ಕಿರುತೆರೆಯಿಂದ (Smallscreen) ಅನಿರುದ್ಧ್ (Aniruddha Jatkar) ಬ್ಯಾನ್ ವಿಚಾರವಾಗಿ ಫಿಲ್ಮ್ ಚೇಂಬರ್ ನಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಕಿರುತೆರೆ ನಿರ್ಮಾಪಕರು ಹಾಗೂ ಜೊತೆ ಜೊತೆಯಲಿ (Jothe Jotheyali) ಧಾರವಾಹಿ (Serial) ಖ್ಯಾತಿಯ ಅನಿರುದ್ಧ್ ಮುಖಾಮುಖಿಯಾವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ. ಈಗಾಗಲೇ ಅನಿರುದ್ದ್ ಅವರನ್ನ ಕರೆಸಿ ಫಿಲ್ಮ್ ಚೇಂಬರ್ (Film Chamber) ಮಾತನಾಡಿದೆ. ಇಂದು ಮಧ್ಯಾಹ್ನ ವಾಣಿಜ್ಯ ಮಂಡಳಿಗೆ ಬರುವ ಕಿರುತೆರೆ ನಿರ್ಮಾಪಕರ ಸಂಘ ಪ್ರಮುಖ ಸಭೆ ನಡೆಸಲಿದೆ. ಇಬ್ಬರ ಅರೋಪ ಪ್ರತ್ಯಾರೋಪಗಳ ಕೂಲಂಕಷವಾಗಿ ಪರಿಶೀಲಿಸಿ ವಾಣಿಜ್ಯ ಮಂಡಳಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕುತೂಹಲ ಕೆರಳಿದ ಕಿರುತೆರೆ ಲೋಕದ ಹಗ್ಗ ಜಗ್ಗಾಟದ ವಿಚಾರದಲ್ಲಿ ಇಂದು ಒಂದು ತೀರ್ಮಾನವಾಗುವ ನಿರೀಕ್ಷೆಯಲ್ಲಿದ್ದಾರೆ ಜನ.
ನನಗಿಂತ ಅನಿರುದ್ಧ್ ಅವಶ್ಯಕತೆ ಇದೆ
ಒಂದು ಕಡೆ ನನ್ನ ಕತೆಗೆ ನನಗಿಂತ ಅನಿರುದ್ಧ್ ಅವಶ್ಯಕತೆ ಇದೆ ಎಂದು ಎಸ್. ನಾರಾಯಣ್ ಹೇಳುತ್ತಿದ್ದರೆ ಮತ್ತೊಂದು ಕಡೆ ಅನಿರುದ್ಧ್ ಗೆ ಅವಕಾಶ ಕೊಡಬೇಡಿ ಅಂತ ನಿರ್ಮಾಪಕ ಸಂಘ ಪಟ್ಟು ಹಿಡಿದು ಕುಳಿತಿದೆ. ಇದರ ನಡುವೆ ಫಿಲ್ಮ್ ಚೇಂಬರ್ ಯಾರನ್ನೂ ಕೂಡಾ ಬ್ಯಾನ್ ಮಾಡಲು ಸಾಧ್ಯವೇ ಇಲ್ಲ ಎಂದಿದೆ.
ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದ ನಟ ಅಅನಿರುದ್ಧ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಧಾರಾವಾಹಿಯಲ್ಲಿ ನಟಿಸಬಾರ್ದು ಅಂತ ಒತ್ತಡ ಕೇಳಿಬಂದಿದೆ.
ಕಿರುತೆರೆಯಲ್ಲಿ ತನ್ನ ಅಭಿನಯದ ಮೂಲಕ ತನ್ನದೇ ಬೇಡಿಕೆ ಹೊಂದಿದ್ದ ನಟ ಅನಿರುದ್ದ್. ಜೊತೆ ಜೊತೆಯಲಿ ಸೀರಿಯಲ್ನಿಂದ ಹೊರಕ್ಕೆ ಬಂದಿದ್ದ ಅವರು ಸದ್ಯ ಸೀರಿಯಲ್ನಿಂದ ಹೊರಗೆ ಉಳಿದಿದ್ದಾರೆ. ಸೀರಿಯಲ್ ನಿರ್ಮಾಪಕ ಹಾಗು ನಿರ್ದೇಶಕರ ಜೊತೆಗೆ ಮನಸ್ತಾಪ ಉಂಟಾಗಿ 2 ವರ್ಷ ನಟ ಅನಿರುದ್ದ್ ಅವರನ್ನ ಯಾವುದೇ ಧಾರಾವಾಹಿ ಅಥವಾ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳದಂತೆ ಕಿರುತೆರೆ ನಿರ್ಮಾಪಕರ ಸಂಘ ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿತ್ತು.
ಹಿರಿಯ ನಿರ್ದೇಶಕ ಎಸ್. ನಾರಾಯಣ್, ಅನಿರುದ್ದ್ ಅವರ ಜೊತೆ ಸೂರ್ಯವಂಶ ಸೀರಿಯಲ್ ಅನೌನ್ಸ್ ಮಾಡಿದ್ದಾರೆ. ಸೀರಿಯಲ್ ವಿಚಾರ ಹೊರ ಬೀಳುತ್ತಿದ್ದ ಹಾಗೆ ಕಿರುತೆರೆ ನಿರ್ಮಾಪಕರ ಸಂಘ ಎಸ್ ನಾರಾಯಣ್ ಅವರನ್ನ ಭೇಟಿ ಮಾಡಿ, ಧಾರಾವಾಹಿಯಲ್ಲಿ ಬಳಸಿಕೊಳ್ಳದಂತೆ ಒತ್ತಡ ಹೇರಿದ್ದಾರೆ.
ಇದನ್ನೂ ಓದಿ: Aniruddha Jatkar: ಅಡ್ಡಕತ್ತರಿಯಲ್ಲಿ ಅನಿರುದ್ಧ್ 'ಸೂರ್ಯವಂಶ'! ನಾನು ಧಾರಾವಾಹಿ ಮಾಡೇ ಮಾಡ್ತೀನಿ ಎಂದ ದಾದಾ ಅಳಿಯ!
ಅನಿರುದ್ದ್ ಅವರನ್ನು ಕರೆಸಿ ಮಾತನಾಡಿರುವ ಫಿಲ್ಮ್ ಚೇಂಬರ್, ಇಂದು ಬೆಳಗ್ಗೆ ಮತ್ತೆ ಅನಿರುದ್ದ್ ಹಾಗೂ ಕಿರುತೆರೆ ನಿರ್ಮಾಪಕರ ಸಂಘದ ಪದಧಿಕಾರಿಗಳ ಸಭೆ ಮಾಡಲು ನಿರ್ಧಾರ ಮಾಡಿದೆ.
ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ ಎಂದು ನಟ ಹೇಳಿದ್ದರು. ಆದರೆ ಆ ನಂತರ ಇಷ್ಟು ಬೆಳವಣಿಗೆ ನಡೆದಿದೆ.
ಕಲಾ ಸಾಮ್ರಾಟ್ ಎಸ್ ನಾರಾಯಣ್ ಸೀರಿಯಲ್ ಡೈರೆಕ್ಟರ್
ಹೌದು, ಅನಿರುದ್ಧ ಸೂರ್ಯವಂಶ ಸೀರಿಯಲ್ ಮೂಲಕ ಕನ್ನಡದ ಪುಟ್ಟ ಪರದೆಗೆ ವಾಪಸ್ ಆಗುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲರಿಗೆ ಖುಷಿ ತಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ