ಪ್ರೀತಿ ವಿಶ್ವಾಸದಲ್ಲಿ ತಂದೆಯನ್ನೂ ಮೀರಿಸುತ್ತಾರೆ ಯಂಗ್ ರೆಬೆಲ್ ಸ್ಟಾರ್; ಹೀಗೆ ಹೇಳಿದ್ದು ಯಾರು ಗೊತ್ತೆ?

ಏನ್ ಹೇಳೋದು ಈ ಪ್ರೀತಿಗೆ? 4 ಗಂಟೆಗೂ ಹೆಚ್ಚು ನನ್ನ ಜೊತೆ ಇದ್ದು ನಟಭಯಂಕರ ಸಿನಿಮಾ ಬಗ್ಗೆ ಮಾತಾಡಿ ಕೆಲವು ದೃಶ್ಯಗಳಿಗೆ ನಿರ್ದೇಶನವನ್ನು ಮಾಡಿದರು. ಸಖತ್ ಹರಟೆ ತರಲೆ ತಮಾಷೆ ಮಾಡಿ ಎಲ್ಲರಲ್ಲಿ ಒಬ್ಬರಾದ ಯಂಗ್ ರೆಬೆಲ್ ಸ್ಟಾರ್, ಅಲ್ಲ...ಹೆಂಗೆ ನೋಡಿದರೂ ರೆಬೆಲ್ ಎಂದು ಅಭಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

zahir | news18
Updated:July 3, 2019, 7:43 PM IST
ಪ್ರೀತಿ ವಿಶ್ವಾಸದಲ್ಲಿ ತಂದೆಯನ್ನೂ ಮೀರಿಸುತ್ತಾರೆ ಯಂಗ್ ರೆಬೆಲ್ ಸ್ಟಾರ್; ಹೀಗೆ ಹೇಳಿದ್ದು ಯಾರು ಗೊತ್ತೆ?
Abhishek ambareesh
  • News18
  • Last Updated: July 3, 2019, 7:43 PM IST
  • Share this:
'ಅಮರ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿರುವ ಯಂಗ್ ರೆಬೆಲ್ ಸ್ಟಾರ್ ಮೊದಲ ಚಿತ್ರದಲ್ಲೇ ಸ್ಯಾಂಡಲ್​ವುಡ್​ನಲ್ಲಿ ಒಂದಷ್ಟು ಸೌಂಡ್ ಮಾಡಿದ್ದಾರೆ. ಚೊಚ್ಚಲ ಚಿತ್ರದ ಯಶಸ್ಸಿನ ಬೆನ್ನಲ್ಲೇ ಅಭಿಷೇಕ್ ಅಂಬರೀಶ್ ಅವರ 2ನೇ ಚಿತ್ರದ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇದೇ ಗ್ಯಾಪ್​ನಲ್ಲಿ ಜೂನಿಯರ್ ರೆಬೆಲ್ ತಮ್ಮ ಒಂದಷ್ಟು ಆಪ್ತರನ್ನು ಭೇಟಿಯಾಗುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಈ ಮೊದಲು 'ಅಮರ್' ಚಿತ್ರ, ಬಳಿಕ ಮಂಡ್ಯ ಎಲೆಕ್ಷನ್ ಎಂದು ಬ್ಯುಸಿಯಾಗಿದ್ದ ಅಭಿ ಇದೀಗ ಸ್ಪಲ್ಪ ಬಿಡುವು ಮಾಡಿಕೊಂಡಿದ್ದಾರೆ. ಅದರಂತೆ ಇತ್ತೀಚೆಗೆ 'ನಟಭಯಂಕರ' ಪ್ರಥಮ್ ಚಿತ್ರದ ಸೆಟ್​ಗೆ ಜೂನಿಯರ್ ರೆಬೆಲ್ ಭೇಟಿ ಕೊಟ್ಟಿದ್ದರು. ಈ ವೇಳೆ 'ಒಳ್ಳೆಯ ಹುಡುಗ'ನೊಂದಿಗೆ ಹರಟೆಯಲ್ಲಿ ಪಾಲ್ಗೊಂಡ ಮಂಡ್ಯದ ಗಂಡು ತಮ್ಮ ಟೈಮ್ ಶೆಡ್ಯೂಲ್​ ಬಗ್ಗೆ ಹೇಳಿಕೊಂಡರು.

ಪ್ರಥಮ್ ಜೊತೆಗಿನ ಪರಸ್ಪರ ಕಾಲೆಳೆಯುವ ಮಾತುಕತೆಯಲ್ಲಿ..ಅರ್ಥ ಮಾಡ್ಕೊಳಪ್ಪ...! ಅಮ್ಮ ಡೆಲ್ಲಿಲಿ ಇದ್ದಾಗ,ನಾನ್ ಬೆಂಗಳೂರಲ್ಲಿ ಇರಬೇಕು...ಅಮ್ಮ ಬೆಂಗಳೂರಲ್ಲಿ ಇದ್ದಾಗ ನಾನ್ ಮಂಡ್ಯದಲ್ಲಿ ಇರಬೇಕು...! ನೀನ್ ನಿರ್ದೇಶನ ಮಾಡುತ್ತಿದ್ದೀಯಾ, ಹಾಗೆ ನೋಡೋಣ ಅಂತ ಬಂದೆ. ಮಂಡ್ಯದಲ್ಲಿ ತುಂಬಾ ಕೆಲಸ ಇದೆ ಎನ್ನುವ ಮೂಲಕ ಇನ್ನೂ ತಮ್ಮ ಬ್ಯುಸಿ ಶೆಡ್ಯೂಲ್​ ಅನ್ನು ಹೇಳಿಕೊಂಡರು.ಬ್ಯುಸಿ ಎನ್ನುತ್ತಲೇ ಪ್ರಥಮ್ ಜೊತೆ ಹರಟೆಗೆ ಕೂತ ಅಭಿಷೇಕ್ ಬಳಿಕ ಚಿತ್ರದ ನಿರ್ದೇಶನಕ್ಕೂ ಕೈ ಹಾಕಿದರು. 'ನಟಭಯಂಕರ' ಚಿತ್ರದಲ್ಲಿನ ಪ್ರಥಮ್ ಅಭಿನಯ ಕೆಲ ದೃಶ್ಯಗಳಿಗೆ ಅಭಿ ಆ್ಯಕ್ಷನ್ ಕಟ್ ಸಹ ಹೇಳಿದರು. ಈ ಮೂಲಕ ಸಾಥ್ ನೀಡಿದರೆ ನಿರ್ದೇಶನಕ್ಕೂ ಜೈ ಎಂದು ಸಾರಿದ್ದಾರೆ ಯಂಗ್ ರೆಬೆಲ್ ಸ್ಟಾರ್.ಈ ಬಗ್ಗೆ ಮಾತನಾಡಿದ ಪ್ರಥಮ್,  ನಮಗೆ ಅಭಿಷೇಕ್​ರನ್ನು ಕಳಿಸೋಕೆ ಇಷ್ಟ ಇರಲಿಲ್ಲ. ಆದರೆ ಮಂಡ್ಯದಲ್ಲಿ ಒಪ್ಪಿಕೊಂಡಿರೋ ಕೆಲಸ ಬೇರೆ.  ಏನ್ ಹೇಳೋದು ಈ ಪ್ರೀತಿಗೆ? 4 ಗಂಟೆಗೂ ಹೆಚ್ಚು ನನ್ನ ಜೊತೆ ಇದ್ದು 'ನಟಭಯಂಕರ' ಸಿನಿಮಾ ಬಗ್ಗೆ ಮಾತಾಡಿ ಕೆಲವು ದೃಶ್ಯಗಳಿಗೆ ನಿರ್ದೇಶನವನ್ನು ಮಾಡಿದರು. ಸಖತ್ ಹರಟೆ ತರಲೆ ತಮಾಷೆ ಮಾಡಿ ಎಲ್ಲರಲ್ಲಿ ಒಬ್ಬರಾದ ಯಂಗ್ ರೆಬೆಲ್ ಸ್ಟಾರ್, ಅಲ್ಲ...ಹೆಂಗೆ ನೋಡಿದರೂ ರೆಬೆಲ್ ಎಂದು ಅಭಿ ಬಗ್ಗೆ ಒಳ್ಳೆಯ ಹುಡುಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಜೂನಿಯರ್ ರೆಬೆಲ್ ಸ್ಟಾರ್ ಒಳ್ಳೇ ಮನುಷ್ಯ.ತಂದೆಗೆ ತಕ್ಕ ಮಗ ಅಂದರೆ ಅದು ನಮ್ ಅಭಿಷೇಕ್ ಮಾತ್ರ.  ಅಪ್ಪ ಅಂಬರೀಷ್ ಕೈಗೆ ಸಿಗುತ್ತಿರಲಿಲ್ಲ. ಇದೀಗ ಮಗ ಫೋನ್​ಗೂ ಸಿಗುವುದಿಲ್ಲ. ಆದರೆ ಪ್ರೀತಿ,ವಿಶ್ವಾಸದಲ್ಲಿ ಅಪ್ಪನನ್ನೂ ಮೀರಿಸುತ್ತಾರೆ ಎಂದು ಪ್ರಥಮ್ ಹೇಳಿದರು. ಇನ್ನು ನಿರ್ಮಾಪಕ ಉದಯ್ ಮೆಹ್ತಾ ಅವರ 'ನಟಭಯಂಕರ' ಕಥೆಯ ಚಿತ್ರದಲ್ಲಿ  ನಟನೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು ಪ್ರಥಮ್  ವಹಿಸಿಕೊಂಡಿದ್ದಾರೆ.
First published: July 3, 2019, 7:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading