Sudeep-Anil Kumble: ವಿಕ್ರಾಂತ್ ರೋಣ ಸಿನಿಮಾ ಮೆಚ್ಚಿದ ಅನಿಲ್ ಕುಂಬ್ಳೆ; ಸುದೀಪ್ ಅಭಿನಯ ಹೊಗಳಿದ ಮಾಜಿ ಕ್ರಿಕೆಟಿಗ!

ಸುದೀಪ್​ ವಿಕ್ರಾಂತ್​ ರೋಣ ಸಿನಿಮಾ ನೋಡಿದ ಅನಿಲ್​ ಕುಂಬ್ಳೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿದ್ದಾರೆ. ವಿಕ್ರಾಂತ್​ ರೋಣ ಸಿನಿಮಾ ನೋಡಿದೆ. ನನ್ನ ಪ್ರೀತಿಯ ಸ್ನೇಹಿತ ಕಿಚ್ಚ ಸುದೀಪ್​ ಅವರ ನಟನೆ ಆಕರ್ಷಕವಾಗಿದೆ ಎಂದ್ರು.

ಅನಿಲ್​​ ಕುಂಬ್ಳೆ, ಸುದೀಪ್​

ಅನಿಲ್​​ ಕುಂಬ್ಳೆ, ಸುದೀಪ್​

  • Share this:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣವು (Vikranth Rona) ಜೀ5 ಓಟಿಟಿಯಲ್ಲಿ (Zee 5 OTT) ಅವರ ಜನ್ಮ ದಿನದಂದೆ ತೆರೆಕಂಡು ಭರ್ಜರಿಯಾಗಿ ವೀಕ್ಷಿಸಲ್ಪಡುತ್ತಿದೆ.  ಜೀ5 ಒಟಿಟಿ ಯಲ್ಲಿ ಪ್ರಸಾರ ಶುರುವಾದ 24 ಗಂಟೆಗಳಲ್ಲಿಯೇ ಸುಮಾರು 50 ಕೋಟಿ  ನಿಮಿಷ ಜನ ಸಿನಿಮಾ ವೀಕ್ಷಿಸಿದ್ದಾರೆ ಎಂದು ಚಿತ್ರತಂಡ (Film Team) ಹೇಳಿದೆ. ವಿಕ್ರಾಂತ್ ರೋಣ ಜುಲೈ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ ಅನಿಲ್​ ಕುಂಬ್ಳೆ ಅವರು ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





ಕುಂಬ್ಳೆ ಮೆಚ್ಚಿದ ವಿಕ್ರಾಂತ್ ರೋಣ

ಸುದೀಪ್​ ವಿಕ್ರಾಂತ್​ ರೋಣ ಸಿನಿಮಾ ನೋಡಿದ ಅನಿಲ್​ ಕುಂಬ್ಳೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿದ್ದಾರೆ. ವಿಕ್ರಾಂತ್​ ರೋಣ ಸಿನಿಮಾ ನೋಡಿದೆ. ನನ್ನ ಪ್ರೀತಿಯ ಸ್ನೇಹಿತ ಕಿಚ್ಚ ಸುದೀಪ್​ ಅವರ ನಟನೆ ಆಕರ್ಷಕವಾಗಿದೆ. ಕೊನೆವರೆಗೂ ಈ ಸಿನಿಮಾ ಸಸ್ಪೆನ್ಸ್​ ಕಾಯ್ದುಕೊಂಡಿದೆ. ವಿಜಯ್​ ಪ್ರಕಾಶ್​ ಅವರ ಹಾಡು ಅದ್ಭುತವಾಗಿದೆ. ಅನೂಪ್​ ಭಂಡಾರಿ ಮತ್ತು ಅವರ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಅನಿಲ್​ ಕುಂಬ್ಳೆ ಪೋಸ್ಟ್​ ಮಾಡಿದ್ದಾರೆ.

ಅನಿಲ್​ ಕುಂಬ್ಳೆಗೆ ಥ್ಯಾಂಕ್ಸ್​ ಹೇಳಿದ ಸುದೀಪ್​ 

ಸಮಯ ಮಾಡಿಕೊಂಡು ನಮ್ಮ ಸಿನಿಮಾ ನೋಡಿದ್ದಕ್ಕೆ ಧನ್ಯವಾದಗಳು ಸರ್​ಎಂದು ಕಿಚ್ಚ ಸುದೀಪ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.  ಮಾಜಿ ಕ್ರಿಕೆಟಿಗ​ ಆಟಗಾರ  ಅನಿಲ್​ ಕುಂಬ್ಳೆ  ಸುದೀಪ್​ ಅವರ ಚಿತ್ರ ವಿಕ್ರಾಂತ್​ ರೋಣ ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿರೋ ಟ್ವೀಟ್​ ಇದೀಗ ವೈರಲ್​ ಆಗಿದೆ.







ಓಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಮುಗಿಬಿದ್ದ ಜನ

ಕಿಚ್ಚ ಹುಟ್ಟುಹಬ್ಬದ ಸಂಭ್ರಮದಲ್ಲೇ ಈ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಜೀ5 ಓಟಿಟಿ ಫ್ಲಾಟ್‌ಫಾರ್ಮ್‌ಗೆ ಬಂದಿದೆ. ಥಿಯೇಟರ್​ನಲ್ಲಿ ಸಿನಿಮಾ ಮಿಸ್​ ಮಾಡಿಕೊಂಡಿದ್ದ ಪ್ರೇಕ್ಷಕರು ಓಟಿಟಿಯಲ್ಲಿ ನೋಡಲು ಮುಗಿಬಿದ್ದಿದ್ದಾರೆ. ಬರೀ 24 ಗಂಟೆಗಳಲ್ಲಿ 50 ಕೋಟಿ ನಿಮಿಷ ಸ್ಟ್ರೀಮಿಂಗ್ ಪಡೆದುಕೊಂಡಿದೆ.



ವಿಕ್ರಾಂತ್ ರೋಣ ಜುಲೈ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ವಿಕ್ರಾಂತ್ ರೋಣ ಸಿನಿಮಾ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಸ್ವತಃ ಜೀ5 ಸಂಸ್ಥೆ ಹೇಳಿಕೊಂಡಿತ್ತು. ಹೊಸ ಅವತಾರದಲ್ಲಿ ಕಿಚ್ಚನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಖತ್​ ಸದ್ದು ಮಾಡಿತ್ತು. ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣದ ಸಿನಿಮಾ ಉತ್ತರ ಭಾರತದಲ್ಲೂ ವಿಕ್ರಾಂತ್​ ರೋಣ ಭರ್ಜರಿ ಪ್ರದರ್ಶನ ಕಂಡಿತ್ತು. ಇದೀಗ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಭರ್ಜರಿ ಸೌಂಡ್​ ಮಾಡ್ತಿದೆ.

ಇದನ್ನೂ ಓದಿ: Vikranth Rona: ಜೀ5 ಓಟಿಟಿಯಲ್ಲಿ 'ವಿಕ್ರಾಂತ್ ರೋಣ' ದಾಖಲೆ; 24 ಗಂಟೆಯಲ್ಲಿ 50 ಕೋಟಿ ನಿಮಿಷ ಸ್ಟ್ರೀಮಿಂಗ್
ಅನೂಪ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಚಿತ್ರ


ಸುದೀಪ್ ಈ ಬಾರಿ ಹುಟ್ಟುಹಬ್ಬಕ್ಕೆ ಯಾವುದೇ ಹೊಸ ಸಿನಿಮಾ ಘೋಷಿಸಲಿಲ್ಲ. ಹೊಸ ಸಿನಿಮಾ ಟೀಸರ್, ಪೋಸ್ಟರ್‌ ಕೂಡ ಗಿಫ್ಟ್ ಆಗಿ ಸಿಗಲಿಲ್ಲ.  ಶೀಘ್ರದಲ್ಲೇ ಕಿಚ್ಚ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ. ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲೂ ಮತ್ತೊಂದು ಸಿನಿಮಾ ಸಿದ್ಧವಾಗಲಿದೆ.
Published by:Pavana HS
First published: