• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Accident: ನಂದಮೂರಿ ಕುಟುಂಬಕ್ಕೆ ಮತ್ತೊಂದು ಆಘಾತ; ಜೂನಿಯರ್​ ಎನ್​ಟಿಆರ್ ಚಿಕ್ಕಪ್ಪ ರಾಮಕೃಷ್ಣ ಕಾರು ಅಪಘಾತ

Accident: ನಂದಮೂರಿ ಕುಟುಂಬಕ್ಕೆ ಮತ್ತೊಂದು ಆಘಾತ; ಜೂನಿಯರ್​ ಎನ್​ಟಿಆರ್ ಚಿಕ್ಕಪ್ಪ ರಾಮಕೃಷ್ಣ ಕಾರು ಅಪಘಾತ

ನಂದಮೂರಿ ರಾಮಕೃಷ್ಣ ಕಾರು ಅಪಘಾತ

ನಂದಮೂರಿ ರಾಮಕೃಷ್ಣ ಕಾರು ಅಪಘಾತ

ಜೂ.ಎನ್​ಟಿಆರ್ ಚಿಕ್ಕಪ್ಪ ನಂದಮೂರಿ ರಾಮಕೃಷ್ಣ ಅವರ ಕಾರು ಅಪಘಾತ ಆಗಿದೆ. ನಂದಮೂರಿ ರಾಮಕೃಷ್ಣ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ನಂದಮೂರಿ ಕುಟುಂಬಕ್ಕೆ (Nandamuri Family) ಮತ್ತೊಂದು ಆಘಾತ ಎದುರಾಗಿದೆ. ಜೂ.ಎನ್​ಟಿಆರ್ ಚಿಕ್ಕಪ್ಪ ನಂದಮೂರಿ ರಾಮಕೃಷ್ಣ (Nandamuri Ramakrishna ) ಅವರ ಕಾರು ಅಪಘಾತ ಆಗಿದೆ. ನಂದಮೂರಿ ರಾಮಕೃಷ್ಣ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈದಾರಾಬಾದ್​ನ ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ-10ರಲ್ಲಿ ಈ ಅಪಘಾತ ಸಂಭವಿಸಿದೆ. ರಾಮಕೃಷ್ಣ ಅವರೇ ಕಾರು ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. 




ರಾಮಕೃಷ್ಣಗೆ ಗಾಯ, ಆಸ್ಪತ್ರೆಗೆ ದಾಖಲು


ಇಂದು (ಫೆಬ್ರವರಿ 11) ಮುಂಜಾನೆ ರಾಮಕೃಷ್ಣ ಅವರ ಕಾರು ಅಪಘಾತಕ್ಕೀಡಾಗಿದೆ.  ಈ ವೇಳೆ ರಾಮಕೃಷ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ.  ಆದ್ರೆ ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕೇಸ್​ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.


ನಂದಮೂರಿ ರಾಮಕೃಷ್ಣ ಕಾರು ಅಪಘಾತ


ನಂದಮೂರಿ ಕುಟುಂಬದಲ್ಲಿ ಸರಣಿ ದುರಂತ


ನಂದಮೂರಿ ಕುಟುಂಬದಲ್ಲಿ ಸರಣಿ ದುರಂತಗಳು ನಡೆಯುತ್ತಿದ್ದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಂದಮೂರಿ ತಾರಕರತ್ನ ಅವರಿಗೆ ಹೃದಯಾಘಾತವಾಗಿತ್ತು. ಇದೀಗ ಅವರ ಕುಟುಂಬದ ಸದಸ್ಯನಿಗೆ ಅಪಘಾತ ಆಗಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ.


Junior ntr cleans sudhamurthy and ashwini puneeth rajkumar chairs during karnataka ratna award program mrq
ಜೂನಿಯರ್ ಎನ್​​ಟಿಆರ್​​


ನಂದಮೂರಿ ಕುಟುಂಬಕ್ಕೆ ಅಪಘಾತದ ಭೀತಿ


ನಂದಮೂರಿ ಕುಟುಂಬದ ಅನೇಕರು ಅಪಘಾತಕ್ಕೆ ತುತ್ತಾಗಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ ಕೂಡ. ಜೂನಿಯರ್ ಎನ್​ಟಿಆರ್ ಒಮ್ಮೆ ರಸ್ತೆ ಅಪಘಾತಕ್ಕೀಡಾಗಿದ್ದರು. ಈ ವೇಳೆ ಜೂನಿಯರ್​ ಎನ್​ಟಿಆರ್​ ಕೂಡ ಗಂಭೀರವಾಗಿ ಗಾಯಗೊಂಡಿದ್ರು. ಅದೃಷ್ಟವಶಾತ್ ಬದುಕುಳಿದ್ದಾರೆ ಜೂ.ಎನ್​ಟಿಆರ್ ತಂದೆ ನಂದಮೂರಿ ಹರಿಕೃಷ್ಣ ರಸ್ತೆ ಅಪಘಾತದಲ್ಲಿ ಕೊನೆಯುಸಿರು ಎಳೆದರು. ನಂದಮೂರಿ ಜಾನಕಿರಾಮ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.


ನಂದಮೂರಿ ತಾರಕರತ್ನಗೆ ಹೃದಯಾಘಾತ


ನಂದಮೂರಿ ಕುಟುಂಬಕ್ಕೆ ಸಾಲು ಸಾಲು ಆಘಾತಗಳು ಎದುರಾಗುತ್ತಿವೆ. ಇತ್ತೀಚೆಗೆ ನಂದಮೂರಿ ತಾರಕರತ್ನ ಅವರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.


ಪಾದಯಾತ್ರೆಯ ವೇಳೆ ಕುಸಿದು ಬಿದ್ದ ತಾರಕರತ್ನ


ಆರ್‌ಆರ್‌ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರ ಸೋದರ ಸಂಬಂಧಿಯೂ ಆಗಿರುವ ನಟ ನಂದಮೂರಿ ತಾರಕ ರತ್ನ ಅವರು ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ರಾಜಕೀಯ ಪಾದಯಾತ್ರೆಯ ವೇಳೆ ಕುಸಿದುಬಿದ್ದಿದ್ದರು. ಹೃದಯಾಘಾತವಾದ ಬಳಿಕ ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ರು.  ಕುಂಪಂನಲ್ಲಿ ಚಿಕಿತ್ಸೆ ಪಡೆದು ಬಳಿಕ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆ ತರಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.


ಇದನ್ನೂ ಓದಿ: Nandamuri Taraka Ratna: ನಟ ನಂದಮೂರಿ ತಾರಕ ರತ್ನ ಸ್ಥಿತಿ ಗಂಭೀರ; ಆಸ್ಪತ್ರೆಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ


ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರಿಗೆ ಸಾಧ್ಯವಾದಷ್ಟು ಕಾಳಜಿ ವಹಿಸಿದ್ದಾರೆ. ಚಿಂತೆ ಮಾಡಲು ಏನೂ ಇಲ್ಲ. ವೈದ್ಯರು ಕೂಡ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಎಂದಿದ್ದರು.


39 ವರ್ಷ ವಯಸ್ಸಿನ ನಟ 2002 ರ ತೆಲುಗು ಸಿನಿಮಾ ಒಕಾಟೊ ನಂಬರ್ ಕುರ್ರಾಡು ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಅವರು ತಾರಕ್, ಭದ್ರಿ ರಾಮುಡು, ಮನಮಂತ ಮತ್ತು ರಾಜಾ ಚೆಯ್ಯಿ ವೇಷದಂತಹ ಸಿನಿಮಾಗಳ ಮೂಲಕ ಫೇಮಸ್ ಆದರು. ಅವರು ಇತ್ತೀಚೆಗೆ ಡಿಸ್ನಿ+ ಹಾಟ್‌ಸ್ಟಾರ್‌ನ ತೆಲುಗು ವೆಬ್ ಸಿರೀಸ್ 9 ಅವರ್ಸ್‌ನಲ್ಲಿ ಕಾಣಿಸಿಕೊಂಡರು.

Published by:ಪಾವನ ಎಚ್ ಎಸ್
First published: