ಅನುಭವ (Anubhava) ಸಿನಿಮಾ (Cinema) ಖ್ಯಾತಿ ಕನ್ನಡ ಚಿತ್ರರಂಗದ ನಟಿ (Actress)ಅಭಿನಯ (Abhinaya) ಅವರಿಗೆ ಜೈಲು ಶಿಕ್ಷೆಯಾಗಿದೆ. ಸ್ಯಾಂಡಲ್ವುಡ್ ನಟಿ ಅಭಿನಯ ಅವರಿಗೆ 2 ವರ್ಷ ಜೈಲು (Jail) ಶಿಕ್ಷೆ ವಿಧಿಸಲಾಗಿದೆ. ವರದಕ್ಷಿಣೆ ಕಿರುಕುಳ ಕೇಸ್ನಲ್ಲಿ ನಟಿ ಜೈಲು ಸೇರಿದ್ದಾರೆ. ನಟಿ ಅಭಿನಯ ಅವರು ಕನ್ನಡ ಚಿತ್ರರಂಗದ ಹಿರಿಯ ನಟಿ. ಖ್ಯಾತ ಕಿರುತೆರೆ ನಟಿಯಾಗಿಯೂ (Actress) ಇವರು ಗುರುತಿಸಿಕೊಂಡಿದ್ದಾರೆ. 1983 ರಲ್ಲಿ ಕಾಶಿನಾಥ್ ಅವರ ಸೂಪರ್ ಹಿಟ್ ಚಿತ್ರ`ಅನುಭವ' ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಇವರು ನಟಿಸಿದ `ಹೋದೆಯಾ ದೂರ ಓ ಜೊತೆಗಾರ' ಸಾಂಗ್ (Song) ಸಖತ್ ಹಿಟ್ ಆಗಿತ್ತು.
ಹೈಕೋರ್ಟ್ ನ್ಯಾ.ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ. ಪೋಷಕರೊಂದಿಗೆ ಸೇರಿಕೊಂಡು ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಇವರ ಮೇಲಿತ್ತು.
ಅಭಿನಯ 1971ರಲ್ಲಿ ಜನಿಸಿದರು. ಅವರು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿ ಗುರುತಿಸಿಕೊಂಡರು. 1984 ರಲ್ಲಿ ಕಾಶಿನಾಥ್ ನಿರ್ದೇಶಿಸಿದ ಮತ್ತು ಅಭಿನಯಿಸಿದ ಅನುಭವ ಚಲನಚಿತ್ರದಲ್ಲಿ ಅವರ ತಮ್ಮ ಅಭಿನಯಕ್ಕಾಗಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ಈ ಸಿನಿಮಾದಿಂದಲೇ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಸಿನಿಮಾ ಹಿಟ್ ಆದ ನಂತರ ಅವರು 1983 - 84 ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಈ ಸಿನಿಮಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ತಂದುಕೊಟ್ಟಿತು.
ಅಭಿನಯ ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದರು. ಅವರು ಬಾಲ ಕಲಾವಿದೆಯಾಗಿ ಭಾಗ್ಯವಂತ, ದೇವತಾ ಮನುಷ್ಯ ಮತ್ತು ಬೆಂಕಿಯ ಬಾಲೆಯಲ್ಲಿ ನಟಿಸಿದ್ದಾರೆ. 13 ನೇ ವಯಸ್ಸಿನಲ್ಲಿ ಅನುಭವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು. ಅದು ಅವರ ಕೆರಿಯರ್ನಲ್ಲಿ ಸಿಕ್ಕಿದ ದೊಡ್ಡ ಬ್ರೇಕ್. ಈ ಸಿನಿಮಾ ಭಾರೀ ಯಶಸ್ಸನ್ನು ಕಂಡಿತು.
ಇದನ್ನೂ ಓದಿ: Appu Tatoo: ಅಭಿಮಾನಿಗಳೇ ನನ್ನ ದೇವರು ಎಂದು ಟ್ಯಾಟೂ ಹಾಕಿಸಿಕೊಳ್ತೀನಿ, ಅಪ್ಪು ಹೇಳಿದ ಈ ಮಾತು ನೆರವೇರಲೇ ಇಲ್ಲ!
ಅಭಿನಯ 1980 ಮತ್ತು 1990 ರ ದಶಕದುದ್ದಕ್ಕೂ ಅನೇಕ ಹಿಟ್ ಚಲನಚಿತ್ರಗಳಲ್ಲಿ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಸ್ವಲ್ಪ ಸಮಯದ ನಂತರ, ಅವರು 2019 ರಲ್ಲಿ 'ಕ್ರಶ್' ಚಿತ್ರದ ಮೂಲಕ ಬೆಳ್ಳಿ ಪರದೆಗೆ ಮರಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ