Jote Joteyali: ಮತ್ತೆ ಶೂಟಿಂಗ್​ಗೆ ಹೋಗಲು ರೆಡಿ ಎಂದ್ರು ಆರ್ಯವರ್ಧನ್​; ಅನಿರುದ್ಧ್​ ನಮಗೆ ಬೇಡವೇ ಬೇಡ ಎಂದ್ರು ನಿರ್ಮಾಪಕ

ನನಗಾಗಿರುವ ಪ್ರತಿ ನೋವನ್ನು ಚಾನೆಲ್ ಗಮನಕ್ಕೆ ತಂದಿದ್ದೇನೆ. ಹೇಳೋಕೆ ಹೋದ್ರೆ ತುಂಬಾ ಇದೆ. ಅನಿರುದ್ಧ್​ ಅವರನ್ನು ಈ ಸೀರಿಯಲ್​ನಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಸಲ್ಲ ಎಂದು ಆರೂರು ಜಗದೀಶ್​ ಹೇಳಿದ್ದಾರೆ.

ಜೊತೆ ಜೊತೆಯಲ್ಲಿ ಸೀರಿಯಲ್ ಗಲಾಟೆ

ಜೊತೆ ಜೊತೆಯಲ್ಲಿ ಸೀರಿಯಲ್ ಗಲಾಟೆ

  • Share this:
ಜೀ ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ (Jote Jotheyali) ನಾಯಕ ನಟ ಅನಿರುದ್ಧ್​​ಗೆ (Aniruddha) ಸೀರಿಯಲ್​ನಿಂದ ಗೇಟ್​ ಪಾಸ್​ ನೀಡಲಾಗಿದೆ. ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಧಾರಾವಾಹಿಗಳಲ್ಲಿ ಅವಕಾಶ ನೀಡದಂತೆ ಎಲ್ಲಾ ನಿರ್ಮಾಪಕರು ನಿರ್ಧರಿಸಿದ್ದಾರೆ.  ಅನಿರುದ್ಧ್​ ವಿರುದ್ಧ ನಿರ್ಮಾಪಕ ಆರೂರು ಜಗದೀಶ್ (Aroor Jagadish)​ ಆರೋಪಗಳ ಸುರಿಮಳೆಗೈದಿದ್ದಾರೆ. ಈ ಆರೋಪಗಳ ಬಗ್ಗೆ ಸುದ್ದಿಗೋಷ್ಠಿ ಕರೆದು ನಟ ಅನಿರುದ್ಧ್​  ಸ್ಪಷ್ಟನೆ ನೀಡಿದ್ರು ಇದೀಗ ನಿರ್ಮಾಪಕ ಸಂಘದವರು ಸುದ್ದಿಗೋಷ್ಠಿ ನಡೆಸಿ ಅನಿರುದ್ಧ್​ ವಿರುದ್ಧ ಕಿಡಿಕಾರಿದ್ದಾರೆ.

ಆರೂರು ಜಗದೀಶ್​ ಕಿಡಿ

ಧಾರಾವಾಹಿ ನಂಗೆ ವೈಯಕ್ತಿಕವಾಗಿ ತುಂಬಾ ಕೊಟ್ಟಿದೆ. ಇದು ನನ್ನ ಅದೃಷ್ಟ ಎಂದು ಭಾವಿಸುವೇ, ಜೊತೆ ಜೊತೆಯಲ್ಲಿ ನನ್ನಿಂದ ನಡೆಯುತ್ತಿದೆ ಎಂದು ನಾನು ಭಾವಿಸಿಲ್ಲ. ದೇವರ ಸ್ವರೂಪ ಆಗಿರೋ ಪ್ರೇಕ್ಷಕರಿಂದ ಈ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ. ಧಾರಾವಾಹಿಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ನಾನು ಮತ್ತೆ ನಟಿಸಲು ಸಿದ್ಧ ಎಂದು ಹೇಳಿದ್ದರು. ಈ ಬೆನ್ನಲ್ಲೇ ನಿರ್ಮಾಪಕ ಆರೂರು ಜಗದೀಶ್ (Aroor Jagadish) ಅವರು ಸುದ್ದಿಗೋಷ್ಠಿ ನಡೆಸಿ ಆರ್ಯವರ್ಧನ್​ ನಮಗೆ ಬೇಡವೇ ಬೇಡ ಅಂತಿದ್ದಾರೆ.

Anirudh gave a shock to the serial team I will do a press meet and give an explanation
ನಟ ಅನಿರುದ್ಧ್​


ಅನಿರುದ್ಧ್​ ಅವರಿಂದ ನಮಗೆ ಭಾರೀ ನಷ್ಟ

ಅನಿರುದ್ಧ್​ ಅವರಿಂದ ಶೂಟಿಂಗ್​ಗೆ ತುಂಬಾ ಅಡಚಣೆ ಆಗಿದೆ. ಸರಿಯಾಗಿ ಶೂಟಿಂಗ್​ ಮಾಡಲು ಬಿಡೋದಿಲ್ಲ. ಅವರು ಎದುರಿಗೆ ಮಾತನಾಡುವ ರೀತಿಯಲ್ಲಿ ಅವರು ಇಲ್ಲ. ಕಥೆಗೆ ಅಡೆಚಣೆ ಉಂಟು ಮಾಡುತ್ತಿದ್ದಾರೆ. ಅವರ ಕ್ಯಾರೆಕ್ಟರ್ ಮಾತ್ರ ಬಿಲ್ಡ್​ ಆಗಬೇಕು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದರು ಎಂದು ಆರೂರು ಜಗದೀಶ್ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಅವರನ್ನು ಮುಂದುವರಿಸಲ್ಲ

ನನಗಾಗಿರುವ ಪ್ರತಿ ನೋವನ್ನು ಚಾನೆಲ್ ಗಮನಕ್ಕೆ ತಂದಿದ್ದೇನೆ. ಹೇಳೋಕೆ ಹೋದ್ರೆ ತುಂಬಾ ಇದೆ.  ಈ ಸೀರಿಯಲ್​ನಲ್ಲಿ ಯಾವುದೇ ಕಾರಣಕ್ಕೂ ಅವರನ್ನು ಮುಂದುವರಿಸಲ್ಲ. ನನಗೆ ಗೌರವ ಸಿಕ್ಕಿಲ್ಲ. ಅವರು ಮಾತಿನಲ್ಲಿ ಹೇಳುವಂತೆ ಕೃತಿಯಲ್ಲಿ ಇಲ್ಲ. ಅನೇಕ ಬಾರಿ ಶೂಟಿಂಗ್​ನಿಂದ ಅರ್ಧಕ್ಕೆ ಹೊರಹೋಗಿದ್ದಾರೆ. ಇದರಿಂದ ನನಗೆ ನಷ್ಟ ಉಂಟಾಗಿದೆ’ ಎಂದು ಜಗದೀಶ್ ಆರೋಪಿಸಿದ್ದಾರೆ.

ಕೊರೊನಾ ಟೈಮ್​ನಲ್ಲೂ ಜಗಳವಾಡಿದ ಮನುಷ್ಯ

ನಮ್ಮ ಮಧ್ಯೆ ಮನಸ್ತಾಪ ಇರಲಿಲ್ಲ. ಧಾರಾವಾಹಿಗೆ ಸಾಕಷ್ಟು ದುಡ್ಡು ಹಾಕಿದ್ದೇನೆ. 24 ಗಂಟೆ ಕೆಲಸ ಮಾಡಿದ್ದೇನೆ. ಹೀಗಿದ್ದರೂ ನಿರ್ಮಾಪಕರಿಗೆ ಸಾಥ್ ಕೊಡಬೇಕು ಎಂದು ಅವರಿಗೆ ಯಾವಾಗಲೂ ಅನಿಸಿಲ್ಲ. ಕೊವಿಡ್ ಟೈಮ್​ನಲ್ಲಿ ಎಲ್ಲರಿಗೂ ಸಂಭಾವನೆಯಲ್ಲಿ ಶೇ.15 ಕಟ್ ಮಾಡಿದ್ದೆವು. ಆಗ ನಾನು ಆಸ್ಪತ್ರೆಯಲ್ಲಿ ಇದ್ದೆ. ಅವರು ನನ್ನ ಸ್ಯಾಲರಿ ಯಾಕೆ ಕಟ್ ಮಾಡಿದ್ರಿ ಅಂತ ಕಾಲ್ ಮಾಡಿ ಕೂಗಾಡಿದ್ರು. ಸೆಟ್​ನಲ್ಲೂ ಬಂದು ಕೂಗಾಡಿದರು. ನನ್ನ ದುಡ್ಡು ತಿಂದು ಬದುಕುತ್ತಿದ್ದಾರೆ ಅಂತ ಕೂಗಾಡಿದ್ದರು. ಅದನ್ನು ಕೇಳಿ ಬೇಸರ ಆಯ್ತು’ ಎಂದಿದ್ದಾರೆ ಜಗದೀಶ್ ಹೇಳಿದ್ರು.

Jote Joteyali: ಮತ್ತೆ ಶೂಟಿಂಗ್​ಗೆ ಹೋಗಲು ರೆಡಿ ಎಂದ್ರು ಆರ್ಯವರ್ಧನ್​; ಅನಿರುದ್ಧ್​ ನಮಗೆ ಬೇಡವೇ ಬೇಡ ಎಂದ್ರು ನಿರ್ಮಾಪಕ

ಅನೇಕ ಬಾರಿ ಕೂಗಾಡಿ ಗಲಾಟೆ ಮಾಡ್ತಿದ್ರು

ಪ್ರತಿದಿನ ಶೂಟಿಂಗ್​ನಲ್ಲಿ ಗಲಾಟೆ ಮಾಡ್ತಿದ್ರು. ಶೂಟಿಂಗ್​ ಸರಿಯಾಗಿ ನಡೆಸಲು ಬಿಡುತ್ತಿರಲಿಲ್ಲ. ಸಹ ನಟರನ್ನು ಕೂಡ ತನ್ನ ಜೊತೆ ಸೇರಿಸಿಕೊಳ್ಳುತ್ತಿದ್ರು. ಇವರಿಂದಲೇ ಹೀರೋಯಿನ್ ವರ್ತನೆಯೂ ಬದಲಾಯ್ತು. ಇವರು ಇದ್ದಾಗ ಯಾರು ಮಾತಾಡುವಂತಿಲ್ಲ. ಕ್ಯಾಮಾರ ಅಕ್ಕ-ಪಕ್ಕ ಓಡಾಡುವಂತಿಲ್ಲ. ಪದೇ ಪದೇ ಒನ್ಸ್ ಮೋರ್ ಕೇಳ್ತಿದ್ರು. ಶೂಟಿಂಗ ಸಮಯ ಹಾಳು ಮಾಡ್ತಿದ್ರು ಎಂದು ನಿರ್ದೇಶಕ ಆರೂರು ಜಗದೀಶ್ ಆರೋಪಿಸಿದ್ದಾರೆ.

ಕಥೆಯನ್ನೇ ಬದಲಾಯಿಸಲು ಮುಂದಾದ್ರು

ಹೀಗೊಂದು ಗಂಭೀರ ಆರೋಪ ನಟ ಅನಿರುದ್ಧ್ ಮೇಲೆ ಕೇಳಿ ಬಂದಿದೆ. ಶೂಟಿಂಗ್‌ ಸೆಟ್‌ನಲ್ಲಿ ಅನಿರುದ್ಧ್ ಕಿರಿಕಿರಿ ಮಾಡುತ್ತಿದ್ದುದ್ದು ಒಂದೇ ಅಲ್ಲದೇ ತಮ್ಮ ಪಾತ್ರದ ಕಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎನ್ನಲಾಗಿದೆ. ತಮಗೆ ಬೇಕಾದಂತೆ ಕಥೆ, ಸಂಭಾಷಣೆ ಬದಲಾಯಿಸುತ್ತಿದ್ದರು ಎಂದು ಹೇಳಿದ್ದಾರೆ.
Published by:Pavana HS
First published: