ತರುಣ್ ಸುದೀರ್ ಹಾಗೂ ಕಾಮಿಡಿ ಅದ್ಯಕ್ಷ ಶರಣ್, ಸ್ಯಾಂಡಲ್ವುಡ್ನ ಹಿಟ್ ಕಾಂಬಿನೇಷನ್ ಎಂದೇ ಹೇಳಬಹುದು. ಇವರಿಬ್ಬರು ಜೊತೆಯಾದಗಲೆಲ್ಲಾ ಸಕ್ಸಸ್ ಸಿಕ್ಕಿದೆ. ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ್ದೇ ಕಲೆಕ್ಷನ್ ಆಗಿದೆ. ಅಂದಹಾಗೆ ಕನ್ನಡ ಚಿತ್ರರಂಗದಲ್ಲಿ ಈ ಜೋಡಿ ಮೋಡಿ ಮಾಡೋಕೆ ಶುರು ಮಾಡಿದ್ದು, ರ್ಯಾಂಬೋ ಮೂಲಕ. ಹೌದು, ಶರಣ್ ನಾಯಕನಾಗಿ ಭಡ್ತಿ ಪಡೆದ ಈ ಸಿನಿಮಾದಲ್ಲಿ ತರುಣ್ ಸುಧೀರ್ ಡೈರೆಕ್ಷನ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿದ್ದರು. ನಿರ್ದೇಶಕ ಶ್ರೀನಾಥ್ ಜೊತೆ ಸೇರಿ ಕಥೆ ಚಿತ್ರಕಥೆ ರಚಿಸೋದ್ರಿಂದ ಹಿಡಿದು ಚಿತ್ರದ ಪ್ರತಿ ಹಂತದಲ್ಲೂ ಜೊತೆಯಾಗಿದ್ದರು. ರ್ಯಾಂಬೋ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಅದಾದ ನಂತರ ವಿಕ್ಟರಿ, ವಿಕ್ಟರಿ-2, ರ್ಯಾಂಬೋ-2 ಸಿನಿಮಾಗಳಲ್ಲಿ ಈ ಜೋಡಿ ಒಂದಾಗಿ, ಗೆಲುವಿನ ಸವಿ ಉಂಡಿದೆ.
ಸದ್ಯ ಅದೇ ಮ್ಯಾಜಿಕ್ ಮತ್ತೆ ರಿಪೀಟ್ ಮಾಡೋಕೆ ಈ ಹಿಟ್ ಜೋಡಿ ಮತ್ತೆ ಒಂದಾಗಿದೆ. ಈ ಬಾರಿ ಇಬ್ಬರು ಸೇರಿ ಚಿತ್ರವೊಂದನ್ನು ನಿರ್ಮಾಣ ಮಾಡಲಿದ್ದು, ಅದಕ್ಕೆ ಜಡೇಶ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ. ಶರಣ್ ಲಡ್ಡು ಸಿನಿಮಾ ಹೌಸ್ ಬ್ಯಾನರ್ ಹಾಗೂ ತರುಣ್ ಕ್ರಿಯೇಟಿವ್ಸ್ ಬ್ಯಾನರ್ನಲ್ಲಿ ಹೊಸ ಸಿನಿಮಾ ಸಜ್ಜಾಗಲಿದೆ.
ನಟನೆಗೂ ಜೈ...ಹಾಡೋಕೂ ಸೈ ಅಂತಿದ್ದಾರೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್..!
ಸದ್ಯಕ್ಕೆ ಇದೇ ತಿಂಗಳು 21 ರಂದು ಟೈಟಲ್ ರಿವೀಲ್ ಮಾಡುವ ಕಾತುರದಲ್ಲಿದೆ ಚಿತ್ರತಂಡ.
ಜೆಂಟಲ್ ಮನ್ ನಂತಹ ವಿಭಿನ್ನ ವಿನೂತನ ಶೈಲಿಯ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರುವ ನಿರ್ದೇಶಕ ಜಡೇಶ್ ಕುಮಾರ್, ಏನೇ ಮಾಡಿದರೂ ಅದರಲ್ಲಿ ತನ್ನತನ ತೋರೋ ತರುಣ್ ಹಾಗೂ ಚಂದನವನದ ಮಿನಿಮಮ್ ಗ್ಯಾರಂಟಿ ನಟ ಎನಿಸಿಕೊಂಡಿರುವ ಶರಣ್.
ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡಲು ಸಜ್ಜಾದ ರಾಕಿಂಗ್ ಜೋಡಿ; ನಾಲ್ಕು ವರ್ಷದ ಬಳಿಕ ಒಂದಾದ ಸಂಭ್ರಮದಲ್ಲಿ ರಾಧಿಕಾ
ಈ ಮೂವರ ಕಾಂಬಿನೇಷನ್ ಸಿನಿಮಾ ಅಂದಕ್ಷಣ ಒಂದು ಮಟ್ಟಕ್ಕೆ ನಿರೀಕ್ಷೆ ಈಗಲೇ ಹುಟ್ಟಿಕೊಂಡಿದೆ.ಚಿತ್ರದ ಟೈಟಲ್ ಅನೌನ್ಸ್ ಆಗಿ, ಚಿತ್ರೀಕರಣಕ್ಕೆ ಹೋಗುವಷ್ಟರಲ್ಲಿ ಅದು ಇನ್ನಷ್ಟು ದುಪ್ಪಟ್ಟಾದರೆ ಅಚ್ಚರಿ ಪಡಬೇಕಿಲ್ಲ.
ಶರಣ್ ಅವರು ಕನ್ನಡ ಚಿತ್ರರಂಗದಲ್ಲಿ ತುಂಬ ವಿಭಿನ್ನವಾದ, ಪ್ರತಿಭಾವಂತನಟ. ಅವರ ಇತ್ತೀಚಿನ ಸಿನಿಮಾಗಳಂತೂ ತುಂಬ ಡಿಫರೆಂಟ್ ಆಗಿರುತ್ತವೆ. 2019ರಲ್ಲಿ ರಿಲೀಸ್ ಆಗಿದ್ದ ಶರಣ್ ನಟನೆಯ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ಒಳ್ಳೆಯ ಯಶಸ್ಸು ಪಡೆದಿತ್ತು. ಈಗ ಅವರು 'ಅವತಾರ ಪುರುಷ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರಕ್ಕೆ ಹಣ ಹೂಡಿದ್ದು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ