Jote Joteyali Serial: ‘ಜೊತೆ ಜೊತೆಯಲಿ’ ಟೀಮ್ ವಿರುದ್ಧ ಸಿಡಿದೆದ್ದ ಆರ್ಯವರ್ಧನ್; ಸೀರಿಯಲ್​ನಿಂದ ಬ್ಯಾನ್ ಆಗ್ತಾರಾ ಅನಿರುದ್ದ್?

ಮನೆಯಲ್ಲೇ ಸಣ್ಣ ಪುಟ್ಟ ಮನಸ್ತಾಪಗಳು ಆಗುತ್ತವೆ. ಹಾಗೆಯೇ ಶೂಟಿಂಗ್ ಸೆಟ್ ನಲ್ಲೂ ಆಗಿವೆ ಎಂದು ಮನಸ್ತಾಪದ ಬಗ್ಗೆ ಅನಿರುದ್ಧ್​ ಹೇಳಿದ್ದಾರೆ. ಈ ಮೂಲಕ ಸದ್ಯ ಯಾವುದೂ ಸರಿಯಿಲ್ಲ ಎನ್ನುವುದನ್ನು ಪರೋಕ್ಷವಾಗಿಯೇ ಒಪ್ಪಿಕೊಂಡಿದ್ದಾರೆ.

ನಟ ಅನಿರುದ್ಧ್​

ನಟ ಅನಿರುದ್ಧ್​

  • Share this:
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗೋ ಜೊತೆ ಜೊತೆಯಲಿ ( (Jothe Jotheyali) ಸೀರಿಯಲ್​ನಲ್ಲಿ ಹೀರೋ ಅನಿರುದ್ಧ್ ಹಾಗೂ ಧಾರಾವಾಹಿ (Serial) ತಂಡದ ನಡುವೆ ಗಲಾಟೆ ನಡೆದಿದ್ದು. ನಟ ಅನಿರುದ್ಧ ಸೀರಿಯಲ್​ನಿಂದ ಹೊರ ನಡೆದಿದ್ದಾರೆ ಸುದ್ದಿ ನಿನ್ನೆಯಿಂದಲೂ ಸಖತ್ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಅನಿರುದ್ಧ್ (Aniruddha)​ ಅವರೇ ಸೀರಿಯಲ್​ನಿಂದ ಹೊರ ಹೋಗ್ತಿದ್ದಾರೆ ಎಂದು ಸಹ ಹೇಳಲಾಗ್ತಿದೆ. ಎರಡೂ ಕಡೆ ಈ ಕುರಿತು ಸ್ಪಷ್ಟತೆ ಇಲ್ಲ. ಧಾರಾವಾಹಿ ತಂಡದ ಸದಸ್ಯರು ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಅನಿರುದ್ಧ ಈ ಬೆಳವಣಿಗೆ ಕುರಿತು ಮಾತನಾಡಿದ್ದಾರೆ.

ಮನಸ್ತಾಪಗಳು ಇರೋದು ನಿಜ

ಮನೆಯಲ್ಲೇ ಸಣ್ಣ ಪುಟ್ಟ ಮನಸ್ತಾಪಗಳು ಆಗುತ್ತವೆ. ಹಾಗೆಯೇ ಶೂಟಿಂಗ್ ಸೆಟ್ ನಲ್ಲೂ ಆಗಿವೆ ಎಂದು ಮನಸ್ತಾಪದ ಬಗ್ಗೆ ಅನಿರುದ್ಧ್​ ಹೇಳಿದ್ದಾರೆ. ಈ ಮೂಲಕ ಸದ್ಯ ಯಾವುದೂ ಸರಿಯಿಲ್ಲ ಎನ್ನುವುದನ್ನು ಪರೋಕ್ಷವಾಗಿಯೇ ಒಪ್ಪಿಕೊಂಡಿದ್ದಾರೆ. ಧಾರಾವಾಹಿಯಿಂದ ತಮ್ಮನ್ನು ಹೊರ ಹಾಕುತ್ತಿದ್ದಾರೆ ಎನ್ನುವ ವಿಷಯ ಗೊತ್ತಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ವಾಹಿನಿಯಾಗಲಿ ಅಥವಾ ಧಾರಾವಾಹಿ ತಂಡವಾಗಲಿ, ಈ ಕುರಿತು ಮಾತನಾಡಲು ತಮ್ಮನ್ನು ಸಂಪರ್ಕಿಸಿಲ್ಲ ಎಂದಿರುವ ಅವರು, ಈ ಸುದ್ದಿಯ ಕುರಿತಾಗಿ ಮಾತನಾಡಲು ಚಾನೆಲ್ ಗೆ ಹೋಗುತ್ತಿರುವುದಾಗಿಯೂ ತಿಳಿಸಿದ್ದಾರೆ.

ತಂಡದಿಂದ ಹೊರಹಾಕಿದ್ರೆ ಸುದ್ದಿಗೋಷ್ಠಿ ನಡೆಸಿ ಹೇಳುವೆ

ಧಾರಾವಾಹಿಯಿಂದ ಹೊರ ನಡೆಯುವ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೇ ಇರುವ ಕಾರಣಕ್ಕಾಗಿ ತಂಡದೊಂದಿಗೆ ಮಾತನಾಡುವುದಾಗಿ ತಿಳಿಸಿರುವ ಅನಿರುದ್ಧ, ಒಂದು ವೇಳೆ ಆ ರೀತಿಯಲ್ಲಿ ಏನಾದರೂ ನಡೆದರೆ, ಪತ್ರಿಕಾಗೋಷ್ಠಿ ಮಾಡಿಯೇ ಎಲ್ಲ ವಿಷಯವನ್ನೂ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲ ನಿರ್ಧಾರವೂ ಧಾರಾವಾಹಿ ತಂಡದ ಮೇಲೆಯೇ ನಿಂತಿದೆ ಎಂದು ಅನಿರುದ್ಧ ಹೇಳಿದ್ದಾರೆ.

ಅನಿರುದ್ಧ್‌ರನ್ನು ತೆಗೆದು ಹಾಕಲು ನಿರ್ಧರಿಸಿದರಾ ನಿರ್ಮಾಪಕರು?

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ತೆಗೆದು ಹಾಕಲು ಧಾರಾವಾಹಿ ನಿರ್ಮಾಪಕರೂ ಆಗಿರುವ ಆರೂರು ಜಗದೀಶ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದು ಪಕ್ಕಾ ಆದರೆ ಮುಂದಿನ ದಿನಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಹೊರ ಹೋಗಿಲಿದ್ದಾರೆ.

ಇದನ್ನೂ ಓದಿ: Paaru: ಸಂಕಷ್ಟದಲ್ಲಿ ಸಿಲುಕಿದ ಅಖಿಲಾಂಡೇಶ್ವರಿ ಪುತ್ರ ಪ್ರೀತು, ಕಾಪಾಡಲು ಬಂದ್ರಾ ವೀರಯ್ಯ ದೇವ?

ಅನಿರುದ್ಧ್ ಹೊರಹಾಕಲು ಕಾರಣವೇನು?

ಅನಿರುದ್ಧ್ ಮೇಲೆ ಸತತ ಆರೋಪಗಳು ಕೇಳಿ ಬಂದಿವೆ ಎನ್ನಲಾಗಿದೆ. ಮುಖ್ಯವಾಗಿ ಧಾರಾವಾಹಿ ಜನಪ್ರಿಯವಾದಂತೆ ಅನಿರುದ್ಧ್ ವರಸೆಗಳು ಬದಲಾದವು ಅಂತ ಬಲ್ಲವರು ಹೇಳುತ್ತಾರೆ. ಶೂಟಿಂಗ್ ಸೆಟ್‌ನಲ್ಲಿ ಕಿರಿಕಿರಿ, ಆ ರೀತಿ ಮಾಡೋದಿಲ್ಲ ಈ ರೀತಿ ಮಾಡೋದಿಲ್ಲ ಎನ್ನುತ್ತಿದ್ದರು ಅಂತ ಹೇಳಲಾಗುತ್ತಿದೆ.

ಈ ಬಗ್ಗೆ ಧಾರಾವಾಹಿ ತಂಡ ಹೇಳಿದ್ದೇನು?

ಅನಿರುದ್ಧ್ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬರುತ್ತಾರೆ ಎಂಬ ವಿಚಾರ ಈ ಹಿಂದೆಯೂ ಕೇಳಿ ಬಂದಿತ್ತು. ಜೊತೆಗೆ ಅನು ಸಿರಿಮನೆ ಪಾತ್ರಧಾರಿ ಮೇಘ ಶೆಟ್ಟಿ ಕೂಡ ಧಾರಾವಾಹಿಯಿಂದ ಹೊರ ಬರುತ್ತಾರೆ ಎಂಬ ವದಂತಿ ಈ ಹಿಂದೆ ಇತ್ತು. ಎಲ್ಲವೂ ಮುಗಿದು ಎಲ್ಲವೂ ತಣ್ಣಗಾಯ್ತು ಎನ್ನುತ್ತಿದ್ದಂತೆ ಹೊಸ ಬ್ರೇಕಿಂಗ್ ನ್ಯೂಸ್ ಹೊರ ಬಂದಿದೆ. ಆದ್ರೆ ಇದು ಸತ್ಯವೋ, ಸುಳ್ಳೋ ಎನ್ನುವುದು ಶೀಘ್ರವೇ ಗೊತ್ತಾಗಲಿದೆ.

zee kannada jothe jotheyali serial hero Anirudha wrote a letter to PM Modi regarding Bangalore
ನಟ ಅನಿರುದ್ಧ್


ಇಂದೂ ಕೂಡ ಶೂಟಿಂಗ್ ಸಮಯದಲ್ಲಿ ಅನಿರುದ್ದ್ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡೈರೆಕ್ಟರ್ ಹೇಳಿದಂತೆ ಕೇಳದೇ, ನಾನು ಈ ರೀತಿ ಆ್ಯಕ್ಟ್ ಮಾಡೋದಿಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ.

ನಿರ್ಮಾಪಕ ಸಂಘದಿಂದ ಮಹತ್ವದ ಸಭೆ

ಅನಿರುದ್ಧ್ ವರ್ತನೆ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘಕ್ಕೂ ದೂರು ಹೋಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕನ್ನಡ ಕಿರುತೆರೆ ನಿರ್ಮಾಪಕರ ಸಂಘದಲ್ಲಿ ಸಭೆ ನಡೆಯುತ್ತಿದೆ ಅಂತ ಮೂಲಗಳು ತಿಳಿಸಿವೆ.

ಕಿರುತೆರೆಯಿಂದ ಬ್ಯಾನ್ ಆಗ್ತಾರಾ ಅನಿರುದ್ಧ್?

ನಟ ಅನಿರುದ್ಧ್ ಬರೀ ಜೊತೆ ಜೊತೆಯಲಿ ಧಾರಾವಾಹಿಯಿಂದ ಅಷ್ಟೇ ಹೊರಹೋಗುತ್ತಿಲ್ಲ. ಬದಲಾಗಿ ಅವರನ್ನು ಕನ್ನಡ ಕಿರುತೆರೆಯಿಂದಲೇ ಬ್ಯಾನ್ ಮಾಡುವ ಸಾಧ್ಯತೆ ಇದೆ ಅಂತಾನೂ ಹೇಳಲಾಗುತ್ತಿದೆ.
Published by:Pavana HS
First published: