Ankita Lokhande: ಸುಶಾಂತ್ ಸಿಂಗ್ ರಜಪೂತ್ ಮಾಜಿ ಗೆಳತಿ ಅಂಕಿತಾ ಅಮ್ಮನಾಗ್ತಿದ್ದಾರಾ? ಫೊಟೋ ವೈರಲ್

ಸುಶಾಂತ್ ಸಾವಿನ ಸಂದರ್ಭ ರಿಯಾ ಚಕ್ರವರ್ತಿಯ ಹೆಸರು ಸುದ್ದಿಯಾದಷ್ಟೇ ಅಂಕಿತಾ ಹೆಸರೂ ಕೂಡಾ ಸುದ್ದಿಯಾಗಿತ್ತು. ಅಂತೂ ಅಂಕಿತಾ ಆತ್ಮೀಯ ಗೆಳೆಯನನ್ನು ಮದುವೆಯಾಗಿ ದಾಂಪತ್ಯ ಶುರು ಮಾಡಿದ್ದಾರೆ. ಈಗ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳೆತಿ ಗರ್ಭಿಣಿ ಎನ್ನುವ ಸುದ್ದಿ ಹೊರಬಿದ್ದಿದೆ.

ಅಂಕಿತಾ ಲೋಖಂಡೆ

ಅಂಕಿತಾ ಲೋಖಂಡೆ

  • Share this:
ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ನಂತರವೇ ಅಂಕಿತಾ ಲೋಖಂಡೆ (Ankita Lokhande) ಎನ್ನುವ ಹೆಸರು ಭಾರೀ ಫೇಮಸ್ ಆಗಿತ್ತು. ಹಿಂದಿ ಕಿರುತೆರೆಯಲ್ಲಿ (Hindi Small Screen) ಹೆಸರು ಗಳಿಸಿದ್ದ ನಟಿ ದಿಢೀರ್ ಎಲ್ಲರ ಬಾಯಲ್ಲಿ ಸುದ್ದಿಯಾದರು. ಕಾರಣ ಇವರು ಸುಶಾಂತ್ ಸಿಂಗ್ ಅವರ ಮಾಜಿ ಗೆಳತಿ. ಮೊದಲ ಪ್ರೇಯಸಿ. ಪವಿತ್ರ ರಿಶ್ತಾ ಎನ್ನುವ ಧಾರವಾಹಿಯ (Serial) ಮೂಲಕ ಹಿಂದಿ ಕಿರುತೆರೆಯಲ್ಲಿ ಭರ್ಜರಿಯಾಗಿ ಮಿಂಚಿದ ಜೋಡಿ. ಸೀರಿಯಲ್ ಹಾಗೂ ರಿಯಲ್ ಲೈಫ್ ಸಖತ್ತಾಗಿಯೇ ಇದ್ದರೂ ಇವರ ಪ್ರೀತಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಸುಶಾಂತ್ ಸಿನಿಮಾ ಅವಕಾಶ ಪಡೆದು ಮೇಲೇರಿದರೆ ಅಂಕಿತಾ ಧಾರವಾಹಿಗಳಲ್ಲಿಯೇ ನಟಿಸಿಕೊಂಡಿದ್ದರು. ಸುಶಾಂತ್ ಸಾವಿನ ಸಂದರ್ಭ ರಿಯಾ ಚಕ್ರವರ್ತಿಯ ಹೆಸರು ಸುದ್ದಿಯಾದಷ್ಟೇ ಅಂಕಿತಾ ಹೆಸರೂ ಕೂಡಾ ಸುದ್ದಿಯಾಗಿತ್ತು. ಅಂತೂ ಅಂಕಿತಾ ಆತ್ಮೀಯ ಗೆಳೆಯನನ್ನು ಮದುವೆಯಾಗಿ ದಾಂಪತ್ಯ ಶುರು ಮಾಡಿದ್ದಾರೆ. ಈಗ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳೆತಿ ಗರ್ಭಿಣಿ (Pregnant) ಎನ್ನುವ ಸುದ್ದಿ ಹೊರಬಿದ್ದಿದೆ.


ಅಂಕಿತಾ ಲೋಖಂಡೆ ಸದ್ಯ ಗೋವಾದಲ್ಲಿ ತನ್ನ ಪತಿ ವಿಕ್ಕಿ ಜೈನ್ ಜೊತೆ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ನಟಿ ವಿಕ್ಕಿಯೊಂದಿಗೆ ತಮ್ಮ ಚಂದದ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಅಂಕಿತಾ ನೀಲಿ ಕಟೌಟ್ ಡ್ರೆಸ್‌ನಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಆದರೆ ಅಂಕಿತಾ ಅವರ ಫೋಟೋಗಳಲ್ಲಿ ಬೇಬಿ ಬಂಪ್ ಅನ್ನು ಗುರುತಿಸಿದ ನೆಟ್ಟಿಗರು ನಟಿ ಗರ್ಭಿಣಿಯಾಗಿದ್ದಾರೆಯೇ ಎಂದು ಆಶ್ಚರ್ಯ ಪಡುತ್ತಿದ್ದಾರೆ.

ಏನಿದೆ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ?

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೊಟೋಗಳನ್ನು ಹಂಚಿಕೊಂಡ ಅಂಕಿತಾ ಅದರ ಜೊತೆಗೊಂದು ಕ್ಯೂಟ್ ಕ್ಯಾಪ್ಶನ್ ಕೂಡಾ ಬರೆದಿದ್ದಾರೆ. ನೀವೇನಾಗಿದ್ದೀರೋ, ನೀವು ಹೇಗಿದ್ದೀರೋ ನೀವು ಮುಂದೆ ಹೇಗಿರುತ್ತೀರೋ ಅದಕ್ಕಾಗಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ನಟಿ ಬರೆದಿದ್ದಾರೆ.


ತಕ್ಷಣವೇ ನೆಟ್ಟಿಗರು ಫೋಟೋಗಳ ಕುರಿತು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, ನೀವು ಗರ್ಭಿಣಿಯೇ ಎಂದು ಕೇಳಿದ್ದಾರೆ. ಇನ್ನೊಬ್ಬರು ನಟಿ ಗರ್ಭಿಣಿ. ನನಗೆ 100% ಖಚಿತವಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Sushant Singh Rajput: ಬಾಲಿವುಡ್ ಬಿಗ್​ ಬಜೆಟ್ ಸಿನಿಮಾಗಳು ಬಾಯ್ಕಾಟ್, ಸುಶಾಂತ್ ಮಾತ್ರ ಫುಲ್ ಟ್ರೆಂಡಿಂಗ್! ಯಾಕೆ ಹೀಗೆ?

ಇತ್ತೀಚೆಗಷ್ಟೇ ರಕ್ಷಾ ಬಂಧನ ಆಚರಿಸಿದ ನಟಿ

ಈ ಹಿಂದೆ, ಪವಿತ್ರಾ ರಿಶ್ತಾ ನಟಿ ರಕ್ಷಾ ಬಂಧನ ಹಬ್ಬದ ಆಚರಣೆಯ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ವಿಕ್ಕಿ ಜೈನ್ ಅವರೊಂದಿಗಿನ ವಿವಾಹದ ನಂತರ ಇದು ಅವರ ಮೊದಲ ರಕ್ಷಾ ಬಂಧನವಾಗಿತ್ತು. ರಕ್ಷಾ ಬಂಧನದ ಸಂದರ್ಭದಲ್ಲಿ, ನಟಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಸುಂದರವಾದ ಫ್ಯಾಮಿಲಿ ಪೋಟೋಸ್​ಗಳನ್ನು ಶೇರ್ ಮಾಡಿದ್ದರು. ಇವು ವೈರಲ್ ಆಗಿದ್ದವು.

ಕ್ಲೂ ಬಿಟ್ಟುಕೊಟ್ಟಿದ್ದ ರಾಖಿ ಸಾವಂತ್

ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವರದಿಗಳು ಇತ್ತೀಚೆಗೆ ಸುದ್ದಿಯಾಗಿತ್ತು. ಪಾಪರಾಜಿಯೊಂದಿಗೆ ಮಾತನಾಡುವಾಗ ರಾಖಿ ಸಾವಂತ್ ಈ ಬಗ್ಗೆ ಸುಳಿವು ನೀಡಿದ ನಂತರ ಈ ವಿಚಾರವಾಗಿ ಚರ್ಚೆ ಪ್ರಾರಂಭವಾಯಿತು. ಅಂಕಿತಾ ಒಂದು ದಿನ ಒಳ್ಳೆಯ ಸುದ್ದಿ ನೀಡುತ್ತಾಳೆ ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಅರ್ಹಿಸುವ ಸಂತೋಷವನ್ನು ಏಕೆ ಪಡೆಯುತ್ತಿಲ್ಲ ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದು ರಾಖಿ ಸಾವಂತ್ ಹೇಳಿದ್ದರು.

ಇದನ್ನೂ ಓದಿ: Vijay Devarakonda: ಲೈಗರ್​ ಸಿನಿಮಾದಲ್ಲಿ ಒಂದೇ ಸಲಕ್ಕೆ 7 ಸೀನ್​ಗೆ ಕತ್ತರಿ! ಅಂಥಹ ದೃಶ್ಯಗಳೇನಿತ್ತು?

ಅಂಕಿತಾ ಬಗ್ಗೆ ರಹಸ್ಯವನ್ನು ಕೇಳಿದಾಗ ರಾಖಿ ಪ್ರತಿಕ್ರಿಯಿಸಿ, ಅವರು ಮಮ್ಮಿಯಾಗಲಿದ್ದಾಳೆ. ಅವರು ಗರ್ಭಿಣಿ, ನಾನು ಸುದ್ದಿ ಕೇಳಿದ್ದೇನೆ ಅಷ್ಟೆ, ಸತ್ಯ ಏನೆಂದು ನನಗೆ ತಿಳಿದಿಲ್ಲ ಎಂದು ರಾಖಿ ಹೇಳಿದ್ದಾರೆ.
Published by:Divya D
First published: