Puneeth Rajkumar: ‘ಜೇಮ್ಸ್' ಸಿನಿಮಾದಿಂದ ಮತ್ತೊಂದು ಹಾಡು, "ಸಲಾಮ್ ಸೋಲ್ಜರ್" ಎಂದ ಪವರ್ ಸ್ಟಾರ್

“ರಣ ರಣ ರಣ ಕಲಿಯೋ” ಎಂದು ಆರಂಭವಾಗುವ ಈ ಲಿರಿಕಲ್ ಸಾಂಗ್ 3 ನಿಮಿಷ 35 ಸೆಕೆಂಡ್‌ನಷ್ಟಿದೆ. ಸಲಾಂ ಸೋಲ್ಡರ್ ಎಂದಿರುವ ಅಪ್ಪು, ಹಾಡಿನ ತುಂಬಾ ಆರ್ಭಟಿಸಿದ್ದಾರೆ. ಸಾಂಗ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್‌ ಗಿಟ್ಟಿಸುವ ಮೂಲಕ ಹೊಸ ದಾಖಲೆ ಬರೆದಿದೆ.

'ಜೇಮ್ಸ್' ಸಿನಿಮಾದ ಸಾಂಗ್ ರಿಲೀಸ್

'ಜೇಮ್ಸ್' ಸಿನಿಮಾದ ಸಾಂಗ್ ರಿಲೀಸ್

  • Share this:
‘ಪವರ್‌ ಸ್ಟಾರ್‌’ (Power Star) ಅವರನ್ನು ದೈಹಿಕವಾಗಿ ಕಳೆದುಕೊಂಡು, ಕರುನಾಡು ಇನ್ನೂ ಕಣ್ಣೀರಿಡುತ್ತಿದೆ. ಇಂತಹ ಸಮಯದಲ್ಲೇ ನೋವಿನಲ್ಲೂ ಸಂತಸ ಪಡುವಂತ ಸುದ್ದಿಯೊಂದು ಬಂದಿದೆ. ಅವರು ಅಭಿನಯಿಸಿದ (Acting) ಕೊನೆಯ ಸಿನಿಮಾ (Last Cinema) ‘ಜೇಮ್ಸ್‌’ ನಿಂದ (James) ಹೊಸ ಸುದ್ದಿ ಬಂದಿದೆ. ಜೇಮ್ಸ್ ಚಿತ್ರ ತಂಡ ಅಪ್ಪು (Appu) ಅಭಿಮಾನಿಗಳಿಗೆ (Fans) ಇಂದು ಬಿಗ್ ಗಿಫ್ಟ್ (Big Gift) ಕೊಟ್ಟಿದೆ. ಜೊತೆಗೆ ದೇಶ ಕಾಯುವ ಸೈನಿಕರಿಗೂ (Soldiers) ಜೇಮ್ಸ್ ತಂಡ ಸಲಾಂ ಎಂದಿದೆ. ವಿಷ್ಯ ಏನಪ್ಪಾ ಅಂದರೆ ಜೇಮ್ಸ್ ಚಿತ್ರದ ಇನ್ನೊಂದು ಸಾಂಗ್ (Song) ರಿಲೀಸ್ (Release) ಆಗಿದೆ. ಸೈನಿಕನ ಪಾತ್ರದಲ್ಲಿ ಮಿಂಚಿರೋ ಅಪ್ಪು, “ರಣ ರಣ ರಣ ಕಲಿಯೋ” ಅಂತ ಆರ್ಭಟಿಸಿದ್ದಾರೆ.  

ಜೇಮ್ಸ್’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ಸಾಕಷ್ಟು ಸದ್ದು, ಸುದ್ದಿ ಮಾಡುತ್ತಿದೆ. ಸಿನಿಮಾ ರಿಲೀಸ್‌ಗೂ ದಿನಗಣನೆ ಆರಂಭವಾಗಿದೆ. ಇದೀಗ ಜೇಮ್ಸ್ ಚಿತ್ರತಂಡ ಮತ್ತೊಂದು ಸಾಂಗ್‌ ಅನ್ನು ರಿಲೀಸ್ ಮಾಡಿದೆ. ಪಿಆರ್‌ಕೆ ಆಡಿಯೋದ ಯೂಟ್ಯೂಬ್ ಚಾನೆಲ್‌ನಲ್ಲಿ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ.

“ರಣ ರಣ ರಣ ಕಲಿಯೋ” ಎಂದು ಆರ್ಭಟಿಸಿದ ಪವರ್ ಸ್ಟಾರ್

“ರಣ ರಣ ರಣ ಕಲಿಯೋ” ಎಂದು ಆರಂಭವಾಗುವ ಈ ಲಿರಿಕಲ್ ಸಾಂಗ್ 3 ನಿಮಿಷ 35 ಸೆಕೆಂಡ್‌ನಷ್ಟಿದೆ. ಸಲಾಂ ಸೋಲ್ಡರ್ ಎಂದಿರುವ ಅಪ್ಪು, ಹಾಡಿನ ತುಂಬಾ ಆರ್ಭಟಿಸಿದ್ದಾರೆ. ಸಾಂಗ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್‌ ಗಿಟ್ಟಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ಇದನ್ನೂ ಓದಿ: Puneeth Rajkumar: ನನಸಾಗಲಿದೆ ಅಪ್ಪು ಕಂಡ ಕನಸು! ಶಕ್ತಿಧಾಮದಲ್ಲಿ ಶೀಘ್ರದಲ್ಲಿಯೇ ಶುರುವಾಗಲಿದೆ ಶಾಲೆ

ಹಾಡಿಗೆ ದನಿ ನೀಡಿದ ಸಂಜಿತ್ ಹೆಗ್ಡೆ

ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಈ ಹಾಡಿಗೆ ಮ್ಯೂಸಿಕ್ ನೀಡಿದ್ದು ಚರಣ್ ರಾಜ್. ಇನ್ನು ಸಂಜಿತ್ ಹೆಗ್ಡೆ ಹಾಗೂ ಚರಣ್ ರಾಜ್ ಈ ಹಾಡಿಗೆ ದನಿ ನೀಡಿದ್ದಾರೆ.


ಪುನೀತ್ ಜೊತೆ ಘಟಾನುಘಟಿಗಳ ಅಭಿನಯ

ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್‌ ಕುಮಾರ್ ಅವ್ರಿಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ವಿಶೇಷ ಅಂದ್ರೆ ಶಿವರಾಜ್‌ ಕುಮಾ್ರ್, ರಾಘವೇಂದ್ರ ರಾಜ್‌ಕುಮಾರ್ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಶರತ್ ಕುಮಾರ್, ಅನು ಪ್ರಭಾಕರ್, ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.

ಮಾರ್ಚ್ 17ರಿಂದ ಜೇಮ್ಸ್ ಜಾತ್ರೆ ಶುರು

ಮಾರ್ಚ್ 17ಕ್ಕೆ ಚಿತ್ರ ಬಿಡುಗಡೆ ಪಕ್ಕಾ ಆಗಿದೆ. ಈಗಾಗಲೇ ಅಭಿಮಾನಿಗಳು ಜೇಮ್ಸ್​ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪವರ್‌ಸ್ಟಾರ್ ಅಪ್ಪು ಅವರ ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್’ 5 ಭಾಷೆಗಳಲ್ಲಿ ಮೂಡಿಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಈ ಪವರ್ ಪ್ಯಾಕ್ಡ್ ಸಿನಿಮಾ ರಿಲೀಸ್​ಗಾಗಿ ಕೇವಲ ಕರುನಾಡಿನ ಜನರಷ್ಟೇ ಅಲ್ದೇ ಪರಭಾಷಿಗರೂ ಕೂಡ ಕಾದುಕುಳಿತಿದ್ದಾರೆ.

 ಇದನ್ನೂ ಓದಿ: Puneeth Rajkumar: ಜೇಮ್ಸ್ ಜಾತ್ರೆಗೆ ಸಿದ್ಧವಾಗಿದ್ದಾರೆ ಅಪ್ಪು ಫ್ಯಾನ್ಸ್ - ಪ್ಯಾಲೆಸ್ ಗ್ರೌಂಡ್ ನಲ್ಲಿ ಪ್ರೀ ರಿಲೀಸ್​ ಈವೆಂಟ್​

ಮೊದಲ ಹಂತದ 130ಕ್ಕೂ ಅಧಿಕ ಚಿತ್ರಮಂದಿರಗಳ

‘ಜೇಮ್ಸ್’ ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಬೆಂಗಳೂರಿನಲ್ಲಿ ಕೆಜಿ ರಸ್ತೆಯಲ್ಲಿರುವ ತ್ರಿವೇಣಿ, ವಿಜಯನಗರದಲ್ಲಿರುವ ವೀರೇಶ್, ಪ್ರಸನ್ನ, ವೀರಭದ್ರೇಶ್ವರ, ಅಂಜನ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಮಲ್ಟಿಪ್ಲೆಕ್ಸ್‌ಗಳನ್ನು ಹೊರಪಡಿಸಿ, ಕೇವಲ ಸಿಂಗಲ್ ಸ್ಕ್ರೀನ್‌ನಲ್ಲಿಯೇ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಜೇಮ್ಸ್​’ ಎಂಟ್ರಿಗೆ ಇನ್ನೂ ಕೇವಲ 10 ದಿನಗಳು ಮಾತ್ರ ಬಾಕಿ ಇದ್ದು, ಅಪ್ಪು ಅಭಿಮಾನಿಗಳ ಎದೆ ಬಡಿತ ಹೆಚ್ಚಾಗಿದೆ.
Published by:Annappa Achari
First published: