ಸ್ಯಾಂಡಲ್ವುಡ್ (Sandalwood) ನಟ ವಿಷ್ಣುವರ್ಧನ್ (Vishnuvardhan) ಅವರ ಕುಟುಂಬ ಇತ್ತೀಚೆಗೆ ಗೃಹಪ್ರವೇಶ (House warming ceremony) ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದೆ. ವಿಷ್ಣುವರ್ಧನ್ ಅವರ ಹೊಸ ಮನೆ (House) ಸುಂದರವಾಗಿ ನಿರ್ಮಿಸಲಾಗಿದ್ದು ಮನೆಯ ಒಳಾಂಗಣದ ವಿಡಿಯೋವನ್ನು (Video) ಈಗ ನಟ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋವನ್ನು (Video) ಶೇರ್ ಮಾಡಿದ ನಟ, ತಮ್ಮೆಲ್ಲರ ಹಾರೈಕೆ, ಆಶೀರ್ವಾದ ನನ್ನಮೇಲೆ, ನನ್ನ ಕುಟುಂಬದವರ ಮೇಲೆ ಹಾಗೂ ನಮ್ಮ ಹೊಸ ಮನೆಯ ಮೇಲೆ ಯಾವಾಗಲೂ ಇರಲಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಹೇಗಿದೆ ಮನೆ?
ಅದ್ಧೂರಿಯಾಗಿ ಕಟ್ಟಿರುವ ಹೊಸ ಮನೆ ಸುಂದರವಾಗಿದ್ದು ಒಳಾಂಗಣ ವಿನ್ಯಾಸಗಳನ್ನು ಆಕರ್ಷಕವಾಗಿ ಮಾಡಲಾಗಿದೆ. ಮನೆಯ ಒಳಗಿನ ಸ್ಟೇರ್ಕೇಸ್ ಸ್ಟಪ್ಸ್, ಫ್ಲೋರ್ ಹಾಗೂ ಗೋಡೆಗಳು ಕೂಡಾ ಆಕರ್ಷಕವಾಗಿದೆ.
ಯಾರ್ಯಾರು ಬಂದಿದ್ರು?
ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ, ನಟ ಜಗ್ಗೇಶ್, ಸುಮಲತಾ ಅಂಬರೀಶ್, ನಟಿ ಮೇಘ ಶೆಟ್ಟಿ ಸೇರಿದಂತೆ ಟಾಪ್ ಸ್ಟಾರ್ ನಟ, ನಟಿಯರು ಆಗಮಿಸಿದ್ದರು. ಅವರೆಲ್ಲರೂ ಹೊಸ ಮನೆಯ ಗೃಹ ಪ್ರವೇಶದ ಖುಷಿಯಲ್ಲಿದ್ದ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ.
View this post on Instagram
ಮನೆಯವರೆಲ್ಲ ಫಂಕ್ಷನ್ ದಿನ ಸುಂದರವಾದ ಕಲರ್ ಥೀಮ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಒಮ್ಮೆ ಹಳದಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರೆ ಮತ್ತೊಮ್ಮೆ ಹಸಿರು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada: ಖುಷಿಯಿಂದ ಕುಣಿದಾಡಿದ ಪ್ರಶಾಂತ್, ಅನುಪಮಾ, ರಾಜಣ್ಣ! ಏಕೆ ನೋಡಿ?
ಸಂಭ್ರಮದಿಂದ ನಡೆದಿರುವ ಕಾರ್ಯಕ್ರಮದಲ್ಲಿ ಬಹಳಷ್ಟ ಜನರು ಭಾಗಿಯಾಗಿದ್ದರು. ಚಿತ್ರರಂಗದ ಗಣ್ಯರು ಹಾಗೂ ಆಪ್ತ ಕುಟುಂಬಸ್ಥರು, ಸ್ನೇಹಿತರೂ ಭಾಗಿಯಾಗಿದ್ದರು.
ನಟ ಏನು ಮಾಡುತ್ತಿದ್ದಾರೆ?
ಸೀರಿಯಲ್ನಿಂದ ಹೊರಬಂದಿರುವ ಅನಿರುದ್ಧ್ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇರಬಹುದು. ಅನಿರುದ್ಧ್ ಈಗ ಯಾವುದೇ ಧಾರಾವಾಹಿ ಮಾಡುತ್ತಿಲ್ಲ. ಆದರೆ ನಟ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿ
ಇವರು ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದು ಹೊಂಡ ಬಿದ್ದ ರಸ್ತೆಗಳ ಫೋಟೋ, ಕಸದ ರಾಶಿ ತುಂಬಿರೋ ರಸ್ತೆಗಳ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಾರೆ. ತಾವು ಮಾಡಿದ ವರದಿಯ ಪರಿಣಾಮವನ್ನೂ ನಟ ಅಭಿಮಾನಿಗಳೊಂದಿಗೆ ಶೇರ್ ಮಾಡಿ ಬಿಬಿಎಂಪಿಗೆ ಥ್ಯಾಂಕ್ಸ್ ಹೇಳುತ್ತಾರೆ.
ಈಗ ಅನಿರುದ್ಧ್ ಇನ್ಸ್ಟಾಗ್ರಾಮ್ ವಾಲ್ ತುಂಬಾ ಇಂಥಾ ಫೋಟೋಗಳೇ ತುಂಬಿವೆ. ಅದೇ ರೀತಿ ಅವರು ಪತ್ನಿ ಜೊತೆಗೆ ಸೆಲ್ಫೀ ವಿಡಿಯೋ ಹಾಗೂ ಫೊಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಧಾರಾವಾಹಿಗೆ ಎಂಟ್ರಿ ಕೊಟ್ಟ ನಂತರ ಅನಿರುದ್ಧ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಇತ್ತೀಚೆಗೆ ಜೊತೆಜೊತೆಯಲಿ ಧಾರಾವಾಹಿ ತಂಡ ನಟನನ್ನು ಭೇಟಿ ಮಾಡಿತ್ತು. ಸೀರಿಯಲ್ನಲ್ಲಿ ಅಭಿನಯಿಸುವ ಕಲಾವಿದರು ನಟ ಅನಿರುದ್ಧ್ ಅವರನ್ನು ಭೇಟಿ ಮಾಡಿದ್ದು ಅವರು ಹ್ಯಾಪಿ ಫೋಟೋಗೆ ಪೋಸ್ ಕೊಟ್ಟಿದ್ದರು. ಇನ್ಸ್ಟಾಗ್ರಾಮ್ನಲ್ಲಿ ನಟ ಸದ್ಯ 157 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. 1800ಕ್ಕೂ ಹೆಚ್ಚು ಪೋಸ್ಟ್ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಆದರೆ ನಟ ಕೆಲವೇ ಕೆಲವರನ್ನು ಫಾಲೋ ಮಾಡುತ್ತಿದ್ದು ಇದರಲ್ಲಿ ಹೆಚ್ಚಿನವರು ಫ್ಯಾಮಿಲಿ ಮೆಂಬರ್ಸ್ ಆಗಿದ್ದಾರೆ. ನಟಿ ಮೇಘ ಶೆಟ್ಟಿ ಅವರನ್ನು ಫಾಲೋ ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ