Jote Joteyali: ವಿಷ್ಣುವರ್ಧನ್‌ರಿಗೆ ಆದ ಸ್ಥಿತಿಯೇ ನಂಗೂ ಆಗಿದೆ, ಕರೆದ್ರೆ ಮತ್ತೆ ಸೀರಿಯಲ್‌ನಲ್ಲಿ ನಟಿಸ್ತೀನಿ-ಅನಿರುದ್ಧ್

ಭಾರತಿ ವಿಷ್ಣು ವರ್ಧನ್ ಸಹ ಹೇಳಿದ್ರು ವಿಷ್ಣುಗಾಗಿರೋದೆ ನಿನಗಾಗಿರೋದು ಎಂದು. ಅವರದೇ ನೆನಪು ಬಂದಿದೆ. ನಮ್ಮ ಕುಟುಂಬಕ್ಕೆ ಹೋರಾಟ ಹೊಸದಲ್ಲ. ನಾನು ಆ ಪಾತ್ರವನ್ನು ಒಪ್ಪಿಕೊಳ್ಳೊದಕ್ಕೆ ಪ್ರಮುಖ ಕಾರಣ ಆರ್ಯವರ್ಧನ್ ಪಾತ್ರ, ಮತ್ತೆ ಅಭಿನಯಿಸಲು ಸಿದ್ಧನಿದ್ದೇನೆ ಎಂದು ಅನಿರುದ್ಧ್​ ಹೇಳಿದ್ದಾರೆ

ನಟ ಅನಿರುದ್ಧ್

ನಟ ಅನಿರುದ್ಧ್

  • Share this:
ಜೊತೆ ಜೊತೆಯಲಿ (Jote Joteyali) ಸೀರಿಯಲ್​ನಿಂದ ನಟ ಅನಿರುದ್ಧ್ (Aniruddha) ಅವರನ್ನು ತೆಗೆದುಹಾಕಿದ್ದಾರೆ. ಸೀರಿಯಲ್ ಸೆಟ್​​ನಲ್ಲಿ ಅನಿರುದ್ಧ್ ಅವರ ವರ್ತನೆ ಅತಿರೇಕಕ್ಕೆ ತಿರುಗಿದ ಹಿನ್ನೆಲೆ ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಗಿದೆ ಎಂದು ನಿರ್ಮಾಪಕ ಆರೂರು ಜಗದೀಶ್ ಹೇಳಿದ್ದರು. ಇವತ್ತು ಮತ್ತೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಅನಿರುದ್ಧ್​ , ನನ್ನ ತಪ್ಪೇನು ಇಲ್ಲ ಅಂತಿದ್ದಾರೆ. ನಿರ್ಮಾಪಕ ಆರೋಪಗಳೆಲ್ಲಾ ಸುಳ್ಳು, ​ಜೊತೆ ಜೊತೆಯಲ್ಲಿ ಸೀರಿಯಲ್ (Serial) ಸೆಟ್ ನಲ್ಲಿ ಅಹಂಕಾರ ನೋಡಿದ್ದೀರಾ? ಸೆಟ್ ನಲ್ಲಿ ಕೆಲಸಕ್ಕಾಗಿ ಜಗಳ ಮಾಡಿದ್ದೀನಿ ಅಷ್ಟೇ, ಇದು ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು ಆದ್ರೆ ಬೀದಿಗೆ ತರಬಾರದು ಎಂದ್ರು. ಇಷ್ಟು ರದ್ಧಾಂತ ಆದ ಮೇಲೂ ಅವರ ಜೊತೆ ಆಕ್ಟ್ ಮಾಡೋದು ಸುಲಭ ಅಲ್ಲ, ಆದರೂ ಅವರು ಕರೆದ್ರೆ ನಾನು ಅಭಿನಯಿಸಲು ಸಿದ್ಧ

ನಂಗೆ ಯಾವ ದುರಂಹಕಾರವೂ ಇಲ್ಲ

ಮನುಷ್ಯನಿಗೆ ಕೋಪ ಸಹಜ, ನಾನು ಕೂಡ ಸಾಮಾಜಿಕ ಕೆಲಸ ಮಾಡ್ತೀನಿ. ಕಸದ ಹತ್ತಿರ ನಿಂತು ವಿಡಿಯೋ ಮಾಡಿದ್ದೀನಿ. ದುರಂಹಕಾರ ಅಹಂಕಾರ ಇದ್ದಿದ್ರೆ ಇತರ ಮಾಡ್ತಿದ್ದನಾ? ಜನರ ಹಾರೈಕೆ ಸಿಕ್ಕಿರೋ ಯಶಸ್ಸು ಟೀಮ್ ವರ್ಕ್ ನಿಂದ, ಇದಕ್ಕಿಂತ ಹಿಂದೆ ಸಿನಿಮಾಗಳಿಗೂ ಯಶಸ್ಸು ಸಿಕ್ಕಿದೆ. ನನ್ನ ಅಭಿನಯಕ್ಕೆ ತುಂಬಾ ಜನ ಒಳ್ಳೆಯ ಮಾತು ಹೇಳಿದ್ದಾರೆ. ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ ಇದಕ್ಕಿಂತ ಯಶಸ್ಸು ಬೇಕಾ..? 20‌ ದಾಖಲೆಗಳನ್ನ  ಮಾಡಿದ್ದೀನಿ ಇದು ಯಶಸ್ಸು, ಇತರ ಸಾಕಷ್ಟು ಯಶಸ್ಸು ಇದೆ ಎಂದು ಅನಿರುದ್ಧ್​ ಹೇಳಿದ್ದಾರೆ.

ಇವತ್ತಿಗೂ ನಾನು ಹೀರೋನೇ

ನನ್ನ ಪ್ರೀತ್ಸೋ ನನ್ನ ಮಕ್ಕಳ ಕಣ್ಣಲ್ಲಿ ನಾನು ಇವತ್ತಿಗೂ ಹೀರೋನೇ, ಜೀವನದಲ್ಲಿ ಸಂಘರ್ಷ ಇದ್ರೇನೆ ಜೀವನ ನಾನು ಎದುರಿಸುತ್ತಿದ್ದೇನೆ. ನನಗೆ ಯಾವ ರೀತಿಯ ಇನ್ ಸೆಕ್ಯೂರಿಟಿ ಇಲ್ಲ. ಕೋಡೋನು ದೇವರು, ನಾನು ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ ನನಗೆ ಒಳ್ಳೇದೆ ಆಗುತ್ತೆ. ನನಗೆ ಕೆಲಸ ಸಿಕ್ಕೇ ಸಿಗುತ್ತೆ ನನಗೆ ಅಭಿನಯ ಒಂದೇ ಅಲ್ಲ‌ಸಾಕಷ್ಟು ವಿಭಾಗಗಳಲ್ಲಿ ಕೆಲಸ ಮಾಡಿದ್ದೀನಿ, ಈಗಂತೂ ನನ್ನ ಅಭಿನಯವನ್ನು ಎಷ್ಟೋಂದು ಜನ ಇಷ್ಟ ಪಟ್ಟಿದ್ದಾರೆ.

Anirudh gave a shock to the serial team I will do a press meet and give an explanation
ನಟ ಅನಿರುದ್ಧ್​


ಜೊತೆ ಜೊತೆ ಕಲಾವಿದರು ನನ್ನ ಜೊತೆ ಇದ್ದಾರೆ

ದೇವ್ರು ಮುಂದೆಯೂ ಕೊಡ್ತಾನೆ, ಅವರು ನನ್ನ ಹತ್ತಿರ ಬಂದು ಚರ್ಚೆ ಮಾಡಬಹುದಿತ್ತು. ಅವರು ನೇರವಾಗಿ ನನ್ನ ಹತ್ತಿರ ಕೇಳಬಹುದಿತ್ತು. ಜೊತೆ ಜೊತೆಯಲ್ಲಿ ತಂಡದ ಕಲಾವಿದರು ನನ್ನ ಜೊತೆ ಇದ್ದೇವೆ ಅಂತ ಹೇಳಿದ್ದಾರೆ. ನಾನು ಕ್ಯಾರೆವನ್ ಕೇಳಲು ಹುಚ್ಚನಾ? ಹೆಣ್ಣುಮಕ್ಕಳಿಗೋಸ್ಕರ ಕೇಳಿರೋದು. ಎರಡು ವರ್ಷ ಯಾವ ಚಾನೆಲ್ ನಲ್ಲೂ ಆ್ಯಕ್ಟ್ ಮಾಡಬಾರದು ಅಂತ ನಿರ್ಬಂಧ ಹಾಕಿದ್ದಾರೆ.

ವಿಷ್ಣು ವರ್ಧನ್​ರಿಗೂ ಇಂತಹದ್ದೇ ಸ್ಥಿತಿ ಬಂದಿತ್ತು

ಭಾರತಿ ವಿಷ್ಣು ವರ್ಧನ್ ಸಹ ಹೇಳಿದ್ರು ವಿಷ್ಣುಗಾಗಿರೋದೆ ನಿನಗಾಗಿರೋದು ಎಂದು. ಅವರದೇ ನೆನಪು ಬಂದಿದೆ. ಅಂದರು ನಮ್ಮ ಕುಟುಂಬಕ್ಕೆ ಹೋರಾಟ ಹೊಸದಲ್ಲ. ನಾನು ಆ ಪಾತ್ರವನ್ನು ಒಪ್ಪಿಕೊಳ್ಳೊದಕ್ಕೆ ಪ್ರಮುಖ ಕಾರಣ ಆರ್ಯವರ್ಧನ್ ಪಾತ್ರ. ನಾನು ನೆಗೆಟಿವ್ ಮಾಡಲ್ಲ ಅಂತ ಹೇಳಿಲ್ಲ. ಆರ್ಯವರ್ಧನ್ ವಿಲನ್ ಆಗಲ್ಲ ಅಂತ ಜಗದೀಶ್ ಅವ್ರೇ ಹೇಳಿದ್ದು, ನಾನು ಸಾಕಷ್ಟು ಸಂಚಿಕೆಯಲ್ಲಿ ವಿಲನ್ ಆಗಿ ಮಾಡಿದ್ದೀನಿ. ನಿರ್ಮಾಪಕರ ಸಂಘಕ್ಕೆ ನಾನು ಯಾರು ಯಾವ ರೀತಿ ಇರ್ತಿನಿ ಅಂತ ಅವರಿಗೆ ಗೊತ್ತಿಲ್ಲ ಎಂದು ಅನಿರುದ್ಧ್​ ಹೇಳಿದ್ದಾರೆ.

ಇದನ್ನೂ ಓದಿ: Jote Joteyali: ಮತ್ತೆ ಶೂಟಿಂಗ್​ಗೆ ಹೋಗಲು ರೆಡಿ ಎಂದ್ರು ಆರ್ಯವರ್ಧನ್​; ಅನಿರುದ್ಧ್​ ನಮಗೆ ಬೇಡವೇ ಬೇಡ ಎಂದ್ರು ನಿರ್ಮಾಪಕ

ಮತ್ತೆ ಅವ್ರು ಕರೆದ್ರೆ ನಾನು ಆಕ್ಟ್ ಮಾಡ್ತಿನಿ

ಸಂಭಾವನೆ ವಿಚಾರದಲ್ಲಿ ಒಂದು ವರ್ಷದ ನಂತ್ರ ಜಾಸ್ತಿ ಕೇಳ್ತಿನಿ ಅಂತ ಹೇಳಿದ್ದೆ. ಮೊದಲಿಗೆ ನನಗೆ ಅವರು ಕೊಡೊ ಸಂಭಾವನೆ ಕಡಿಮೆ. ಮೂರು ದಿನಗಳ ಕೆಲಸವನ್ನು ಎರಡು ದಿನಗಳಲ್ಲಿ ತೆಗೆದಿದ್ದಾರೆ. ಒಂದುವರೆ ವರ್ಷದ ನಂತರ ನನಗೆ ಸಂಭಾವನೆ ಹೆಚ್ಚಾಯ್ತು. ಇಷ್ಟೆಲ್ಲಾ ಆದ್ರು ಮತ್ತೆ ಅವ್ರು ನನ್ನ ಜೊತೆ ಮಾತನಾಡಿದ್ರೆ ನಾನು ಆಕ್ಟ್ ಮಾಡ್ತಿನಿ. ಇಷ್ಟು ರದ್ಧಾಂತ ಆದ ಮೇಲೂ ಅವರ ಜೊತೆ ಆಕ್ಟ್ ಮಾಡೋದು ಸುಲಭ ಅಲ್ಲಅದ್ರು  ನನ್ನ ಪಾತ್ರಕ್ಕಾಗಿ ಅಭಿಮಾನಿಗಳಿಗಾಗಿ ನಾನು ಆಕ್ಟ್ ಮಾಡ್ತಿನಿ ಎಂದು ಅನಿರುದ್ಧ್​ ಹೇಳಿದ್ದಾರೆ.
Published by:Pavana HS
First published: