ಮಲಯಾಳಂನ ಸೂಪರ್ ಡೂಪರ್ ಹಿಟ್ 'ಪ್ರೇಮಂ' ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರಪ್ರಿಯರ ಗಮನ ಸೆಳೆದ ನಟಿ ಅನುಪಮಾ ಪರಮೇಶ್ವರನ್. 19ರ ಹರೆಯದಲ್ಲೇ ಮಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅನುಪಮಾ, ನಟಿಸಿದ ಮೊದಲ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕಲೆಕ್ಷನ್ ಮಾಡಿತ್ತು. ಪ್ರೇಮಂ ಸೂಪರ್ ಹಿಟ್ ಆಗುತ್ತಿದ್ದಂತೆ ಅನುಪಮಾಗೆ ಬೇರೆ ಭಾಷೆಯಿಂದಲೂ ಬೇಡಿಕೆ ಹೆಚ್ಚಾಯಿತು. ನಂತರ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಲ್ಲದೆ ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡರು. ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಮೂಲಕ ಚಂದನವನಕ್ಕೂ ಕಾಲಿಟ್ಟು ಕೇವಲ ಐದು ವರ್ಷಗಳಲ್ಲಿ ಚತುರ್ಭಾಷಾ ತಾರೆಯಾಗಿ ಮಿಂಚಿದ ಕೀರ್ತಿ ಇವರದ್ದು.
ಅನುಪಮಾ ಪರಮೇಶ್ವರನ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುತ್ತಾರೆ. ಅಭಿಮಾನಿಗಳ ನಿರಂತರ ಸಂಪರ್ಕದಲ್ಲಿರುವ ಅನುಪಮಾ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುತ್ತಾರೆ. ಅದರಲ್ಲೂ ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರುವ ಇವರು 8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
D Boss Darshan: ಜಾಲಿ ರೈಡ್ ಹೊರಟ ಡಿ ಬಾಸ್ ದರ್ಶನ್ಗೆ ಹೆದ್ದಾರಿಯಲ್ಲಿ ಕಾದು ಕುಳಿತ ಪೊಲೀಸರು: ಯಾಕೆ ಗೊತ್ತೇ?
ಸಾಮಾನ್ಯವಾಗಿ ನಟಿಯರು ಚಿತ್ರರಂಗದಲ್ಲಿ ಬೇಗನೆ ಹೆಸರು ಮಾಡಿ ಫೇಮಸ್ ಆದ ಬೆನ್ನಲ್ಲೇ ನಿಮ್ಮ ಮದುವೆ ಯಾವಾಗ? ಎಂಬ ಪ್ರಶ್ನೆ ಬಂದೆ ಬರುತ್ತದೆ. ಸದ್ಯ ಅನುಪಮಾಗೂ ಅಂಥದ್ದೇ ಪ್ರಶ್ನೆ ಎದುರಾಗಿದೆ. ಇದಕ್ಕವರು ತಮ್ಮ ಶೈಲಿಯಲ್ಲಿ ಖಡಕ್ ಆಗಿಯೇ ಉತ್ತರಿಸಿದ್ದಾರೆ.
ಹೌದು, ಅಭಿಮಾನಿಯೊಬ್ಬರು ಜಾಲತಾಣದಲ್ಲಿ ಅನುಪಮಾರನ್ನು ಮದುವೆ ಯಾವಾಗ? ಮತ್ತು ಮದುವೆ ಏನು ಪ್ಲಾನ್ ಮಾಡಿಕೊಂಡಿದ್ದೀರಿ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಅನುಪಮಾ, ನನಗಿನ್ನೂ 25 ವರ್ಷ. ಅದರ ಬಗ್ಗೆ ಕೇಳಬೇಡಿ. ಮದುವೆಗೆ ಇನ್ನು ಬಹಳ ಸಮಯವಿದೆ. ನಾನಿನ್ನು ಚಿಕ್ಕ ಹುಡುಗಿ. ಸದ್ಯಕ್ಕೆ ಮದುವೆ ಆಗುವುದಿಲ್ಲ ಎಂದಿದ್ದಾರೆ.
ಈ ಹಿಂದೆ ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಜೊತೆಗೆ ಅನುಪಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕೂಡ ಹಬ್ಬಿತ್ತು. ಆದರೆ ಅನುಪಮಾ ನಾವಿಬ್ಬರು ಉತ್ತಮ ಸ್ನೇಹಿತರಷ್ಟೆ ನಮ್ಮಿಬ್ಬರ ಮಧ್ಯೆ ಪ್ರೀತಿ ಪ್ರೇಮದಂತಹ ವಿಷಯಗಳು ಇಲ್ಲ ಎಂದಿದ್ದರು.
ಈ ಸ್ಟಾರ್ ನಟನನ್ನು ಅಪ್ಪ ಎಂದು ತಪ್ಪು ತಿಳಿದಿದ್ದರಂತೆ ಐಶ್ವರ್ಯ ರೈ ಮಗಳು ಆರಾಧ್ಯ; ಯಾರು ಆ ನಟ?
ಅನುಪಮಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಿಲ್ ರಾಜು ನಿರ್ಮಾಣದ ನಿಖಿಲ್ ಸಿದ್ಧಾರ್ಥ್ ಅಭಿನಯದ '18 ಪೇಜ್' ಮತ್ತು 'ರೌಡಿ ಬಾಯ್ಸ್' ತೆಲುಗು ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಅಥರ್ವ ಜೊತೆ ನಟಿಸಿರುವ 'ತಲ್ಲಿ ಪೋಗಾಧೆ' ಸಿನಿಮಾ ಶೂಟಿಂಗ್ ಮುಗಿದಿದ್ದು ತೆರೆಗೆ ಬರಬೇಕಿದೆ. ಇತ್ತೀಚೆಗಷ್ಟೆ ನೆಟ್ಫ್ಲಿಕ್ಸ್ನಲ್ಲಿ ಅನುಪಮಾ ನಟಿಸಿದ್ದ 'ಮನಿಯಾರಯಿಲೆ ಅಶೋಕನ್' ಸಿನಿಮಾ ಭಾರೀ ಸದ್ದು ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ