ಸರಿಗಮಪ ವೇದಿಕೆಯಲ್ಲಿ ಅನಿಲ್​ ಕುಂಬ್ಳೆ: ಕನ್ನಡ ಹಾಡು ಹೇಳಿ ರಂಜಿಸಿದ ಮಾಜಿ ಕ್ರಿಕೆಟಿಗ!

‘ಹಂಸಲೇಖ ಅವರ ಪ್ರೇಮಲೋಕ ಶುರುವಾದಾಗ ನಮ್ಮ ಕ್ರಿಕೆಟ್​ ಲೋಕ ಶುರುವಾಯ್ತು’ ಎಂದು ಅನಿಲ್​ ಕುಂಬ್ಳೆ ಹೇಳಿದ್ದಾರೆ. ಆ ಮಾತು ಕೇಳಿ ಹಂಸಲೇಖ ಥ್ರಿಲ್​ ಆದರು. ‘ನೀವು ಮನಸ್ಸಿಗೆ ಇಳಿದರೆ ಕಮಿಟ್ಟು. ಕಣಕ್ಕೆ ಇಳಿದರೆ ವಿಕೆಟ್ಟು’ ಎಂದು ಹಂಸಲೇಖ ಹೇಳಿರುವುದು ಪ್ರೋಮೋದಲ್ಲಿ ಇದೆ.

ಹಂಸಲೇಖ, ಅನಿಲ್​ ಕುಂಬ್ಳೆ

ಹಂಸಲೇಖ, ಅನಿಲ್​ ಕುಂಬ್ಳೆ

  • Share this:
ಭಾರತ ಕ್ರಿಕೆಟ್ ತಂಡದ ದಿಗ್ಗಜ ಕರ್ನಾಟಕದ ಅನಿಲ್ ಕುಂಬ್ಳೆ(Anil Kumble) ಕ್ರಿಕೆಟ್‌ (Cricket)ನಲ್ಲಿ ಮೇರು ಸಾಧನೆಗಳನ್ನು ಮಾಡಿದ್ದಾರೆ. ಕುಂಬ್ಳೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ 11 ವರ್ಷಗಳಾಗಿವೆ, ಆದರೆ ಮಾಧ್ಯಮಗಳಿಂದ, ಸಾರ್ವಜನಿಕ ಜೀವನದಿಂದ ತುಸು ದೂರವೇ ಉಳಿದಿದ್ದರು. ಸ್ಪಿನ್​ ಮಾಂತ್ರಿಕ ಅನಿಲ್​ ಕುಂಬ್ಳೆ (Anil Kumble) ಅವರು ಕೂಡ ಕನ್ನಡ ಚಿತ್ರರಂಗವನ್ನು ಹತ್ತಿರದಿಂದ ಗಮನಿಸುತ್ತಾ ಬಂದಿದ್ದಾರೆ. ಆದರೆ ಅವರು ಸಿನಿಮಾ ಸಂಬಂಧಿತ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ ಅಷ್ಟೇ. ಈಗ ಅವರು ಜೀ ಕನ್ನಡ (Zee Kannada) ವಾಹಿನಿಯ ಜನಪ್ರಿಯ ಸರಿಗಮಪ (Sa Ri Ga Ma Pa) ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದಾರೆ. ಜೀ ಕನ್ನಡ(Zee Kannada) ವಾಹಿನಿಯಲ್ಲಿ ಪ್ರಸಾರವಾಗುವ 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭಾಗವಹಿಸಿದ್ದಾರೆ. ಅನಿಲ್ ಕುಂಬ್ಳೆಯನ್ನು ಸರಿಗಮಪ ವೇದಿಕೆ ಅದ್ಧೂರಿಯಾಗಿ ಸ್ವಾಗತ ಮಾಡಿದೆ. ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಅನಿಲ್ ಕುಂಬ್ಳೆ ಭಾಗವಹಿಸುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು ಅವರು ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿದ್ದ 'ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೀಗ ಸರಿಗಮಪ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಪ್ರೋಮೋ (Promo) ವಿಡಿಯೋ ಸಖತ್​ ವೈರಲ್ ಆಗಿದೆ. 

ಕನ್ನಡದ ಹಾಡು ಹೇಳಿ ರಂಜಿಸಿದ ಅನಿಲ್​ ಕುಂಬ್ಳೆ!

ಶನಿವಾರ ಮತ್ತು ಭಾನುವಾರ ರಾತ್ರಿ 7.30ರಿಂದ 10.30ರವರೆಗೆ ಈ ಎಪಿಸೋಡ್​ ಪ್ರಸಾರ ಆಗಲಿದೆ. ‘ಹಂಸಲೇಖ ಅವರ ಪ್ರೇಮಲೋಕ ಶುರುವಾದಾಗ ನಮ್ಮ ಕ್ರಿಕೆಟ್​ ಲೋಕ ಶುರುವಾಯ್ತು’ ಎಂದು ಅನಿಲ್​ ಕುಂಬ್ಳೆ ಹೇಳಿದ್ದಾರೆ. ಆ ಮಾತು ಕೇಳಿ ಹಂಸಲೇಖ ಥ್ರಿಲ್​ ಆದರು. ‘ನೀವು ಮನಸ್ಸಿಗೆ ಇಳಿದರೆ ಕಮಿಟ್ಟು. ಕಣಕ್ಕೆ ಇಳಿದರೆ ವಿಕೆಟ್ಟು’ ಎಂದು ಹಂಸಲೇಖ ಹೇಳಿರುವುದು ಪ್ರೋಮೋದಲ್ಲಿ ಇದೆ. ಈ ಪ್ರೋಮೋ ವಿಡಿಯೋ ಸಖತ್​ ಮಜಾ ಕೊಟ್ಟಿದ್ದು, ಇನ್ನೂ ಇಡೀ ಕಾರ್ಯಕ್ರಮ ಹೇಗಿರಬಹುದು ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ. ಜೊತೆಗೆ ಅನಿಲ್​ ಕುಂಬ್ಳೆ ಕನ್ನಡದ ಹಾಡು ಹಾಡಿ ರಂಜಿಸಿದ್ದಾರೆ.‘ದೇವರ ಗುಡಿ’ ಚಿತ್ರದ  ‘ಮಾಮರವೆಲ್ಲೋ ಕೋಗಿಲೆ ಎಲ್ಲೋ..’ ಗೀತೆಯನ್ನು ಅವರು ವೇದಿಕೆ ಮೇಲೆ ಹಾಡಿದ್ದಾರೆ.

ಇದನ್ನು ಓದಿ : ಆಡು ಮುಟ್ಟದ ಸೊಪ್ಪಿಲ್ಲ.. RRR ಸಿನಿಮಾ ಪ್ರಮೋಷನ್​ ಮಾಡಿರದ ಜಾಗವಿಲ್ಲ!

ಕಿಚ್ಚ ಸುದೀಪ್​ ಸ್ಪೆಷಲ್​ ವಿಡಿಯೋ!

ಅನಿಲ್ ಕುಂಬ್ಳೆ ಎಪಿಸೋಡ್‌ಗೆ ಕಿಚ್ಚ ಸುದೀಪ್​ ವಿಶೇಷ ವಿಡಿಯೋ ಒಂದನ್ನು ಕಳುಹಿಸಿಕೊಟ್ಟಿದ್ದಾರೆ. ‘ಅನಿಲ್ ಕುಂಬ್ಳೆ ಬೌಲಿಂಗ್ ಮಾಡಬೇಕು, ನಾನು ಕೀಪಿಂಗ್ ಮಾಡಬೇಕು ಎಂಬ ದೊಡ್ಡ ಆಸೆ ಇತ್ತು’ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಕುಂಬ್ಳೆ ಜೊತೆಗಿನ ಗೆಳೆತನವನ್ನು ಮೆಲಕು ಹಾಕಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಪ್ರೀತಿ.‌ ಅನಿಲ್ ಕುಂಬ್ಳೆ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಸುದೀಪ್ ಕೂಡ ಸಂಭ್ರಮಿಸಿದ್ದಾರೆ.

ಇದನ್ನು ಓದಿ :  ದೊಡ್ಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನ: ಅಪ್ಪು ಪಡೆದಿದ್ದ 2.5 ಕೋಟಿ ಅಡ್ವಾನ್ಸ್​ ವಾಪಸ್​ ಕೊಟ್ಟ ಅಶ್ವಿನಿ!

ಈ ಬಾರಿಯ ವೀಕೆಂಡ್​ ವಿತ್​ ರಮೇಶ್​​ ಕಾರ್ಯಕ್ರಮದಲ್ಲಿ ಅನಿಲ್​ ಕುಂಬ್ಳೆ!

ಸಾಧಕರ ಜೀವನವನ್ನು ಸಾಮನ್ಯರಿಗೆ ಪರಿಚಯಿಸುವ ಕೆಲಸವನ್ನು ಜೀ ಕನ್ನಡ, ವೀಕೆಂಡ್​ ವಿತ್​ ರಮೇಶ್​​ ಕಾರ್ಯಕ್ರಮದ ಮೂಲಕ ಮಾಡುತ್ತಿದೆ. ಈಗಾಗಲೇ 4 ಸೀಸನ್​ಗಳು ನಡೆದಿವೆ. ಹಲವಾರು ಸಾಧಕರನ್ನು ಈ ಕಾರ್ಯಕ್ರಮಕ್ಕೆ ಕರೆಸಲಾಗಿದೆ. ಆದರೆ, ಅನಿಲ್​ ಕುಂಬ್ಳೆ ಅವರನ್ನು ಈವರೆಗೂ ಆಹ್ವಾನಿಸಿಲ್ಲ. ಈ ವಿಚಾರ ಅಭಿಮಾನಿಗಳಲ್ಲಿ ಬೇಸರ ತರಿಸಿದೆ, ಈ ಬಾರಿಯಾದರೂ ಅನಿಲ್​ ಕುಂಬ್ಳೆ ಅವರನ್ನು ಕರೆಸಿ ಎಂದು ಕ್ರಿಕೆಟ್​ ಫ್ಯಾನ್ಸ್​ ಮನವಿ ಮಾಡಿಕೊಳ್ಳುತ್ತಿದ್ದಾರೆ.
Published by:Vasudeva M
First published: