ಇಸ್ರೇಲ್ ರಾಷ್ಟ್ರಗೀತೆಯ ಟ್ಯೂನ್​ ಕದ್ದ ಅನು ಮಲಿಕ್​: ಸಂಗೀತ ನಿರ್ದೇಶಕನನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು..!

ಕಳೆದ ಮೂರು ದಶಕಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿರುವ ಅವರಿಗೆ ರಾಷ್ಟ್ರಪ್ರಶಸ್ತಿ, ಫಿಲ್ಮ್​ಫೇರ್​ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ. ಆದರೆ ಅದಕ್ಕೂ ಹೆಚ್ಚಾಗಿ ವಿವಾದಗಳಿಂದ ಹಾಗೂ ಮ್ಯೂಸಿಕ್ ಕಾಪಿ ಮಾಡುವ ಆರೋಪಗಳ ಮೂಲಕವೇ ಅನು ಮಲಿಕ್ ಹೆಚ್ಚು ಸದ್ದು ಮಾಡಿದ್ದಾರೆ. 

ಸಂಗೀತ ನಿರ್ದೇಶಕ ಅನು ಮಲಿಕ್​

ಸಂಗೀತ ನಿರ್ದೇಶಕ ಅನು ಮಲಿಕ್​

  • Share this:
ಒಂದು ಭಾಷೆಯ ಒಂದು ಹಾಡಿನ ಸಂಗೀತ ಬೇರಾವುದೋ ದೇಶದ ಇನ್ನಾವುದೋ ಭಾಷೆಯ ಮತ್ಯಾವುದೋ ಹಾಡಿನ ಸಂಗೀತದಂತೆ ಕೇಳಿಬರುವುದು ಸಾಮಾನ್ಯ. ಇದನ್ನು ಇಂದಿನ ಸಂಗೀತ ನಿರ್ದೇಶಕರು ಸ್ಫೂರ್ತಿ ಪಡೆದಿದ್ದೇವೆ, ಕಾಪಿ ಮಾಡಿಲ್ಲ ಅಂತ ಅಲ್ಲಗಳೆಯುವುದೂ ಗೊತ್ತಿರುವ ವಿಷಯವೇ. ಆದರೆ ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕನೊಬ್ಬ ಮತ್ತೊಂದು ದೇಶದ ರಾಷ್ಟ್ರಗೀತೆಯನ್ನೇ ಕಾಪಿ ಮಾಡಿ ಸಿನಿಮಾ ಹಾಡು ಮಾಡಿ ಸಿಕ್ಕಿ ಬಿದ್ದಿದ್ದಾರೆ. ಅದೂ ಬರೋಬ್ಬರಿ 25 ವರ್ಷಗಳ ಬಳಿಕ ಅನ್ನೋದೇ ಇಲ್ಲಿ ಗಮನಿಸಬೇಕಾದ ವಿಷಯ! ಅನು ಮಲಿಕ್... ಬಾಲಿವುಡ್‌ನ ಹೆಸರಾಂತ ಸಂಗೀತ ನಿರ್ದೇಶಕ. ಕಳೆದ ಮೂರು ದಶಕಗಳಲ್ಲಿ ನೂರೈವತ್ತಕ್ಕೂ ಹೆಚ್ಚು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿರುವ ಅವರಿಗೆ ರಾಷ್ಟ್ರಪ್ರಶಸ್ತಿ, ಫಿಲ್ಮ್​ಫೇರ್​ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ. ಆದರೆ ಅದಕ್ಕೂ ಹೆಚ್ಚಾಗಿ ವಿವಾದಗಳಿಂದ ಹಾಗೂ ಮ್ಯೂಸಿಕ್ ಕಾಪಿ ಮಾಡುವ ಆರೋಪಗಳ ಮೂಲಕವೇ ಅನು ಮಲಿಕ್ ಹೆಚ್ಚು ಸದ್ದು ಮಾಡಿದ್ದಾರೆ. 

ಹೌದು, 2018ರಲ್ಲಿ ಸಂಗೀತ ನಿರ್ದೇಶಕ ಅನು ಮಲಿಕ್ ವಿರುದ್ಧ ಗಾಯಕಿಯರಾದ ಶ್ವೇತಾ ಪಂಡಿತ್, ಸೋನ ಮೊಹಾಪಾತ್ರ, ನೇಹಾ ಭಾಸಿನ್ ಸೇರಿದಂತೆ ಹಲವರು ತಮ್ಮೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದರು. ಇದರಿಂದಾಗಿ ಸಿಂಗಿಂಗ್ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿದ್ದ ಅನು ಮಲಿಕ್ ಅದರಿಂದ ದೂರ ಸರಿಯಬೇಕಾಗಿತ್ತು. ಇನ್ನು 1990ರ ದಶಕದಲ್ಲಿ ಅನು ಮಲಿಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಮೇಡ್ ಇನ್ ಇಂಡಿಯಾ ಖ್ಯಾತಿಯ ಅಲಿಶಾ ಚಿನಾಯ್ ಕೂಡ ಅವರ ಮೇಲಿನ ಆರೋಪಗಳಿಗೆ ಧ್ವನಿಗೂಡಿಸಿದ್ದರು.ಇಂತಹ ಅನು ಮಲಿಕ್ ಅವರ ಮೇಲೆ ಪ್ರಾರಂಭದಿಂದಲೂ ಬೇರೆ ದೇಶಗಳ ಸಂಗೀತಗಾರರ ಮ್ಯೂಸಿಕ್‌ ಅನ್ನು ಕಾಪಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇದ್ದವು. ಆದರೆ ಪ್ರತಿ ಬಾರಿಯೂ ಅನು ಮಲಿಕ್ ಸಂಗೀತದಲ್ಲಿ ಇರುವುದು ಏಳು ಸ್ವರಗಳಷ್ಟೇ. ಆ ಲೆಕ್ಕದಲ್ಲಿ ನಾನೊಬ್ಬನೇ ಅಲ್ಲ, ಎಲ್ಲರ ಮ್ಯೂಸಿಕ್ ಕೂಡ ಕಾಪಿಯೇ ಆಗಿದೆ ಎಂದು ನುಣುಚಿಕೊಂಡುಬಿಡುತ್ತಿದ್ದರು.  ಈಗ ಮತ್ತೊಮ್ಮೆ, ಮಗದೊಮ್ಮೆ ಮ್ಯೂಸಿಕ್ ಕಾಪಿ ಮಾಡಿ ಸಿಕ್ಕಿಬಿದ್ದಿದ್ದಾರೆ ಸಂಗೀತ ನಿರ್ದೇಶಕ ಅನು ಮಲಿಕ್. ಆದರೆ ಈ ಬಾರಿ ಬೇರೆ ಸಂಗೀತಗಾರರ ಮ್ಯೂಸಿಕ್ ಕಾಪಿ ಮಾಡದೇ, ಇಸ್ರೇಲ್ ದೇಶದ ರಾಷ್ಟ್ರಗೀತೆಯ ಮ್ಯೂಸಿಕ್‌ಅನ್ನೇ ಕಾಪಿ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: Bigg Boss Kannada Season 8: ಮಂಜುಗಾಗಿ ಬಿಗ್ ಬಾಸ್​ ಬಳಿ ಸ್ಪೆಷಲ್ ವಿಶ್​ ಮಾಡಿದ ದಿವ್ಯಾ ಸುರೇಶ್​..!

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಇಸ್ರೇಲ್ ದೇಶದ ಆರ್ಟೆಮ್ ಡೋಲ್ಗೊಪ್ಯಾಟ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಇಸ್ರೇಲ್ ದೇಶದ ಮೊದಲ ಚಿನ್ನದ ಪದಕ ಎಂಬುದೇ ವಿಶೇಷ. ಚಿನ್ನದ ಪದಕ ಗೆದ್ದ ಗೌರವಾರ್ಥವಾಗಿ ಆ ದೇಶದ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಇಸ್ರೇಲ್ ದೇಶದ ರಾಷ್ಟ್ರಗೀತೆಯನ್ನೂ ಪ್ಲೇ ಮಾಡಲಾಗಿದೆ. ಆಗ ನೋಡುತ್ತಿದ್ದ ಭಾರತೀಯರಿಗೆ ಶಾಕ್. ಯಾಕೆಂದರೆ ಇಸ್ರೇಲ್ ದೇಶದ ರಾಷ್ಟ್ರಗೀತೆಯ ಹಿನ್ನೆಲೆ ಸಂಗೀತ 1996ರಲ್ಲಿ ತೆರೆಗೆ ಬಂದ ಬಾಲಿವುಡ್‌ನ ದಿಲ್‌ಜಲೆ ಸಿನಿಮಾದ ಮೇರ ಮುಲ್ಕ್ ಮೇರ ದೇಶ್ ಹಾಡಿನ ಸಂಗೀತದಂತಿದೆ.

ಇದನ್ನೂ ಓದಿ: Dvitva: ದ್ವಿತ್ವ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ಗೆ ನಾಯಕಿಯಾದ ತ್ರಿಷಾ..!

ಹೀಗಾಗಿ ನಿನ್ನೆಯಿಂದ ಅನು ಮಲಿಕ್ ಹಿಂದೆ ಬಿದ್ದಿರುವ ನೆಟ್ಟಿಗರು, ಹಳೆಯ ಎಲ್ಲ ಸಿನಿಮಾಗಳ ಸಂಗೀತವನ್ನೂ ಒಂದೊಂದಾಗಿ ತೆಗೆದು ಸರಿಯಾಗಿಯೇ ಝಾಡಿಸುತ್ತಿದ್ದಾರೆ. ಬರೋಬ್ಬರಿ 150ಕ್ಕೂ ಹೆಚ್ಚು ಹಾಡುಗಳನ್ನು ಅನು ಮಲಿಕ್ ಕಾಪಿ ಮಾಡಿ ಸಂಗೀತ ಮಾಡಿದ್ದಾರೆ ಎಂದು ಲಿಸ್ಟ್ ಮಾಡಿ ಸಾಕ್ಷಿ ಸಮೇತ ಕ್ಲಾಸ್ ತೆಗೆದುಕೊಂಡಿದ್ದಾರೆ.
Published by:Anitha E
First published: