Anita Bhat: ಟ್ರೋಲ್‍ ಮಾಡುವವರಿಗೆ ಸೈಕೋ ಸುಂದರಿಯ ಕ್ಲಾಸ್​: ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ...!

ಎಲ್ಲಿ ಹಿಂದುತ್ವ ಅಥವಾ ಹಿಂದು ಸಂಸ್ಕಂತಿಯ ಬಗ್ಗೆ ಮಾತನಾಡಿದರೂ ಅಲ್ಲಿಗೆ ಬಂದು ಅಟ್ಯಾಕ್ ಮಾಡುತ್ತಾರೆ. ಆರ್​ಎಸ್‍ಎಸ್‍ ಅನ್ನು ತಾಲಿಬಾನ್‍ಗೆ ಹೋಲಿಸುವುದು. ಹೀಗೆ ನಮ್ಮ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡುವುದೇ ಕೆಲವರ ಕೆಲಸ ಎಂದು ಅಸಮಾಧಾನ ಹೊರ ಹಾಕುತ್ತಾರೆ ಅನಿತಾ ಭಟ್.

ನಟಿ ಅನಿತಾ ಭಟ್​

ನಟಿ ಅನಿತಾ ಭಟ್​

  • Share this:
ಸೆಲೆಬ್ರಿಟಿಗಳು ಅಂದರೆ ಸಾಫ್ಟ್ ಟಾರ್ಗೆಟ್ ಅನ್ನೋ ಮಾತಿದೆ. ಅದು ಸೋಷಿಯಲ್ ಮೀಡಿಯಾಗಳ ದರ್ಬಾರಿನ ಈ ಕಾಲದಲ್ಲಿ ಅದು ನೂರಕ್ಕೆ ನೂರು ಸತ್ಯ ಕೂಡ ಹೌದು. ಅದರಲ್ಲಂತೂ ನಟಿಮಣಿಯರು ಅಂದರೆ ಮತ್ತಷ್ಟು ಸಾಫ್ಟ್ ಟಾರ್ಗೆಟ್ ಆಗಿರುತ್ತಾರೆ. ಟ್ರೋಲ್‍ಗಳ ಆಟಕ್ಕೆ, ಅಂದಾಭಿಮಾನಿಗಳ ಕಾಟಕ್ಕೆ ಹೆದರಿ ಹಲವು ಮಂದಿ ನಟಿಮಣಿಯರು ಸೋಷಿಯಲ್ ಮೀಡಿಯಾಗೆ ಗುಡ್‍ಬೈ ಹೇಳಿರುವ, ಕಮೆಂಟ್‍ಗಳನ್ನು ನೋಡದಿರುವ ಅಥವಾ ಅಂತರ ಕಾಯ್ದುಕೊಂಡಿರುವ ಹಲವು ಉದಾಹರಣೆಗಳಿವೆ. ಆದರೆ, ಸೈಕೋ  ಸಿನಿಮಾ ಖ್ಯಾತಿಯ ಸುಂದರಿ ಟಗರು ಚಿತ್ರದ ಗ್ಲಾಮರಸ್ ಚೆಲುವೆ ಅನಿತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಪರ್ಸನಲ್ ಅಟ್ಯಾಕ್ ಮಾಡಲು ಬಂದ ವ್ಯಕ್ತಿಯೊಬ್ಬನಿಗೆ ಪೊಲೀಸರ ಮೂಲಕ ಉತ್ತರ ನೀಡಿದ್ದಾರೆ.

ಹೌದು, ಖುದ್ದು ನಟಿ ಅನಿತಾ ಭಟ್ ಅವರೇ ಹೇಳುವ ಪ್ರಕಾರ, `ಟ್ವಿಟರ್​ನಲ್ಲಿ ನಾನು ಕಳೆದ ಎರಡು ವರ್ಷಗಳಿಂದ ಪ್ರೊಫೈಲ್ ಕ್ರಿಯೇಟ್ ಮಾಡಿದ್ದೆ. ಹೆಚ್ಚು ಆಕ್ಟೀವ್​ ಆಗಿದ್ದೇನೆ ಕೂಡ. ನನ್ನ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಂ ಪ್ರೊಫೈಲ್‍ಗಳನ್ನ ಬೇರೆ ಪಿಆರ್ ತಂಡ ನೋಡಿಕೊಳ್ಳುತ್ತದೆ. ಆದರೆ ಟ್ವಿಟರ್​ ಅನ್ನು ನಾನೇ ಮ್ಯಾನೇಜ್ ಮಾಡುತ್ತಿದ್ದೇನೆ. ಟ್ವಿಟರ್​ನಲ್ಲಿ ನಮ್ಮ ಅಭಿಪ್ರಾಯವನ್ನು ಓಪನ್‍ ಆಗಿ ಹೇಳಿಕೊಳ್ಳಲು ಅವಕಾಶವಿದೆ. ಪ್ರಸ್ತುತ ವಿದ್ಯಾಮಾನದ ಬಗ್ಗೆ, ಭಾರತದ ಇತಿಹಾಸ, ನಮ್ಮ ಸಂಸ್ಕಂತಿ ಬಗ್ಗೆ ಆಗಾಗ ಪೋಸ್ಟ್​ಗಳನ್ನು ಮಾಡುತ್ತಿರುತ್ತೇನೆ. ಅದಕ್ಕೆ ಪರ ಹಾಗೂ ವಿರೋಧದ ಕಮೆಂಟ್‍ಗಳೂ ಸಹ ಬರುತ್ತಿರುತ್ತವೆ. ನಾನು ಎಲ್ಲವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಿದ್ದೆ. ಕೆಲವರು ಬೇರೆ ರೀತಿ ಮಾತನಾಡಿದಾಗ ಸಮಾಧಾನದಿಂದಲೇ ಉತ್ತರ ಕೊಟ್ಟಿದ್ದೇನೆ ಕೂಡ' ಎಂದು ಹೇಳಿಕೊಳ್ಳುತ್ತಾರೆ.


View this post on Instagram


A post shared by Anita Bhat (@iamanitabhat)


ಆದರೆ, ದಿನಕಳೆದಂತೆ ಈಗೀಗ ಹರಾಸ್‍ಮೆಂಟ್ ಹೆಚ್ಚಾಗುತ್ತಿದೆ ಎಂಬುದು ಅವರ ಅಭಿಪ್ರಾಯ. ಮಾತ್ರವಲ್ಲ ಬೇರೆ ಸಾಮಾಜಿಕ ಜಾಲತಾಣಗಳಿಗೆ ಹೋಲಿಸಿದರೆ ದ್ವೇಷದ ಭಾವನೆಗಳು ಟ್ವಿಟರ್​ನಲ್ಲಿ ಬೇಗ ಜಾಸ್ತಿ ಹಬ್ಬುತ್ತೆ ಎಂಬುದು ಅವರ ಅಭಿಮತ.

ಅನಿತಾ ಭಟ್ ಹಾಗೇ ಹೇಳಲು ಕಾರಣವೂ ಇದೆ. ಅದೇನೆಂದರೆ, `ನಮ್ಮ ಅಭಿಪ್ರಾಯ ಹೇಳಿದರೆ, ಅದು ಸರಿ ಇದೆಯೋ ಅಥವಾ ಸರಿ ಇಲ್ಲ ಎಂದು ಹೇಳದೇ, ವೈಯಕ್ತಿಕ ವಿಷಯಗಳ ಬಗ್ಗೆ ಕಮೆಂಟ್ ಮಾಡುವುದು, ತೇಜೋವಧೆ ಮಾಡಲು ಪ್ರಾರಂಭಿಸುತ್ತಾರೆ. ಯಾವಾಗ ಒಂದು ವಿಷಯದ ಬಗ್ಗೆ ಅವರ ಬಳಿ ಮಾತನಾಡಲು ಮಾಹಿತಿ ಇರುವುದಿಲ್ಲವೋ ಆಗ ಪರ್ಸನಲ್ ಅಟ್ಯಾಕ್‍ಗೆ ಇಳಿಯುತ್ತಾರೆ. ನೀನು ಏನು ಅಂತ ಗೊತ್ತು, ನೀನು ಯಾವ ರೀತಿಯ ಸಿನಿಮಾ ಮಾಡಿದ್ದೀಯಾ ಅಂತ ಗೊತ್ತು, ನಿನ್ನ ಸಿನಿಮಾ ಯಾವುದೂ ಹಿಟ್ ಆಗಿಲ್ಲ, ಅದಕ್ಕೇ ಇಲ್ಲಿ ಬಂದು ಫೇಮಸ್ ಆಗುತ್ತಿದ್ದೀಯಾ, ಅದಕ್ಕಾಗಿಯೇ ಈ ರೀತಿ ಪೋಸ್ಟ್ ಮಾಡಿದ್ದೀಯಾ ಅಂತೆಲ್ಲಾ ಟ್ರೋಲ್ ಮಾಡಲು ಪ್ರಾರಂಭಿಸುತ್ತಾರೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅನಿತಾ ಭಟ್.

ಇದನ್ನೂ ಓದಿ: ದಿವ್ಯಾ ಸುರೇಶ್​ ಕುಟುಂಬವನ್ನು ಭೇಟಿ ಮಾಡಿದ Bigg Boss Kannada Season 8ರ ವಿನ್ನರ್​ ಮಂಜು ಪಾವಗಡ

ಅವರೂ ಕೂಡ ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯಲಹಂಕ ಸೈಬರ್ ಕ್ರೈಮ್ ಪೊಲೀಸರಿಗೆ ಟ್ವಿಟರ್​ನಲ್ಲಿ ತಮ್ಮ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿದ ವ್ಯಕ್ತಿಯೊಬ್ಬನ ಬಗ್ಗೆ ದೂರು ನೀಡಿದ್ದಾರೆ. `ಶ್ರೀರಾಮನ ಫೋಟೋ ಇರುವ ಟೀಶರ್ಟ್ ಅನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದೆ. ನಾಥೂರಾಮ್ ಗೋಡ್ಸೆ ಅವರಿಗೆ ಸಂಬಂಧಪಟ್ಟ ಪುಸ್ತಕ ಓದುತ್ತಿರುವ ಫೋಟೋ ಅದು. ಅಷ್ಟಕ್ಕೇ ನೀವು ಮನುಸ್ಮತಿಯವರು, ಸಂವಿಧಾನ ವಿರೋಧಿ ಅಂತೆಲ್ಲ ಪರ ವಿರೋಧಗಳ ಚರ್ಚೆ ಪ್ರಾರಂಭವಾಯಿತು. ಕೆಲ ಟ್ರೋಲ್‍ಗಳು ತುಂಬ ಕೆಟ್ಟದಾಗಿ ಕಮೆಂಟ್ ಮಾಡತೊಡಗಿದರು. ಅದನ್ನು ಹೇಳಲು ನನಗೆ ಇಷ್ಟವಾಗುತ್ತಿಲ್ಲ ಹಾಗೆಲ್ಲ ಟ್ವೀಟ್ ಮಾಡಿದ್ದಾರೆ. ಆಗ ನನಗೆ ತುಂಬಾ ಬೇಸರವಾಯಿತು. ಇಷ್ಟು ದಿನ ತುಂಬಾ ಸಹಿಸಿಕೊಂಡಿದ್ದೆ. ಸಮಾಜದಲ್ಲಿ ನನ್ನದೇ ಆದ ಸ್ಥಾನಮಾನವಿದೆ, ಚಿತ್ರರಂಗದಲ್ಲಿ ನನ್ನದೇ ಆದ ಹೆಸರಿದೆ ಹಾಗಂತ ಹೀಗೆ ಕೆಟ್ಟ ರೀತಿಯಲ್ಲಿ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ಇವರ ಮೇಲೆ ಕ್ರಮ ಕೈಗೊಳ್ಳಲೇಬೇಕು ಅಂತ ತೀರ್ಮಾನಿಸಿ, ಪೊಲೀಸ್ ದೂರು ನೀಡಿದ್ದೇನೆ ಎಂದಿದ್ದಾರೆ.

ಅನಿತಾ ಭಟ್​ ಮಾಡಿರುವ ಟ್ವೀಟ್​ ಲಿಂಕ್​...ಎಲ್ಲಿ ಹಿಂದುತ್ವ ಅಥವಾ ಹಿಂದು ಸಂಸ್ಕಂತಿಯ ಬಗ್ಗೆ ಮಾತನಾಡಿದರೂ ಅಲ್ಲಿಗೆ ಬಂದು ಅಟ್ಯಾಕ್ ಮಾಡುತ್ತಾರೆ. ಆರ್​ಎಸ್‍ಎಸ್‍ ಅನ್ನು ತಾಲಿಬಾನ್‍ಗೆ ಹೋಲಿಸುವುದು. ಹೀಗೆ ನಮ್ಮ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡುವುದೇ ಕೆಲವರ ಕೆಲಸ ಎಂದು ಅಸಮಾಧಾನ ಹೊರ ಹಾಕುತ್ತಾರೆ ಅನಿತಾ ಭಟ್.

ಇದನ್ನೂ ಓದಿ: Actress Leelavathi ಮನೆಗೆ ಭೇಟಿ ಕೊಟ್ಟು ಸಂತೋಷದಿಂದ ಕಾಲ ಕಳೆದ ಭಾರತಿ ವಿಷ್ಣುವರ್ಧನ್​-ಹೇಮಾ ಚೌಧರಿ

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ತಾವು ಏನು ಬೇಕಾದರೂ ಬರೆಹಬಹುದು, ಯಾರನ್ನು ಬೇಕಾದರೂ ಟಾರ್ಗೆಟ್ ಮಾಡಿ ನಿಂದಿಸಬಹುದು, ಅಪಹಾಸ್ಯ ಮಾಡಬಹುದು ಎಂದು ಫೇಕ್ ಪ್ರೊಫೈಲ್‍ಗಳನ್ನು ಬಳಸಿಕೊಂಡು ಸೆಲೆಬ್ರಿಟಿಗಳಿಗೆ ಕಾಟ ಕೊಡುವ ಮಂದಿಗೂ ನಟಿ ಅನಿತಾ ಭಟ್ `ಸಾಮಾಜಿಕ ಜಾಲತಾಣದಲ್ಲಿ ಇರುವವರಿಗೆ ವೈಯಕ್ತಿಕ ನಿಂದನೆ ಮಾಡುವ ಅವಶ್ಯಕತೆಯೇ ಇಲ್ಲ. ನಿಮ್ಮ ವಾದ ಏನೇ ಇದ್ದರೂ, ಅದು ಆರೋಗ್ಯಯುತ ಚರ್ಚೆಯಾಗಿ, ಮಾಹಿತಿ ವಿನಿಮಯವಾಗಲಿ, ಅದರ ಬಗ್ಗೆ ಯಾವುದೇ ತೊಂದರೆ ಇಲ್ಲ. ಸೆಲೆಬ್ರಿಟಿ ಅದರಲ್ಲೂ ಫೀಮೇಲ್ ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಪರ್ಸನಲ್ ಅಟ್ಯಾಕ್ ಮಾಡಿ ಟ್ರೋಲ್ ಮಾಡುವುದು ಬೇಡ. ನಾನು ಯಾವಾಗ ಅವರನ್ನು ವಿರೋಧಿಸಿದೆ, ಆಗ ಹಲವು ಹೆಣ್ಣುಮಕ್ಕಳು ನಮಗೂ ಇದೇ ರೀತಿ ತೊಂದರೆ ಕೊಟ್ಟಿದ್ದರು ಎಂದು ಮೆಸೇಜ್ ಮಾಡಿದ್ದರು' ಎಂದು ಕಿವಿಮಾತು ಹೇಳುತ್ತಾರೆ.
Published by:Anitha E
First published: