ಸತೀಶ್ ನೀನಾಸಂ ನೈಜ ಅಭಿನಯಕ್ಕೆ ಹೆಸರಾದ ನಟ. ಯಾವುದೇ ಪಾತ್ರವಿರಲಿ ಅದಕ್ಕೆ ಸಹಜತೆ ತುಂಬುವ ನಿಸ್ಸೀಮ ನೀನಾಸಂ ಸತೀಶ್. ಕೇವಲ ನಟರಾಗಿ ಅಲ್ಲ, ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಈಗಾಗಲೇ ರಾಕೆಟ್ ಹಾಗೂ ಅಂಜದ ಗಂಡು ಸಿನಿಮಾಗಳಿಗೆ ಒಂದೊಂದು ಹಾಡುಗಳನ್ನ ಹಾಡಿ ಸೈ ಎನಿಸಿಕೊಂಡಿದ್ದಾರೆ.
ಸದ್ಯ ಸತೀಶ್ ನೀನಾಸಂ ಅವರು ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಒಂದು ಹಾಡನ್ನ ಸಮರ್ಪಿಸಿದ್ದಾರೆ. ತಮ್ಮದೇ ದನಿಯಾಲ್ಲಿ ಪಕ್ಕ ಲೋಕಲ್ ಶೈಲಿಯಲ್ಲಿ, ಅಂಬಿಯ ಗುಣಗಳನ್ನು, ವ್ಯಕ್ತಿತ್ವವನ್ನ ಹಾಡಿ ಹೊಗಳಿ ಸಂಭ್ರಮಿಸಿದ್ದಾರೆ.
Ambareesh Birthday: ರೆಬೆಲ್ಸ್ಟಾರ್ ಅಂಬರೀಶ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ಕೋರಿದ ದರ್ಶನ್
ಸ್ಟಾರ್ ನಟರ ಇಂಟ್ರಡಕ್ಷನ್ ಹಾಡುಗಳಿಗೆ ಭರ್ಜರಿ ಪದಗಳನ್ನು ಕಟ್ಟುವಲ್ಲಿ ಫೇಮಸ್ ಆಗಿರುವ ಚೇತನ್ ಈ ಹಾಡಿಗಾಗಿ ಪೆನ್ನು ಹಿಡಿದಿದ್ದಾರೆ. "ಮಂಡ್ಯದ ಗಂಡು ಕಲ, ಕನ್ನಡದ ಆಸ್ತಿ ಕಲ, ದೋಸ್ತಿಗೆ ಬ್ರಾಂಡು ಕಲ ನಮ್ ಜಲೀಲ" ಅನ್ನೋ ಸಾಲುಗಳ ಮೂಲಕ ಅಂಬಿ ಅಭಿಮಾನಿಗಳ ಬಾಯಲ್ಲಿ ನಲಿದಾಡುವಂತೆ ಮಾಡಿದ್ದಾರೆ.
ರಷ್ಯಾ ಭಾಷೆಯಲ್ಲೂ ಬಾಹುಬಲಿ ಅಬ್ಬರ; ಭಾರತದ ರಾಯಭಾರಿ ಕಚೇರಿಯಿಂದ ಟ್ವೀಟ್
ಯೂಟ್ಯೂಬ್ನ A2 ಮ್ಯೂಸಿಕ್ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ