Arrest Rhea Chakroborty: ಸುಶಾಂತ್​ ಕುರಿತಾಗಿ ಹೇಳಿಕೆ ಕೊಟ್ಟ ರಿಯಾಗೆ ವಿಡಿಯೋ ಮೂಲಕ ಉತ್ತರ ಕೊಟ್ಟ ಅಂಕಿತಾ ಲೋಖಂಡೆ..!

ರಿಯಾ ಹಾಗೂ ಅವರ ಸಹಾಯಕರನ್ನು ಬಂಧಿಸುವಂತೆ ಸುಶಾಂತ್​ ತಂದೆ ಕೆಕೆ ಸಿಂಗ್​ ಸಹ ಆಗ್ರಹಿಸಿದ್ದಾರೆ. ಇದು ಹೀಗಿರುವಾಗಲೇ ಸುಶಾಂತ್ ಅಭಿಮಾನಿಗಳು ಟ್ವಿಟರ್​ನಲ್ಲಿ #ArrestRheaChakroborty ಎಂದು ಅಭಿಯಾನ ಆರಂಭಿಸಿದ್ದಾರೆ. ಇದು ಸದ್ಯ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ.

ಸುಶಾಂತ್​ ಬಗ್ಗೆ ಹೇಳಿಕೆ ನೀಡಿದ ರಿಯಾಗೆ ವಿಡಿಯೋ ಮೂಲಕ ಉತ್ತರ ಕೊಟ್ಟ ಅಂಕಿತಾ

ಸುಶಾಂತ್​ ಬಗ್ಗೆ ಹೇಳಿಕೆ ನೀಡಿದ ರಿಯಾಗೆ ವಿಡಿಯೋ ಮೂಲಕ ಉತ್ತರ ಕೊಟ್ಟ ಅಂಕಿತಾ

  • Share this:
ರಿಯಾ ಚಕ್ರವರ್ತಿ ಮತ್ತೊಮ್ಮೆ ಸುಶಾಂತ್ ಸಿಂಗ್​ ರಜಪೂತ್ ಕುರಿತಾಗಿ ಮತ್ತದೇ ಹೇಳಿಕೆ ನೀಡಿದ್ದಾರೆ. ಸುಶಾಂತ್​ ಖಿನ್ನತೆಯಿಂದ ಬಳಲುತ್ತಿದ್ದರು. ಜೊತೆಗೆ ಅವರಿಗೆ ಕ್ಲಾಸ್ಟ್ರೋಫೋಬಿಯಾ (claustrophobia) ಇತ್ತು ಎಂದಿದ್ದಾರೆ. ರಿಯಾ ಅವರ ಈ ಹೇಳಿಕೆ ಸುಶಾಂತ್​ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿದೆ. 

ರಿಯಾ ಚಕ್ರವರ್ತಿಗೆ ಡ್ರಗ್​ ಡೀಲರ್​ಗಳೊಂದಿಗೆ ಸಂಬಂಧವಿತ್ತು. ರಿಯಾ ಅವರು ಡ್ರಗ್​ ಡೀಲರ್​ಗಳ ಜೊತೆ ವಾಟ್ಸ್​ಆ್ಯಪ್​ನಲ್ಲಿ ಚಾಟ್​ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಅಲ್ಲದೆ ರಿಯಾ ಸುಶಾಂತ್​ಗೆ ತಿಳಿಯದಂತೆ ಡ್ರಗ್ಸ್​ ಕೊಡುತ್ತಿದ್ದರೂ ಎಂದೂ ಆರೋಪಿಸಲಾಗುತ್ತಿದೆ. ಈ ವಿಷಯ ಹರಿದಾಡಲು ಆರಂಭಿಸುತ್ತಿದ್ದಂತೆಯೇ ಸುಶಾಂತ್​ ತಂದೆ ಸಹ ರಿಯಾ ವಿರುದ್ಧ ವಿಷ ಕೊಟ್ಟು ಕೊಲೆ ಮಾಡಿರುವ ಆರೋಪ ಮಾಡಿದ್ದಾರೆ.

#WATCH Rhea Chakraborty was giving poison to my son, Sushant from a long time, she is his murderer. The investigating agency must arrest her and her associates: KK Singh, #SushantSinghRajput's father pic.twitter.com/EsVpAUlZMtರಿಯಾ ಹಾಗೂ ಅವರಿಗೆ ಸಹಾಯ ಮಾಡುತ್ತಿರುವವರನ್ನು ಬಂಧಿಸುವಂತೆ ಸುಶಾಂತ್​ ತಂದೆ ಕೆಕೆ ಸಿಂಗ್​ ಸಹ ಆಗ್ರಹಿಸಿದ್ದಾರೆ. ಇದು ಹೀಗಿರುವಾಗಲೇ ಸುಶಾಂತ್ ಅಭಿಮಾನಿಗಳು ಟ್ವಿಟರ್​ನಲ್ಲಿ #ArrestRheaChakroborty ಎಂದು ಅಭಿಯಾನ ಆರಂಭಿಸಿದ್ದಾರೆ. ಇದು ಸದ್ಯ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ.

ಇನ್ನು ಸುಶಾಂತ್​ ಅಗಲಿಕೆಯ ನಂತರ ಒಂದು ರೆಕಾರ್ಡ್​ ಮಾಡಿದ್ದ ವಿಡಿಯೋ ಬಿಟ್ಟಿದ್ದ ರಿಯಾ ಚಕ್ರವರ್ತಿ ಈಗ ಇದೇ ಮೊದಲ ಬಾರಿಗೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸುಶಾಂತ್ ಖಿನ್ನತೆಗೊಳಗಾಗಿದ್ದರು ಹಾಗೂ ಅವರಿಗೆ ಕ್ಲಾಸ್ಟ್ರೋಫೋಬಿಯಾ (claustrophobia) ಇತ್ತು. ಅದಕ್ಕಾಗಿ ಅವರು ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

ರಿಯಾ ಅವರ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂಯೇ ರಿಯಾ ವಿರುದ್ಧ ಮತ್ತಷ್ಟು ಗರಂ ಆಗಿದ್ದಾರೆ ಸುಶಾಂತ್​ ಅಭಿಮಾನಿಗಳು. ರಿಯಾ ಮಾಡಿರುವ ಕ್ಲಾಸ್ಟ್ರೋಫೋಬಿಯಾ (claustrophobia) ಆರೋಪ ಸುಳ್ಳು ಎಂದು ಸುಶಾಂತ್​ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.


View this post on Instagram

Is this #claustrophobia ? u always wanted to fly and u did it .😊


A post shared by Ankita Lokhande (@lokhandeankita) on


ಅಂಕಿತಾ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಸುಶಾಂತ್​ ವಿಮಾನ ಹಾರಿಡುತ್ತಿದ್ದಾರೆ. ಒಂದು ವೇಳೆ ರಿಯಾ ಹೇಳಿದಂತೆ ಸುಶಾಂತ್​ಗೆ ಕ್ಲಾಸ್ಟ್ರೋಫೋಬಿಯಾ (claustrophobia) ಇದ್ದಿದ್ದರಎ, ಅವರು ಇಷ್ಟು ಖುಷಿಯಾಗಿ, ಯಾವುದೇ ಭಯವಿಲ್ಲದೆ ವಿಮಾನ ಹಾರಿಸಲು ಹೇಗೆ ಸಾಧ್ಯ ಎಂದಿದ್ದಾರೆ ಅಂಕಿತಾ. ಇದೇ ವಿಷಯವಾಗಿ ರಿಯಾ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
Published by:Anitha E
First published: