅವರಿಗೆ ಈ ಸಿನಿಮಾ ಬಹುಶಃ ಮರಾಠಿ ಚಿತ್ರರಂಗವನ್ನು ನಾಶಪಡಿಸಬಹುದು ಎಂದು ಮೊದಲೇ ಎಚ್ಚರಿಕೆ ನೀಡಿದ್ದರು ಎಂದು ಹೇಳಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಕಾಂತಾರ ಸಿನಿಮಾದ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರಯ ಅದೇ ತಪ್ಪನ್ನು ಮಾಡಬಾರದು ಎಂದು ಚಲನಚಿತ್ರ ನಿರ್ಮಾಪಕರು ಹೇಳಿದ್ದಾರೆ.


ಒಂದು ಸಿನಿಮಾ ಮಾಡಿ ಇಷ್ಟೊಂದು ಹಣ ಮಾಡಲು ಸಾಧ್ಯವಿದೆ ಎಂಬುದನ್ನು ಸೈರಾಟ್ ಸಿನಿಮಾದ ಯಶಸ್ಸು ತೋರಿಸಿಕೊಟ್ಟಿತು ಎಂದರು. ಇದ್ದಕ್ಕಿದ್ದಂತೆ, ಉಮೇಶ್ ಕುಲಕರ್ಣಿ ಮತ್ತು ಎಲ್ಲರೂ ಅಂತಹ ಸಿನಿಮಾಗಳನ್ನು ಮಾಡುವುದನ್ನು ನಿಲ್ಲಿಸಿದರು. ಏಕೆಂದರೆ ಎಲ್ಲರೂ ಸೈರಾಟ್ ಅನ್ನು ಫಾಲೋ ಮಾಡಲು ಬಯಸಿದ್ದರು ಎಂದು ಅವರು ಹೇಳಿದ್ದಾರೆ.


ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ  ಅವರು ದಾರಿ ಬದಲಿಸಲು ಪ್ರಾರಂಭಿಸಿ 'ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಕಣ್ಣಿಟ್ಟು ದೊಡ್ಡ-ಬಜೆಟ್ ಸಿನಿಮಾಗಳನ್ನು ಮಾಡಲು ಪ್ರಾರಂಭಿಸಿದರೆ ಅದು ದೊಡ್ಡ ಸಮಸ್ಯೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅನುರಾಗ್ ಅವರು ಅಮೇರಿಕನ್ ಚಲನಚಿತ್ರ ನಿರ್ಮಾಪಕ ಜೇಸನ್ ಬ್ಲಮ್ ಅವರ ಉದಾಹರಣೆಯನ್ನು ಕೂಡಾ ಈ ಸಂದರ್ಭದಲ್ಲಿ ನೀಡಿದ್ದಾರೆ. ಅವರು ಅವರ ಪ್ರಮುಖ ವ್ಯವಹಾರದ ಮಾದರಿಯನ್ನು ಬದಲಾಯಿಸಲಿಲ್ಲ ಎಂದು ಹೇಳಿದ್ದಾರೆ. ಕಡಿಮೆ-ಬಜೆಟ್ ಹಾರರ್ ಸಿನಿಮಾಗಳನ್ನು ಮಾಡಿ ಯಶಸ್ಸನ್ನು ಅನುಭವಿಸಿದ ನಂತರವೂ, ಬ್ಲಮ್ ತನ್ನ ಸಿನಿಮಾಗಳ ನಿರ್ಮಾಣ ವೆಚ್ಚವನ್ನು ಹೆಚ್ಚಿಸಲಿಲ್ಲ ಎಂದು ಕಶ್ಯಪ್ ಹೇಳಿದ್ದಾರೆ.


ಇದನ್ನೂ ಓದಿ: Kantara 2: ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಕಾಂತಾರಾ 2 ಸಿನಿಮಾಗೆ ದೈವದ ಅನುಮತಿ ಕೇಳಿದ ಚಿತ್ರತಂಡ


ಬ್ಲಮ್ ಇನ್ನೂ ಅತ್ಯಂತ ನಿಯಂತ್ರಿತ ಬಜೆಟ್‌ನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಎಲ್ಲಾ ಬ್ಯಾಕೆಂಡ್‌ಗಳೊಂದಿಗೆ ಈ ಕೆಲವು ಸಿನಿಮಾಗಳು ಯಶಸ್ವಿಯಾದಾಗ ಪ್ರತಿಯೊಬ್ಬರೂ ಅದರಿಂದ ಹಣವನ್ನು ಪಡೆಯುತ್ತಾರೆ ಎಂದಿದ್ದಾರೆ.


ಕಾಂತಾರ 2 ಸಿನಿಮಾ


ಕಾಂತಾರ 2 ಸಿನಿಮಾ ಯಾವ ಸೆಟ್ಟೇರುತ್ತದೆ ಎಂದು ಕಾಯುತ್ತಿರುವ ಪ್ರೇಕ್ಷಕರಿಗೆ ಒಂದು ಗುಡ್​ನ್ಯೂಸ್ ಸಿಕ್ಕಿದೆ. ಈಗ ಸಿನಿಮಾ ತಂಡ ಕಾಂತಾರಾ ಭಾಗ-2 ಚಿತ್ರಕ್ಕೆ ಅಣ್ಣಪ್ಪ ಪಂಜುರ್ಲಿ ಬಳಿ ಅನುಮತಿ ಕೇಳಿದೆ. ಮಂಗಳೂರಿನ ಬಂದಲೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಚಿತ್ರತಂಡ ಭಾಗವಹಿಸಿ ಮುಂದಿನ ನಿಮಾ ಮಾಡಲು ಅನುಮತಿ ಕೇಳಿದೆ.ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಕಾಂತಾರ ಚಿತ್ರತಂಡ ಹರಕೆ ಕೋಲ ನೀಡಿದ್ದು ಈ ಸಂದರ್ಭ ಕಾಂತಾರ 2 ಸಿನಿಮಾಗೆ ಅನುಮತಿ ಕೇಳಿದ್ದರು. ಕಾಂತಾರ ಭಾಗ-2 ಸಿನಿಮಾಗೆ ಅಣ್ಣಪ್ಪ ಪಂಜುರ್ಲಿ ದೈವ ಷರತ್ತುಬದ್ಧ ಅನುಮತಿ ನೀಡಿದೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು