Jote Joteyali: ಎರಡು ದಿನಗಳಿಂದ ನ್ಯೂಸ್ ನೋಡಿಲ್ಲ, ಜೊತೆ ಜೊತೆಯಲಿ ಏನಾಗುತ್ತೋ ಗೊತ್ತಿಲ್ಲ- ನಟಿ ಮೇಘಾಶೆಟ್ಟಿ

ಸೀರಿಯಲ್​ ಸೆಟ್​ ನಲ್ಲಿ ಗಲಾಟೆ ಆಗಿದ್ದು ನಿಜ. ಸಣ್ಣ ಪುಟ್ಟ ಗಲಾಟೆಗಳು ಸಹ ನಡೆಯುತ್ತಿರುತ್ತೆ. ಇಷ್ಟು ದಿನ ಸಂಧಾನದ ಮೂಲಕ ಎಲ್ಲವೂ ಸರಿ ಹೋಗಿದೆ. ಈ ವಿಚಾರದಲ್ಲೂ ಎಲ್ಲಾ ಒಳ್ಳೆಯದ್ದೇ ಆಗುತ್ತದೆ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ಕಿರುತೆರೆ ಮೇಘಾ ಶೆಟ್ಟಿ

ಕಿರುತೆರೆ ಮೇಘಾ ಶೆಟ್ಟಿ

  • Share this:
ಜೊತೆ ಜೊತೆಯಲಿ (Jote Joteyali) ಸೀರಿಯಲ್​ನಿಂದ ನಟ ಅನಿರುದ್ಧ್ (Aniruddha) ಅವರನ್ನು ತೆಗೆದುಹಾಕಿದ್ದಾರೆ. ಸೀರಿಯಲ್ ಸೆಟ್​​ನಲ್ಲಿ ಅನಿರುದ್ಧ್ ಅವರ ವರ್ತನೆ ಅತಿರೇಕಕ್ಕೆ ತಿರುಗಿದ ಹಿನ್ನೆಲೆ ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಗಿದೆ ಎಂದು ನಿರ್ಮಾಪಕ ಆರೂರು ಜಗದೀಶ್ ಹೇಳಿದ್ದರು. ಆರ್ಯವರ್ಧನ್​ ಹಾಗೂ ಅನು ಸಿರಿಮನೆ ಜೋಡಿಯನ್ನು ಪ್ರೇಕ್ಷಕರು ಸಖತ್​ ಇಷ್ಟಪಟ್ಟಿದ್ದಾರೆ. ಆದ್ರೆ ಇದೀಗ ಆರ್ಯವರ್ಧನ್ ಪಾತ್ರದಿಂದ ಅನಿರುದ್ಧ್ ಅವರನ್ನು ಕಿತ್ತು ಹಾಕಲಾಗಿದೆ. ಅನು ಸಿರಿಮನೆ ಪಾತ್ರಧಾರಿ ನಟಿ ಮೇಘಾ ಶೆಟ್ಟಿ (Megha Shetty) ಅವರನ್ನು ಕೇಳಿದ್ರೆ ಅವರು ಹೇಳೋದೆ ಬೇರೆ.

ನಾನು 2 ದಿನದಿಂದ ನ್ಯೂಸ್ ನೋಡಿಲ್ಲ

ಕಳೆದ  2 ದಿನಗಳಿಂದ ಜೊತೆ ಜೊತೆಯಲಿ ಸೀರಿಯಲ್​ ಗಲಾಟೆ ವಿಚಾರ ನಿರಂತರವಾಗಿ ಪ್ರಸಾರವಾಗ್ತಿದೆ. ಅಷ್ಟೇ ಅಲ್ಲದೇ ನಟ ಅನಿರುದ್ಧ್​ ಸಹ ಸುದ್ದಿಗೋಷ್ಠಿ ಮೇಲೆ ಸುದ್ದಿಗೋಷ್ಠಿ ಮಾಡಿ ಸೀರಿಯಲ್ ತಂಡದ ಮೇಲೆ ಕಿಡಿಕಾರಿದ್ದಾರೆ. ಇತ್ತ ನಿರ್ಮಾಪಕರ ತಂಡ ಕೂಡ ಅನಿರುದ್ಧ್​​ ಅವರನ್ನು ಸೀರಿಯಲ್​ನಿಂದ ಯಾಕೆ ತೆಗೆಯಲಾಗಿದೆ ಎಂದು ಸ್ಪಷ್ಟನೆಯನ್ನು ಸಹ ನೀಡಿದ್ದಾರೆ. ಆದ್ರೆ ನಟಿ ಮೇಘಾ ಶೆಟ್ಟಿ ಮಾತ್ರ 2 ದಿನದಿಂದ ನಾನು ನ್ಯೂಸ್​ ನೋಡಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲಾ ಒಳ್ಳೆಯದ್ದೇ ಆಗುತ್ತೆ ಅಂತಿದ್ದಾರೆ ಮೇಘಾ

ನಟ ಅನಿರುದ್ಧ್​ ಅವರನ್ನು ಸೀರಿಯಲ್​ನಿಂದ ಹೊರಗಿಟ್ಟಿರೋ ವಿಚಾರಕ್ಕೆ ಪ್ರತಿಕ್ರಿಯಿಸಿರೋ ನಟಿ ಮೇಘಾ ಶೆಟ್ಟಿ, ಸೀರಿಯಲ್​ ಸೆಟ್​ ನಲ್ಲಿ ಗಲಾಟೆ ಆಗಿದ್ದು ನಿಜ. ಸಣ್ಣ ಪುಟ್ಟ ಗಲಾಟೆಗಳು ಸಹ ನಡೆಯುತ್ತಿರುತ್ತೆ. ಇಷ್ಟು ದಿನ ಸಂಧಾನದ ಮೂಲಕ ಎಲ್ಲವೂ ಸರಿ ಹೋಗಿದೆ. ಈ ವಿಚಾರದಲ್ಲೂ ಎಲ್ಲಾ ಒಳ್ಳೆಯದ್ದೇ ಆಗುತ್ತದೆ ಎಂದು ಫಿಲ್ಮಂ ಬೀಟ್​ಗೆ​​ ನೀಡಿದ ಸಂದರ್ಶನದಲ್ಲಿ  ಮೇಘಾ ಶೆಟ್ಟಿ ಹೇಳಿದ್ದಾರೆ.

jagdish the producer of- Jote jothayali has accusations against actor aniruddha
ಜೊತೆ ಜೊತೆಯಲ್ಲಿ ಸೀರಿಯಲ್ ಗಲಾಟೆ


ಅನಿರುದ್ಧ್​ರಿಂದ ಹೀರೋಯಿನ್​ ವರ್ತನೆಯೇ ಬದಲಾಯ್ತಾ!?

ಶೂಟಿಂಗ್​ ವೇಳೆ ಅನಿರುದ್ಧ್ ಮಾಡ್ತಿದ್ದ ಕಿರಿಕ್​​ ಬಗ್ಗೆ ಮಾತಾಡಿದ ನಿರ್ದೇಶಕ ಆರೂರು ಜಗದೀಶ್​, ಇದೇ ವೇಳೆ ಮೇಘಾ ಶೆಟ್ಟಿ ವಿಚಾರವನ್ನು ಸಹ ಪ್ರಸ್ತಾಪಿಸಿದ್ರು. ಅನಿರುದ್ಧ್​  ಶಾಟ್​ ರೆಡಿ ಅಂದ್ರೆ ಇರಿ ಊಟ ಮಾಡ್ತಿದ್ಧಿನಿ ಅಂತಿದ್ರು. ಸಹ ನಟರನ್ನು ಕರೆದ್ರೆ ಅವರು ಊಟ ಮಾಡ್ತಿದ್ದಾರೆ ಎಂದು ಕೂಗಾಡುತ್ತಿದ್ದರು ಎಂದು ಆರೋಪಿಸಿದ್ರು.  ಇವರಿಂದಲೇ ಹೀರೋಯಿನ್​ ವರ್ತನೆ ಕೂಡ ಬದಲಾಯಿತು ಎಂದು ಆರೂರು ಜಗದೀಶ್​ ಹೇಳಿದ್ರು.

ಹಿಂದೆ ಮೇಘಾ ಶೆಟ್ಟಿ ಮಾಡಿದ್ರು ಕಿರಿಕ್!

ಸಿಕ್ಕಾಪಟ್ಟೆ ಕಿರಿಕಿರಿ ಮಾಡುವ ಕಾರಣಕ್ಕೆ ಹೈದರಾಬಾದ್‌ನಲ್ಲಿ ಶೂಟಿಂಗ್‌ ನಡೆಯುವಾಗಲೇ ಮೇಘಾಶೆಟ್ಟಿ ಅವರನ್ನು ಕೈ ಬಿಡುವ ಮಟ್ಟಕ್ಕೆ ಚರ್ಚೆ ನಡೆದಿತ್ತಂತೆ. ನಿರ್ಮಾಪಕರಾದ ಅರೂರು ಜಗದೀಶ್ ಕಣ್ಣೀರು ಹಾಕಿಕೊಂಡು ತಮ್ಮ ನೋವನ್ನು ಬೇರೆ ನಿರ್ಮಾಪಕರ ಬಳಿ ತೋಡಿಕೊಂಡಿದ್ದರಂತೆ. ಆಗ ನಿರ್ಮಾಪಕರ ಸಂಘದವರೆಲ್ಲಾ ಚರ್ಚಿಸಿ, ಆಕೆಯನ್ನು ಧಾರಾವಾಹಿಯಿಂದ ಕೈ ಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತಂತೆ. ಈ ವಿಚಾರವನ್ನು ಆಕೆಗೂ ಹೇಳಿದ್ದರಂತೆ. ಈ ಮಾತನ್ನು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Jote Joteyali: ವಿಷ್ಣುವರ್ಧನ್‌ರಿಗೆ ಆದ ಸ್ಥಿತಿಯೇ ನಂಗೂ ಆಗಿದೆ, ಕರೆದ್ರೆ ಮತ್ತೆ ಸೀರಿಯಲ್‌ನಲ್ಲಿ ನಟಿಸ್ತೀನಿ-ಅನಿರುದ್ಧ್

ಕ್ಷಮೆ ಕೇಳಿದ್ದ ಮೇಘಾ ಶೆಟ್ಟಿ

ನಿರ್ಮಾಪಕರೆಲ್ಲಾ ಸೇರಿ ನಟಿ ಮೇಘಾ ಶೆಟ್ಟಿ ಅವರನ್ನು ಸೀರಿಯಲ್​​ನಿಂದ ತೆಗೆಯಲು ನಿರ್ಧಾರ ಮಾಡಿದ ಬಳಿಕ, ಮೇಘಾ ಶೆಟ್ಟಿಗೆ ತಪ್ಪಿನ ಅರಿವಾಗಿದೆ. ಕ್ಷಮೆ ಕೇಳಿ ಧಾರಾವಾಹಿಯಲ್ಲಿ ಮುಂದುವರಿದ್ದರು. ಇತ್ತ ಅನಿರುದ್ಧ ಅವರು ಜೊತೆ ಜೊತೆಯಲ್ಲಿ ಸೀರಿಯಲ್ ತಂಡದ ಅನೇಕರು ನನ್ನ ಪರವಾಗಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್​​ನಲ್ಲಿ ಎರಡು ಟೀಮ್ ಆಗಿರೋದು ಇದ್ರಿಂದ ಗೊತ್ತಾಗಿದೆ. ಧಾರಾವಾಹಿಯಲ್ಲಿ ಸದ್ಯ ಯಾವ ನಟರು ಇರ್ತಾರೆ, ಯಾರು ಹೋಗ್ತಾರೆ ಅನ್ನೋದೇ ಕುತೂಹಲವಾಗಿದೆ.
Published by:Pavana HS
First published: