RRR Movie: ಆರ್‌ಆರ್‌ಆರ್‌ ಅಭಿಮಾನಿಗಳಿಗೆ Good News, ಮಾರ್ಚ್ 14ರಂದು ಕಾದಿದೆ ಬಿಗ್ ಸರ್‌ಪ್ರೈಸ್

ಆರ್‌ಆರ್‌ಆರ್‌ ಟೀಂ ಈಗ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ಕೊಡ್ತಿದೆ. ಮಾರ್ಚ್ 14ರಂದೇ ಆರ್‌ಆರ್‌ಆರ್‌ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಸಿಗಲಿದೆ ಅಂತ ಚಿತ್ರತಂಡ ಹೇಳಿದೆ. ಹಾಗಿದ್ರೆ ಅದೇನಪ್ಪಾ ಗಿಫ್ಟ್, ಅದ್ಯಾವುದಪ್ಪಾ ಸರ್‌ಪ್ರೈಸ್ ಅಂತ ತಿಳಿದುಕೊಳ್ಳಲು ಈ ಸ್ಟೋರಿ ಓದಿ…

ಆರ್‌ಆರ್‌ಆರ್‌ ಸಿನಿಮಾ

ಆರ್‌ಆರ್‌ಆರ್‌ ಸಿನಿಮಾ

  • Share this:
ಭಾರತೀಯ ಚಿತ್ರರಂಗದ (Indian Film Industry)  ಖ್ಯಾತ ನಿರ್ದೇಶಕ (Director) ಎಸ್.ಎಸ್ ರಾಜಮೌಳಿ (S.S. Rajamouli) ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆರ್ ಆರ್ ಆರ್' (RRR) ಸಿನಿಮಾಗಾಗಿ (Cinema) ಚಿತ್ರರಸಿಕರು ಕಾತರದಿಂದ ಎದುರು ನೋಡುತ್ತಿದ್ದಾರೆ. ‘ಬಾಹುಬಲಿ’ (Bahubali) ಹಾಗೂ ‘ಬಾಹುಬಲಿ 2’ (Bahubali 2) ಸಿನಿಮಾ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಜೂ.ಎನ್ ಟಿಆರ್ (Jr. NTR) ಮತ್ತು ರಾಮ್ ಚರಣ್ (Ram Charan) ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ (Bollywood) ನಟರಾದ ಅಜಯ್ ದೇವಗನ್ (Ajay DEvgan), ಆಲಿಯಾ ಭಟ್ (Aalia Bhatt) ಸೇರಿದಂತೆ ಹಲವು ಪ್ರಮುಖ ನಟರು ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ‘ನಾಟು ನಾಟು’ (Natu Natu) ಹಾಡಿನಿಂದ (Song) ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿರುವ ಆರ್‌ಆರ್‌ಆರ್‌ ಟೀಂ (Team), ಈಗ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ (Gift) ಕೊಡ್ತಿದೆ. ಮಾರ್ಚ್ 14ರಂದೇ ಆರ್‌ಆರ್‌ಆರ್‌ ಅಭಿಮಾನಿಗಳಿಗೆ (Fans) ಬಿಗ್ ಸರ್‌ಪ್ರೈಸ್ (Big Surprise) ಸಿಗಲಿದೆ ಅಂತ ಚಿತ್ರತಂಡ ಹೇಳಿದೆ. ಹಾಗಿದ್ರೆ ಅದೇನಪ್ಪಾ ಗಿಫ್ಟ್, ಅದ್ಯಾವುದಪ್ಪಾ ಸರ್‌ಪ್ರೈಸ್ ಅಂತ ತಿಳಿದುಕೊಳ್ಳಲು ಈ ಸ್ಟೋರಿ (Story) ಓದಿ…

ಮತ್ತೆ ಪ್ರಮೋಷನ್ ಕಹಳೆ ಮೊಳಗಿಸಿದ ‘ಆರ್‌ಆರ್‌ಆರ್‌’

ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಷ್ಟರಲ್ಲಾಗಲೇ ತ್ರಿಬಲ್ ಆರ್ ಸಿನಿಮಾ ಬೆಳ್ಳಿ ಪರದೆಯ ಮೇಲೆ ರಾರಾಜಿಸಬೇಕಿತ್ತು. ಆದ್ರೆ ಕೊರೋನಾ ಕಾರಣದಿಂದ ರಿಲೀಸ್ ದಿನಾಂಕ ಪೋಸ್ಟ್ ಪೋನ್ ಮಾಡಲಾಗಿತ್ತು. ಹೀಗಾಗಿ ಮೊದಲು ಎರಡು ಮುಹೂರ್ತ ಅನೌನ್ಸ್ ಮಾಡಿದ್ದರು ರಾಜಮೌಳಿ.

ಬಳಿಕ ಆ ಎರಡು ದಿನಗಳನ್ನು ಬಿಟ್ಟು ಮಾರ್ಚ್ 25ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಾಗಿ ಅನೌನ್ಸ್ ಮಾಡಿದ್ದರು. ಹೊಸ ದಿನಾಂಕ ಘೋಷಣೆ ಬಳಿಕ ಮೌಳಿ ಟೀಂ ಪ್ರಮೋಷನ್ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ಮತ್ತೆ ಪ್ರಮೋಷನ್ ಕಹಳೆ ಮೊಳಗಿಸಲು ಆರ್ ಆರ್ ಆರ್ ಟೀಂ ಸಜ್ಜಾಗಿದೆ.

ಮಾರ್ಚ್ 14ಕ್ಕೆ ಎತ್ತುವ ಜಂಡಾ ಸಾಂಗ್ ರಿಲೀಸ್

ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ದೋಸ್ತಿ, ಹಳ್ಳಿನಾಟು ಹಾಡುಗಳು ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿಸಿದ್ದವು.

ಇದೀಗ ತ್ರಿಬಲ್ ಆರ್ ಅಂಗಳದಿಂದ ಮತ್ತೊಂದು ಸಾಂಗ್ ರಿಲೀಸ್ ಮಾಡುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 14ನೇ ತಾರೀಖಿನಂದು ಎತ್ತುವ ಜಂಡಾ ಹಾಡು ರಿಲೀಸ್ ಮಾಡುವ ಮೂಲಕ ಆರ್ ಆರ್ ಆರ್ ಸಿನಿಮಾದ ಪ್ರಚಾರಕ್ಕೆ ಮತ್ತೆ ರಾಜಮೌಳಿ ಕಹಳೆ ಮೊಳಗಿಸಲಿದ್ದಾರೆ.

ಇದನ್ನೂ ಓದಿ: Pushpa Madness: ಶ್ರೀವಲ್ಲಿಯ ಹಾಡಿಗೆ ಜ್ವಾಲಾ ತಾಯಿ ಹೆಜ್ಜೆ ಹಾಕಿದ ವಿಡಿಯೋ ನೋಡಿ Allu Arjun ಹೀಗೆ ಹೇಳಿದ್ರು

ಈಗಾಗಲೇ ಸದ್ದು ಮಾಡುತ್ತಿದೆ ‘ನಾಟು ನಾಟು’

ಆರ್‌ಆರ್‌ಆರ್‌ ಸಿನಿಮಾದಿಂದ ಈಗಾಗಲೇ ನಾಟು ನಾಟು..’ ಲಿರಿಕಲ್​ ಸಾಂಗ್​ ಬಿಡುಗಡೆ ಆಗಿದೆ. ಈಗಾಗಲೇ ಈ ಹಾಡು ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆದ ಈ ಹಾಡಿನಿಂದಾಗಿ ಚಿತ್ರದ ಮೇಲಿನ ಕ್ರೇಜ್​ ಹೆಚ್ಚಿದೆ.

ಡ್ಯಾನ್ಸ್​ ವಿಚಾರದಲ್ಲಿ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ (Jr NTR) ಒಬ್ಬರಿಗೊಬ್ಬರು ಪೈಪೋಟಿ ನೀಡಿದ್ದಾರೆ. ಅಭಿಮಾನಿಗಳಿಂದ ಈ ಗೀತೆಗೆ ಸಖತ್​ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯಾಗ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೆ ವೀವ್ಸ್​ ಪಡೆದುಕೊಂಡಿದೆ.

ವಿದೇಶಿ ಭಾಷೆಗಳಿಗೂ ಡಬ್ ಆಗಲಿರುವ ಆರ್‌ಆರ್‌ಆರ್‌

ಡಿವಿವಿ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾಗೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ 'ಆರ್‌ಆರ್‌ಆರ್‌' ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್‌ ಭಾಷೆಗಳಿಗೆ ಡಬ್ ಆಗಲಿದೆ.

ಇದನ್ನೂ ಓದಿ: Prabhas: `ರಾಜಾ ಡಿಲಕ್ಸ್’​ ಸಿನಿಮಾದಲ್ಲಿ ಮಾಳವಿಕ ಮೋಹನನ್​​.. ಪ್ರಭಾಸ್​ಗೆ ಜೋಡಿಯಾದ ಮಲಯಾಳಿ ಬೆಡಗಿ!

ಮಾರ್ಚ್‌ 25ಕ್ಕೆ ತೆರೆಗೆ ಅಪ್ಪಳಿಸಲಿದೆ ರಾಜಮೌಳಿ ಸಿನಿಮಾ

ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಮಾರ್ಚ್ 25ರಂದು 2022ರಂದು ವಿಶ್ವದಾದ್ಯಂತ 'ಆರ್‌ಆರ್‌ಆರ್‌' ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದ ಪ್ರತಿಷ್ಠಿತ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್ ಆರ್ ಆರ್ ಆರ್ ಸಿನಿಮಾವನ್ನು ಕರ್ನಾಟಕಲ್ಲಿ ಹಂಚಿಕೆ ಮಾಡಲಿದೆ.
Published by:Annappa Achari
First published: