Sushant Singh Rajput: ಸುಶಾಂತ್​ ಸಿಂಗ್​ನನ್ನು ನೆನಪಿಸಿಕೊಂಡು ಕಣ್ಣೀರಿಟ್ಟ ಅಂಕಿತಾ

Sushant Singh Rajput - Ankita Lokhande: ಅಂಕಿತಾ ಲೋಖಂಡೆ ಹಾಗೂ ಸುಶಾಂತ್ ಸಿಂಗ್ ರಜಪೂತ್ ಪ್ರೇಮಕಥೆ ಎಲ್ಲರಿಗೂ ಗೊತ್ತು. ಕಿರುತೆರೆಯ ಅತ್ಯಂತ ಸುಂದರ ಲವ್​ಸ್ಟೋರಿ ಫೇಲ್ ಆಗಿತ್ತು. ನಟಿ ಈಗಲೂ ಸುಶಾಂತ್​​ನನ್ನು ನೆನಪಿಸಿಕೊಂಡರೆ ಭಾವುಕರಾಗಿ ಅಳುತ್ತಾರೆ.

ಅಂಕಿತಾ ಲೋಖಂಡೆ

ಅಂಕಿತಾ ಲೋಖಂಡೆ

  • Share this:
ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಜೀವನ ಎಂದಾಗ ನಟನ ಮಾಜಿ ಗೆಳತಿಯರ ಕುರಿತ ಗಾಸಿಪ್ ಮುಗಿಯುವುದೇ ಇಲ್ಲ. ಪವಿತ್ರ ರಿಶ್ತಾ ಧಾರವಾಹಿಯಲ್ಲಿ (Serial) ಜೊತೆಯಾಗಿ ನಟಿ ಮನೆ ಮನೆಯ ನೆಚ್ಚಿನ ಕಿರುತೆರೆ ಜೋಡಿಯಾಗಿ (Small screen couple) ಮೂಡಿಬಂದು ಸುಶಾಂತ್ ಹಾಗೂ ಅಂಕಿತಾ ಲೋಖಂಡೆ (Ankita lokhande) ಮದುವೆಯಾಗುತ್ತಾರೆಂದೇ ಎಲ್ಲರೂ ಭಾವಿಸಿದ್ದರು. ಅವರು ಮನೆಯನ್ನು ಖರೀದಿಸಿ ಸುಶಾಂತ್ ಹೆಸರನ್ನೂ ಇಟ್ಟಿದ್ದರು. ಆದರೆ ವಿಧಿ ಹಾಗಾಗಲಿಲ್ಲ. ಸೀರಿಯಲ್ ಹಿಟ್ ಆಗುತ್ತಿದ್ದಂತೆ ಸುಶಾಂತ್​ಗೆ ಬಾಲಿವುಡ್ ಅವಕಾಶ ಸಿಕ್ಕಿತು. ಎಂಎಸ್ ಧೋನಿ ಸಿನಿಮಾದ ಮೂಲಕ ಸುಶಾಂತ್ ಮತ್ತೊಂದು ಲೆವೆಲ್ ತಲುಪಿದರು. ಆದರೆ ಅಂಕಿತಾ ಅವರಿಂದ ದೂರವಾದರು. ಅವರ ಪ್ರೇಮಕಥೆ ಅಲ್ಲಿಗೆ ನಿಂತಿತು. ಇದು ಮತ್ತೊಮ್ಮೆ ಸುದ್ದಿಯಾಗಿದ್ದು ಸುಶಾಂತ್ ನಿಧನರಾದಾಗಲೇ. ಅಂಕಿತಾ ಸುಶಾಂತ್ ಕುರಿತು ಇಟ್ಟಿರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಇಂದಿಗೂ ನಟಿ ಸುಶಾಂತ್​ನನ್ನು ನೆನಪಿಸಿಕೊಂಡರೆ ಕಣ್ಣೀರಿಡುತ್ತಾರೆ.

ಹಿಂದಿನ ಎರಡು ಸೀಸನ್‌ಗಳಿಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆದ ನಂತರ, Zee TV ಇತ್ತೀಚೆಗೆ ಡ್ಯಾನ್​ಸ ರಿಯಾಲಿಟಿ ಶೋನ 3 ನೇ ಆವೃತ್ತಿ, DID ಸೂಪರ್ ಮಾಮ್ಸ್ ಅನ್ನು ಪ್ರಾರಂಭಿಸಿತು. ಹೊಸ ಸೀಸನ್​​ನಲ್ಲಿ ರೆಮೋ ಡಿ'ಸೋಜಾ, ಭಾಗ್ಯಶ್ರೀ ದಸ್ಸಾನಿ ಮತ್ತು ಊರ್ಮಿಳಾ ಮಾತೋಂಡ್ಕರ್ ಅವರು ಪ್ರತಿಭಾವಂತ ಅಮ್ಮಂದಿರಿಗೆ ಗೈಡ್ ಮಾಡಿ ಅವರ ಡ್ಯಾನ್ಸಿಂಗ್ ಕನಸುಗಳನ್ನು ಸಾಧಿಸಲು ಸಹಾಯ ಮಾಡುತ್ತಿದ್ದಾರೆ.

ಅತಿಥಿಯಾಗಿ ಬರಲಿದ್ದಾರೆ ಅಂಕಿತಾ

ಪ್ರತಿ ವಾರಾಂತ್ಯದಂತೆ, ಈ ವಾರಾಂತ್ಯದ ಸಂಚಿಕೆಗಳು ಸಹ ವಿಶೇಷ ಅತಿಥಿಗಳನ್ನು ಒಳಗೊಂಡಿದೆ. ಈ ಸಮಯದಲ್ಲಿ, ಅವರು ಚಾನಲ್‌ನ ಅತ್ಯಂತ ಯಶಸ್ವಿ ಕಾರ್ಯಕ್ರಮಗಳ ಜನಪ್ರಿಯ ನಟ, ನಟಿಯರನ್ನು ಆಹ್ವಾನಿಸುತ್ತಾರೆ. ಈ ವಾರಾಂತ್ಯದಲ್ಲಿ ನಟಿಯರಾದ ಅಂಕಿತಾ ಲೋಖಂಡೆ ಮತ್ತು ಉಷಾ ನಾಡಕರ್ಣಿ ಅವರು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಏಕೆಂದರೆ ಅದು ‘ಪವಿತ್ರ ರಿಷ್ತಾ ವಿಶೇಷ ಸಂಚಿಕೆ’ ಆಗಿರುತ್ತದೆ.

ಸುಶಾಂತ್​ಗೆ ಗೌರವ ಸೂಚಕವಾಗಿ ಡ್ಯಾನ್ಸ್

'ಯಾದೇಂ ಯಾದ್ ಆತಿ ಹೈ' ಹಾಡಿಗೆ ಸಾಧನಾ ಮತ್ತು ನೃತ್ಯ ಸಂಯೋಜಕ ಭರತ್ ಅವರ ಮನೋಜ್ಞ ಅಭಿನಯವು ಶೋನಲ್ಲಿ ಹೈಲೈಟ್ ಆಗಲಿದೆ. ಸಂಚಿಕೆಯನ್ನು ಚಿತ್ರೀಕರಿಸಿದ ನಂತರ, ಈ ಜೋಡಿಯ ಆಕರ್ಷಕವಾದ ಅಭಿನಯವು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಗೌರವವಾಗಿದೆ ಎನ್ನುವುದನ್ನು ರಿವೀಲ್ ಮಾಡಲಾಗಿದೆ. ಅಷ್ಟೇ ಅಲ್ಲ, ಸಂಗೀತ ಕಾರ್ಯಕ್ರಮವು ಸುಶಾಂತ್ ಅವರ ಜೀವನದ ಹೋರಾಟ ಮತ್ತು ಯಶಸ್ವಿ ಪ್ರಯಾಣವನ್ನು ಗೌರವಿಸಿತು. ಇದು ಸೆಟ್‌ನಲ್ಲಿ ಎಲ್ಲರನ್ನೂ ಭಾವುಕರಾಗುವಂತೆ ಮಾಡಿತು.

ಇದನ್ನೂ ಓದಿ: Ankita Wedding Photos: ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅದ್ಧೂರಿ ವಿವಾಹ

ಅಂಕಿತಾ ಲೋಖಂಡೆ ಮಾಜಿ ಸಹನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಅವರ ನಿಧನವು ತನ್ನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಕುರಿತು ನಟಿ ಪದೇ ಪದೇ ಹೇಳಿದ್ದಾರೆ. ನಿಸ್ಸಂದೇಹವಾಗಿ, ಸಾಧನಾ ಅವರ ನೃತ್ಯವು ನಟಿಯನ್ನು ಭಾವುಕವಾಗಿಸಿದೆ. ಈ ಕುರಿತು ಮಾತನಾಡಿದ ಅವರು, ಇದು ಭಾವನಾತ್ಮಕ ಸಮಯ. ಸುಶಾಂತ್ ನಮ್ಮನ್ನು ಅಗಲಿದ ದಿನ, ನಾವೆಲ್ಲರೂ ಅವರನ್ನು ಹೆಚ್ಚು ನೆನಪಿಸಿಕೊಂಡಿದ್ದೇವೆ. ಅವರು ಮಾಡಿರುವ ಕೆಲಸದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ಅಭಿಪ್ರಾಯದಲ್ಲಿ, ನನ್ನ ಇಡೀ ಜೀವನದಲ್ಲಿ ನಾನು ನೋಡಿದ ಎಲ್ಲ ಜನರಲ್ಲಿ ಅತ್ಯಂತ ಹೆಚ್ಚು ಪ್ರಯತ್ನವನ್ನು ಮಾಡಿರುವ ವ್ಯಕ್ತಿ ಅವರು ಎಂದಿದ್ದಾರೆ.

ಆರಂಭದಲ್ಲಿ, ನನಗೆ ನಟನೆ ಏನು ಎಂದು ತಿಳಿದಿರಲಿಲ್ಲ. ಸುಶಾಂತ್ ಇಲ್ಲದಿದ್ದರೆ ನಾನು ಇಂದು ಇರಲು ಸಾಧ್ಯವೇ ಇರಲಿಲ್ಲ. ಅವರು ನನ್ನ ಗುರು. ಅವರು ಎಲ್ಲೇ ಇರಲಿ, ದೇವರು ಅವರನ್ನು ಆಶೀರ್ವದಿಸಲಿ ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Arrest Rhea Chakroborty: ಸುಶಾಂತ್​ ಕುರಿತಾಗಿ ಹೇಳಿಕೆ ಕೊಟ್ಟ ರಿಯಾಗೆ ವಿಡಿಯೋ ಮೂಲಕ ಉತ್ತರ ಕೊಟ್ಟ ಅಂಕಿತಾ ಲೋಖಂಡೆ..!

ಪವಿತ್ರ ರಿಷ್ತಾದಲ್ಲಿ ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ರಜಪೂತ್ ಅರ್ಚನಾ ಮತ್ತು ಮಾನವ್ ಪಾತ್ರಗಳನ್ನು ನಿರ್ವಹಿಸಿದ ನಂತರ ಖ್ಯಾತಿ ಗಳಿಸಿದರು. ಆದರೆ ಉಷಾ ನಾಡಕರ್ಣಿ ಕಾರ್ಯಕ್ರಮದಲ್ಲಿ ಸುಶಾಂತ್ ಅವರ ತಾಯಿಯ ಪಾತ್ರವನ್ನು ಮಾಡಿದ್ದರು.
Published by:Divya D
First published: