• Home
  • »
  • News
  • »
  • entertainment
  • »
  • Anubandha Awards: ಅನುಬಂಧದಲ್ಲಿ ಅಪ್ಪು ನೆನಪು! ರಮ್ಯಾ ಭಾವುಕ, ಕಣ್ಣೀರಿಟ್ಟ ಕಿರುತೆರೆ ಕಲಾವಿದರು

Anubandha Awards: ಅನುಬಂಧದಲ್ಲಿ ಅಪ್ಪು ನೆನಪು! ರಮ್ಯಾ ಭಾವುಕ, ಕಣ್ಣೀರಿಟ್ಟ ಕಿರುತೆರೆ ಕಲಾವಿದರು

ಅನುಬಂಧ ಕಾರ್ಯಕ್ರಮ

ಅನುಬಂಧ ಕಾರ್ಯಕ್ರಮ

ಅನುಬಂದ ಅವಾರ್ಡ್ಸ್ 2022 ಕಾರ್ಯಕ್ರಮದಲ್ಲಿ ಅಪ್ಪು ಅವರನ್ನು ನೆನಪಿಸಿಕೊಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. ಅಪ್ಪು ಅವರ ಹಳೆಯ ವಿಡಿಯೋ ತೋರಿಸಿದ್ದು ನಟಿ ರಮ್ಯಾ ಭಾವುಕರಾಗಿದ್ದಾರೆ.

  • Share this:

ಅನುಬಂಧ ಅವಾರ್ಡ್ಸ್ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು ಕಲರ್ಸ್ ಕುಟುಂಬ ಈ ವೇದಿಕೆಯಲ್ಲಿ ಸಂಭ್ರಮಿಸಲಿದೆ. ಈ ಬಾರಿ ಅವಾರ್ಡ್​ ಕಾರ್ಯಕ್ರಮಕ್ಕೆ ಹೆಚ್ಚಿನ ತಾರೆಗಳು ಬರಲಿದ್ದು ಕಳೆ ಹೆಚ್ಚಲಿದೆ. ನಟಿ ರಮ್ಯಾ ಅವರು ಕಲರ್ಸ್ ಅನುಬಂಧ ಅವಾರ್ಡ್ಸ್​​ನಲ್ಲಿ ಭಾಗವಹಿಸಲಿದ್ದಾರೆ. ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್ (Anubandha Awards)​ ಒಂದು ದೊಡ್ಡ ಫ್ಯಾಮಿಲಿ ಫಂಕ್ಷನ್ ಇದ್ದಂತೆ. ಕಿರುತೆರೆಯ (Small Screen) ತಾರೆಗಳೆಲ್ಲ ಸೇರಿಕೊಂಡು ಸಂಭ್ರಮದಿಂದ ಅನುಬಂಧ ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತಾರೆ. ಇದರೊಂದಿಗೆ ಹಿರಿತೆರೆಯ ತಾರೆಗಳು ಬಂದು ಸಾಥ್ ಕೊಡುತ್ತಾರೆ. ಎಲ್ಲ ಕಾರ್ಯಕ್ರಮಗಳ ಸ್ಪರ್ಧಿಗಳು, ಸೀರಿಯಲ್ ನಟ, ನಟಿಯರು ಒಂದಾಗಿ ಡ್ಯಾನ್ಸ್, ಮಾತು, ತರಲೆ, ತಮಾಷೆ ಎಂದು ಇಡೀ ಕರ್ನಾಟಕದ ಜನರನ್ನು ರಂಜಿಸುತ್ತಾರೆ. ಈಗ ಈ ವರ್ಷದ ಅನುಬಂಧ ಅವಾರ್ಡ್ಸ್​ ಸಮಯ ಬಂದಿದೆ. ಕಲರ್ಸ್ (Colors) ಕಾರ್ಯಕ್ರಮದ ಪ್ರೋಮೋ (Promo) ಕೂಡಾ ಶೇರ್ ಮಾಡಿದೆ. ಒಂದು ಕಡೆ ಬಿಗ್​ಬಾಸ್ ಶುರುವಾಗುತ್ತಿದ್ದು ಇನ್ನೊಂದು ಕಡೆ ಅನುಬಂಧದ ಸಂಭ್ರಮ ತುಂಬಿದೆ. ಒಟ್ಟಾರೆಯಾಗಿ ಕಲರ್ಸ್ ವೀಕ್ಷಕರಿಗೆ ಮನರಂಜನೆಯ ಹಬ್ಬವೋ ಹಬ್ಬ.


ಅದೇ ರೀತಿ ಈ ವೇದಿಕೆಯಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೂ ಗೌರವ ಸೂಚಿಸುವ ಕಾರ್ಯ ನಡೆಯಲಿದೆ. ವೇದಿಕೆಯಲ್ಲಿ ಅಪ್ಪು ನೆನಪು ಮರುಕಳಿಸಲಿದ್ದು ಕಲರ್ಸ್ ಕನ್ನಡ ಇದರ ಪ್ರೋಮೋ ಶೇರ್ ಮಾಡಿದೆ.




ಪ್ರೋಮೋದಲ್ಲಿ ವಿಜಯ್ ರಾಘವೇಂದ್ರ ಅವರ ನಿರೂಪಣೆ ಹಾಗೂ ಅನುಶ್ರೀ ಅವರ ಧ್ವನಿಯನ್ನು ಕೇಳಬಹುದು. ಅಪ್ಪು ಅವರನ್ನು ವೇದಿಕೆಯಲ್ಲಿ ನೆನಪಿಸಿಕೊಳ್ಳಲಾಗಿದ್ದು ಅವರ ಹಳೆಯ ವಿಡಿಯೋವನ್ನು ಪ್ರದರ್ಶಿಸಲಾಗಿದೆ.


ದೀಪ ಬೆಳಗಿ ಗೌರವ


ಈ ಸಂದರ್ಭದಲ್ಲಿ ಪುನೀತ್ ಅವರ ಭಾವಚಿತ್ರ ಇರುವಂತಹ ಕಪ್​ನಲ್ಲಿ ದೀಪ ಬೆಳಗುತ್ತಿದ್ದು ಇದನ್ನು ಎಲ್ಲಾ ನಟ, ನಟಿಯರು ತಮ್ಮ ಕೈಯಲ್ಲಿ ಹಿಡಿದು ಎದ್ದು ನಿಂತು ಅಗಲಿದ ನಟನಿಗೆ ಗೌರವ ಸಲ್ಲಿಸಿದ್ದಾರೆ. ಈ ಸಂದರ್ಭ ನಟಿ ರಮ್ಯಾ ಅವರು ಭಾವುಕರಾಗುತ್ತಿರುವುದನ್ನು ಕೂಡಾ ವಿಡಿಯೋ ತೋರಿಸುತ್ತದೆ. ಇಷ್ಟೇ ಅಲ್ಲದೆ ಇತರ ಕಲಾವಿದರು ಕೂಡಾ ಅಪ್ಪು ಹಳೆಯ ವಿಡಿಯೋ ನೋಡಿ ಭಾವುಕರಾಗಿದ್ದಾರೆ.




ಡಾಲಿ, ಮಾಲಾಶ್ರೀ, ಪ್ರಿಯಾಂಕ ಉಪೇಂದ್ರ ಸೇರಿ ಇನ್ನೂ ಹಲವರು


ಅನುಬಂಧ ಕಾರ್ಯಕ್ರಮದಲ್ಲಿ ಸೀರಿಯಲ್ ತಾರೆಗಳನ್ನು ನೋಡಲು ಜನರೆಷ್ಟು ಕುತೂಹಲದಲ್ಲಿರುತ್ತಾರೋ ಅದೇ ರೀತಿ ಕಿರುತೆರೆ ಕಲಾವಿದರು ಬೆಳ್ಳಿತೆರೆಯ ತಾರೆಗಳನ್ನು ನೋಡಲು, ಅವರೊಂದಿಗೆ ಮಾತನಾಡಲು, ಫೋಟೋ ಕ್ಲಿಕ್ಕಿಸಿಕೊಳ್ಳಲು ಕಾಯುತ್ತಾರೆ. ಈ ಬಾರಿಯೂ ಅನುಬಂಧಕ್ಕೆ ಬೆಳ್ಳಿತೆರೆಯ ಕಲಾವಿದರ ದಂಡೇ ಬರುತ್ತಿದೆ.


ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆ


ಈ ವಿಡಿಯೋಗೆ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಈಗಾಗಲೇ 899 ಜನರು ಕಮೆಂಟ್ ಮಾಡಿ ಪ್ರೀತಿ ತೋರಿಸಿದ್ದಾರೆ. ಪ್ರೋಮೋ ನೋಡಿದ ಜನರು ಅಪ್ಪು ಅವರನ್ನು ನೆನಪಿಸಿಕೊಂಡು ಮಿಸ್ ಯೂ ಎಂದು ಕಮೆಂಟ್ ಮಾಡುತ್ತಿದ್ದಾರೆ.


ಅಕ್ಟೊಬರ್ 7,8,9 ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದ್ದು ಈಗಾಗಲೇ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ಜೊತೆ ಕಲರ್ಸ್ ಕಾರ್ಯಕ್ರಮದ ಕೆಲವು ಪ್ರೋಮೋಗಳನ್ನು ಕೂಡಾ ಕೈಬಿಡುತ್ತಿದ್ದು ಇದು ಜನರ ಕುತೂಹಲ ಕೆರಳಿಸಲು ಕಾರಣವಾಗಿದೆ.


ಇದನ್ನೂ ಓದಿ: Anubandha Award-2022: ಮತ್ತೆ ಬರ್ತಿದೆ ಅನುಬಂಧ ಅವಾರ್ಡ್​, ಯಾರಾಗ್ತಾರೆ ಮನ ಮೆಚ್ಚಿದ ನಟಿ?




ಮನೆ ಮೆಚ್ಚಿದ ಪ್ರಶಸ್ತಿ


ಅನುಬಂಧ ಪ್ರಶಸ್ತಿ ಕಾರ್ಯಕ್ರಮದಲ್ಲಿ ಎರಡು ರೀತಿ ಅವಾರ್ಡ್‍ಗಳನ್ನು ನೀಡಲಾಗುತ್ತೆ. ಒಂದು ಮನೆ ಮೆಚ್ಚಿದ ಅವಾರ್ಡ್. ಇನ್ನೊಂದು ಜನ ಮೆಚ್ಚಿದ ಅವಾರ್ಡ್. ಮನೆ ಮೆಚ್ಚಿದ ಅವಾರ್ಡ್‍ನ್ನು ಮನೆಯವರೇ ಅಂದ್ರೆ, ಬೇರೆ ಬೇರೆ ಧಾರಾವಾಹಿಯ ಕಲಾವಿದರು ಸೇರಿ ಒಬ್ಬರನ್ನು ಬೆಸ್ಟ್ ಎಂದು ಸೆಲೆಕ್ಟ್ ಮಾಡುವುದು. ಯಾರಿಗೆ ಹೆಚ್ಚು ಮತ ಬಂದಿರುತ್ತೋ, ಅವರು ಮನೆ ಮೆಚ್ಚಿದ ಅವಾರ್ಡ್ ಪಡೆಯುತ್ತಾರೆ.


ಇದನ್ನೂ ಓದಿ: Anubandha Awards: ಅನುಬಂಧ ಕಾರ್ಯಕ್ರಮದಲ್ಲಿ ಮೋಹಕ ತಾರೆ ರಮ್ಯಾ! ಫ್ಯಾನ್ಸ್ ಥ್ರಿಲ್


ಜನ ಮೆಚ್ಚಿದ ಅವಾರ್ಡ್


ಇನ್ನೊಂದು ಜನ ಮೆಚ್ಚಿದ ಅವಾರ್ಡ್. ಇದರಲ್ಲಿ ಅವಾರ್ಡ್‍ನ ಆಯ್ಕೆಯನ್ನು ಜನಗಳಿಗೆ ಬಿಡಲಾಗುತ್ತೆ. ತಮ್ಮ ನೆಚ್ಚಿನ ನಟ, ನಟಿ, ಜೋಡಿಗೆ ವೋಟ್ ಅವಕಾಶವನ್ನು ಜನರಿಗೆ ನೀಡಲಾಗುತ್ತೆ. ಯಾರಿಗೆ ಹೆಚ್ಚು ವೋಟ್ ಬರುತ್ತೋ, ಅವರಿಗೆ ಪ್ರಶಸ್ತಿ ಲಭಿಸುತ್ತೆ. ಅಂತೆಯೇ ಅವರು ಜನ ಮೆಚ್ಚಿದ ಪಾತ್ರಕ್ಕೆ ಭಾಜನರಾಗುತ್ತಾರೆ.

Published by:Divya D
First published: