ಜೂಟಾಟ ಆಡುತ್ತಿದ್ದಾರೆ ಅನಿತಾ ಭಟ್!; ಗ್ಲಾಮರಸ್​ ರೋಲ್​ನಲ್ಲಿ ಸೈಕೋ ಸುಂದರಿ

ನಾಗೇಶ್ ಕಾರ್ತಿ ಎಂಬ ನಿರ್ದೇಶಕರ ಚೊಚ್ಚಲ ಸಿನಿಮಾ ಇದು. 10 ವರ್ಷಗಳ ಕಾಲ ಬೇರೆ ಬೇರೆ ನಿರ್ದೇಶಕರ ಜೊತೆ ಸಹಾಯಕರಾಗಿ ದುಡಿದ ಅನುಭವ ನಾಗೇಶ್ ಬೆನ್ನಿಗಿದೆ. ಮಹೇಶ್ ಚೈತನ್ಯ ಕಥೆ ಚಿತ್ರಕತೆ ಬರೆದಿದ್ದು, ಕೆ ಎಮ್​ ಪ್ರೊಡಕ್ಷನ್​ನಡಿಯಲ್ಲಿ ಸಿನಿಮಾ ಮೂಡಿಬಂದಿದೆ.

ನಟಿ ಅನಿತಾ ಭಟ್

ನಟಿ ಅನಿತಾ ಭಟ್

  • Share this:
ಕೊರೋನಾ ಕಾಲದಲ್ಲಿ ಯಾವುದೇ ಹೊಸ ಸಿನಿಮಾಗಳ ಶೂಟಿಂಗ್ ನಡೀತಿಲ್ಲ. ಆದರೆ ಈಗಾಗಲೇ ಶೂಟಿಂಗ್ ಸ್ಟಾರ್ಟ್ ಮಾಡಿ, ಅರ್ಧಕ್ಕೆ ನಿಂತಿದ್ದ ಸಿನಿಮಾಗಳು‌ ಮುಂದುವರೆಸಬಹುದು ಅಂತ ಸರ್ಕಾರ ಹೇಳಿದೆ.‌ ಒಂದಷ್ಟು ಮಾರ್ಗಸೂಚಿಗಳನ್ನ ನೀಡಿದೆ. ಅದರಂತೆ ಸ್ಯಾಂಡಲ್ ವುಡ್ ನಲ್ಲಿ ಒಂದಷ್ಟು ಸಿನಿಮಾಗಳು ಕೊರೋನಾ ನಿಯಮವನ್ನ‌ ಪಾಲಿಸಿ ಶೂಟಿಂಗ್ ಕಂಪ್ಲೀಟ್ ಮಾಡಿವೆ.

ಇದೇ ಸಾಲಿಗೆ ಅನಿತಾ ಭಟ್ ನಟನೆಯ ‘ಜೂಟಾಟ’ ಸಿನಿಮಾ ಸಹ ಸೇರುತ್ತೆ. ಲಾಕ್ ಡೌನ್ ಗೂ ಮುನ್ನವೇ ಒಂದಷ್ಟು ಶೂಟಿಂಗ್ ನಡೆಸಿ ಸ್ಟಾಪ್ ಆಗಿತ್ತು ಜೂಟಾಟ ಸಿನಿಮಾ. ಈಗ ಸರ್ಕಾರದ ಅನುಮತಿ ಸಿಕ್ಕಮೇಲೆ 20 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿ ಕುಂಬಳಕಾಯಿ ಹೊಡೆಯಲಾಗಿದೆ. ಎಂದಿನಂತೆ ಈ ಸಿನಿಮಾದಲ್ಲೂ ಗ್ಲಾಮರಸ್ ರೋಲ್ ನಲ್ಲಿ ಅನಿತಾ ಭಟ್ ಕಾಣಿಸಿಕೊಂಡಿದ್ದು. ಅವರ ಪಾತ್ರದ ಮೂಲಕ ಸಮಾಜಕ್ಕೊಂದು ಸಂದೇಶ ಸಹ ಇದೆಯಂತೆ.

ಇನ್ನು ಯಶ್ ಗೆಳೆಯ ಗಿರಿ ಜೊತೆಗೆ ಅಶೋಕ್​, ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರ್​ ಮನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಜೂಟಾಟ’ ಹೆಸರಿಗೆ ತಕ್ಕಂತೆ ಪಕ್ಕಾ ಹಾಸ್ಯಮಯ ಚಿತ್ರವಾಗಿದ್ದು. ನಗು ನಗಿಸುತ್ತಲೇ ಬೆಚ್ಚಿ ಬೀಳಿಸೋ ಹಾರರ್ ಕಂಟೆಂಟ್ ಅನ್ನ ಸಹ ಒಳಗೊಂಡಿದೆಯಂತೆ.

ನಾಗೇಶ್ ಕಾರ್ತಿ


ನಾಗೇಶ್ ಕಾರ್ತಿ ಎಂಬ ನಿರ್ದೇಶಕರ ಚೊಚ್ಚಲ ಸಿನಿಮಾ ಇದು. 10 ವರ್ಷಗಳ ಕಾಲ ಬೇರೆ ಬೇರೆ ನಿರ್ದೇಶಕರ ಜೊತೆ ಸಹಾಯಕರಾಗಿ ದುಡಿದ ಅನುಭವ ನಾಗೇಶ್ ಬೆನ್ನಿಗಿದೆ. ಮಹೇಶ್ ಚೈತನ್ಯ ಕಥೆ ಚಿತ್ರಕತೆ ಬರೆದಿದ್ದು, ಕೆ ಎಮ್​ ಪ್ರೊಡಕ್ಷನ್​ನಡಿಯಲ್ಲಿ ಸಿನಿಮಾ ಮೂಡಿಬಂದಿದೆ. ತೆಲುಗಿನಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಐಸ್ ಕ್ರೀಮ್ ಚಿತ್ರಕ್ಕೆ ಸಂಗೀತ ನೀಡಿದ್ದ ಪ್ರದ್ಯೋತ್ತಮ ಜೂಟಾಟಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಕೊರೋನಾ ಕಾಲದಲ್ಲೇ ಶೂಟಿಂಗ್ ಮುಗಿಸಿರೋ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು. ಥಿಯೇಟರ್ ರಿ-ಓಪನ್ ಆಗುವಷ್ಟರಲ್ಲಿ ಎಲ್ಲಾ ಕೆಲಸ ಮುಗಿಸಿ ರಿಲೀಸ್ ಗೆ ಸಜ್ಜಾಗಿರಲಿದೆ‌.

ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ!; ನೆಟ್ಟಿಗನಿಗೆ ನಟಿ ಕೊಟ್ಟ ಉತ್ತರವೇನು ಗೊತ್ತಾ?
Published by:Harshith AS
First published: