Nidhi Shah: ಸಖತ್ ವೈರಲ್ ಆಗ್ತಿದೆ ಅನುಪಮಾ ಸೀರಿಯಲ್​ನ ‘ಕಿಂಜಲ್‘ ನಿಧಿ ಶಾ ಹಾಟ್ ಫೋಟೋ..!

Anupamaa: ಹಿಂದಿ ಧಾರಾವಾಹಿ ಅನುಪಮಾ ಕಿರುತೆಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಅದರಲ್ಲಿ ಕಿಂಜಲ್ ಪಾತ್ರ ವಹಿಸುತ್ತಿರುವ ನಿಧಿ ಶಾ ಕೂಡ ಅಷ್ಟೇ ಜನಮನ್ನಣೆ ಪಡೆದಿದ್ದಾರೆ.

ನಿಧಿ ಶಾ

ನಿಧಿ ಶಾ

  • Share this:
ಕಿರುತೆರೆ ನಟಿ ನಿಧಿ ಶಾ(Nidhi Shah) , ಹಿಂದಿ ಧಾರಾವಾಹಿ ಅನುಪಮಾದಲ್ಲಿ(Anupamaa's Kinjal ) ತಮ್ಮ ಕಿಂಜಲ್ ಪಾತ್ರದ ಮೂಲಕ ಜನಪ್ರಿಯರು. ಇತ್ತೀಚೆಗೆ ನಿಧಿ ಶಾ ಇನ್‍ಸ್ಟಾಗ್ರಾಂ(Instagram)ನಲ್ಲಿ ಪೋಸ್ಟ್ ಮಾಡಿರುವ ಅವರ ಬೋಲ್ಡ್ ಮತ್ತು ಹಾಟ್ ಫೋಟೋ ಒಂದನ್ನು ಕಂಡು ನೆಟ್ಟಿಗರು “ಹೇಯ್ ಹಾಟಿ” ಎನ್ನುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ. ವೈರಲ್ ಆಗಿರುವ ಆ ಫೋಟೋದಲ್ಲಿ ನಿಧಿ ಶಾ, ಕಪ್ಪು ಬ್ರಾಲೆಟ್ ಒಂದನ್ನು ಧರಿಸಿ, ನೀರಿನಿಂದ ಒದ್ದೆಯಾಗಿರುವುದನ್ನು ಕಾಣಬಹುದು. ನಿಧಿ ಶಾ ಈ ಫೋಟೋದಲ್ಲಿ ಯಾವುದೇ ಮೇಕಪ್ ಇಲ್ಲದೆ ಸುಂದರವಾಗಿ ಕಾಣುತ್ತಿದ್ದು, ತುಂಬಾ ಆಕರ್ಷಕ ರೀತಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

“ಆಕೆ ಖುಷಿಯಲ್ಲಿ ನೆನೆದು, ಪ್ರೀತಿಯಲ್ಲಿ ತೋಯ್ದಿದ್ದಾರೆ” ಎಂದು ತಮ್ಮ ಪೋಸ್ಟ್‌ಗೆ ನಿಧಿ ಶಾ ಅಡಿ ಬರಹವನ್ನು ನೀಡಿದ್ದಾರೆ. ಆ ಪೋಟೋ 2 ಲಕ್ಷಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಪಡೆದಿದ್ದು, ಅಭಿಮಾನಿಗಳು ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇನ್ನು ಕೆಲವರಂತೂ ಹೃದಯ ಮತ್ತು ಬೆಂಕಿಯ ಎಮೋಜಿಗಳ ಮೂಲಕ ತಮ್ಮ ಮೆಚ್ಚುಗೆ ಸೂಚಿಸಿ, ‘ಹಾಟಿ’, ‘ಅದ್ಭುತ’ ಎಂದೆಲ್ಲಾ ಹೊಗಳಿದ್ದಾರೆ.
View this post on Instagram


A post shared by Nidhi Shah (@nidz_20)


ಹಿಂದಿ ಧಾರಾವಾಹಿ ಅನುಪಮಾ ಕಿರುತೆಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಅದರಲ್ಲಿ ಕಿಂಜಲ್ ಪಾತ್ರ ವಹಿಸುತ್ತಿರುವ ನಿಧಿ ಶಾ ಕೂಡ ಅಷ್ಟೇ ಜನಮನ್ನಣೆ ಪಡೆದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಂತೂ ಬಹಳ ಜನಪ್ರಿಯರಾಗಿರುವ ನಿಧಿ, ಇನ್‍ಸ್ಟಾಗ್ರಾಂನಲ್ಲಿ 1.3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಇದನ್ನೂ ಓದಿ:Karnataka Dams Water Level: ಭಾರೀ ಮಳೆಗೆ ಬಹುತೇಕ ಭರ್ತಿಯಾದ ಡ್ಯಾಂಗಳು; ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಅನುಪಮಾದಲ್ಲಿ ಮಹತ್ವಾಕಾಂಕ್ಷಿ ಯುವತಿಯ ಪಾತ್ರ ನಿರ್ವಹಿಸುತ್ತಿರುವ ನಿಧಿ ಶಾ ನಿಜ ಜೀವನದಲ್ಲಿ ತುಂಬಾ ಗ್ಲಾಮರಸ್ ಆಗಿದ್ದಾರೆ. ‘ಜಾನಾ ನ ದಿಲ್ ಸೆ ದೂರ್’ , ‘ತೂ ಆಶಿಕಿ’, ‘ಕವಚ್’ ಮತ್ತಿತರ ಧಾರಾವಾಹಿಗಳಲ್ಲಿ ನಿಧಿ ಅಭಿನಯಿಸಿದ್ದಾರೆ. ಕೆಲವು ತಿಂಗಳ ಹಿಂದೆ ಕೋವಿಡ್‍ಗೆ ತುತ್ತಾಗಿ ತಾವು ಮತ್ತು ತಮ್ಮ ಕುಟುಂಬ ಎಷ್ಟು ತೊಂದರೆ ಎದುರಿಸಿತ್ತು ಎಂಬುದನ್ನು ನಿಧಿ ಈ ಹಿಂದೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

ಅನುಪಮಾ ಧಾರಾವಾಹಿಯಲ್ಲಿ ತಾನು ನಿರ್ವಹಿಸುತ್ತಿರುವ ಕಿಂಜಲ್ ಪಾತ್ರವನ್ನು ತನ್ನ ನಿಜ ಜೀವನದ ವ್ಯಕ್ತಿತ್ವದ ವಿಸ್ತರಣೆ ಎಂದು ಪರಿಗಣಿಸುತ್ತೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.
View this post on Instagram


A post shared by Nidhi Shah (@nidz_20)


“ನಿಧಿ ಮತ್ತು ಕಿಂಜಲ್ ಈಗ ಪರಸ್ಪರರ ವಿಸ್ತರಣೆ ಆಗಿದ್ದಾರೆ ಅಷ್ಟೆ. ಕೆಲವೊಮ್ಮೆ, ನಾನು ದಿನನಿತ್ಯದ ಜೀವನದಲ್ಲಿ ಕಿಂಜಲ್‍ಳ ನಿರೀಕ್ಷೆಗಳನ್ನು ಹೊತ್ತುಕೊಂಡಿರುತ್ತೇನೆ. ವೃತ್ತಿವರವಾಗಿ, ನಾನು ಕೇವಲ ಬೆಳವಣಿಗೆಯನ್ನೇ ಹೊಂದಿದ್ದೇನೆ. ಈ ಧಾರಾವಾಹಿಯನ್ನು ಅದ್ಭುತವಾಗಿ ಬರೆಯಲಾಗಿದೆ ಮತ್ತು ಪ್ರತಿ ಪಾತ್ರವನ್ನು ಅತ್ಯುತ್ತಮ ಕಲಾವಿದರು ನಿರ್ವಹಿಸಿದ್ದಾರೆ. ಪ್ರತಿಯೊಂದಕ್ಕೂ ಅನುಪಮಾಗೆ ತುಂಬಾ ಆಭಾರಿಯಾಗಿದ್ದೇನೆ” ಎಂದು ಅವರು ತಿಳಿಸಿದ್ದರು.

ಅನುಪಮಾ ಧಾರಾವಾಹಿ ಆರಂಭವಾದ ದಿನಗಳಿಂದ ಇಂದಿನವರೆಗೂ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡು, ದಿನದಿಂದ ದಿನಕ್ಕೆ ಜನಪ್ರಿಯ ಆಗುತ್ತಲೇ ಇದೆ. ಕಿರುತೆರೆ ನಟಿ ರೂಪಾಲಿ ಗಂಗೂಲಿ ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ:Mysuru Dasara 2021: ವಿಶ್ವವಿಖ್ಯಾತ ಜಂಬೂ ಸವಾರಿಗೆ ‘ಗಜಪಯಣ‘ ಆರಂಭ; ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ನಾಡಿಗೆ

ರೂಪಾಲಿ ಹಿಂದಿನ ಧಾರಾವಾಹಿಯಲ್ಲಿ ನಿರ್ವಹಿಸಿರುವ ಪಾತ್ರಗಳಿಗೆ ಹೋಲಿಸಿದರೆ ಅನುಪಮಾ ಪಾತ್ರ ಅತ್ಯಂತ ಭಿನ್ನವಾಗಿದೆ. ಈ ಮೊದಲು 2000ಸ್ ಸಿಟ್‍ಕಾಮ್‍ನ ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಮತ್ತು ‘ಸಂಜೀವಿನಿ’ ಹಾಗೂ ‘ಕಹಾನಿ ಘರ್ ಘರ್ ಕಿ’ ಯಂತಹ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದರು.
Published by:Latha CG
First published: