• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • National Emblem: ಪ್ರಕಾಶ್ ರೈ vs ಅನುಪಮ್ ಖೇರ್; ಭಾರೀ ಜಿದ್ದಾಜಿದ್ದಿಗೆ ಕಾರಣವಾದ ರಾಷ್ಟ್ರೀಯ ಲಾಂಛನ

National Emblem: ಪ್ರಕಾಶ್ ರೈ vs ಅನುಪಮ್ ಖೇರ್; ಭಾರೀ ಜಿದ್ದಾಜಿದ್ದಿಗೆ ಕಾರಣವಾದ ರಾಷ್ಟ್ರೀಯ ಲಾಂಛನ

ಪ್ರಕಾಶ್ ರೈ vs ಅನುಪಮ್ ಖೇರ್

ಪ್ರಕಾಶ್ ರೈ vs ಅನುಪಮ್ ಖೇರ್

ಇತ್ತ ನಟ ಅನುಪಮ್ ಖೇರ್ ಸಿಂಹಕ್ಕೆ  ಹಲ್ಲುಗಳು ಇರುವುದು ಸಹಜ.  ಅಲ್ಲದೇ ತನ್ನ ಹಲ್ಲುಗಳನ್ನು ಸಿಂಹ ಪ್ರದರ್ಶಿಸುವುದು ಸಹಜ ಅಷ್ಟೇ ಸಹಜ ಎಂದು ವ್ಯಂಗ್ಯ ಮಾಡಿದ್ದಾರೆ. 

 • Share this:

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪ (National Emblem Issue) ಅನಾವರಣಗೊಳಿಸಿದ ನಂತರ ವಿವಾದ ಹೊತ್ತಿಕೊಂಡಿದೆ. ರಾಷ್ಟ್ರೀಯ ಲಾಂಛನದ ಸೌಮ್ಯ ರೂಪವನ್ನು ಉಗ್ರ ರೂಪವನ್ನಾಗಿ ಪರಿವರ್ತಿಸಲಾಗಿದೆ ಎಂದು ವಿಪಕ್ಷಗಳು ಟೀಕಿಸಿದ್ದುವು. ಇದೀಗ ನಟ ಪ್ರಕಾಶ್ ರೈ (Prakash Rai) ಸಹ ರಾಷ್ಟ್ರ ಲಾಂಛನದ ಹೊಸ ಶಿಲ್ಪದ ಬಗ್ಗೆ ಆಕ್ಷೇಪ ತೆಗೆದಿದ್ದಾರೆ.   ನಾವು ಎತ್ತ ಸಾಗುತ್ತಿದ್ದೇವೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿರುವ ಪ್ರಕಾಶ್ ರೈ #justasking ಹ್ಯಾಷ್​ಟ್ಯಾಗ್​ನಡಿ ಪ್ರಶ್ನೆ ಎತ್ತಿದ್ದಾರೆ. ಆದರೆ ಮತ್ತೋರ್ವ ಖ್ಯಾತ ನಟ ಅನುಪಮ್ ಖೇರ್ (Anupam Kher) ರಾಷ್ಟ್ರ ಲಾಂಛನದ ಹೊಸ ಶಿಲ್ಪವನ್ನು ಬೆಂಬಲಿಸಿದ್ದಾರೆ. 


ಶ್ರೀರಾಮ, ಹನುಮಂತ ಮತ್ತು ರಾಷ್ಟ್ರೀಯ ಲಾಂಛನದ ಮೊದಲಿನ ರೂಪ- ಇಂದಿನ ರೂಪ ಎಂಬ ಕ್ಯಾಪ್ಷನ್ ನೀಡಿ ಫೋಟೋವೊಂದನ್ನು ಹಂಚಿಕೊಂಡು ನಾವು ಎತ್ತ ಸಾಗುತ್ತಿದ್ದೇವೆ ಎಂದು ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಇತ್ತ ನಟ ಅನುಪಮ್ ಖೇರ್ ಸಿಂಹಕ್ಕೆ  ಹಲ್ಲುಗಳು ಇರುವುದು ಸಹಜ.  ಅಲ್ಲದೇ ತನ್ನ ಹಲ್ಲುಗಳನ್ನು ಸಿಂಹ ಪ್ರದರ್ಶಿಸುವುದು ಸಹಜ ಅಷ್ಟೇ ಸಹಜ ಎಂದು ವ್ಯಂಗ್ಯ ಮಾಡಿದ್ದಾರೆ.


ಮೊದಲಿಂದಲೂ ಪ್ರಶ್ನೆ ಎತ್ತುತ್ತಿದ್ದ ಪ್ರಕಾಶ್ ರೈ
ಈ ಮುಂಚಿನಿಂದಲೂ   #justasking ಹ್ಯಾಷ್​ಟ್ಯಾಗ್​ನಡಿ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ವಿರುದ್ಧ ವಿವಿಧ ಪ್ರಶ್ನೆಗಳನ್ನು ಕೇಳುತ್ತಲೆ ಬಂದಿದ್ದಾರೆ ನಟ ಪ್ರಕಾಶ್ ರೈ. ಇದಿಗ ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪ ಅನಾವರಣದ ಕುರಿತು ಸಹ ಅವರ ದನಿಯೆತ್ತಿದ್ದಾರೆ.ರಾಷ್ಟ್ರೀಯ ಲಾಂಛನದ ವಿಶೇಷತೆಗಳೇನು?
ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ತಯಾರಿಸಲಾಗಿದೆ. ಇದು ಒಟ್ಟು 9500 ಕೆಜಿ ತೂಕ ಮತ್ತು 6.5 ಮೀ ಎತ್ತರವಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜುಲೈ 12 ರಂದು ಬೆಳಗ್ಗೆ ನೂತನ ಸಂಸತ್ ಭವನದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ತಿನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶ್ರಮಜೀವಿಗಳೊಂದಿಗೆ ಸಂವಾದ ನಡೆಸಿದ್ದರು.


ಇದನ್ನೂ ಓದಿ: National Emblem Expression: ರಾಷ್ಟ್ರೀಯ ಲಾಂಛನದ ಸೌಮ್ಯ ರೂಪ vs ಉಗ್ರ ರೂಪ; ಏನಿದು ವಿಪಕ್ಷಗಳ ಹೊಸ ಟೀಕೆ?

ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ತಯಾರಿಸಲಾಗಿದೆ. ಇದು ಒಟ್ಟು 9500 ಕೆಜಿ ತೂಕ ಮತ್ತು 6.5 ಮೀ ಎತ್ತರವಿದೆ. ಹೊಸ ಪಾರ್ಲಿಮೆಂಟ್ ಕಟ್ಟಡದ ಸೆಂಟ್ರಲ್ ಫೋಯರ್ ಮೇಲ್ಭಾಗದಲ್ಲಿ ರಾಷ್ಟ್ರೀಯ ಲಾಂಛನವನ್ನು ಸ್ಥಾಪಿಸಲಾಗಿದೆ.


6,500 ಕೆ.ಜಿ ಉಕ್ಕಿನ ರಕ್ಷಣಾ ಕವಚ!
ರಾಷ್ಟ್ರೀಯ ಲಾಂಛನಕ್ಕೆ 6,500 ಕೆ.ಜಿ ತೂಕದ ಉಕ್ಕಿನ ರಕ್ಷಣಾ ಕವಚವನ್ನು ನಿರ್ಮಿಸಲಾಗಿದೆ. ಹೊಸ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಬಿತ್ತರಿಸುವ ಪರಿಕಲ್ಪನೆಯ ರೇಖಾಚಿತ್ರ ಮತ್ತು ಪ್ರಕ್ರಿಯೆಯನ್ನು ಒಟ್ಟು 8 ಹಂತಗಳಲ್ಲಿ ನಡೆಸಲಾಗಿದೆ.


ಇದನ್ನೂ ಓದಿ: National Emblem: ಹೊಸ ಸಂಸತ್ ಭವನದ ಬಳಿ ರಾಷ್ಟ್ರೀಯ ಲಾಂಛನ; ಫೋಟೊ ನೋಡಿ


ಕ್ಲೇ ಮಾಡೆಲಿಂಗ್/ಕಂಪ್ಯೂಟರ್ ಗ್ರಾಫಿಕ್​ನಿಂದ ಕಂಚಿನ ಎರಕಹೊಯ್ದ ಮತ್ತು ಪಾಲಿಶ್ ಮಾಡುವ ಹಂತವನ್ನು ಸಹ ಹೊಂದಿದೆ.

top videos


  ತೃಣಮೂಲ ಕಾಂಗ್ರೆಸ್​ ನಾಯಕನಿಂದಲೂ ಟೀಕೆ
  ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪದ ಚಿತ್ರವನ್ನು ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್​ನ ರಾಜ್ಯಸಭಾ ಸದಸ್ಯ ಜವ್ಹಾರ್ ಸಿರ್ಕಾರ್, ರಾಷ್ಟ್ರ ಲಾಂಛನದ ಹಳೆಯ ಮತ್ತು ಹೊಸ ಆವೃತ್ತಿಯ ಚಿತ್ರಗಳನ್ನು ಅಕ್ಕಪಕ್ಕದಲ್ಲಿ ಹಂಚಿಕೊಂಡಿರುವ ಅವರು ಟ್ವೀಟ್ ಮಾಡಿದ್ದಾರೆ, "ಎಡಭಾಗದಲ್ಲಿ ರಾಷ್ಟ್ರೀಯ ಲಾಂಛನದ ಮೊದಲ ರೂಪವಿದೆ. ಅದು ಆಕರ್ಷಕವಾಗಿದೆ. ಗೌರವಾನ್ವಿತ ಅನಿಸುವಂತಿದೆ. ಬಲಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಹೊಸ ಶಿಲ್ಪವಾಗಿದೆ. ಇದನ್ನು ತಕ್ಷಣ ಬದಲಾಯಿಸಬೇಕು ಎಂದು ಟೀಕಿಸಿ ಒತ್ತಾಯಿಸಿದ್ದಾರೆ.

  First published: