• Home
  • »
  • News
  • »
  • entertainment
  • »
  • Pathaan: ಶಾರುಖ್ ಖಾನ್​ ಸಿನಿಮಾ ಪಠಾಣ್​ಗೆ ತಪ್ಪದ ಸಂಕಷ್ಟ! ಮತ್ತೆ ವಿವಾದದ ಸುಳಿಯಲ್ಲಿ ಚಿತ್ರ

Pathaan: ಶಾರುಖ್ ಖಾನ್​ ಸಿನಿಮಾ ಪಠಾಣ್​ಗೆ ತಪ್ಪದ ಸಂಕಷ್ಟ! ಮತ್ತೆ ವಿವಾದದ ಸುಳಿಯಲ್ಲಿ ಚಿತ್ರ

ನಟ ಶಾರುಖ್​​​ ಖಾನ್​

ನಟ ಶಾರುಖ್​​​ ಖಾನ್​

4 ವರ್ಷಗಳ ನಂತರ ಸೂಪರ್ ಸ್ಟಾರ್ ಶಾರುಖ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಪಠಾನ್ ಚಿತ್ರ ಬಿಡುಗಡೆಗೆ ಸಿದ್ದವಾಗಿ ನಿಂತಿದ್ದು, ಮತ್ತೊಂದು ವಿವಾದ ಸುತ್ತಿಕೊಂಡಿದೆ.

  • Share this:

ಬಾಲಿವುಡ್ (Bollywood) ಬಾದ್ ಷಾ ಅಂತಾನೆ ಖ್ಯಾತಿಯಾಗಿರುವ ಶಾರುಖ್ ಖಾನ್ (Shah Rukh Khan) ಅವರನ್ನು ದೊಡ್ಡ ಪರದೆಯ ಮೇಲೆ ನೋಡುವುದು ಎಂದರೆ ಅವರ ಅಭಿಮಾನಿಗಳಿಗೆ ಕಣ್ಣಿಗೆ ಒಂದು ಹಬ್ಬವಿದ್ದಂತೆ ಅಂತ ಹೇಳಬಹುದು. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಶಾರುಖ್ ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ, ಹಾಗಾಗಿ ಮಧ್ಯೆ ತುಂಬಾನೇ ಸಮಯವಾಗಿತ್ತು ಶಾರುಖ್ ಅವರನ್ನ ಅವರ ಅಭಿಮಾನಿಗಳು ದೊಡ್ಡ ಪರದೆಯ ಮೇಲೆ ನೋಡಿ. ಈಗ ಸುಮಾರು ನಾಲ್ಕು ವರ್ಷಗಳ (4 Years) ನಂತರ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ಶಾರುಖ್ ಇದೀಗ ಸಜ್ಜಾಗಿದ್ದಾರೆ.


ನಾಲ್ಕು ವರ್ಷಗಳ ನಂತರ ಸೂಪರ್ ಸ್ಟಾರ್ ಶಾರುಖ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಪಠಾನ್ ಚಿತ್ರ ಬಿಡುಗಡೆಗೆ ಸಿದ್ದವಾಗಿ ನಿಂತಿದೆ ಅಂತ ಹೇಳಬಹುದು.


ತುಂಬಾನೇ ಸುದ್ದಿ ಮಾಡುತ್ತಿದೆ ಪಠಾನ್ ಚಿತ್ರದ ‘ಬೆಷರಂ ರಂಗ್’ ಹಾಡು


ಈಗಾಗಲೇ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಅವರ ಮುಂಬರುವ ಚಿತ್ರ ಪಠಾನ್ ನ ‘ಬೇಷರಂ ರಂಗ್’ ಎಂಬ ಹಾಡು ಬಿಡುಗಡೆಯಾಗಿದ್ದು, ತುಂಬಾನೇ ಸುದ್ದಿ ಮಾಡುತ್ತಿದೆ ಅಂತ ಹೇಳಬಹುದು. ಈ ಹಾಡು ಬಿಡುಗಡೆಯಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ತುಂಬಾನೇ ಚರ್ಚೆಗೆ ಕಾರಣವಾಗಿದೆ.


ಮೊದಲು, ಕೆಲವು ರಾಜಕಾರಣಿಗಳು ದೀಪಿಕಾ ಪಡುಕೋಣೆ ಅವರು ಈ ಹಾಡಿನಲ್ಲಿ ತೊಟ್ಟ ಕೇಸರಿ ಉಡುಪಿನ ಮತ್ತು ಡ್ಯಾನ್ಸ್ ಸ್ಟೆಪ್ ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಪಾಕಿಸ್ತಾನದ ಗಾಯಕ ಸಜ್ಜಾದ್ ಅಲಿ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ, ಅಲ್ಲಿ "ಶಾರುಖ್ ಅವರ ಹೊಸ ಚಲನಚಿತ್ರದ ಹಾಡು “ಅಬ್ ಕೆ ಹಮ್ ಬಿಚಾರೆ” ಎಂಬ ಶೀರ್ಷಿಕೆಯ ತನ್ನ ಹಳೆಯ ಟ್ರ್ಯಾಕ್ ಅನ್ನು ಹೋಲುತ್ತದೆ ಎಂದು ಹೇಳಿದ್ದಾರೆ. ವಿಶಾಲ್-ಶೇಖರ್ ಸಂಯೋಜಿಸಿರುವ ‘ಬೆಶರಮ್ ರಂಗ್’ ಹಾಡಿನ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಅಂತ ನೆಟ್ಟಿಗರು ತಿಳಿದಿದ್ದಾರೆ.


ಶಾರುಖ್ ಚಿತ್ರದ ಹಾಡಿನ ಬಗ್ಗೆ ಏನ್ ಹೇಳಿದ್ರು ಪಾಕ್ ಗಾಯಕ?


ಸಜ್ಜಾದ್ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಹಳೆಯ ‘ಅಬ್ ಕೆ ಹಮ್ ಬಿಚಾರೆ’ ಎಂಬ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ವೀಡಿಯೋದಲ್ಲಿ, ಗಾಯಕ ಹಿಂದಿಯಲ್ಲಿ ಹೇಳುವುದನ್ನು ಕೇಳಲಾಗಿದೆ. "ನಾನು ಯೂಟ್ಯೂಬ್ ನಲ್ಲಿ ಕೆಲವು ಹೊಸ ಚಿತ್ರಗಳ ಸಂಗೀತವನ್ನು ಕೇಳುತ್ತಿದ್ದೆ. 25-26 ವರ್ಷಗಳ ಹಿಂದಿನ ನನ್ನ ಹಳೆಯ ಹಾಡುಗಳಲ್ಲಿ ಒಂದನ್ನು ನಾನು ನೆನಪಿಸಿಕೊಂಡೆ. ನಾನು ನಿಮಗಾಗಿ ಅದನ್ನು ಹಾಡುತ್ತೇನೆ" ಎಂದು ಹಾಡಿನ ಕೆಲವು ಸಾಲುಗಳನ್ನು ಹಾಡಿದರು.


"ಹೊಸ ಚಿತ್ರದ ಹಾಡನ್ನು ಕೇಳಿದ ನಂತರ, ಇದು 26 ವರ್ಷಗಳ ಹಿಂದೆ ನಾನು ಬಿಡುಗಡೆ ಮಾಡಿದ ಅಬ್ ಕೆ ಹಮ್ ಬಿಚಾರೆ ಹಾಡನ್ನು ನೆನಪಿಸಿತು. ವೀಡಿಯೋ ನೋಡಿ ಆನಂದಿಸಿ!" ವೀಡಿಯೋಗೆ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು "ಇದು ಪಠಾನ್ ಚಿತ್ರದ ಬೆಶರಮ್ ರಂಗ್ ನಂತೆ ಅನ್ನಿಸುತ್ತದೆ" ಎಂದು ಬರೆದರೆ, ಇನ್ನೊಬ್ಬರು "ಸುಂದರವಾದ ಸಂಯೋಜನೆ ಮತ್ತು ಹಾಡು ಮತ್ತು ಅವರು ನಿಮಗೆ ಯಾವುದೇ ಕ್ರೆಡಿಟ್ ನೀಡದೆ ಅದನ್ನು ಕೃತಿಚೌರ್ಯ ಮಾಡಿರುವುದು ಬೇಸರದ ಸಂಗತಿ" ಎಂದು ಬರೆದಿದ್ದಾರೆ. "ಪಾಕಿಸ್ತಾನದ ಗಾಯಕ ಸಜ್ಜಾದ್ ಅಲಿ ಹಾಡಿನಿಂದ ಶಾರುಖ್ ಖಾನ್ ಅವರ ಪಠಾನ್ ಚಲನಚಿತ್ರದ ಹಾಡಿನ ಪ್ರತಿ" ಎಂದು ಮೂರನೆಯವರು ಬರೆದಿದ್ದಾರೆ.


ಪಠಾನ್ ಚಿತ್ರ ಜನವರಿ 25 ರಂದು ಬಿಡುಗಡೆಯಾಗಲಿದೆ


ಈ ಚಿತ್ರದಲ್ಲಿ ಶಾರುಖ್ ಮತ್ತು ದೀಪಿಕಾ ಜೊತೆಯಲ್ಲಿ ಇನ್ನೊಬ್ಬ ನಟ ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ನಿರ್ದೇಶಕ ಸಿದ್ಧಾರ್ಥ್ ಆನಂದ್ ಇದನ್ನು ಇನ್ನೂ ದೃಢಪಡಿಸಿಲ್ಲ. ಈ ಚಿತ್ರವು ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Published by:ಪಾವನ ಎಚ್ ಎಸ್
First published: