Anupama Parameswaran: ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಅನುಪಮಾ ಪರಮೇಶ್ವರನ್​..!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಪಮಾ ಪರಮೇಶ್ವರನ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಮೇ 25ಕ್ಕೆ ಕಡೆಯದಾಗಿ ಪೋಸ್ಟ್​ ಮಾಡಿದ್ದರು. ಅನುಪಮಾ ಯಾವ ಕಾರಣದಿಂದ ಹೀಗೆ ಇದ್ದಕ್ಕಿದ್ದಂತೆ ಸೋಶಿಯಲ್​ ಮೀಡಿಯಾದಿಂದ ದೂರ ಉಳಿದರು ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು.

ಅನುಪಮಾ ಪರಮೇಶ್ವರನ್​

ಅನುಪಮಾ ಪರಮೇಶ್ವರನ್​

  • Share this:
ತೆಲುಗು ಹಾಗೂ ತಮಿಳಿನಲ್ಲಿ ತಮ್ಮ ನೈಜ ಅಭಿನಯದಿಂದಲೇ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಅನುಪಮಾ ಪರಮೇಶ್ವರನ್​.  ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್​ ಅವರೊಂದಿಗೆ ತೆರೆ ಹಂಚಿಕೊಂಡಿರುವ ಅನುಪಮಾ ಇದ್ದಕ್ಕಿದ್ದಂತೆಯೇ ಸಾಮಾಜಿಕ ಜಾಲತಾಣದಿಂದ ದೂರ ಉಳಿಯೋಕೆ ಆರಂಭಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಪಮಾ ಪರಮೇಶ್ವರನ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಮೇ 25ಕ್ಕೆ ಕಡೆಯದಾಗಿ ಪೋಸ್ಟ್​ ಮಾಡಿದ್ದರು. ಅನುಪಮಾ ಯಾವ ಕಾರಣದಿಂದ ಹೀಗೆ ಇದ್ದಕ್ಕಿದ್ದಂತೆ ಸೋಶಿಯಲ್​ ಮೀಡಿಯಾದಿಂದ ದೂರ ಉಳಿದರು ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು.

Anupama- Prameswaran to act in Dil Raju banner one more time
ಅನುಪಮಾ ಪರಮೇಶ್ವರನ್​


ನಿನ್ನೆಯಷ್ಟೆ ತಮ್ಮ ಇನ್​ಸ್ಟಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ನಟಿ, ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಅನುಪಮಾ ಪ್ರಾಣಿಪ್ರಿಯೆ. ಅವರ ಬಳಿ ಮೂರು ಸಾಕು ನಾಯಿಗಳಿದ್ದವು. ವಿಸ್ಕಿ, ಟಾಡಿ ಹಾಗೂ ರಮ್​. ಟಾಡಿ ಎನ್ನುವ ಮರಿಯನ್ನು ರಸ್ತೆಯಿಂದ ರೆಸ್ಕ್ಯೂ ಮಾಡಲಾಗಿತ್ತು. ರಮ್​ ಬೀಗಲ್​ ತಳಿಯ ನಾಯಿ.
ಅನುಪಮಾ ಅವರ ಮೂರೂ ನಾಯಿಗಳಿಗೆ ಪಾರ್ವೋ ಎಂಬ ವೈರಸ್​ನಿಂದ ಸೋಂಕು ತಗುಲಿತ್ತಂತೆ. ಇದರಿಂದಾಗಿ ಚಿಕಿತ್ಸೆ ಕೊಡಿಸಿದರೂ ಟಾಡಿ ಹಾಗೂ ರಮ್​ ಸಾವನ್ನಪ್ಪಿವೆ. ಇದೇ ಕಾರಣದಿಂದ ಅನುಪಮಾ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರಂತೆ. 
View this post on Instagram
 

Toddy and Rum We lost them ... 💔 Toddy 30/12/2019 - 27/5/2020 Rum 12/02/2019 - 8/6/2020 Love you both ... infinite...RIP


A post shared by Anupama Parameswaran (@anupamaparameswaran96) on


ತಮ್ಮ ನಾಯಿಗಳಿಗೆ ವೈರಸ್​ನಿಂದ ಸೋಂಕು ತಗುಲುವವರೆಗೂ ಅರಿಗೂ ಪಾರ್ವೋ ಬಗ್ಗೆ ತಿಳಿದಿರಲಿಲ್ಲವಂತೆ. ಇದೇ ಕಾರಣಕ್ಕೆ ಅನುಪಮಾ ಈ ವಿಡಿಯೋ ಮಾಡಿದ್ದು, ರ್ಶವಾನ ಪ್ರೇಮಿಗಳಿಗೆ ಈ ವೈರಸ್​ನಿಂದ ನಾಯಿಗಳನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.

Nikhil Kumaraswamy: ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡುತ್ತಿವೆ ನಿಖಿಲ್​ ಕುಮಾರಸ್ವಾಮಿ-ರೇವತಿ ಫೋಟೋಗಳು..! 

ಇದನ್ನೂ ಓದಿ: Rashmika Mandanna: ಲಾಕ್​ಡೌನ್​ನಲ್ಲಿ ಕತೆಗಾರ್ತಿಯಾದ ರಶ್ಮಿಕಾ ಮಂದಣ್ಣ..!
First published: